ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಕೃಷ್ಣಭಾಗ್ಯ ಜಲ ನಿಗಮ ಕ್ಕೆ ವರ್ಗ

Wednesday, August 5th, 2020
ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಕೃಷ್ಣಭಾಗ್ಯ ಜಲ ನಿಗಮ ಕ್ಕೆ ವರ್ಗ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಬುಧವಾರ ದಿಢೀರ್ ವರ್ಗಾವಣೆಯಾಗಿದೆ. ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಆಲಮಟ್ಟಿ ಕೃಷ್ಣಭಾಗ್ಯ ಜಲ ನಿಗಮದ ಪ್ರಭಾರ ಮುಖ್ಯ ಲೆಕ್ಕಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ. ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬಳಿಕ ವಿಶ್ರಾಂತಿಯಲ್ಲಿದ್ದರು. ಮುಡಾ ಆಯುಕ್ತ ದಿನೇಶ್ ಅವರು ಮನಪಾ ಆಯುಕ್ತ ಹುದ್ದೆಯ ಪ್ರಭಾರ ವಹಿಸಿದ್ದರು. ದಿಢೀರ್ ವರ್ಗಾವಣೆಯ ಬೆನ್ನಿಗೆ […]

ಮಂಗಳೂರು ಪಾಲಿಕೆಗೆ ಇನ್ನು ಮೇಯರ್ ಇಲ್ಲ, ಜಿಲ್ಲಾಧಿಕಾರಿ ಕೈಗೆ ಆಡಳಿತ

Friday, March 8th, 2019
Senthil

ಮಹಾನಗರ : ಮಂಗಳೂರು ಪಾಲಿಕೆಯ ಐದು ವರ್ಷಗಳ (2014-15ರಿಂದ 2018-19) ಕಾಂಗ್ರೆಸ್‌ ಆಡಳಿತಾವಧಿ ಗುರುವಾರಕ್ಕೆ ಮುಗಿದಿದ್ದು, ಮಾ. 8ರಿಂದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಮುಂದಿನ ಚುನಾವಣೆ ನಡೆದು ಮತ್ತೆ ಹೊಸ ಆಡಳಿತ ಯಂತ್ರ ಅಧಿಕಾರಕ್ಕೆ ಬರುವವರೆಗೂ ಪಾಲಿಕೆಯ ಆಡಳಿತಾಧಿಕಾರಿಯಾಗಿ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಪಾಲಿಕೆಯ ಮುಂದಿನ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯಲ್ಲಿ ಸರಕಾರ ಇನ್ನೂ ಅಂತಿಮಗೊಳಿಸದಿರುವ ಕಾರಣದಿಂದಾಗಿ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳು ಆಡಳಿತದ ನಿರ್ವಹಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ, ಲೋಕಸಭೆ […]

ಮಂಗಳೂರು ಪಾಲಿಕೆಯ ಮೀಸಲಾತಿ ಅಧಿಸೂಚನೆ ರದ್ದುಗೊಳಿಸಿದ ಹೈಕೋರ್ಟ್‌

Tuesday, January 15th, 2019
mcc election

ಮಂಗಳೂರು  : ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್‌ ಆದೇಶ ಹೊರಡಿಸಿರುವುದರ ಪರಿಣಾಮ, ಇದೀಗ ಪಾಲಿಕೆಯ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯ ಸರಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್‌ ಜನವರಿ 28ರೊಳಗೆ ಮೀಸಲಾತಿ ಮರು ನಿಗದಿಗೊಳಿಸುವಂತೆ ಸರಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಮುಂದಿನ ಎರಡು ವಾರಗಳೊಳಗೆ ಈ ವಾರ್ಡ್‌ವಾರು ಮೀಸಲಾತಿ ವಿಚಾರದಲ್ಲಿ ಒಂದು ಮಹತ್ವದ ತೀರ್ಮಾನಕ್ಕೆ ಬರಬೇಕಾಗಿದೆ. […]

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಕಚೇರಿ, 3 ವಲಯ ಕಚೇರಿ ರಚನೆ ನಿರ್ಣಯ

Tuesday, September 27th, 2016
MCC

ಮಂಗಳೂರು: ಮಹಾನಗರ ಪಾಲಿಕೆಗೆ ಕೊನೆಗೂ ಕೇಂದ್ರ ಕಚೇರಿ ಹಾಗೂ ಮೂರು ವಲಯ ಕಚೇರಿಗಳನ್ನು ರಚನೆ ಮಾಡಲಾಗಿದೆ. ವಲಯ 1ರ ಕಚೇರಿಯನ್ನು ಸುರತ್ಕಲ್‌ನಲ್ಲಿ ಆರಂಭಿಸಿ, ವಲಯ-2 ಮತ್ತು 3ನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲೇ ಉಳಿಸುವ ಮಹತ್ವದ ನಿರ್ಣಯವನ್ನು ವಿಶೇಷ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅ.15ರಿಂದ ಈ ವಲಯ ಕಚೇರಿಗಳು ಕಾರ್ಯಾರಂಭಿಸಲಿವೆ ಎಂದು ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ. ಸುರತ್ಕಲ್ ವಲಯಕ್ಕೆ ಸೇರುವ 12 ವಾರ್ಡ್‌ಗಳ ನಾಗರಿಕರು ಇನ್ನು ಮುಂದೆ ನಿಗದಿತ ಸೇವೆಗಳನ್ನು ಪಡೆಯಲು ಪಾಲಿಕೆಯ ಕೇಂದ್ರ ಕಚೇರಿಗೆ ಬರಬೇಕೆಂದಿಲ್ಲ. ಅಲ್ಲಿಯೇ […]