ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣ, ಎಲ್ಲಾ 32 ಮಂದಿ ಆರೋಪಿಗಳಿಗಳು ನಿರ್ದೋಷಿ

Wednesday, September 30th, 2020
Ayodya

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಮಂದಿ ಆರೋಪಿಗಳಿಗೆ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ. ಈ ಮೂಲಕ 28 ವರ್ಷಗಳ ದೀರ್ಘ ಕಾಲದ ಕಾನೂನು ಹೋರಾಟಕ್ಕೆ ಇಂದು ತಾತ್ವಿಕ ಅಂತ್ಯ ಸಿಕ್ಕಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು ಪೂರ್ವ ನಿಯೋಜಿತ ಕೃತ್ಯವಲ್ಲ, ಉದ್ದೇಶಪೂರ್ವಕವಾಗಿ […]

20ರ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ, ನಾಲಗೆಯನ್ನು ಕತ್ತರಿಸಿದ ಭಯಾನಕ ಕಾಮುಕರು

Tuesday, September 29th, 2020
UPrape

ನವದೆಹಲಿ: ನಾಲ್ವರು ಕಾಮುಕರು 20 ವರ್ಷದ ಯುವತಿಯೊಬ್ಬಳನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಕೃತ್ಯವನ್ನು ಬೇರೆಯವರಿಗೆ ತಿಳಿಸದಂತೆ ಆಕೆಯ ನಾಲಗೆಯನ್ನು ಕತ್ತರಿಸಿ ಚಿತ್ರಹಿಂಸೆ ನೀಡಿದ್ದರು. ಆದರೆ ಕಾಮುಕರ ಪೈಶಾಚಿಕ ಕೃತ್ಯಕ್ಕೆ ಒಳಗಾದ ಯುವತಿ  ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ನಿವಾಸಿ 20 ವರ್ಷದ ದಲಿತ ಯುವತಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ದುಪ್ಪಟ್ಟಾದಿಂದ ಹೊಲಕ್ಕೆ ಎಳೆದುಕೊಂಡು ಹೋಗಲಾಗಿತ್ತು. ಅಲ್ಲದೇ ಆಕೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ನಂತರ […]

ನ್ಯಾಯವಾದಿ, ಮುಂಬಯಿ ಪತ್ರಕರ್ತ ಸುರೇಶ್ ಆಚಾರ್ಯ ಪಿಲಾರು ನಿಧನ

Saturday, September 26th, 2020
suresh Acharya

ಮುಂಬಯಿ : ಬೃಹನ್ಮುಂಬಯಿಯ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆಗೈದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಘದ 2012-2015ನೇ ಸಾಲಿನಲ್ಲಿ ಜೊತೆ ಕೋಶಾಧಿಕಾರಿ ಆಗಿದ್ದ ಸುರೇಶ್ ಆಚಾರ್ಯ (49) ಇಂದಿಲ್ಲಿ ತೀವ್ರ ಹೃದಯಾಘಾತದಿಂದ ನೆರೂಲ್ ಪಶ್ಚಿಮದಲ್ಲಿನ ಮಾನಕ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಉದಯವಾಣಿ ಕನ್ನಡ ದೈನಿಕದ ಮುಂಬಯಿ ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿ ಸದ್ಯ ವಕೀಲ ವೃತ್ತಿಯಲ್ಲಿ ತೊಡಗಿಸಿದ್ದ ಇವರು ಉಡುಪಿ ಜಿಲ್ಲೆಯ ಕಾರ್ಕಳ ಪಿಲಾರು ಮೂಲದವರಾಗಿದ್ದು ಪ್ರಸ್ತುತ ನವಿ ಮುಂಬಯಿ ನೆರೂಲ್ ಸೆಕ್ಟರ್ […]

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ, ಶ್ರೀಪತಿ ಪಂಡಿತರಾಧ್ಯಲು ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

Friday, September 25th, 2020
sp balasubraahmanyam

ಚೆನ್ನೈ:   ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ, ಸಂಗೀತ ದಿಗ್ಗಜ ಶ್ರೀಪತಿ ಪಂಡಿತರಾಧ್ಯಲು ಬಾಲಸುಬ್ರಹ್ಮಣ್ಯಂ (74) ಅವರು  ಶುಕ್ರವಾರ ಮಧ್ಯಾಹ್ನ 1.04ರಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಎಸ್‌ಪಿಬಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಜ್ಞ ವೈದ್ಯರ ತಂಡದಿಂದ ಆರೈಕೆ ಮಾಡಲಾಗುತ್ತಿತ್ತು. […]

ದೆಹಲಿಯಲ್ಲಿ ಹಿಂಸಾಚಾರ ಎಸಗಲು ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ 1.61 ಕೋಟಿ ಹಣ ಪಡೆದಿದ್ದ

Tuesday, September 22nd, 2020
delhi riot

ನವದೆಹಲಿ : ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಹೋರಾಟಗಾರ ಖಾಲಿದ್ ಸೈಫಿ ಮತ್ತು ಎಎಪಿಯ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ ದೆಹಲಿಯಲ್ಲಿ ಹಿಂಸಾಚಾರ ಎಸಗಲು 1.61 ಕೋಟಿ ಹಣ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಫಿಯಾ ಉರ್ ರೆಹಮಾನ್ ಮತ್ತು ವಿದ್ಯಾರ್ಥಿ ಮೀರನ್ ಹೈದರ್ ಅವರ ಹೆಸರೂ ಹಣಪಡೆದವರ ಪಟ್ಟಿಯಲ್ಲಿ ಇದೆ ಎಂದು ತಿಳಿದು ಬಂದಿದೆ. ಸಿಎಎ ವಿರುದ್ಧದ ಪ್ರತಿಭಟನೆ ವೇಳೆ […]

ಬಿಲ್ಲವರ ಅಸೋಷಿಯೇಶನ್ ಮುಂಬಯಿ, 166ನೇ ಶ್ರೀ ನಾರಾಯಣ ಗುರುಜಯಂತಿ ಆಚರಣೆ

Saturday, September 5th, 2020
billavaMumbai

ಮುಂಬಯಿ : ಮಹಾನಗರದ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಬಿಲ್ಲವರ ಅಸೋಷಿಯೇಶನ್ ಮುಂಬಯಿ, ಇದರ ವತಿಯಿಂದ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಶ್ರೀ ನಾರಾಯಣ ಗುರುಗಳ 166 ಜಯಂತಿಯನ್ನು ಸೆ. 2ರಂದು ಆಚರಿಸಲಾಯಿತು. ನಾರಾಯಣ ಗುರುಗಳ ನಾಮಸ್ಮರಣೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಮಧ್ಯಾಹ್ನ ನಡೆದ ಮಹಾಪೂಜೆಯನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿಯವರು ನೆರವೇರಿಸಿದರು. ಬಿಲ್ಲವರ ಅಸೋಷಿಯೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಯವರ ಅಧ್ಯಕ್ಷರೆಯಲ್ಲಿ ನಡೆದ ಈ ಸರಳ […]

ನಮ್ಮ ಶಿಕ್ಷಕರು ನಮ್ಮ ಹೀರೋಗಳು : ಪ್ರಧಾನಿ ನರೇಂದ್ರ ಮೋದಿ

Saturday, September 5th, 2020
Narendra Modi

ನವದೆಹಲಿ: ನಮ್ಮ ಶಿಕ್ಷಕರು ನಮ್ಮ ಹೀರೋಗಳು ದೇಶವನ್ನು ಕಟ್ಟುವಲ್ಲಿ ಶಿಕ್ಷಕರ ಪರಿಶ್ರಮಕ್ಕೆ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ. ಶಿಕ್ಷಕರ ದಿನದಂದು, ಶಿಕ್ಷಕರ ಪರಿಶ್ರಮಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ವಿದ್ವಾಂಸ, ತತ್ವಜ್ಞಾನಿ ಭಾರತದ 2ನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುಸಮಸ್ತರಿಗೆ ಶನಿವಾರ ಶುಭಾಶಯಗಳನ್ನು ಕೋರಿದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, […]

ಕುಲಾಲ ಸಂಘ ಮುಂಬಯಿ ವತಿಯಿಂದ ವಿಕಲಚೇತನ ಭಾಗ್ಯಶ್ರೀ ವಿದ್ಯಾಭ್ಯಾಸಕ್ಕೆ ನೆರವು

Wednesday, August 19th, 2020
ಕುಲಾಲ ಸಂಘ ಮುಂಬಯಿ ವತಿಯಿಂದ ವಿಕಲಚೇತನ  ಭಾಗ್ಯಶ್ರೀ ವಿದ್ಯಾಭ್ಯಾಸಕ್ಕೆ ನೆರವು

ಮುಂಬಯಿ : ಬಡತನ, ಅಂಗ ವೈಕಲ್ಯ ವನ್ನೂ ಮೀರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 467 ಅಂಕ ಪಡೆದಿರುವುದು, ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಬಂಟ್ವಾಳದ ಭಾಗ್ಯಶ್ರೀ. ಗೆ ಮುಂಬಯಿ ಕುಲಾಲ ಸಂಘದ ಸದಸ್ಯರ ಸಹಕಾರದಿಂದ 50000 ವಿದ್ಯಾಭ್ಯಾಸಕ್ಕಾಗಿ ನೀಡಲಾಯಿತು ಭಾಗ್ಯಶ್ರೀ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಸುಪುತ್ರಿ. ತಂದೆ ಕೇಶವರು ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು […]

ಭಾರತ್ ಬ್ಯಾಂಕ್, ನೂತನ ಕಾರ್ಯಾಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಆಯ್ಕೆ

Monday, August 17th, 2020
shivaji-Poojary

ಮುಂಬಯಿ : ಮಹಾನಗರದ ಬಿಲ್ಲವರ ಅಸೋಷಿಯೇಶನ್ ಪ್ರಾಯೋಜಕತ್ವದ ಪ್ರತಿಷ್ಟಿತ ಭಾರತ್ ಕೋ ಅಪರೇಟಿವ್ ಬ್ಯಾಂಕಿನ ನೂತನ ಕಾರ್ಯಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಅವರು ಆಯ್ಕೆಯಾಗಿದ್ದಾರೆ. ಬ್ಯಾಂಕಿಗ್ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಇವರು ಭಾರತ್ ಬ್ಯಾಂಕಿನ ನಿರ್ದೇಶಕರಾಗಿ ಧೀರ್ಘಕಾಲ ಸೇವೆ ಸಲ್ಲಿಸಿರುವರು. ಬ್ಯಾಂಕಿನ ಕಾಯ್ಯಾಧ್ಯಕ್ಷರಾದ ಜಯ ಸಿ ಸುವರ್ಣ ಇವರ ಉಪಸ್ಥಿತಿಯಲ್ಲಿ ಆಗಸ್ಟ್ 16ರಂದು ಬ್ಯಾಂಕಿನ ಕೇಂದ್ರ ಕಾರ್ಯಾಲಯದಲ್ಲಿ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಉಪ್ಪೂರು ಶಿವಾಜಿ ಪೂಜಾರಿ ಯವರನ್ನು ಆಯ್ಕೆಮಾಡಲಾಯಿತು. ಬ್ಯಾಂಕಿನ ಕಾರ್ಯಧ್ಯಕ್ಷರಾಗಿ ಸುದೀರ್ಘಕಾಲ ಅಧಿಕಾರ ವಹಿಸಿಕೊಂಡಿದ್ದು […]

ದೇಶೀಯ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದೂ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಒಂದು : ನರೇಂದ್ರ ಮೋದಿ

Saturday, August 15th, 2020
Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಜಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದ ಬಳಿಕ ಐತಿಹಾಸಿಕ ಕೆಂಪುಕೋಟೆಯಲ್ಲಿ ಆಗಸ್ಟ್ 15 ರ ಶನಿವಾರ ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ನೆನೆಯುವ ದಿನ. ಆತ್ಮನಿರ್ಭರ ಭಾರತ ಪರಿಕಲ್ಪನೆ ಪ್ರತೀ ಭಾರತೀಯರ ಮನಸ್ಸಿನಲ್ಲಿದ್ದು, ಈ ಕನಸು ಪ್ರತಿಜ್ಞೆಯಾಗಿ ಬದಲಾಗುತ್ತಿದೆ. ಇಂದು 130 ಕೋಟಿ ಭಾರತೀಯರ ಮನಸ್ಸಿನಲ್ಲಿ ಆತ್ಮನಿರ್ಭರ್ ಭಾರತ ಜನತೆಯ ದಿವ್ಯ ಮಂತ್ರವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ […]