ಪೂಜೆಗಳನ್ನು ಸಾಮೂಹಿಕವಾಗಿ ಮಾಡಿದಾಗ ಅದರಿಂದ ಹೆಚ್ಚು ಫಲ ಪ್ರಾಪ್ತಿ : ರಾಜೇಶ್ ನಾಯ್ಕ್ ಉಳಿಪ್ಪಾಡಿ

Friday, August 4th, 2017
Rajesh Naik

ಬಂಟ್ವಾಳ: ಮಾಣಿ ಕುಲಾಲ ಸಂಘದ ವತಿಯಿಂದ ಮಾಣಿ ಕುಲಾಲ ಭವನದಲ್ಲಿ ಸಾಮೂಹಿಕ ವರಮಹಾಲಕ್ಮೀ ಪೂಜೆ ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರ ನೇತೃವದಲ್ಲಿ ನಡೆಯಿತು. ಈ ಸಂದರ್ಭ ನಡೆದ ಸಭಾ ಕಾರ‍್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಯಾವುದೇ ಪೂಜೆಗಳನ್ನು ಸಾಮೂಹಿಕವಾಗಿ ಮಾಡಿದಾಗ ಅದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಸಾಮೂಹಿಕ ಪೂಜೆಗಳು ಸಮಾಜವನ್ನು ಒಟ್ಟುಗೂಡಿಸುತ್ತದೆ. ಸಂಘಟನಾತ್ಮಕವಾಗಿ ಯಾವುದೇ ಸಮುದಾಯ ಮುಂದೆ ಬಂದಾಗ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಅವರು ಹೇಳಿದರು. ವೇದಿಕೆಯಲ್ಲಿ […]

ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವರ ಮಹಾಲಕ್ಷ್ಮಿಪೂಜೆ ಆಚರಣೆ

Saturday, August 17th, 2013
vara-mahalakshimi-pooja

ಮಂಗಳೂರು : ಆಗಸ್ಟ್ 16 ಶುಕ್ರವಾರ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ವರಮಹಾಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಹಿಳೆಯರು ಆಚರಿಸಿದರು. ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಲೆಂದು ಮತ್ತು ಸಂಸಾರದ ಸಕಲ ಕಷ್ಟಗಳನ್ನು ನಿವಾರಿಸಲು ವಿವಾಹಿತ ಮಹಿಳೆಯರೆಲ್ಲರೂ ಲಕ್ಷ್ಮಿದೇವಿಗೆ ಹೂವಿನಿಂದ ಅಲಂಕರಿಸಿ ಭಕ್ತಿಯಿಂದ ಪೂಜೆಯನ್ನು ಮಾಡಿದರು. ಮಂಗಳಾದೇವಿ ದೇವಾಸ್ಥಾನ, ಬೋಳಾರ ಮರಿಯಮ್ಮ ದೇವಾಸ್ಥಾನ, ಉರ್ವ ಮರಿಯಮ್ಮ ದೇವಾಸ್ಥಾನ, ಕಟೀಲ್ ದುರ್ಗಪರಮೇಶ್ವರಿ ದೇವಾಸ್ಥಾನಗಳಲ್ಲಿ ಲಕ್ಷ್ಮಿದೇವಿಗೆ ವಿಶೇಷ ಪೂಜೆ ನಡೆಯಿತು. ಮಹಿಳೆಯರು ಲಕ್ಷ್ಮಿದೇವಿಯ ಮುಂದೆ ಸೀರೆ, ಬಳೆಗಳನ್ನು ಇಟ್ಟು ಪೂಜೆಯನ್ನು ಮಾಡಿ, ನಂತರ […]