ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪ

Saturday, March 7th, 2020
rajnath-singh

ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಗನ ಮದುವೆಗಾಗಿ ದೆಹಲಿಗೆ ಆಗಮಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ತೆರಳಿದ ಸಿಎಂ ಬಿಎಸ್ವೈ, 2021ರ ಏರೋ‌ ಇಂಡಿಯಾ ಶೋಅನ್ನು ಬೆಂಗಳೂರಿನಲ್ಲೇ ನಡೆಸುವಂತೆ ರಕ್ಷಣಾ ಸಚಿವರಲ್ಲಿ ಮನವಿ ಮಾಡಿದರು. ಹಾಗೆಯೇ, ವೆಲ್ಲಾರ ಜಂಕ್ಷನ್ನಲ್ಲಿ ಅವಶ್ಯಕತೆ ಇರುವ ರಕ್ಷಣಾ ಇಲಾಖೆಯ ಭೂಮಿಯನ್ನು ನಮ್ಮ ಮೆಟ್ರೋಗೆ ಹಸ್ತಾಂತರ ಮಾಡಬೇಕು ಅಂತ‌ ಮನವಿ ಮಾಡಿದರು. ಸಿಎಂ ಮನವಿಗೆ […]

ಯೆಸ್ ಬ್ಯಾಂಕ್ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ : ಆತಂಕ ಬೇಡ; ನಿರ್ಮಲಾ ಸೀತಾರಾಮನ್ ಭರವಸೆ

Friday, March 6th, 2020
nirmala-seetharaman

ನವದೆಹಲಿ : ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಹೂಡಿಕೆದಾರರ ಹಣ ಸುರಕ್ಷಿತವಾಗಿ. ಇದರಿಂದ ಯಾವ ಹೂಡಿಕೆದಾರರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಆರ್ಬಿಐ ಗವರ್ನರ್ ನನಗೆ ಹೇಳಿದ್ದಾರೆ. ಆರ್ಬಿಐ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಆರ್ಬಿಐ ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ಕೆಲವು ತಿಂಗಳುಗಳ ಕಾಲ ನಾನೇ ಖುದ್ದಾಗಿ ಆರ್ಬಿಐ ಜೊತೆಗೆ ಪರಿಸ್ಥಿತಿಯನ್ನು […]

ತಲೆಮರೆಸಿಕೊಂಡಿದ್ದ ತಾಹಿರ್‌ ಹುಸೇನ್‌ ದೆಹಲಿ ಪೊಲೀಸರ ವಶಕ್ಕೆ

Friday, March 6th, 2020
tahin-husen

ನವದೆಹಲಿ : ತಲೆಮರೆಸಿಕೊಂಡಿದ್ದ ಆಮ್‌ ಆದ್ಮಿ ಪಾರ್ಟಿಯ ಉಚ್ಚಾಟಿತ ನಾಯಕ ತಾಹಿರ್‌ ಹುಸೇನ್‌ರನ್ನು ದೆಹಲಿ ಪೊಲೀಸರು ಗುರವಾರ ಬಂಧಿಸಿದ್ದಾರೆ. ಗುಪ್ತಚರ ಇಲಾಖೆಯ ಸಿಬ್ಬಂದಿ ಅಂಕಿತ್‌ ಶರ್ಮಾರ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ತಾಹಿರ್‌, ಗುರುವಾರ ನ್ಯಾಯಾಲಯದ ಮುಂದೆ ಹಾಜರಾಗಿ ತಾವು ಕೋರ್ಟ್‌ ಸಮ್ಮುಖದಲ್ಲಿ ಶರಣಾಗುವುದಾಗಿ ಕೇಳಿಕೊಂಡಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಹೆಚ್ಚುವರಿ ಮೆಟ್ರೋಪಾಲಿಟನ್‌ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ವಿಶಾಲ್‌ ಪಹುಜಾ, ಅರ್ಜಿಯನ್ನು ವಜಾಗೊಳಿಸಿದರು. ಈ ಹಿನ್ನೆಲೆಯಲ್ಲಿ, ಪೊಲೀಸರು ತಾಹಿರ್‌ರನ್ನು ಬಂಧಿಸಿದ್ದಾರೆ. ಅರ್ಜಿ […]

ಮಾರ್ಚ್ 20ರಂದು ನಾಲ್ವರು ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ದೆಹಲಿ ನ್ಯಾಯಾಲಯ ಆದೇಶ

Thursday, March 5th, 2020
Nirbhaya-case

ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆಪಾದಿತರನ್ನು ಇದೇ ತಿಂಗಳ 20ರಂದು ಮುಂಜಾನೆ 5.30ಕ್ಕೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಮತ್ತೆ ಡೆತ್ ವಾರೆಂಟ್ ಹೊರಡಿಸಿದೆ. ಈ ಮೊದಲು ಮಾರ್ಚ್ 2ರಂದು ಆಪಾದಿತರನ್ನು ಗಲ್ಲಿಗೇರಿಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಅದರ ಹಿಂದಿನ ದಿನ ದೆಹಲಿ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡಿ ಆದೇಶ ನೀಡಿತ್ತು. ಹೀಗಾಗಿ ಅಪರಾಧಿಗಳನ್ನು ಬಿಗ್ ರಿಲೀಫ್ ಪಡೆದುಕೊಂಡಿದ್ದರು. ಇದೀಗ ಮತ್ತೆ ಅತ್ಯಾಚಾರ ಆರೋಪಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಹೊಸದಾಗಿ ಡೆತ್ […]

