ಕಂಟೈನರ್‌ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

Sunday, December 6th, 2020
Manvith

ಮಂಗಳೂರು : ಬೈಕ್ ಸವಾರ ಕಂಟೈನರ್‌ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಸ್ಥಳದಲ್ಲೇ ಓರ್ವ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಗರದ ಪಡೀಲ್‌ನಲ್ಲಿ ನಡೆದಿದೆ. ನೀರುಮಾರ್ಗದ ಮನ್ವಿತ್(22) ಮೃತ ಬೈಕ್‌ ಸವಾರ ಎಂದು ತಿಳಿದುಬಂದಿದೆ. ಕಂಟೈನರ್ ನಂತೂರು ಕಡೆಯಿಂದ ಪಡೀಲ್‌ನತ್ತ ಸಂಚರಿಸುತ್ತಿತ್ತು. ಈ ವೇಳೆ ಎದುರುಗಡೆಯಿಂದ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಕಂಟೈನರ್ ಅಡಿಗೆ ಬಿದ್ದಿದೆ ಎನ್ನಲಾಗಿದೆ. ಕಂಟೈನರ್ ಬೈಕ್ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 12 ಗಂಟೆ […]

ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ : ರಕ್ತದಾನ ಮಾಡಿ ಜೀವ ಉಳಿಸಲು ಶಾಸಕ ಅಪ್ಪಚ್ಚು ರಂಜನ್ ಕರೆ

Wednesday, November 13th, 2019
Raktha-daana

ಮಡಿಕೇರಿ : ಯುವಜನರು ಪೌಷ್ಟಿಕ ಆಹಾರ ಸೇವಿಸಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ. ಇದರಿಂದ ಬೇರೆಯವರ ಪ್ರಾಣ ಉಳಿಸುವುದಲ್ಲದೆ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರಕ್ತ ನಿದಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಕೊಡವ ಸಮಾಜ ಪೊಮ್ಮಕಡ ಒಕ್ಕೂಟ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ, ಕೊಡಗು ಸರ್ಕಾರಿ ಐ.ಟಿ.ಐ ಕಾಲೇಜು, ಕಿರಿಯ […]

ಹೆಲ್ಮೆಟ್ ಧರಿಸದೇ ಬಂದ ಬೈಕ್​ ಸವಾರ ಪೊಲೀಸರನ್ನು ಕಂಡು ಪರಾರಿ

Friday, September 27th, 2019
kadaba

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಜರುಗಿದೆ. ಹೆಲ್ಮೆಟ್ ಧರಿಸದೇ ಬಂದ ಬೈಕ್ ಸವಾರನೋರ್ವ ತನ್ನೊಂದಿಗೆ ಬಂದಿದ್ದವನನ್ನು ಇಕ್ಕಟ್ಟಿಗೆ ಸಿಲುಕಿಸಿ ಪರಾರಿಯಾಗಿರುವ ಈ ಘಟನೆ ಕಡಬದಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದ ಬೈಕ್ ಸವಾರನು ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಕೆಳಗಿಳಿಸಿ ಬಂದ ದಾರಿಯಲ್ಲೇ ಹಿಂತಿರುಗಿ ಹೋಗಿದ್ದಾನೆ. ಆಗ ನಡೆದುಕೊಂಡು ಹೋಗುತ್ತಿದ್ದ ಹಿಂಬದಿ ಸವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಕಡಬಕ್ಕೆ ಗುರುವಾರ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು […]

ಮಂಗಳೂರು : ಹೊಸ ಟ್ರಾಫಿಕ್ ನಿಯಮ ಪಾಲನೆಗೆ ಡಾ.ಪಿ ಎಸ್ ಹರ್ಷ ಸೂಚನೆ

Friday, September 6th, 2019
trafic

ಮಂಗಳೂರು : ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಲ್ಲೂ ತಿದ್ದುಪಡಿ ಮಾಡಿ ಜಾರಿ ಮಾಡಲಾಗಿತ್ತು. ಇದೀಗ ಸೆ.3ರಿಂದಲೇ ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಪ್ರತಿಕ್ರಿಯಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ನಿಯಮ ಜಾರಿಯನ್ನು ಮಂಗಳೂರು ಕಮಿಷನರೇಟ್ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನೂತನ […]

