ಮೈಸೂರು : ಕೊರೊನಾದಿಂದ ಮೃತ ತಂದೆಯ ಹೆಣ ಬೇಡ ಹಣ ಬೇಕು ಅಂದ ಮಗ

Sunday, May 23rd, 2021
Mysore corona

ಮೈಸೂರು: ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ ಎಂದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮಗ ಹೇಳಿರುವ ಘಟನೆ ಮೈಸೂರಿನ ಹೆಬ್ಬಾಳದಲ್ಲಿ ನಡೆದಿದೆ. ತಂದೆಯ ಶವ ಕೂಡ ನೋಡಲು ಬಾರದ ಮಗ, ತಂದೆ ಶವ ಬೇಡ, ಹಣ ಬೇಕು ಎಂದು  ಆತನಿಗೆ ಕರೆ ಮಾಡಿ ವಿಷಯ ತಿಳಿಸಿದವರಿಗೆ ಹೇಳಿದ್ದಾನೆ, ತಂದೆ ಮನೆಯಲ್ಲಿ ಇಟ್ಟಿರುವ ಹಣವನ್ನು ನಾನು ಇರುವ ಸ್ಥಳಕ್ಕೆ ತಂದು ಕೊಡಿ. ತಂದೆಯ ಶವ ನೀವೇ ಸುಟ್ಟು ಹಾಕಿ, […]

ನಾಳೆ ರಾಜ್ಯವ್ಯಾಪಿ ಜನಾಗ್ರಹ

Sunday, May 23rd, 2021
Janandolana

ಮಂಡ್ಯ : ಜನಾಗ್ರಹ ಆಂದೋಲನವು ನಾಳೆ, ಅಂದರೆ ಮೇ 24ರಂದು ಸರಕಾರಕ್ಕೆ ಕೇಳುವಂತೆ ಮತ್ತು ಕಾಣುವಂತೆ ಜನಾಗ್ರಹವನ್ನು ಮುಂದಿಡಲು ಕರೆ ನೀಡಿದೆ. ನಾವೂ ಬದುಕಬೇಕು ಎಂಬ ಘೋಷವಾಕ್ಯವನ್ನು ಮುಂದಿಟ್ಟುಕೊಂಡು, ಸರಕಾರ ತೆಗೆದುಕೊಳ್ಳಬೇಕಿರುವ ಪಂಚ ಕ್ರಮಗಳಿಗಾಗಿ ಒತ್ತಾಯಿಸಿ ಈ ಪ್ರತಿಭಟನೆ ನಡೆಯಲಿದೆ. ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜನರು ಬೆಳಿಗ್ಗೆ 9ಕ್ಕೆ ಮನೆಯಿಂದ ಹೊರಬಂದು, ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ, ಖಾಲಿ ತಟ್ಟೆ – ಖಾಲಿ ಚೀಲಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಹಾಕುತ್ತಾ, ತಮ್ಮ ಹಕ್ಕೊತ್ತಾಯಗಳತ್ತ ಸರಕಾರದ ಗಮನ ಸೆಳೆಯುವ ಪ್ರಯತ್ನ […]

ಕೋವಿಡ್ ವರದಿ 24 ಗಂಟೆಯೊಳಗೆ ನೀಡಲು ಸೂಚನೆ

Sunday, May 23rd, 2021
Dr K Sudhakar

ಗದಗ : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರ ಜೀವ ಹಾನಿ ತಡೆಯುವಲ್ಲಿ ಸರ್ಕಾರದ ಮಾರ್ಗಸೂಚಿಗಳ ಪಾಲನೆಯಾಗಲಿ. ಕೋವಿಡ್ ತಪಾಸಣಾ ವರದಿಯು 24 ಗಂಟೆಯೊಳಗೆ ನೀಡುವ ಮೂಲಕ ಸೋಂಕು ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದರು. ಗದಗ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈವಿಷಯ ತಿಳಿಸಿದರು.ಕೋವಿಡ್ ಸೋಂಕಿನ ವರದಿಯನ್ನು ಶೀಘ್ರ […]

ಕೋವಿಡ್ ಸೋಂಕಿತರನ್ನು ಆರೈಕೆ ಕೇಂದ್ರದಲ್ಲಿರಿಸಿ ಚಿಕಿತ್ಸೆ ನೀಡುವುದು ಕಡ್ಡಾಯ : ಡಾ. ಕೆ. ಸುಧಾಕರ್

