ವಿಭಜನೆ ಜತೆಗೆ ಆಂಧ್ರಕ್ಕೆ ಕೇಂದ್ರಾಡಳಿತದ ನೆರಳು

Saturday, February 22nd, 2014
Jairam-Ramesh

ನವದೆಹಲಿ: ಒಂದು ಕಡೆ ಆಂಧ್ರ ವಿಭಜನೆ ಪ್ರಕ್ರಿಯೆ ಆರಂಭವಾಗಿದ್ದರೆ, ಇನ್ನೊಂದೆಡೆ  ರಾಷ್ಟ್ರಪತಿ ಆಳ್ವಿಕೆಗೆ ಕ್ಷಣಗಣನೆ ಆರಂಭವಾಗಿದೆ. ತೆಲಂಗಾಣ ಮಸೂದೆಗೆ ರಾಜ್ಯಸಭೆಯಿಂದಲೂ ಅನುಮೋದನೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಂಧ್ರವಿಭಜನೆ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದೆ. ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಹಂಚಿಕೆಗೆ ಸಂಬಂಧಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಇವುಗಳಲ್ಲಿ ಒಂದು ಸಮಿತಿ ಅಖಿಲ ಭಾರತ ಸೇವೆಗಳ ಅಡಿ ಬರುವ ಅಧಿಕಾರಿಗಳನ್ನು ಹಂಚಿಕೆ ಮಾಡಿದರೆ ಇನ್ನೊಂದು ಸಮಿತಿ ರಾಜ್ಯಮಟ್ಟದ […]

ಹಿರಿಯರ ಮನೆ ಮಾನ ಮುಕ್ಕು

Thursday, February 20th, 2014
Rajya-Sabha

ನವದೆಹಲಿ: ಸದನದ ಬಾವಿಯಲ್ಲಿ ಗದ್ದಲ, ಘೋಷಣೆ, ರಾಜ್ಯಸಭೆ ಸೆಕ್ರೆಟರಿ ಜನರಲ್ ಶಂಷೇರ್ ಕೆ. ಶರೀಫ್‌ರಿಂದ ಬಲವಂತವಾಗಿ ಕಾಗದಪತ್ರ ಕಿತ್ತುಕೊಳ್ಳಲು ಯತ್ನ, ಉಪಸಭಾಪತಿಗಳಿಗೇ ಗದರಿದ ಸಂಸದರು, ಮೂರು ಬಾರಿ ಮುಂದೂಡಲ್ಪಟ್ಟ ಕಲಾಪ… ಇದು ತೆಲಂಗಾಣ ಮಸೂದೆಗೆ ಸಂಬಂಧಿಸಿ ರಾಜ್ಯಸಭೆಯಲ್ಲಿ ಕಂಡ ಘಟನಾವಳಿಗಳು. ಕೆಳಮನೆಯಲ್ಲಿ ಮಂಗಳವಾರವಷ್ಟೇ ನಾಟಕೀಯ ರೀತಿಯಲ್ಲಿ ಅಂಗೀಕಾರ ಪಡೆದಿದ್ದ ಮಸೂದೆಯನ್ನು ರಾಜ್ಯಸಭೆಯಲ್ಲಿ ಬುಧವಾರ ಮಂಡಿಸುವ ಸರ್ಕಾರದ ಪ್ರಯತ್ನ ಟಿಡಿಪಿ ಸಂಸದರ ಗದ್ದಲದಿಂದಾಗಿ ವಿಫಲವಾಗಿದೆ. ದಿನದ ಆರಂಭದಿಂದಲೇ ಕಲಾಪವನ್ನು ರಣರಂಗವಾಗಿ ಪರಿವರ್ತಿಸಿದ್ದ ಟಿಡಿಪಿ ಸಂಸದರು ಸದನದ ಬಾವಿಗೆ ನುಗ್ಗಿ […]

‘ಲೋಕ’ದ ಕತ್ತಲಲ್ಲಿ ಒಪ್ಪಿಗೆ ಪಡೆದ ತೆಲಂಗಾಣ ಮಸೂದೆ, ಇಂದು ಕಿರಣ್ ರಾಜಿನಾಮೆ?

Wednesday, February 19th, 2014
Kiran-Reddy

ನವದೆಹಲಿ: ಸಂಸತ್ತಿನ ಹೊರಗೆ ಮತ್ತು ಒಳಗೆ ಸೀಮಾಂಧ್ರ ಮುಖಂಡರ ಪ್ರತಿಭಟನೆಯ ನಡುವೆಯೇ ಆಂಧ್ರವನ್ನು ಇಬ್ಭಾಗ ಮಾಡುವ ತೆಲಂಗಾಣ ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ನೀಡಲಾಯಿತು. ಸಂಪೂರ್ಣ ನಾಟಕೀಯ ರೀತಿಯಲ್ಲಿ ನಡೆದ ಬೆಳವಣಿಗೆಯಲ್ಲಿ ಲೋಕಸಭೆಯ ನೇರ ಪ್ರಸಾರವನ್ನು ಕಡಿತಗೊಳಿಸಿ, ಮಾರ್ಷಲ್‌ಗಳನ್ನು ಕರೆಸಿ ಮಸೂದೆಗೆ ಕದ್ದುಮುಚ್ಚಿ ಒಪ್ಪಿಗೆ ಪಡೆಯಲಾಯಿತು. ಸ್ವಪಕ್ಷೀಯ ಸಂಸದರು, ಸಚಿವರ ವಿರೋಧದ ಹೊರತಾಗಿಯೂ ಮಂಡನೆಯಾದ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಆಂಧ್ರಪ್ರದೇಶ ಮರುವಿಂಗಡಣೆ ಮಸೂದೆ- 2014ಕ್ಕೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಲಾಯಿತು. ಆಂಧ್ರವಿಭಜನೆಯ ಈ ಮಸೂದೆಗೆ […]