ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ : ನೂತನ ಕಚೇರಿ ಉದ್ಘಾಟನೆ

Tuesday, June 25th, 2019
Guruvayana ketre

ಬೆಳ್ತಂಗಡಿ  : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರೇರಣೆಯೊಂದಿಗೆ 1982 ರಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಇಂದು ರಾಜ್ಯದೆಲ್ಲೆಡೆ ವಿಸ್ತರಿಸಿದೆ. ಜನಪರ ಚಳವಳಿಯಾಗಿ ಪ್ರತಿ ಮನೆಗೂ ಯೋಜನೆ ತಲುಪಿದೆ. ಜನರಎಲ್ಲಾ ಬೇಡಿಕೆಗಳನ್ನು ಪೂರೈಸಿ ಜೀವನ ಮಟ್ಟ ಸುಧಾರಣೆಯೊಂದಿಗೆ ಸ್ವಾವಲಂಬಿಜೀವನಕ್ಕೆಕಾಯಕಲ್ಪ ನೀಡಿದೆಎಂದುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಹೇಳಿದರು. ಅವರು ಮಂಗಳವಾರ ಗುರುವಾಯನಕೆರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಕಚೇರಿಯನ್ನು ಉದ್ಘಾಟಿಸಿ […]

ಬೆಂಗಳೂರಿನ ವಿದ್ಯಾರ್ಥಿ ಬೆಳ್ತಂಗಡಿಯಲ್ಲಿ ನೀರುಪಾಲು

Thursday, July 26th, 2018
died

ಮಂಗಳೂರು: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ‌ ನೀರುಪಾಲಾಗಿರುವ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿರುವ ಗುರುವಾಯನಕೆರೆಯ ಸಮೀಪದಲ್ಲಿರುವ ಕೆರೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕೆರೆಯ ಪಕ್ಕ ಇದ್ದ ಅನಾಥ ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ಬೆಂಗಳೂರಿನ ಶಾಲೆಯ ಐಡಿ ಕಾರ್ಡ್, ಪುಸ್ತಕ, ಸರ್ಟಿಫಿಕೇಟ್ ಸಿಕ್ಕಿತ್ತು. ಇದರಿಂದ ವಿದ್ಯಾರ್ಥಿ ಈ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿರಬಹುದು ಅಥವಾ ನೀರುಪಾಲಾಗಿರಬಹುದು […]

ಗುರುವಾಯನಕೆರೆ: ನಾಗರಿಕ ಸೇವಾ ಟ್ರಸ್ಟ್‌ನ ಘಟಕದಿಂದ ಕಾರ್ಯಾಗಾರ

Saturday, October 28th, 2017
gurvayankere

ಮಂಗಳೂರು: ನಾಗರಿಕ ಸೇವಾ ಟ್ರಸ್ಟ್‌ನ ಘಟಕಗಳಾದ ’ನಾಗರಿಕ ಸೇವಾ ಬಳಗ’ಗಳನ್ನು ಸಕ್ರಿಯಗೊಳಿಸಲು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಏರ್ಪಡಿಸಲು ಟ್ರಸ್ಟ್ ಸಭಾಭವನದಲ್ಲಿ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ನಿರ್ಧರಿಸಲಾಯ್ತು. ಪ್ರಕೃತ ಬೆಳ್ತಂಗಡಿಯಲ್ಲಿ17 ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯ ಇತರ ತಾಲೂಕುಗಳಲ್ಲಿ 32 ಬಳಗಗಳಿದ್ದು ಅಗತ್ಯಾನುಸಾರ ಇವುಗಳನ್ನು 100ರ ತನಕ ರಚಿಸಲು ನಿರ್ಧರಿಸಲಾಯ್ತು. 2012 ಅಕ್ಟೋಬರ್‌ನಿಂದ ಬೃಹತ್ ಶೋಷಣಾ ಶಕ್ತಿಯ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ಹೆಚ್ಚಿನ ಸಮಯ, ಶಕ್ತಿ ವಿನಿಯೋಗವಾದ್ದರಿಂದ ಬಳಗಗಳ ಕಾರ್ಯಕ್ರಮಗಳಿಗೆ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಕಾನೂನಾತ್ಮಕವಾಗಿ ಈ […]

ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಯೋಜನೆ, ಅನುದಾನ ಮಂಜೂರು : ತನ್ವೀರ್ ಸೇಠ್

Thursday, October 12th, 2017
thanvir-set

ಮಂಗಳೂರು: ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ವಿಶೇಷ ಯೋಜನೆಯೊಂದನ್ನು ರೂಪಿಸಲಾಗಿದ್ದು, ಮೊದಲ ಕಂತಿನಲ್ಲಿ ರೂ.400 ಕೋಟಿ ಅನುದಾನ ಮಂಜೂರಾಗಿದೆ. ಎರಡನೇ ಕಂತಿನಲ್ಲಿ ಇನ್ನೂ ರೂ.400 ಕೋಟಿ ಅನುದಾನ ಮಂಜೂರು ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು. ಅವರು ತಾಲ್ಲೂಕಿನ ಗುರುವಾಯನಕೆರೆಯ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಮತ್ತು ಜುಮಾ ಮಸೀದಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಿಂದ ನೂತನವಾಗಿ ನಿರ್ಮಿಸಲಾಗಿರುವ ಶಾದಿಮಹಲ್ ಸಭಾಭವನವನ್ನು […]

ಏಕನಾಥ ಶೆಟ್ಟಿ ಅವರ ಸಮವಸ್ತ್ರ ಅ. 23ರಂದು ಮನೆಯವರಿಗೆ ಹಸ್ತಾಂತರ

Saturday, October 22nd, 2016
Ekanatha-Shetty

ಬೆಳ್ತಂಗಡಿ: ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಅವರ ಸಮವಸ್ತ್ರ ಅ. 23ರಂದು ಊರಿಗೆ ಬರಲಿದೆ. ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ ನಿಕೋಬಾರ್‌ಗೆ ಹೊರಟ ಸೇನಾ ವಿಮಾನದಲ್ಲಿದ್ದ 29 ಮಂದಿ ಪೈಕಿ ಯೋಧ ಏಕನಾಥ ಶೆಟ್ಟಿ ಅವರು ಕೂಡ ನಾಪತ್ತೆಯಾಗಿದ್ದರು. ಹುಡುಕಾಟದಲ್ಲಿ ಯಾವುದೇ ಸುಳಿವು ದೊರೆತಿರಲಿಲ್ಲ. ಪರಿಹಾರ ನೀಡುವ ಸಲುವಾಗಿ ಈ ಪ್ರಕರಣದಲ್ಲಿ ಅಷ್ಟೂ ಮಂದಿಯನ್ನು ಸತ್ತಂತೆಯೇ ಎಂದು ಪರಿಗಣಿಸಿ ಆದೇಶ ನೀಡಲಾಗಿತ್ತು. ಏಕನಾಥ ಶೆಟ್ಟಿ ಅವರ ಸಮವಸ್ತ್ರದೊಂದಿಗೆ ಮಿಲಿಟರಿಯವರು ರೈಲಿನಲ್ಲಿ ರವಿವಾರ ಬೆಳಗ್ಗೆ 10.30ಕ್ಕೆ ಮಂಗಳೂರು ತಲುಪಲಿದ್ದಾರೆ. […]

ಹೆಗ್ಗಡೆಯವರ ಮೇಲೆ ಅವಹೇಳನಕಾರಿ ಪ್ರಚಾರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