ಭಾರತದಲ್ಲಿ ಮುಂದುವರಿದ ಕೊರೋನಾ ಸೋಂಕು : ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆ

Thursday, March 5th, 2020
virus

ನವದೆಹಲಿ : ಚೀನಾದಲ್ಲಿ ಮಹಾಮಾರಿಯಾಗಿ ಹಬ್ಬಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ 29 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಭಾರತದಲ್ಲಿ ಇದುವರೆಗೂ ಈ ಮಾರಣಾಂತಿಕ ವೈರಸ್ಗೆ ಬಲಿಯಾಗಿರುವ ಯಾವುದೇ ಪ್ರಕರಣ ದಾಖಲಾಗಿಲ್ಲ. ದೇಶದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗಿರುವುದರಿಂದ ದೆಹಲಿಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಒಂದೇಕಡೆ ಸೇರಿಸುವುದನ್ನು ನಿರ್ಬಂಧಿಸಲಾಗಿದೆ. ಆದಷ್ಟು ಗುಂಪುಗೂಡುವುದನ್ನು ಕಡಿಮೆ ಮಾಡಲು ಸೂಚನೆ ನೀಡಲಾಗಿದೆ. ಒಂದುವೇಳೆ ಮಕ್ಕಳಲ್ಲಿ ಕೆಮ್ಮು, ಕಫ, ಉಸಿರಾಟದ ತೊಂದರೆ, ಜ್ವರದ ಲಕ್ಷಣಗಳು ಕಾಣಿಸಿದರೆ ತಕ್ಷಣ ವೈದ್ಯರ ಬಳಿ […]

ಭಾರತಕ್ಕೆ ಆಗಮಿಸಿರುವ 21 ಇಟಲಿ ಪ್ರವಾಸಿಗರಲ್ಲಿ 15 ಮಂದಿಗೆ ಕೊರೊನಾ ವೈರಸ್​ ಪತ್ತೆ

Wednesday, March 4th, 2020
itali

ನವದೆಹಲಿ : ಭಾರತಕ್ಕೆ ಆಗಮಿಸಿರುವ 15 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೊನಾ ವೈರಸ್ ಇರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಡಪಟ್ಟಿರುವುದಾಗಿ ದೆಹಲಿಯ ಏಮ್ಸ್ ಆಸ್ಪತ್ರೆ ಬುಧವಾರ ಖಚಿತಪಡಿಸಿದೆ. ಎಲ್ಲ 15 ಇಟಲಿ ಪ್ರವಾಸಿಗರನ್ನು ದೆಹಲಿಯ ಚಾವ್ಲಾ ಏರಿಯದಲ್ಲಿರುವ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ಬಂಧಿಸಲಾಗಿದ್ದು, ಏಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 21 ಮಂದಿ ಇಟಲಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು. ಅದರಲ್ಲಿ 15 ಮಂದಿಗೆ ಪಾಸಿಟಿವ್ ಕೊರೊನಾ ವೈರಸ್ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನದಿಂದ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ […]

ಕೊರೋನಾ ಭೀತಿ : ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧಾರ; ಪ್ರಧಾನಿ ಮೋದಿ

Wednesday, March 4th, 2020
modi

ನವದೆಹಲಿ : ಪ್ರಪಂಚವನ್ನು ಬೆಚ್ಚಿ ಬೀಳಿಸಿರುವ ಮಾರಕ ಸೋಂಕು ಕೊರೋನಾ ಸೋಂಕು ಎಲ್ಲರನ್ನು ಭಯಭೀತರನ್ನಾಗಿ ಮಾಡಿದೆ. ದೇಶದಲ್ಲಿಯೂ ದಿನೇ ದಿನೇ ಈ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಈಗಾಗಲೇ 6 ಜನರು ಈ ಸೋಂಕಿಗೆ ಬಲಿಯಾಗಿದ್ದು, ಜೈಪುರ ಪ್ರವಾಸಕ್ಕೆ ಒಂದ 15 ಜನರಲ್ಲಿ ಕೂಡ ಈ ಸೋಂಕು ದೃಢಪಟ್ಟಿದೆ. ಈ ಭಯ ಈಗ ಪ್ರಧಾನಿ ಮೋದಿಯನ್ನು ಆವರಿಸಿದ್ದು, ಈ ಹಿನ್ನೆಲೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗದಿರಲು ಅವರು ನಿರ್ಧಾರಿಸಿದ್ದಾರೆ. ಹೋಳಿ ಹಬ್ಬದ ಸಂಭ್ರದಲ್ಲಿ ಭಾಗಿಯಾಗಲು ಈ ಹಿಂದೆ ಪ್ರಧಾನಿ […]