Saturday, May 22nd, 2021
sudhakar

ಗದಗ : ಕೋವಿಡ್ ಸೋಂಕಿತರಿಗೆ ಗೃಹ ದಿಗ್ಬಂಧನಲ್ಲಿರಿಸಿ ಚಿಕಿತ್ಸೆ ನೀಡುವುದರಿಂದ ಇತರರಿಗೆ ಸೋಂಕು ಹರಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇನ್ನು ಮುಂದೆ ಸೋಂಕು ದೃಢಪಟ್ಟ ವ್ಯಕ್ತಿಗಳನ್ನು ಕಡ್ಡಾಯವಾಗಿ ಹತ್ತಿರದ ಕೋವಿಡ್ ಆರೈಕೆ ಕೇಂದ್ರದಲ್ಲಿರಿಸಿ ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ನಿರ್ದೇಶನ ನೀಡಿದರು. ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶನಿವಾರ ಜರುಗಿದ ಕೋವಿಡ್ ಸೋಂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ […]

ಮುಂದಿನ ವಾರಕ್ಕಾಗಿ ಕರ್ನಾಟಕಕ್ಕೆ ಮತ್ತೆ 4.25 ಲಕ್ಷ ಸೀಸೆ ರೆಮ್ಡೆಸಿವಿರ್ ಹಂಚಿಕೆ

Saturday, May 22nd, 2021
Sadananda Gowda

ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಒಟ್ಟು 8,848 ಕಂಪ್ಪುಶಿಲೀಂಧ್ರ (Mucormycosis/Black Fungus) ಪ್ರಕರಣಗಳು ವರದಿಯಾಗಿದ್ದು ಕೇಂದ್ರ ಸರಕಾರವು ಇಂದು ಬೇರೆಬೇರೆ ರಾಜ್ಯಗಳಿಗೆ ಒಟ್ಟು 23,680 ಸೀಸೆ ಅ್ಯಾಂಫೋಟೆರಿಸಿನ್-ಬಿ (Amphotericin-B) ಔಷಧವನ್ನು ಹಂಚಿಕೆ ಮಾಡಿದೆ. ಸುಮಾರು 500 ಕಪ್ಪುಶಿಲೀಂಧ್ರ ಪ್ರಕರಣರಣಗಳಿರುವ ಕರ್ನಾಟಕಕ್ಕೆ1270 ಸೀಸೆ ಅ್ಯಾಂಫೋಟೆರಿಸಿನ್-ಬಿ ಒದಗಿಸಲಾಗಿದೆ. ಈ ಹಿಂದೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಹಂಚಿಕೆ ಮೂಲಕ ಮೂರು ಕಂತಿನಲ್ಲಿ 1660 ಸೀಸೆ ಅ್ಯಾಂಫೋಟೆರಿಸಿನ್-ಬಿ ಒದಗಿಸಲಾಗಿತ್ತು. ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಮತ್ತು […]

ಚಾಮರಾಜನಗರ ದುರಂತ ಸಂತ್ರಸ್ತರಿಗೆ ಪರಿಹಾರ ಮಂಜೂರು

Saturday, May 22nd, 2021
chamaraja Nagar

ಬೆಂಗಳೂರು : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸರ್ಕಾರ ಪರಿಹಾರ ಧನ ಮಂಜೂರು ಮಾಡಿದೆ. ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24 ಜನ ಆಮ್ಲಜನಕದ ಅಭಾವದಿಂದ ಸಾವು ಸಂಭವಿಸಿರಬಹುದಾದ ಹಿನ್ನೆಲೆಯಲ್ಲಿ ಸರ್ಕಾರವು ನ್ಯಾಯಾಲಯಕ್ಕೆ ವಾಗ್ದಾನ ನೀಡಿದಂತೆ ದುರಂತ ಸಂತ್ರಸ್ತರಿಗೆ ತಲಾ ರೂ.2 ಲಕ್ಷದಂತೆ ಒಟ್ಟು 24 ವ್ಯಕ್ತಿಗಳ ಕುಟುಂಬಸ್ಥರಿಗೆ ರೂ. 48 ಲಕ್ಷಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ. ವರದಿ : ಶಂಭು. ಮೆಗಾಮೀಡಿಯಾ […]

ಪದ್ಮನಾಭನಗರ ಕ್ಷೇತ್ರದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ ಉದ್ಘಾಟನೆ