ಅರ್ಧ ಹೆಲ್ಮೆಟ್‌ ಮಾರಾಟ ನಿರ್ಬಂಧ

Wednesday, January 10th, 2018
Halmet

ಮಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಹೊಸ ವರ್ಷವೇ ಶಾಕಿಂಗ್‌ ನ್ಯೂಸ್‌ ಕಾದಿದೆ. ಫೆ.1ರಿಂದ ಮಂಗಳೂರು ನಗರದಲ್ಲಿಯೂ ಅರ್ಧ ಹೆಲ್ಮೆಟ್‌ ಮಾರಾಟ ನಿರ್ಬಂಧವಾಗಲಿದೆ. ಅದಕ್ಕೂ ಮುಂಚೆ ದ್ವಿಚಕ್ರ ವಾಹನ ಸವಾರರು ಪೂರ್ತಿ ಮುಚ್ಚಗೆಯ ಐಎಸ್‌ಐ, ಬಿಎಸ್‌ಐ ಮುದ್ರಿತ ಹೆಲ್ಮೆಟ್‌ ಖರೀದಿ ಮಾಡಬೇಕಾಗಿದೆ. ಈ ಬಗ್ಗೆ ಮಂಗಳೂರು ಸಂಚಾರಿ ಪೊಲೀಸರು ನಗರದೆಲ್ಲೆಡೆ ಅರಿವು ಮೂಡಿಸಲು ತೀರ್ಮಾನಿಸಿದ್ದು, ಅರ್ಧ ಹೆಲ್ಮೆಟ್‌ ಧರಿಸುವುದರಿಂದ ಉಂಟಾಗುವ ದುಷ್ಟರಿಣಾಮಗಳ ವಿರುದ್ಧ ಶಾಲಾ, ಕಾಲೇಜು ಸೇರಿದಂತೆ ವಿವಿಧೆಡೆ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲು ನಿರ್ಧರಿಸಿವೆ. ಅರ್ಧ ಹೆಲ್ಮೆಟ್‌ ಬಳಕೆ ಮಾಡುವವರ […]

ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿ ವಿವಾದಕ್ಕೆ ಕಾರಣರಾಗಿದ್ದ ಪ್ರಮೋದ್ ;ದಂಡ ಪಾವತಿ

Saturday, November 11th, 2017
pramod madhvaraj

ಉಡುಪಿ: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿ ಕರ್ಜೆಯ ಕೆಂಜೂರು ಎಂಬಲ್ಲಿ ನ. 9ರಂದು  ವಿವಾದಕ್ಕೆ ಕಾರಣರಾಗಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ 100 ರೂ. ದಂಡ ಪಾವತಿಸಿದ್ದಾರೆ. ಕೆಂಜೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮದ ನಿಗದಿತ ಅವಧಿಗಿಂತ ಮೊದಲೇ ತೆರಳಿದ್ದ ಸಚಿವರು ಬಿಡುವಿನ ಸಮಯದಲ್ಲಿ ಅಲ್ಲೇ ಇದ್ದ ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡಿದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾಕಷ್ಟು […]

ಮಂಗಳೂರಿನಲ್ಲಿ ಹೆಲ್ಮೆಟ್ ಗಳಿಗೆ ದಂಡಂ ದಶಗುಣಂ !

Tuesday, February 12th, 2013
sub standard helmets in Mangalore

ಮಂಗಳೂರು : ಕಳಪೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಮಂಗಳೂರು ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ತಲೆಯನ್ನು ಪೂರ್ತಿಯಾಗಿ ಮುಚ್ಚುವಂತಹ ಹಾಗೂ ಗಟ್ಟಿಮುಟ್ಟಾದ ಹೆಲ್ಮೆಟ್ ಧರಿಸಬೇಕು ಎಂಬ ನಿರ್ದೇಶನ ವಿದ್ದರೂ, ದ್ವಿಚಕ್ರವಾಹನ ಸವಾರರು ಧರಿಸಿದ್ದ ಸುರಕ್ಷಿತವಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ಇನ್ನೂ ಮುಂದೆ ಹಿಡಿದು ದಂಡ ಹಾಕುವ ಕೆಲಸಕ್ಕೆ ಕೈ ಹಾಕಲಿದ್ದಾರೆ. ಮಂಗಳೂರು ನಗರ ಸಂಚಾರಿ ಪೊಲೀಸರು ಈ ಸಂಬಂಧ ‘ಸ್ಪೆಷಲ್ ಡ್ರೈವ್’ ಎಂಬ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದೆ. ಬಹುತೇಕ ದ್ವಿಚಕ್ರ […]