Blog Archive

ಲಾಕ್‍ಡೌನ್ ಅವಧಿಯಲ್ಲಿ ನೆರವು ನೀಡಿದ ಸರ್ಕಾರೇತರ ಸಂಘ ಸಂಸ್ಥೆಗಳ ಮಾಹಿತಿ ದಾಖಲಿಸಲು ಸೂಚನೆ

Monday, July 20th, 2020
foodkits

ಬೆಂಗಳೂರು : ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಕೈಗೊಂಡ ಲಾಕ್‍ಡೌನ್ ಅವಧಿಯಲ್ಲಿ ತೊಂದರೆ ಅನುಭವಿಸಿದವರಿಗೆ ನೆರವು ನೀಡಿದ ಸರ್ಕಾರೇತರ ಸಂಘ ಸಂಸ್ಥೆಗಳು/ಕಾರ್ಪೊರೇಟ್ ಸಂಸ್ಥೆಗಳು ಕೈಗೊಂಡ ಪರಿಹಾರ ಕಾರ್ಯಗಳನ್ನು ದಾಖಲಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಕೋವಿಡ್-19 ರ ನಿಮಿತ್ತ ಲಾಕ್‍ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು/ವಲಸೆ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಜನರಿಗೆ ತುರ್ತು ಪರಿಹಾರ ನೀಡಲು […]

ಕೋವಿಡ್-19 ರೋಗದಿಂದ ಮೃತಪಟ್ಟ ಮುಸ್ಲಿಂ ಸಮಾಜದವರನ್ನು ಗೌರವದಿಂದ ಅಂತ್ಯ ಸಂಸ್ಕಾರ ಮಾಡಿ

Sunday, July 19th, 2020
coronadeath

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬೆಂಗಳೂರು ನಗರ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸುವ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ಮಾಡಬೇಕೆಂದು ಬೆಂಗಳೂರು ನಗರ ಉತ್ತರ ಜಿಲ್ಲೆ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಕ್ಫ್ ನೋಂದಾಯಿತ ಅಥವಾ ನೋಂದಾಯಿಸಲಾಗದೆ ಇರುವ ಖಬರಸ್ತಾನಗಳ ಆಡಳಿತ ಸಮಿತಿಗಳು/ಮುತವಲ್ಲಿಗಳು/ಆಡಳಿತಾಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಮರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಸದರಿ ಕಾರ್ಯಕ್ಕಾಗಿ […]

ಕೋವಿಡ್-19 ನಿಂದ ನಂದಿನಿ ಹಾಲಿನ ವ್ಯವಹಾರ ರೂ.30.00 ಕೋಟಿ ಕುಸಿತ, ಹಾಲಿನ ಹುಡಿ ದರ ರೂ.160ಕ್ಕೆ ಇಳಿಕೆ

Saturday, June 20th, 2020
nandini Milk

ಮಂಗಳೂರು  : ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ, ದಿನವಹಿ 5.0 ಲಕ್ಷ ಕೆಜಿಗೂ ಮೀರಿ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕರ್ನಾಟಕ  ಹಾಲು ಮಹಾಮಂಡಳಿಗೆ ದಿನವಹಿ 86.73 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ.25ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗಿ, ದಿನವಹಿ 47.19 ಲಕ್ಷ ಲೀಟರ್ […]

ಕೋವಿಡ್-19 ಕಾರಣ ಕತಾರ್‌ನಲ್ಲಿ ಕಳಕೊಂಡ ಸುಮಾರು 30,000 ಮಂದಿ ಕನ್ನಡಿಗರು ಅತಂತ್ರ

Sunday, June 7th, 2020
qutar-indians

ಮಂಗಳೂರು : ಜಗತ್ತಿನಾದ್ಯಂತ ಭಾರತೀ ಯರು ಕೋವಿಡ್-19 ಕಾರಣ ಕೆಲಸ  ಕಳೆದು ಕೊಂಡಿದ್ದಾರೆ. ಕೊಲ್ಲಿ ರಾಷ್ಟ್ರ ಕತಾರ್‌ನಲ್ಲಿ ಸುಮಾರು 30,000 ಮಂದಿ ಕನ್ನಡಿಗರು ಕೆಲಸ ಕಳೆದುಕೊಂಡು ಸಂತ್ರಸ್ತರಾಗಿದ್ದು, ಪ್ರಸ್ತುತ ಅವರು ತಾಯ್ನಾಡಿಗೆ ಹಿಂದಿರುಗಲು ವ್ಯವಸ್ಥೆಗಳಿಲ್ಲದೆ ಎರಡೂವರೆ ತಿಂಗಳಿಂದ ಅತಂತ್ರರಾಗಿದ್ದಾರೆ. ಅಲ್ಲಿನ ಕಂಪೆನಿಯು ಅವರನ್ನು ಕೆಲಸದಿಂದ ತೆಗೆದು ಹಾಕಿದ್ದು, ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿಲ್ಲ; ಹಾಗಾಗಿ ಕೆಲಸವೂ ಇಲ್ಲದೆ, ಊಟ ತಿಂಡಿಗೂ ಪರದಾಡ ಬೇಕಾದ ದಯನೀಯ ಸ್ಥಿತಿಯಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರಯತ್ನದಿಂದ ಈಗಾಗಲೇ ದುಬಾೖ, ಸೌದಿ ಅರೇಬಿಯಾ, ಕುವೈಟ್‌ […]

ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗೆ ಕೋವಿಡ್-19 ಪಾಸಿಟಿವ್ ಪತ್ತೆ

Monday, June 1st, 2020
Kota Covid

ಕೋಟ: ಕೋಟತಟ್ಟುವಿನಲ್ಲಿ ವಾಸವಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಸೋಮವಾರ ಬೆಳಗ್ಗೆಪ್ರದೇಶವನ್ನು‌ ಸೀಲ್ ಡೌನ್ ಮಾಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.‌ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿವರ್ಹಿಸುತ್ತಿದ್ದ ಮಹಿಳೆಗೆ ಕೋವಿಡ್-19 ಸೋಂಕಿರುವುದು ತಪಾಸಣೆಯ ವೇಳೆ ದೃಢಪಟ್ಟಿದೆ.‌ ಇದೀಗ ಆಕೆ ವಾಸವಿದ್ದ ಕೋಟತಟ್ಟು ಗ್ರಾ.ಪಂ. ಕಚೇರಿ ಸಮೀಪದ ಮನೆಯ 100 ಮೀಟರ್ ಪ್ರದೇಶವನ್ನು‌ ಸೀಲ್ ಡೌನ್ ಮಾಡಲಾಗಿದೆ ಹಾಗೂ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಸ್ಥಳೀಯ ಕೋಟ ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿಗಳು ಸುತ್ತಲಿನ […]

ಕೋವಿಡ್-‌19: ಧಾರವಾಡ ಜಿಲ್ಲೆಯಲ್ಲಿ 629 ಶಂಕಿತರು

Monday, May 25th, 2020
darwad

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ರವಿವಾರ ಒಂದು ಕೋವಿಡ್-‌19ರ ಪಾಸಿಟಿವ ಪ್ರಕ್ರಣ ಪತ್ತೆಯಾದರೆ, ರವಿವಾರ ಒಂದೇ ದಿನ 629 ಜನ ಕೊರೋನಾ ಶಂಕಿತರ ಗಂಟಲ ದ್ರವ ಪ್ರಯೋಗಾಲಯಕ್ಕೆ ಕಳಿಸಿದ್ದು ವರದಿಯ ಬಗ್ಗೆ ಜನತೆ ಆತಂಕ ಪಡುತ್ತಿದ್ದಾರೆ. ಜತೆಗೆ ಕೋರೋನಾ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಜನರ ಸಂಖ್ಯೆ ಇಮ್ಮಡಿಗೊಂಡಿದೆ. ಈವರೆಗೂ 12,500 ಜನ ನಿಗಾದಲ್ಲಿದ್ದರು. ಈಗ ಈ ಸಂಖ್ಯೆ 13,154 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ 12,442 ಕೊರೋನಾ ಶಂಕಿತರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 11,315 ಜನರ […]

ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಮೊದಲ ಬಲಿ

Saturday, May 16th, 2020
covid-death

ಉಡುಪಿ:  ಕ್ವಾರಂಟೈನ್ ನಲ್ಲಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದ ಕುಂದಾಪುರ ಮೂಲದ ವ್ಯಕ್ತಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಮಹಾರಾಷ್ಟ್ರದಿಂದ ಮೇ 5ರಂದು ಹುಟ್ಟೂರಾದ ಕುಂದಾಪುರ ಮೂಲದ 54 ವರ್ಷದ ವ್ಯಕ್ತಿ ಬಂದಿದ್ದರು. ಈ ವ್ಯಕ್ತಿಗೆ ಮೇ 13ನೇ ಸಂಜೆ ಹೃದಯಾಘಾತವಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿ ಮೇ 14 ಸಂಜೆ ಮೃತಪಟ್ಟಿರುತ್ತಾರೆ. ವ್ಯಕ್ತಿಯ ಗಂಟಲು ದೃವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ವ್ಯಕ್ತಿ ಕೋವಿಡ್-19 ಸೋಂಕಿತನಾಗಿರುವ ಬಗ್ಗೆ ದೃಢವಾಗಿದೆ. ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇದ್ದ ಕಾರಣ […]

ಸ್ವಾವಲಂಬಿ ಭಾರತದ ಸಂಕಲ್ಪದ ಪ್ಯಾಕೇಜ್ : ಸುದರ್ಶನ್ ಮೂಡಬಿದಿರೆ

Thursday, May 14th, 2020
Sudarshan M

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕೆಲ ನಿರ್ಧಾರದಿಂದ ಇಡೀ ವಿಶ್ವವೇ ಭಾರತ ದೇಶವನ್ನು ನೋಡುವಂತೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದರ್ಶನ್, ಕೋವಿಡ್-19 ಮಹಾಮಾರಿ ವಿರುದ್ಧ ಸಮರ್ಪಕವಾಗಿ ಸಮರ ಸಾರುವಲ್ಲಿ ‌ದೇಶದ ಪ್ರಧಾನಿ ನಿರ್ಧಾರ ಅಭೂತಪೂರ್ವ. ದೇಶ ಆರ್ಥಿಕವಾಗಿ ಸಮಸ್ಯೆಯಲ್ಲಿದ್ದರೂ ದೇಶದ ಪ್ರಧಾನಿ ಜನರಿಗಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇನ್ನೂ ಇದು ಕೇವಲ ಒಂದು ಪ್ಯಾಕೇಜ್ ಮಾತ್ರವಲ್ಲ. ಸ್ವಾವಲಂಬಿ ಭಾರತದ ಸಂಕಲ್ಪದ […]

ಮೇ 17 ರವರೆಗೆ ದ.ಕ. ಜಿಲ್ಲೆಯಾದ್ಯಂತ ರಾತ್ರಿ ನಿಷೇಧಾಜ್ಞೆ

Thursday, May 7th, 2020
Sindhu-roopesh

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 (ಕೋರೋನಾ ವೈರಾಣು ಕಾಯಿಲೆ 2019)ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರದ ಆದೇಶದಲ್ಲಿ ನೀಡಿದ ಸಡಿಲಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 (3) ರನ್ವಯ ಮೇ 4 ರಿಂದ 17 ರವರೆಗೆ ಪ್ರತಿ ದಿನ ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿರುತ್ತಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್‌ ಮತ್ತೆ ಜಿಲ್ಲೆಗೆ

Friday, May 1st, 2020
v-ponnuraj

ಮಂಗಳೂರು: ಕೋವಿಡ್‌-19 ನಿಯಂತ್ರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜನೆಗೊಂಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್‌ ಅವರು ಜಿಲ್ಲೆಗೆ ಮರಳಿ ಬಂದಿದ್ದು, ಜಿಲ್ಲೆಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣ ವರದಿಯಾಗುತ್ತಿದ್ದಂತೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ರೋಗ ಹರಡ ದಂತೆ ಜಿಲ್ಲಾಡಳಿತದ ಜತೆ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಪೊನ್ನುರಾಜ್‌ ಬಳಿಕ ಜಿಲ್ಲೆಯಲ್ಲಿ ಕಾಣಿಸಿ ಕೊಂಡಿರಲಿಲ್ಲ. ಕೋವಿಡ್‌-19 ದಿಂದ ಎರಡು ಸಾವು ಸಂಭವಿಸಿ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಹೆಣಗಾಡುವ ಪರಿಸ್ಥಿತಿ […]