ನಟಿ ಖುಷ್ಬೂ ಬಿಜೆಪಿ ರಾಜ್ಯಸಭಾ ಉಪ ಚುನಾವಣಾ ಸ್ಪರ್ಧೆಯ ಆಯ್ಕೆ ಪಟ್ಟಿಯಲ್ಲಿ

Thursday, November 5th, 2020
Kushboo

ಮಂಗಳೂರು  : ರಾಜ್ಯದ ಒಂದು ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪ ಚುನಾವಣೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಕುರಿತು ವಿಸ್ತಾರವಾದ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ನಟಿ ಖುಷ್ಬೂ ಬಿಜೆಪಿ ಸೇರ್ಪಡೆ ಇದಕ್ಕೆ ನಿದರ್ಶನವಾಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಗೂ ಬಿಜೆಪಿ ಗಾಳ ಹಾಕಿರುವುದು ಗುಟ್ಟಾಗೇನು ಉಳಿದಿಲ್ಲ. ಈ ನಡುವೆ ಈ […]

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ : ರಜನಿಕಾಂತ್

Wednesday, February 5th, 2020
rajanikanth

ಚೆನ್ನೈ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಈ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆ ಇಲ್ಲ. ಒಂದು ವೇಳೆ ಇದರಿಂದ ಮುಸ್ಲಿಮರಿಗೆ ತೊಂದರೆ ಆದರೆ ಇದರ ಬಗ್ಗೆ ಧ್ವನಿ ಎತ್ತುವ ಮೊದಲ ವ್ಯಕ್ತಿ ನಾನೇ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ನಡೆಯಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರ ಮಾತನಾಡಿರುವ […]

ಬೆಂಗಳೂರಿನ ಆಸ್ಪತ್ರೆಗೆ ರಜನಿಕಾಂತ್​ ಭೇಟಿ : ಮುಗಿಬಿದ್ದ ಅಭಿಮಾನಿಗಳು

Wednesday, August 28th, 2019
rajanikanth

ಬೆಂಗಳೂರು : ಆಪ್ತರೊಬ್ಬರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿತು. ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣ ಸತ್ಯನಾರಾಯಣ ರಾವ್ ಅನಾರೋಗ್ಯದ ಹಿನ್ನೆಲೆ ಬನ್ನೇರುಘಟ್ಟ ರಸ್ತೆಯ ಅಪೋಲೊ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದ್ದು, ಅಣ್ಣನ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ಬೆಂಗಳೂರಿಗೆ ಆಗಮಿಸಿದ್ದಾರೆ ಅನ್ನೋ ಮಾಹಿತಿ ಅಪ್ತ ಮೂಲಗಳಿಂದ ತಿಳಿದು ಬಂದಿದೆ. ಇನ್ನು ರಜನಿ ಕಾಂತ್ ದಿಢೀರ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾದ ಕಾರಣ […]

ಕಾಲಾ ಚಿತ್ರ ಪ್ರದರ್ಶನಕ್ಕೆ ಬಾರಿ ವಿರೋಧ…ಪೋಸ್ಟರ್‌‌ ಹರಿದು ಕೆಲವರ ಆಕ್ರೋಶ!

Thursday, June 7th, 2018
kaala-poster

ರಾಯಚೂರು: ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿದ್ದು, ಚಿತ್ರದ ಪೋಸ್ಟರ್ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧನೂರು ಪಟ್ಟಣದ ಸಂಗಮೇಶ್ವರ ಟಾಕೀಸ್’ನಲ್ಲಿ ಕಾಲಾ ಚಿತ್ರ ತೆರೆ ಕಂಡಿತ್ತು. ಆದ್ರೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಚಿತ್ರದ ಪೋಸ್ಟರ್ ಹರಿದು ಹಾಕಿ, ರಜನಿಕಾಂತ್ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ರು‌. ಮತ್ತೊಂದೆಡೆ ರಾಯಚೂರಿನ ಪದ್ಮನಗರ ಸಿನಿಮಾ ಥಿಯೇಟರ್ ಮೊದಲ ಚಿತ್ರ ಪ್ರದರ್ಶನಕ್ಕೆ ಪ್ರೇಕ್ಷಕರಿಗೆ ಟಿಕೆಟ್ ನೀಡಲಾಯಿತು. ಆದ್ರೆ ಪ್ರತಿಭಟನೆ […]