Friday, October 30th, 2015
Guruvayanakere samithi

ಬೆಳ್ತಂಗಡಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ ಮತ್ತು ಸಮಾನಾಸಕ್ತ ಸಂಘಟನೆಗಳ ನಿಯೋಗವೊಂದು ಸಹಾಯಕ ಆಯುಕ್ತರಲ್ಲಿ ಭೇಟಿ ಮಾಡಿತು. ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡದಂತೆ ಬೆಳ್ತಂಗಡಿ ಮುನ್ಸಿಫ್‌ಕೋರ್ಟಿನ ತಡೆಯಾಜ್ಞೆಯಿದ್ದರೂ ದಿನಕ್ಕೊಂದು ಹೊಸ ಸುಳ್ಳನ್ನು ಹರಡುತ್ತಿರುವ ನಾಗರಿಕ ಸೇವಾ ಟ್ರಸ್ಟ್, ಮತ್ತಿತರ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ನಿಯೋಗವು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. […]

ಐದು ವರ್ಷದ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ತಾಯಿಯ ಬಂಧನ

Monday, April 21st, 2014
belthangady

ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ತನ್ನ ಐದು ವರ್ಷದ ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದ ತಾಯಿಯನ್ನು ಬೆಳ್ತಂಗಡಿ ಪೊಲೀಸರು ರವಿವಾರ ಬಂಧಿಸಿದ್ದು ತಾಯಿಗೆ 1 ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಂದೆ ನಾಪತ್ತೆಯಾಗಿದ್ದಾನೆ. ಕುವೆಟ್ಟು ಗ್ರಾಮದ ಪಣೆಜಾಲುವಿನ ಮಹಮ್ಮದ್‌ ಶಾಫಿ ಹಾಗೂ ಪೌಝಿಯಾ ಆರೋಪಿಗಳಾಗಿದ್ದು ಪೌಝಿಯಾಳನ್ನು ಬಂಧಿಸಲಾಗಿದೆ. ಇವರು ತಮ್ಮ ಐದು ವರ್ಷದ ಮಗು ಫೈಮಾಗೆ ಚಿತ್ರಹಿಂಸೆ ನೀಡುತ್ತಿದ್ದರು. ದೊಣ್ಣೆಯಿಂದ ಕಾಲಿನ ಗಂಟು, ಕೈ, ಮುಖ, ಮೂಗು, ಕತ್ತುವಿಗೆ ಗಾಯವಾಗುವಂತೆ ಹೊಡೆದಿದ್ದರು. ಪಣೆಜಾಲಿನ ರುಬಿಯಾ […]

ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ವತಿಯಿಂದ ಹಕ್ಕೊತ್ತಾಯ ಸಮಾವೇಶ

Wednesday, March 19th, 2014
Hakkottaya

ಮಂಗಳೂರು : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ನಗರದ ಎನ್‌ಜಿಒ ಹಾಲ್‌ನಲ್ಲಿ ಮತದಾರರ ಜಾಗೃತಿ ಮತ್ತು ಜನರ ಪ್ರಣಾಳಿಕೆ ಆಗ್ರಹದ ಅಂಗವಾಗಿ ಮಂಗಳವಾರ ಹಕ್ಕೊತ್ತಾಯ ಸಮಾವೇಶ ನಡೆಯಿತು. ಸ್ವದೇಶೀ ಜಾಗರಣ ಮಂಚ್‌ನ ರಾಷ್ಟ್ರೀಯ ಸಹಸಂಚಾಲಕ ಹಾಗೂ ಆರ್ಥಿಕ ತಜ್ಞ ಪ್ರೊ| ಬಿ.ಎಂ. ಕುಮಾರಸ್ವಾಮಿ ಮಾತನಾಡಿ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವಾರು ಭಾಗ್ಯದ ಯೋಜನೆ ಆರಂಭಿಸಿರುವ ಸರಕಾರ, ‘ಉದ್ಯೋಗ ಭಾಗ್ಯ’ ನೀಡುವ ಮೂಲಕ ಜನರನ್ನು ಗಟ್ಟಿಗೊಳಿಸಿ ಎಂದು ಹೇಳಿದರು. ಕೇಂದ್ರದವರು 3 ರೂ.ಗೆ ಅಕ್ಕಿ […]