Saturday, May 22nd, 2021
R Ashoka

ಬೆಂಗಳೂರು : ಆಕ್ಸಿಜನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿನ ಶಾಸಕರ ಕಚೇರಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ಬ್ಯಾಂಕ್‍ನ್ನು ಕಂದಾಯ ಸಚಿವ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಅಶೋಕ ಉದ್ಘಾಟನೆ ಮಾಡಿದರು. ಕ್ಷೇತ್ರದ ನಿವಾಸಿಗಳಿಗೆ ಅನುಕೂಲವಾಗಲೆಂದು ಕೈಗೊಳ್ಳಲಾದ ಈ ಸೌಲಭ್ಯವು ಅತ್ಯಧಿಕವಾಗಿ ನೆರವಾಗಲಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್. ಲಕ್ಷ್ಮೀಕಾಂತ, ಕಬ್ಬಾಳು ಉಮೇಶ್, ಆಂಜನಪ್ಪ ಮತ್ತು ಪದ್ಮನಾಭನಗರ ಮಂಡಲ ಪ್ರಧಾನ ಕಾರ್ಯದರ್ಶಿ ವಿಜಯ್ ಉಪಸ್ಥಿತರಿದ್ದರು. ನಂತರದಲ್ಲಿ ವಿಧಾನಸಭಾ […]

ಬ್ಲಾಕ್ ಫಂಗಸ್ ಇಂಜೆಕ್ಷನ್ ಕೂಡಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ

Saturday, May 22nd, 2021
Amphotericin-B

ಬೆಂಗಳೂರು : ರಾಜ್ಯಕ್ಕೆ ಮ್ಯೂಕೊರ್‍ಮೈಕೋಸಿಸ್ (ಬ್ಲಾಕ್ ಫಂಗಸ್) ಕಾಯಿಲೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಳಸಲಾಗುತ್ತಿರುವ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ನ್ನು ಕೂಡಲೇ ಹಂಚಿಕೆ ಮಾಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಪತ್ರ ಬರೆದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. “ದೇಶದಲ್ಲಿ ಕರ್ನಾಟಕ ಎರಡನೇ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಸೋಂಕಿತರನ್ನ ಹೊಂದಿದ ರಾಜ್ಯವಾಗಿದೆ ಹಾಗೂ ಪಾಸಿಟಿವಿಟಿ ದರ ಕಳೆದ ವಾರಕ್ಕಿಂತಲು ಶೇ. 30ರಷ್ಟು ಹೆಚ್ಚಳವಾಗಿದೆ. […]

ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಯನ್ನ 15 ದಿನಗಳೊಳಗೆ ಪಡೆದುಕೊಳ್ಳದಿದ್ದರೆ ಸರ್ಕಾರದಿಂದಲೇ ವಿಸರ್ಜನೆ

Saturday, May 22nd, 2021
R Ashoka

ಬೆಂಗಳೂರು : ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಅಂತಿಮ ಕ್ರಿಯೆಯ ನಂತರದಲ್ಲಿ ಸಾವಿರಾರು ಜನರ ಅಸ್ಥಿಗಳು ಹಿಂಪಡೆಯದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿವೆ. ಇಂಥಹ ಚಿತಾಭಸ್ಮವನ್ನ 15 ದಿನಗಳ ನಂತರ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ,”ನಾನಾ ಕಾರಣಗಳಿಂದ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನ ಅವರ ಕುಟುಂಬಸ್ಥರು ಇಂದಿಗೂ ಚಿತಾಗಾರದಿಂದ ತೆಗದುಕೊಂಡು ಹೋಗಿಲ್ಲ. ಈಗಾಗಲೇ ಸಾವಿರಕ್ಕೂ ಅಧಿಕ ಅಸ್ಥಿಗಳು ಚಿತಾಗಾರಗಳಲ್ಲಿ ಉಳಿದುಕೊಂಡಿವೆ. ಸಾಮಾನ್ಯವಾಗಿ […]

ಬ್ಲ್ಯಾಕ್ -ವೈಟ್ ಫಂಗಸ್ ಇನ್ಫೆಕ್ಷನ್‍ನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಮುಂಜಾಗೃತ ಕ್ರಮ ಕೈಗೊಂಡಿದೆ : ಡಾ. ಸುಧಾಕರ್

Saturday, May 22nd, 2021
Sudhakar Kims

ಹುಬ್ಬಳ್ಳಿ: ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಇನ್ಫೆಕ್ಷನ್‍ನ್ನು ರಾಜ್ಯದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಎಲ್ಲ ಮುಂಜಾಗೃತ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿದ್ದರು. ನಗರದ ಕಿಮ್ಸ್ ಆಸ್ಪತ್ರೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಡಾ ಕೆ ಸುಧಾಕರ್, ಸರಿಯಾದ ಬ್ಲ್ಯಾಕ್ ಫಂಗಸ್ ನಿಂದ ಸಾವಿನ ಪ್ರಮಾಣ ಜಾಸ್ತಿ ಆಗಿಲ್ಲ, ಸಾಮಾನ್ಯವಾಗಿ ಇಂತಹ ಕಾಯಿಲೆಗೆ ತುತ್ತಾದವರು ವರ್ಷದಲ್ಲಿ 10 ಜನ […]