ಮಂಗಳೂರಿನಲ್ಲಿ ಕಾಲಾ ಚಿತ್ರಕ್ಕಿಲ್ಲ ಅಡ್ಡಿ ಆತಂಕ

Thursday, June 7th, 2018
kaala-release

ಮಂಗಳೂರು: ಸೂಪರ್‌‌ ಸ್ಟಾರ್‌ ರಜನಿಕಾಂತ್ ಅಭಿನಯದ ಕಾಲ‌ಚಿತ್ರಕ್ಕೆ ರಾಜ್ಯದ ವಿವಿಧೆಡೆ ವಿರೋಧ ವ್ಯಕ್ತವಾದರೂ ಮಂಗಳೂರಿನಲ್ಲಿ‌ ಈ ಚಿತ್ರಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ಬಿಡುಗಡೆಯಾಗುತ್ತಿದೆ. ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನೆಮಾ ಮತ್ತು ಫೋರಂ ಮಾಲ್‌ನ ಪಿ ವಿ ಆರ್ ಸಿನಿಮಾದಲ್ಲಿ ಕಾಲ ಚಿತ್ರ ಇಂದು ಪ್ರದರ್ಶನಗೊಳ್ಳಲಿದೆ. ಚಿತ್ರಕ್ಕೆ‌ ಯಾವುದೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ರಾಜ್ಯದಲ್ಲಿ ‘ಕಾಲ’ ಪ್ರದರ್ಶನವಾದ್ರೆ ದಂಗೆ ಏಳುತ್ತೇವೆ: ಮುಖ್ಯಮಂತ್ರಿ ಚಂದ್ರು

Tuesday, June 5th, 2018
chandru

ತುಮಕೂರು: ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್, ಕಮಲ್ ಹಾಸನ್, ಪ್ರಕಾಶ್ ರೈಗೂ ಧಿಕ್ಕರಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಜನಿಕಾಂತ್ ಅಭಿನಯದ ‘ಕಾಲ’ ಸಿನಿಮಾಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾಡು, ನುಡಿ, ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿಯಾಗಿರುತ್ತೇನೆ. ಒಕ್ಕೂಟ ವ್ಯವಸ್ಥೆಗೆ ಪ್ರಾದೇಶಿಕ ಭಾಷೆಗಳಿಗೂ ಗೌರವ ಕೊಡುತ್ತೇನೆ. ರಾಜ್ಯದ ಭಾಷೆಗೆ ಧಕ್ಕೆ ಬಂದರೆ ಎಂತಹ ಸ್ನೇಹಿತರಾದರೂ ಕೂಡ ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದರು. ‘ಕಾಲ’ […]

ಪ್ರಕಾಶ್ ರೈ ತೆರೆ ಮೇಲೆ ಮಾತ್ರ ಅಲ್ಲ ಸಾರ್ವಜನಿಕ ಜೀವನದಲ್ಲೂ ಖಳ ನಾಯಕ: ಪ್ರತಾಪ್ ಸಿಂಹ

Monday, June 4th, 2018
prathap-simha

ಮೈಸೂರು: ಕಾಲ ಚಿತ್ರಕ್ಕೂ ಕಾವೇರಿಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ಮತ್ತೊಮ್ಮೆ ಕರ್ನಾಟಕ ಪಾಲಿಗೆ ಖಳ ನಾಯಕ ಎಂಬುದನ್ನ ಸಾಬೀತು ಮಾಡಿದ್ದಾರೆ. ಈ ನಟನಿಗೆ ಕಾಸು ಮಾತ್ರ ಮುಖ್ಯ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ರಜನಿಕಾಂತ್ ಅವರ ಕಾಲ ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧ ಮಾಡಿರುವುದಕ್ಕೆ ಚಿತ್ರಕ್ಕೂ ಕಾವೇರಿ ವಿಚಾರಕ್ಕೂ ಸಂಬಂಧವಿಲ್ಲ ಎಂದು ಪ್ರಕಾಶ್ ರೈ ಬರೆದುಕೊಂಡಿರುವ ಬಗ್ಗೆ ಇಂದು ಸಂಸದ ಪ್ರತಾಪ್ ಸಿಂಹ ಅವರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಬಗ್ಗೆ ಖಾರಾವಾಗಿಯೇ ಪ್ರತಿಕ್ರಿಯೆ […]

ನಟ ರಜನಿಕಾಂತ್‌ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ: ವಾಟಾಳ್ ನಾಗರಾಜ್

Saturday, May 26th, 2018
vatal-nagaraj

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಧಿಕಾರ ರಚನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ. ಇದರ ಪರವಾಗಿ ದನಿ ಎತ್ತಿದ ನಟ ರಜನೀಕಾಂತ್ ಅವರ ಚಲನಚಿತ್ರಗಳನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ಅವರ ಚಿತ್ರವೊಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಅತ್ಯಂತ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ […]

ಕೋಮುವಾದಿ ಪಕ್ಷ ಬಿಜೆಪಿ ಹೆಚ್ಚು ಅಪಾಯಕಾರಿ: ನಟ ಪ್ರಕಾಶ್‌ ರೈ

Friday, April 20th, 2018
prakash-rai

ಬೆಂಗಳೂರು: ಕೋಮುವಾದಿ ಪಕ್ಷ ಬಿಜೆಪಿ ಹೆಚ್ಚು ಅಪಾಯಕಾರಿ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವನ್ನಾಗಿಸುವ ಬಗ್ಗೆ ಮಾತನಾಡುತ್ತಿದೆ. ದೇಶದಲ್ಲಿ ಕೋಮುವಾದಿ ವಿಷ ಬೀಜವನ್ನು ಬಿತ್ತುತ್ತಿದೆ ಎಂದು ಬಹು ಭಾಷಾ ನಟ ಪ್ರಕಾಶ್ ರೈ ಟೀಕಿಸಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ಪ್ರಶ್ನೆ ಮಾಡುವ ಎದೆಗಾರಿಕೆ ಬರಬೇಕು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಬೆಳಗಾವಿ ಶಾಸಕ ಸಂಜಯ ಪಾಟೀಲ್ ಅವರಿಗೆ ಈ ದೇಶ, ಈ […]

ಸ್ನಾನ ಮಾಡಲು ತೆರಳಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Tuesday, September 6th, 2016
Rajanikanth

ಬಂಟ್ವಾಳ: ಸ್ನೇಹಿತರೊಂದಿಗೆ ಸ್ನಾನ ಮಾಡಲು ತೆರಳಿದ್ದ ಯುವಕನೋರ್ವ ಇಲ್ಲಿನ ಬಿ.ಸಿ. ರೋಡ್‌‌ ಸಮೀಪ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ. ಮಂಗಳೂರು ಶ್ರೀನಿವಾಸ್ ಕಾಲೇಜಿನ ದ್ವಿತೀಯ ಬಿಬಿಎಂ ವಿದ್ಯಾರ್ಥಿಯಾಗಿದ್ದ ನಂತೂರು ನಿವಾಸಿ ರಜನಿಕಾಂತ್ (25) ಎಂಬಾತನೆ ಮೃತ ಯುವಕ. ಈತ ಸ್ನೇಹಿತರೊಂದಿಗೆ ನದಿಯ ಆಳ ತಿಳಿಯದೆ ಸ್ನಾನ ಮಾಡಲು ಇಳಿದಿದ್ದು ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು […]