ಅಸ್ಥಿ ವಿಸರ್ಜನೆಗೆ ತೆರಳುವವರಿಗೆ ಯಾರು ಅಡ್ಡಿ ಪಡಿಸದಂತೆ ಆದೇಶ

Monday, May 24th, 2021
Asti

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿ ವಿಸರ್ಜನೆಗೆ ತೆರಳುವವರನ್ನ ಮಾರ್ಗ ಮಧ್ಯೆ ಯಾರು ತಡೆಯದ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಮಾಹಿತಿ ನೀಡಿದ ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್‌ ಅಶೋಕ, “ಸೋಂಕಿನಿಂದ ಮರಣ ಹೊಂದಿದವರ‌ ಅಸ್ಥಿಯನ್ನು ಸಂಬಂಧಿಗಳು ತಮ್ಮಿಷ್ಟದ ಸ್ಥಳದಲ್ಲಿ ವಿಸರ್ಜನೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ ಕುಟುಂಬಸ್ಥರಿಗೆ ಅಸ್ಥಿ ವಿಸರ್ಜನೆ ಮಾಡಲು ತೆರಳುವ ಮಾರ್ಗ ಮಧ್ಯೆ ಹಾಗೂ ವಿಸರ್ಜನೆಯ ಸ್ಥಳದಲ್ಲಿ ಅಡ್ಡಿಪಡಿಸುತ್ತಿರುವ ಕುರಿತಂತೆ ಸಾಕಷ್ಟು […]

ಗದಗ ಉಸ್ತುವಾರಿ ಸಚಿವರಿಂದ ನರಗುಂದ ನಗರ ಪ್ರದಕ್ಷಿಣೆ

Monday, May 24th, 2021
CC Pateel

ಗದಗ : ರಾಜ್ಯ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಸೋಮವಾರ ನರಗುಂದ ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿ, ಲಾಕ್ ಡೌನ್ ಸಮಯದ ಸ್ಥಿತಿಗತಿಯ ವೀಕ್ಷಣೆ ಮಾಡಿದರು. ಕೊರೋನಾ ಸಮಯದ ಲಾಕ್‌ಡೌನ್ ಕಠಿಣ ಸಂದರ್ಭವಾಗಿದ್ದು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಜನರ ಜೀವಹಾನಿ ತಪ್ಪಿಸಲು ಲಾಕ್ ಡೌನ್ ಅನಿವಾರ್ಯವಾಗಿದೆ. ಕೋವಿಡ್ ನಿಯಮಾವಳಿಗಳನ್ನು ಸಾರ್ವಜನಿಕರು ಸರಿಯಾಗಿ ಪಾಲಿಸುವ ಮೂಲಕ ಸಹಕರಿಸಿ, ಸುರಕ್ಷಿತವಾಗಿರಿ […]

ಪ್ರತಿಬಂಧಕಾಜ್ಞೆ ಜಾರಿ ಮುಂದುವರಿಕೆ : ಮುಖಗವಸು ಧರಿಸದಿದ್ದರೆ ರೂ.250 ದಂಡ

Monday, May 24th, 2021
Gadag mask

ಗದಗ : ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973 , ಸಾಂಕ್ರಾಮಿಕ ರೋಗ ಕಾಯ್ದೆ 1897 ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕೋವಿಡ್-19 ಸರಪಳಿಯನ್ನು ತುಂಡಿರಿಸಲು ಆದೇಶದಲ್ಲಿ ಅವಕಾಶ ನೀಡಿದ ಚಟುವಟಿಕೆಗಳಿಗೆ […]

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಜಾಮೀನು ಅರ್ಜಿ ವಜಾ

Monday, May 24th, 2021
Vinay Kulkarni

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿನಯ್ ಹಾಗೂ ಅವರ ಅಭಿಮಾನಿಗಳಿಗೆ ಹೈಕೋರ್ಟ್, ಜಾಮೀನು ಅರ್ಜಿಯನ್ನೇ ವಜಾಗೊಳಿಸುವ ಮೂಲಕ ಶಾಕ್ ನೀಡಿದೆ. ಹೌದು! ಚಾರ್ಜಶೀಟ್ ಸಲ್ಲಿಕೆಯಾದ ಬಳಿಕ ವಿನಯ್ ಪರ ವಕೀಲರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿ ವಜಾಗೊಂಡ ಬಳಿಕ ಮತ್ತೆ ಬೆಂಗಳೂರಿನ […]

ಲಾಕ್ ಡೌನ್ ವೇಳೆ ಎಟಿಎಂ ದೋಚಿದ ಖದೀಮರು

Monday, May 24th, 2021
ATM

ಮಂಡ್ಯ : ಎಟಿಎಂ ಕೇಂದ್ರದಲ್ಲಿ ಕಾವಲುಗಾರ ಇಲ್ಲದಿರುವುದರ ಅವಕಾಶವನ್ನು ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರವನ್ನು ತುಂಡರಿಸಿ ಸುಮಾರು 17.50 ಲಕ್ಷಕ್ಕೂ ಹೆಚ್ಚಿನ ಹಣ ದೋಚಿರುವ ಘಟನೆ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ನಲ್ಲಿ ನಡೆದಿದೆ. ತಡರಾತ್ರಿ ನಾಲ್ಕರಿಂದ ಐದು ಮಂದಿ ದುಷ್ಕರ್ಮಿಗಳು ಮೊದಲಿಗೆ ಎಸ್.ಬಿ.ಐ ಎಟಿಎಂ ಕೇಂದ್ರದ ಮುಂಭಾಗ ಇರುವ ಸಿ‌ಸಿಟಿವಿ ಕ್ಯಾಮೆರಾಗಳನ್ನು ಗ್ಯಾಸ್ ಕಟ್ಟರ್ ನಿಂದ ಸುಟ್ಟು ಹಾಕಿ ನಂತರ ಒಳ ನುಗ್ಗಿ ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿ […]

ಆತ್ಮಸ್ಥೈರ್ಯದಿಂದಲೇ ಕೊರೋನಾ ಹಿಮ್ಮೆಟ್ಟಿಸಿದ ಶಿವಳ್ಳಿಮಠ ಕುಟುಂಬ

Monday, May 24th, 2021
Shivalli Mata Family

ಹುಬ್ಬಳ್ಳಿ : ಎಲ್ಲಾ ಜೀವಿಗಳಿಗಿಂತ ಮಾನವ ಬುದ್ಧಿಜೀವಿ. ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ, ಹೊಸವಿಚಾರಗಳನ್ನು ಕಲಿಯುತ್ತಾ, ತನ್ನ ಜೀವನಶೈಲಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುವ ವಸ್ತುಗಳನ್ನು ತಾನೇ ತಯಾರಿಸುತ್ತಾ, ಅತ್ಯಂತ ವೇಗವಾಗಿ ಸಾಗುತ್ತಿದ್ದ ಮನುಷ್ಯನ ಜೀವನಕ್ಕೆ ಒಮ್ಮೆಲೇ ಬ್ರೇಕ್ ಹಾಕಿದ್ದು ಚೀನಾ ಮೂಲದ ಕರೋನಾ ವೈರಸ್. ಕೋವಿಡ್ -19 ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಈ ವೈರಸ್ ಮಾನವ ಜೀವನಶೈಲಿಯನ್ನು ಬದಲಾಯಿಸಿತು, ರೋಗದಿಂದ ಪಾರಾಗಿ ಬದುಕುಳಿಯಲು ಮಾನವಕುಲ ಹರಸಾಹಸಪಡುವ ಸ್ಥಿತಿಗೆ ಬಂದು ನಿಲ್ಲುವಂತೆ ಮಾಡಿತು, ಶ್ವಾಸಕೋಶದ ಮೂಲಕ ಮಾನವ ದೇಹ […]

ಲಾಕ್‍ಡೌನ್ ನಡುವೆ ಗ್ರಾಮ ಪಂಚಾಯತ್ ಸದಸ್ಯನ ಮಗಳ ಅದ್ಧೂರಿ ಮದುವೆ, ಮುಂದೇನಾಯ್ತು ನೋಡಿ !

Monday, May 24th, 2021
Ambagilu Marraige

ಮಂಡ್ಯ:  ಬಿ.ಹೊಸೂರು ಗ್ರಾಮದ ಹೊರ ಹೊಲಯದಲ್ಲಿರುವ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ಗ್ರಾ.ಪಂ ಸದಸ್ಯರೊಬ್ಬರು ಲಾಕ್‍ಡೌನ್ ನಿಯಮ ಮೀರಿ  ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದುವೆಗೆ ಯಾವುದೇ ಅನುಮತಿ ಪಡೆಯದೆ ಗ್ರಾ.ಪಂ ಸದಸ್ಯ ಮಹೇಶ್ ಎಂಬವರು ಲಾಕ್‍ಡೌನ್ ನಿಯಮ ಮೀರಿ ಮದುವೆ ಕಾರ್ಯಕ್ರಮ ನಡೆಸಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವಿಚಾರ ತಿಳಿದು ಅಧಿಕಾರಿಗಳು ಮಂಡ್ಯ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಮದುವೆ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ತಹಶೀಲ್ದಾರ್ […]

ಧಾರವಾಡ ಜಿಲ್ಲೆಯಲ್ಲಿ ವೀಕ್ ಎಂಡ್ ಲಾಕ್ ಡೌನ್ ವಿಸ್ತರಣೆ

Sunday, May 23rd, 2021
shetter

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹಬ್ಬುತ್ತಿರುವ ಕೊರೊನಾ ಸರಪಳಿ ಕಟ್ ಮಾಡಲು ಸರ್ಕಾರ ಹೊರಡಿಸಿರುವ ಲಾಕಡೌನ್ ಮಾರ್ಗಸೂಚಿಗಳನ್ನು ಹೊರತುಪಡಿಸಿ ಧಾರವಾಡ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇಂದು ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ವಾರದಲ್ಲಿ ಐದು ದಿನ ಕಟ್ಟುನಿಟ್ಟಿನ ಲಾಕಡೌನ್ ಜಾರಿ ಮಾಡಿದ್ದಾರೆ. ಮೇ.27 ಹಾಗೂ 28 ರಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ […]

ಗಂಗಿಬಾವಿ ಗವಿಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

Sunday, May 23rd, 2021
guru Siddeshwara

ಹುಬ್ಬಳ್ಳಿ : ಭಕ್ತರ ಕಷ್ಟ ನನಗಿರಲಿ ನನ್ನ ಸುಖ-ಸಂತೋಷ ಭಕ್ತರಿಗೆ ಸಿಗಲಿ ಎನ್ನುತ್ತಾ ಜೀವನದ ಪಯಣ ಮುಗಿಯುವರೆಗೂ ಅದನ್ನೇ ಮುಂದುವರಿಸಿ ಕೊಂಡು ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಆಶೀರ್ವದಿಸಿದ ಹಾವೇರಿ ಜಿಲ್ಲಾ ಶಿಗ್ಗಾವಿ ತಾಲೂಕು ಗಂಗಿಬಾವಿ ಗವಿಮಠದ ಮಹಾತಪಸ್ವಿ ಪೂಜ್ಯ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು( 97) ದಿನಾಂಕ 23- 5 -2021 (ರವಿವಾರ) ಲಿಂಗೈಕ್ಯರಾದರು. ಇವರು ಬಾಳೆಹೊನ್ನೂರು ರಂಭಾಪುರೀ ಪೀಠದ ಶ್ರೀ ಜಗದ್ಗರು ಲಿಂ. ಶ್ರೀ 1008 ವೀರ ಗಂಗಾಧರ ಜಗದ್ಗುರುಗಳ ಶ್ರೀಮಠದ ಮುಕ್ತಿಮಂದಿರ ಸೇವಾ ಆಶೀರ್ವಾದ […]

ಹಳ್ಳಿ ಮತ್ತು ಪಟ್ಟಣಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಕೋವಿಡ್ ಪರೀಕ್ಷೆ: ಆರ್ ಅಶೋಕ

Sunday, May 23rd, 2021
R Ashoka

ಬೆಂಗಳೂರು : ಗ್ರಾಮೀಣ‌ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸೋಂಕಿನ‌ ಲಕ್ಷಣವಿರುವವರನ್ನ ಪ್ರತಿ ಮನೆ, ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡ ರಚಿಸಲಾಗುವುದು ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್ ಅಶೋಕ ತಿಳಿಸಿದ್ದಾರೆ. ಈ ಕುರಿತಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಅನುಸರಿಸುತ್ತಿದ್ದಾಗಲೂ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಹರಡುವುದು ‌ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗೆಯೇ ಜನರು ಕೂಡಾ ಪರೀಕ್ಷೆ ಮಾಡಿಸಿಕೊಳ್ಳಲು […]