ಹೋಳಿ ಹಬ್ಬದ ಬಳಿಕ ದೆಹಲಿ ದಂಗೆ ಚರ್ಚೆ: ಸ್ಪೀಕರ್ ತೀರ್ಮಾನಕ್ಕೆ ಪ್ರತಿಪಕ್ಷಗಳ ಆಕ್ಷೇಪ

Tuesday, March 3rd, 2020
navadehali

ನವದೆಹಲಿ : ದೆಹಲಿ ಸಿಎಎ ದಂಗೆ ಕುರಿತು ಹೋಳಿ ಹಬ್ಬದ ನಂತರವಷ್ಟೇ ಚರ್ಚೆಗೆ ಆಸ್ಪದ ನಿಡಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ. ದೆಹಲಿ ದಂಗೆ ಕುರಿತು ಈ ಕೂಡಲೇ ಚರ್ಚೆಗೆ ಅವಕಾಶ ಕೊಡಬೇಕು ಎಂಬ ಪ್ರತಿಪಕ್ಷಗಳ ಆಗ್ರಹವನ್ನು ತಳ್ಳಿ ಹಾಕಿದ ಓಂ ಬಿರ್ಲಾ, ಹೋಳಿ ಹಬ್ಬ ಆಚರಣೆ ಬಳಿಕವಷ್ಟೇ ಚರ್ಚೆ ಮಾಡೋಣ ಎಂದು ಹೇಳಿದರು. ಸ್ಪೀಕರ್ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು, ಸರ್ಕಾರಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡಿಕೊಡುವಲ್ಲಿ ಸ್ಪೀಕರ್ ನಿರತರಾಗಿದ್ದಾರೆ […]

ಸಗಣಿ ಮತ್ತು ಗೋ ಮೂತ್ರದಿಂದ ಕೊರೋನಾ ವೈರಸ್ ಗುಣಪಡಿಸಬಹುದು : ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳಿಕೆ

Tuesday, March 3rd, 2020
hari-preeya

ಗೌಹಾತಿ : ಚೀನಾ ಸೇರಿದಂತೆ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಈ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ಈ ವೈರಸ್ ಬಾಧಿಸುವವರಿಗೆ ಔಷಧಿ ಕಂಡುಹಿಡಿಯುವ ನಿಟ್ಟಿನಲ್ಲಿ ವಿಶ್ವ ವೈದ್ಯ ಸಮೂಹವೇ ತಲೆಕೆಡಿಸಿಕೊಂಡು ಕೂತಿದೆ. ಆದರೆ ಇತ್ತ ಅಸ್ಸಾಂ ವಿಧಾನಸಭೆಯಲ್ಲಿ ಹೇಳಿಕೆಯೊಂದನ್ನು ನೀಡಿರುವ ಭಾರತೀಯ ಜನತಾ ಪಕ್ಷದ ಶಾಸಕಿ ಸುಮನ್ ಹರಿಪ್ರಿಯಾ ಅವರು ಗೋಮೂತ್ರ ಮತ್ತು ಸಗಣಿ ಕೊರೋನಾ ವೈರಸ್ ತಡೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಗೋಮೂತ್ರ […]

ಮೃತ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ : ಸಿಎಂ ಅರವಿಂದ ಕೇಜ್ರಿವಾಲ್

Tuesday, March 3rd, 2020
aravndh

ನವದೆಹಲಿ : ದೆಹಲಿ ಗಲಭೆ ವೇಳೆ ಮೃತಪಟ್ಟ ಬೇಹುಗಾರಿಕೆ ದಳದ ಸಿಬ್ಬಂದಿ ಅಂಕಿತ್ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಪ್ರಕಟಿಸಿದ್ದಾರೆ. ಅಂಕಿತ್ ಶವ ಕಳೆದ ವಾರ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಗಲಭೆ ವೇಳೆ ಮೃತಪಟ್ಟ ಹೆಡ್ಕಾನ್ಸ್ಟೆಬಲ್ ಒಬ್ಬರ ಕುಟುಂಬಕ್ಕೂ ಕೇಜ್ರಿವಾಲ್ 1 ಕೋಟಿ ರೂ. ಪರಿಹಾರವನ್ನು ಘೋಷಿಸಿದ್ದರು. ಈ ಮಧ್ಯೆ, 1,880 ದೂರವಾಣಿ ಕರೆಗಳನ್ನು ದೆಹಲಿ ಪೊಲೀಸರು ಸ್ವೀಕರಿಸಿದ್ದಾರೆ ಮತ್ತು ವದಂತಿ ಹಬ್ಬಿಸುತ್ತಿದ್ದ ಆರೋಪದ ಮೇಲೆ 40 ಜನರನ್ನು […]