ಯೆಸ್​ ಬ್ಯಾಂಕ್ ಇಂದಿನಿಂದ ಕಾರ್ಯಾರಂಭ

Wednesday, March 18th, 2020
yes-bank

ನವದೆಹಲಿ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೆಸ್ ಬ್ಯಾಂಕ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಬ್ಯಾಂಕ್ ಎಲ್ಲ ಶಾಖೆಗಳು ಮತ್ತು ಎಟಿಎಂಗಳು ತೆರೆಯಲಿವೆ. ಬ್ಯಾಂಕ್ ಮೇಲೆ ಆರ್ಬಿಐ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲಿದೆ. ಬ್ಯಾಂಕಿನ ಎಲ್ಲ ಸೇವೆಗಳು ಇಂದು ಸಂಜೆ 6ರಿಂದ ಆರಂಭವಾಗಲಿವೆ. ಮಾರ್ಚ್ 19ರಿಂದ ನಮ್ಮ 1,132 ಶಾಖೆಗಳಲ್ಲಿ ಯಾವುದೇ ಶಾಖೆಗೆ ಭೇಟಿ ನೀಡಿ, ಸೇವೆ ಪಡೆಯಿರಿ. ನಮ್ಮ ಎಲ್ಲ ಡಿಜಿಟಲ್ ಸೇವೆಗಳು ಹಾಗೂ ಪ್ಲಾಟ್ಫಾರ್ಮ್ಗಳೂ ಸೇವೆಗೆ ತೆರೆದುಕೊಳ್ಳಲಿವೆ ಎಂದು ಯೆಸ್ ಬ್ಯಾಂಕ್ ಸಿಇಒ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. […]

ಬೋಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಆಶ್ರಯದಲ್ಲಿ ನಾರಿ ಉತ್ಸವ

Wednesday, March 18th, 2020
bomboy

ಮುಂಬಯಿ : ಗಂಡಸರು ಜೀವನಪೂರ್ತಿ ಮನೆ ಕುಟುಂಬವನ್ನು ನೋಡುವುದರೊಂದಿಗೆ ಉದ್ಯೋಗ ವ್ಯವಹಾರವನ್ನು ನಿರ್ವಹಿಸುತ್ತಾನೆ ಆತನ ಯಶಸ್ವಿಯಾಗಿದೆ ಮಹಿಳೆಯು ಸದಾ ಸಹ ಭಾಗಿಯಾಗುತ್ತಾರೆ ಪ್ರತಿ ಪುರುಷನ ಯಶಸ್ವಿ ಹಿಂದೆ ಮಹಿಳೆ ವಿವಿಧ ರೂಪದಲ್ಲಿ ಬೆಂಬಲವಾಗಿ ಇರುವುದರಿಂದ ಸಂಸಾರ ಒಳ್ಳೆಯ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತಿದೆ ಈ ಬಾರಿಯ ಜವಾಬ್ದಾರಿಯನ್ನು ವಹಿಸಿರುವ ಮಹಿಳಾ ವಿಭಾಗದ ಲತಾ ಜಿ ಶೆಟ್ಟಿ ತಂಡ ಸಮುದಾಯದ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ ನಾರಿ ಉತ್ಸವವನ್ನು ನಡೆಸಿದೆ ಇದು ಮಹಿಳೆಯರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ […]

ಕೊರೊನಾ ವೈರಸ್ ಭೀತಿಯ ನಡುವೆಯೂ ಮುಂದುವರಿದ ಶಹೀನ್ ಭಾಗ್ ಸಿಎಎ ವಿರೋಧಿ ಪ್ರತಿಭಟನೆ

Saturday, March 14th, 2020
shahi-bhagh

ಹೊಸದಿಲ್ಲಿ : ದೇಶದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಕಾಡುತ್ತಿದ್ದು, ಜನಜೀವನ ಬಹುತೇಕ ಸಂಕಷ್ಟಕ್ಕೆ ಒಳಗಾಗಿದೆ. ಕೇರಳ, ಕೇರಳ, ದಿಲ್ಲಿ ಸೇರಿದಂತೆ ಬಹುತೇಕ ರಾಜ್ಯಗಳು ಲಾಕ್ ಡೌನ್ ಪರಿಸ್ಥಿತಿಗೆ ತಲುಪಿದೆ. ಇಷ್ಟೆಲ್ಲದರ ನಡುವೆಯೂ ಶಹೀನ್ ಭಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಕಳೆದ ಮೂರು ತಿಂಗಳಿಂದ ಶಹೀನ್ ಭಾಗ್ ನಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಇದು ಮುಂದುವರಿದಿದೆ. ದಿಲ್ಲಿಯಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲು ರಾಜ್ಯ ಸರಕಾರ ಆದೇಶಿಸಿದೆ. 200 […]

ಬಿಜೆಪಿಗೆ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ, ಭೋಪಾಲ್ ನಲ್ಲಿ ಭರ್ಜರಿ ರೋಡ್ ಶೋ ಹಾಗೂ ಸಮಾವೇಶ

Saturday, March 14th, 2020
BJP

ಭೋಪಾಲ್: ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಈಗಾಗಲೇ ಭರ್ಜರಿ ರೋಡ್ ಶೋ ಹಾಗೂ ಸಮಾವೇಶ ನಡೆಸಿ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಆದರೆ ಸಿಂಧಿಯಾ ಬಿಜೆಪಿ ಮಡಲಿಲ್ಲಿರುವುದನ್ನು ಸಹಿಸದ ಕಾಂಗ್ರೆಸ್, ಮೇಲ್ನೋಟಕ್ಕೆ ಅವರ ವಿರುದ್ಧ ಪಿತೂರಿ ನಡೆಸುತ್ತಿರುವಂತೆ ತೋರುತ್ತಿದೆ. ಸಿಂಧಿಯಾ ಬಿಜೆಒಪಿ ಸೇರಿದ ಮರುದಿನವೇ ಅವರ ವಿರುದ್ಧದ ಹಳೆಯ ಪ್ರಕರಣಕ್ಕೆ ಮರುಜೀವ ನೀಡಿದ್ದು ಇದಕ್ಕೆ ಸಾಕ್ಷಿ. ಇಷ್ಟೇ ಅಲ್ಲ ಸಿಂಧಿಯಾ ರೋಡ್ ಶೋ ವೇಳೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ […]

ಕೊರೊನಾ ಭೀತಿ ಹಿನ್ನೆಲೆ : ದೆಹಲಿಯಲ್ಲಿ ಎಲ್ಲ ಐಪಿಎಲ್ ಪಂದ್ಯ ರದ್ದು

Friday, March 13th, 2020
IPL

ನವದೆಹಲಿ : ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಎಲ್ಲ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು […]

ಮಧ್ಯಪ್ರದೇಶದ 22 ಕಾಂಗ್ರೆಸ್‌ ಶಾಸಕರಿಗೆ ಸ್ಪೀಕರ್‌ ನೋಟಿಸ್‌ ಜಾರಿ

Friday, March 13th, 2020
Congress

ಭೋಪಾಲ್ ‌: ಮಧ್ಯಪ್ರದೇಶ ವಿಧಾನ ಸಭೆಯ ಸದಸ್ಯತ್ವ ತೊರೆದಿರುವ ಕಾಂಗ್ರೆಸ್‌ನ 22 ಶಾಸಕರಿಗೆ ವಿಧಾನಸಭಾ ಸ್ಪೀಕರ್‌ ಎನ್‌.ಪಿ. ಪ್ರಜಾಪತಿ ನೋಟಿಸ್‌ ಜಾರಿಗೊಳಿಸಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಎ.ಪಿ. ಸಿಂಗ್‌ ಈ ವಿಷಯ ತಿಳಿಸಿದ್ದಾರೆ. ‘ಶುಕ್ರವಾರ ಸ್ಪೀಕರ್‌ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವಿಚಾರಣೆಯಲ್ಲಿ, ತಮ್ಮ ರಾಜೀನಾಮೆ ನಿರ್ಧಾರ ಸ್ವಯಂಪ್ರೇರಿತವೋ ಅಥವಾ ಒತ್ತಡದಿಂದ ಕೈಗೊಂಡ ನಿರ್ಧಾರವೋ ಎಂಬುದರ ಬಗ್ಗೆ ಸ್ಪಷ್ಟವಾಗಿ ವಿವರಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ವಿಶ್ವಾಸಮತಕ್ಕೆ ಮನವಿ: 22 ಶಾಸಕರ ರಾಜೀನಾಮೆ ಯಿಂದ […]

ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಸತೀಶ್ ಐಲ್ ಆಯ್ಕೆ

Friday, March 13th, 2020
vikroli

ಮುಂಬಯಿ : ಕಳೆದ 57 ವರ್ಷಗಳಿಂದ ಕನ್ನಡಿಗರ ಸೇವೆಯಲ್ಲಿ ನಿರತರಾಗಿರುವ ವಿಕ್ರೋಲಿ ಕನ್ನಡ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಶ್ಯಾಮಸುಂದರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಮಲೆಯಾಳಿ ಮನೆಮಾತಿನ ಗಡಿನಾಡ ಕನ್ನಡಿಗ ಮೂಲತ ಉಪ್ಪಳದವರಾದ ಸತೀಶ್ ಆರ್. ಐಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಐಲ ಶ್ರೀ ಶಾರದಾ ಬೋವಿ ಶಾಲೆಯಲ್ಲಿ ಮುಗಿಸಿ ಮುಂಬಯಿ ಸೇರಿದ ಇವರು ಕೆನರಾ ವಿದ್ಯಾದಾಯಿನಿ ಮತ್ತು ಕನ್ನಡ ಭವನ ರಾತ್ರಿ ಶಾಲೆಯಲ್ಲಿ ಕಲಿತು ಬಳಿಕ ಅಂಬೇಡ್ಕರ್ ಕಾಲೇಜ್ ನಿಂದ […]

ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Wednesday, March 11th, 2020
BJP

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ತ್ಯಜಿಸಿದ್ದ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನವದೆಹಲಿಯ ಪಕ್ಷದ ಪ್ರದಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಶಾಲು ಹೊದಿಸಿ ಸಿಂಧಿಯಾ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಪರಿವಾರ ಸೇರುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿದರು. ಸಿಂಧಿಯಾ ಅವರ ಅಜ್ಜಿ ರಾಜಮಾತಾ ಸಿಂಧಿಯಾ ಜನಸಂಘ ಹಾಗೂ ಬಿಜೆಪಿಯ […]

ಕೊರೊನಾ ಭೀತಿ : ಶಬರಿಮಲೆ ಯಾತ್ರೆ ಮುಂದೂಡಲು ಸಲಹೆ

Wednesday, March 11th, 2020
shabari-male

ತಿರುವನಂತಪುರಂ : ದೇಶದಾದ್ಯಂತ ಕೊರೊನಾ ಕಳವಳ ಹೆಚ್ಚಾಗುತ್ತಿದ್ದು, ದೇವರ ನಾಡು ಕೇರಳ ಅಕ್ಷರಶಃ ನಲುಗಿದೆ. ಕೇರಳದಲ್ಲಿ ಇದುವರೆಗೆ 12 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢವಾಗಿದ್ದು, ಇನ್ನಷ್ಟು ಜನರಿಗೆ ಹಬ್ಬದಂತೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇರಳದಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 31ರವರೆಗೆ ಚಿತ್ರ ಮಂದಿರಗಳು, ಶಾಲೆ- ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದೇ ರೀತಿ ಧಾರ್ಮಿಕ ಉತ್ಸವಗಳು ಬೇಡ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ಇದೇ ವೇಳೆ ಧಾರ್ಮಿಕ ಕ್ಷೇತ್ರ […]

“ತಂದೆಯ ನಿರ್ಧಾರದ ಕುರಿತು ಹೆಮ್ಮೆಯಿದೆ” : ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ

Wednesday, March 11th, 2020
sindhiya

ಭೋಪಾಲ್ : ಪಕ್ಷ ತೊರೆದಿರುವ ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ನಡೆಯನ್ನು, ಹಲವರು ಬೆಂಬಲಿಸಿದರೆ ಇನ್ನೂ ಕೆಲವರು ಟೀಕಿಸಿದ್ದಾರೆ. ಸಿಂಧಿಯಾ ಅವರ ಎರಡನೇ ರಾಜಕೀಯ ಇನ್ನಿಂಗ್ಸ್ ಹೇಗಿರುತ್ತದೆ ಎಂಬುದನ್ನು ಕಾದು ನೋಡಲು ಪರ-ವಿರೋಧಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ತಮ್ಮ ತಂದೆಯ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ, ತಂದೆಯ ನಿರ್ಧಾರದ ಕುರಿತು ಹೆಮ್ಮೆಯಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಹಾನಾರ್ಯಮನ್ ಸಿಂಧಿಯಾ, ತಂದೆಯ ದೃಢ ನಿರ್ಧಾರಕ್ಕೆ […]