ಮನೆಯ ಆವರಣದೊಳಗೆ ನುಗ್ಗಿ ಎರಡು ಕರುಗಳನ್ನು ಕೊಂದು ಹಾಕಿದ ಚಿರತೆ

Tuesday, December 5th, 2023
Belthangady-Chita

ಬೆಳ್ತಂಗಡಿ : ಮನೆಯ ಆವರಣದೊಳಗೆ ನುಗ್ಗಿದ ಚಿರತೆಯೊಂದು ಕಟ್ಟಿ ಹಾಕಿದ ಎರಡು ಕರುಗಳನ್ನು ಕೊಂದು ಹಾಕಿದ ಘಟನೆ ಬೆಳ್ತಂಗಡಿಯ ಮುಂಡೂರು ಬಳಿ ಭಾನುವಾರ ರಾತ್ರಿ ನಡೆದಿದೆ. ಮುಂಡೂರು ಗ್ರಾಮದ ಕೇರಿಯಾರ್ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಗುರುವಪ್ಪ ಸಾಲ್ಯಾನ್ ಅವರಿಗೆ ಸೇರಿದ ಕರುಗಳನ್ನು ಚಿರತೆ ಕೊಂದು ತಿಂದಿದೆ. ಮನೆ ಬಳಿ ಕಟ್ಟಿ ಹಾಕಿದ್ದ ಕರುಗಳ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿದ ಚಿರತೆ ತೋಟಕ್ಕೆ ಎಳೆದೊಯ್ದು ತಿಂದು ಹಾಕಿದೆ. ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಈ ಭಾಗದಲ್ಲಿ […]

ಕೊಣಾಜೆ ನಡುಪದವಿನಲ್ಲಿ ಚಿರತೆ ಹಿಡಿಯಲು ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

Saturday, October 7th, 2023
konaje- leopard

ಕೊಣಾಜೆ: ನಡುಪದವು ಬಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ‌ ಸಿಬ್ಬಂದಿ ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ್ದಾರೆ. ಕೊಣಾಜೆ ನಡುಪದವಿನಲ್ಲಿ ಗುರುವಾರ ರಾತ್ರಿ 9.30 ವೇಳೆಗೆ ವಾಕಿಂಗ್ ಹೋಗುತಿದ್ದ ಉಪನ್ಯಾಸಕರೊಬ್ಬರು ಅಲ್ಲೇ ಸಮೀಪದ ಲಾಡ ಬಳಿ ಚಿರತೆಯನ್ನು ನೋಡಿ ಭಯಭೀತಗೊಂಡಿದ್ದರು. ಅಲ್ಲದೆ ಅದೇ ರಾತ್ರಿ ಪರಿಸರದ ಮಹಿಳೆ‌ ಸೇರಿದಂತೆ ಒಟ್ಟು ಐದು ಜನರು ಚಿರತೆಯನ್ನು ನೋಡಿ ಭಯಗೊಂಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹಲವರಿಗೆ ಒಂದೇ […]

ಕೋಳಿ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ

Monday, November 8th, 2021
chita

ಸುಬ್ರಹ್ಮಣ್ಯ : ಕೋಳಿಯ ಬೇಟೆಯಲ್ಲಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆಯಲ್ಲಿ  ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ. ಚಿರತೆ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬುವರ ಮನೆಯ ಮುಂಭಾಗದ ಬಾವಿಗೆ ಬಿದ್ದಿತ್ತು. ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಈ ಕುರಿತು ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಸೂಕ್ತ ಭದ್ರತೆಯೊಂದಿಗೆ ನಿನ್ನೆ ಸಂಜೆ ವೇಳೆ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು. ಬಾವಿಯ ಕಟ್ಟೆ ಸಮೀಪ ಬೋನ್ ಇಟ್ಟು […]

ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ, 25ಕ್ಕೂ ಅಧಿಕ ಬೀದಿ ನಾಯಿಗಳು ನಾಪತ್ತೆ

Monday, October 4th, 2021
Chita

ಮಂಗಳೂರು:  ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಕೂಡಲೇ ಕಾರ್ಪೊರೇಟರ್‌ ಕೇಶವ್‌ ಮರೋಳಿ ಅವರ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದೆ. ಕಂಕನಾಡಿಯ ಕನಪದವು, ಮಾರ್ತ ಕಾಂಪೌಂಡ್‌, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿಅರಣ್ಯಾಧಿಕಾರಿಗಳು ಶೋಧ ನಡೆಸಿದಾಗ ನಾಲ್ಕು ಕಡೆಗಳಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಆ ಗುರುತನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಕಂಕನಾಡಿ ವ್ಯಾಪ್ತಿಯ ಎರಡು ಕಡೆ […]

ಮನೆಯಲ್ಲಿ ಮಲಗಿದ್ದ ನಾಯಿಯನ್ನು ಹಿಡಿದ ಚಿರತೆ, ಆದರೂ ನಾಯಿ ಬದುಕಿದ್ದು ಹೇಗೆ ಗೊತ್ತಾ ?

Saturday, July 3rd, 2021
chita

ಮೂಡುಬಿದಿರೆ:  ಚಿರತೆಯೊಂದು ಮನೆಯಂಗಳಕ್ಕೆ ಬಂದು ನಾಯಿಯೊಂದನ್ನು ಹಿಡಿದಿದ್ದು, ಚಿರತೆ ಕಾಂಪೌಂಡ್ ಹಾರುವ ವೇಳೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಡುಕೋಣಾಜೆಯ ಸತೀಶ್ ಎಂಬವರ ಮನೆಯ ಬಳಿ ಗುರುವಾರ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿ ವಿಫಲವಾಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು, ಚಿರತೆಯನ್ನು ಹಿಡಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.  

ನಾಯಿಯನ್ನು ಬೆನ್ನಟ್ಟಿ ಮನೆಯ ಕೋಣೆಯೊಳಗೆ ನುಗ್ಗಿದ ಚಿರತೆ

Sunday, March 21st, 2021
chita

ಬ್ರಹ್ಮಾವರ : ಚಿರತೆಯೊಂದು ರವಿವಾರ ನಸುಕಿನ ವೇಳೆ ಮನೆಯ ಕೋಣೆ ಯೊಳಗೆ ನುಗ್ಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ.   ನೈಲಾಡಿ ಸಮೀಪ ಬೇಟೆ ಅರಸಿ ನಾಡಿಗೆ ಬಂದ ಚಿರತೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದಾಗ, ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿ ಸೇರಿಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಚಿರತೆಯು ಕೋಣೆಯೊಳಗೆ ಸೇರಿಕೊಂಡಿತು. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆಯ ಬಾಗಿಲು ಹಾಕಿದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ […]

ರೆಂಜಿಲಾಡಿಯಲ್ಲಿ ಪತಿ, ಪತ್ನಿ ಮೇಲೆ ಚಿರತೆ ದಾಳಿ

Friday, February 12th, 2021
chita

ಕಡಬ : ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿ ಎಂಬಲ್ಲಿ ಚಿರತೆ ದಾಳಿಯಿಂದ ಪತಿ, ಪತ್ನಿ ಗಾಯಗೊಂಡ ಘಟನೆ ಕಡಬ ತಾಲೂಕಿನ  ಶುಕ್ರವಾರ ಬೆಳಗಿನ ಜಾವ ನಡೆದಿದೆ. ರೆಂಜಿಲಾಡಿಯ ಹೇರ ನಿವಾಸಿಗಳಾದ ಚಂದ್ರಶೇಖರ್ ಕಾಮತ್ ಹಾಗೂ ಅವರ ಪತ್ನಿ ಸೌಮ್ಯಾ ಕಾಮತ್ ಎಂಬವರು ಗಾಯಗೊಂಡಿದ್ದಾರೆ. ಇವರಿಬ್ಬರು ತೋಟದಲ್ಲಿ ಸ್ಪಿಂಕ್ಲರ್ ಬದಲಾಯಿಸಲೆಂದು ಶುಕ್ರವಾರ ಮುಂಜಾವ 1:304 ಸುಮಾರಿಗೆ ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿದೆಯೆನ್ನಲಾಗಿದೆ. ಚಿರತೆ ಮೊದಲು ಚಂದ್ರಶೇಖರ್ ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರ ರಕ್ಷಣೆಗೆ ಧಾವಿಸಿದ ಸೌಮ್ಯಾರ […]

ಮಂಗಳೂರು – ಧರ್ಮಸ್ಥಳ ರಸ್ತೆಯಲ್ಲಿ ಚಿರತೆಯ ಓಡಾಟ – ಜನರಿಗೆ ಭಯ

Monday, April 13th, 2020
chita

ಬಂಟ್ವಾಳ : ಲಾಕ್ ಡೌನ್ ನಿಂದ ಪ್ರಕೃತಿ ಶಾಂತವಾಗಿದ್ದು, ಎಲ್ಲೆಲ್ಲೂ ಸದ್ದುಗದ್ದಲವಿಲ್ಲದೆ ಪ್ರಾಣಿಗಳು ಪಕ್ಷಿಗಳು ನಿರ್ಭಿತವಾಗಿ ಓಡಾಡಲಾರಂಭಿಸಿದೆ. ಬಂಟ್ವಾಳ ತಾಲೂಕಿನ ಮಂಗಳೂರು – ಧರ್ಮಸ್ಥಳ ಹೆದ್ದಾರಿಯ ಮೂರ್ಜೆ ಎಂಬಲ್ಲಿ ಚಿರತೆ ಯೊಂದು ಪ್ರತ್ಯಕ್ಷವಾಗಿದ್ದು ಸ್ಥಳೀಯ ಜನರಿಗೆ ಭಯ ಶುರುವಾಗಿದೆ. ಮೂರ್ಜೆಯ ಹೆದ್ದಾರಿಯ ಮೂಲಕ ಚಿರತೆ ರಾತ್ರಿ ಭಾನುವಾರ 8.30ರ ವೇಳೆ ರಾಜರೋಷವಾಗಿ ನಡೆದುಕೊಂಡು ಬರುವ ದೃಶ್ಯವನ್ನು ಕಣ್ಣಾರೆ ಕಂಡ ಜನ ಭಯ ಬೀತರಾಗಿದ್ದಾರೆ. ಚಿರತೆಯ ಮೂರ್ಜೆ ರಸ್ತೆಯ ಮೂಲಕ ಬಂದು ಬಳಿಕ ಪೆಟ್ರೋಲ್ ಪಂಪ್ ನ ಸನಿಹ […]

ಮೈಸೂರು : ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

Wednesday, March 4th, 2020
chirate

ಮೈಸೂರು : ಆಗಾಗ ಊರಿಗೆ ನುಗ್ಗಿ ನಾಯಿಗಳನ್ನು ಹೊತ್ತೊಯ್ದು ಜನರಿಗೆ ಭೀತಿ ಹುಟ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ಸಮೀಪದ ಬಟ್ಟಳಿಗೆ ಹುಂಡಿ ಗ್ರಾಮದಲ್ಲಿ ಮಹದೇವ್ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 2 ವರ್ಷದ ಗಂಡು ಚಿರತೆ ಸೆರೆಯಾಗಿದೆ. ನಿನ್ನೆಯಷ್ಟೆ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಇಂದು ಸುಮಾರು 2 ವರ್ಷದ ಚಿರತೆ ಸೆರೆಯಾಗಿದೆ. ಹಲವು ದಿನಗಳಿಂದ ಬಟ್ಟಳಿಗೆ ಹುಂಡಿ ಗ್ರಾಮದ ಜನರಿಗೆ […]

ಮೈಸೂರು : ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದ್ದ ಚಿರತೆ ಕೊನೆಗೂ ಸೆರೆ

Thursday, January 16th, 2020
chirate

ಮೈಸೂರು : ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸಿ‌ ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದೆ. ಸರಗೂರು ತಾಲೂಕಿನ ಹಲಸೂರು ಗ್ರಾಮದ ಹೆಚ್.ಎಲ್ ಶಂಭುಲಿಂಗನಾಯ್ಕ್ ರವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಕಳೆದು ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಮೀನುಗಳಲ್ಲಿ ಇರುತ್ತಿದ್ದ ಜಾನುವಾರುಗಳನ್ನು ತಿಂದು ಕಣ್ಮರೆಯಾಗುತ್ತಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅರಣ್ಯಾಧಿಕಾರಿಗಳು ಒಂದು ತಿಂಗಳಿನಿಂದ ಬೋನು ಇಟ್ಟಿದ್ದರೂ ಸೆರೆಯಾಗದೇ […]