ಸೌತ್​ ಕೊರಿಯಾ ಅಧ್ಯಕ್ಷರ ಜತೆ ಮೋದಿ ಚರ್ಚೆ..ಸ್ಮಾರ್ಟ್​ ಸಿಟಿಗೆ ನೆರವಿನ ಭರವಸೆ

Monday, July 9th, 2018
narendra-modi

ನವದೆಹಲಿ: ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಸೌತ್ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ನೋಯ್ಡಾದಲ್ಲಿ ಹೊಸದಾಗಿ ಆರಂಭಗೊಳ್ಳುತ್ತಿರುವ ದೇಶದ ಅತಿದೊಡ್ಡ ಮೊಬೈಲ್ ಕಂಪನಿ ಉದ್ಘಾಟನೆ ಮಾಡಲು ಇಬ್ಬರು ನಾಯಕರು ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ಜೇ-ಇನ್ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಇದಕ್ಕೂ ಮೊದಲು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹಲವು ವಿಷಯಗಳ ಕುರಿತು […]

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಇಂದು 37ನೇ ವರ್ಷದ ಹುಟ್ಟುಹಬ್ಬ..!

Saturday, July 7th, 2018
m-s-dhoni

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ, ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಇಂದಿಗೆ ಸರಿಯಾಗಿ 37 ವರ್ಷಗಳ ಹಿಂದೆ ಅಂದರೆ ಜುಲೈ 7, 1981ರಲ್ಲಿ ರಾಂಚಿಯಲ್ಲಿ ಜನಿಸಿದವರು. ಧೋನಿ ಡಿಸೆಂಬರ್ 23, 2004ರಂದು ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡುತ್ತಾರೆ. ಅದಾದ ಒಂದು ವರ್ಷದ ನಂತರ ಅಂದರೆ, ಡಿಸೆಂಬರ್ 2, 2005ರಲ್ಲಿ ಧೋನಿ […]

ಫಿಫಾ ವಿಶ್ವಕಪ್…ಬ್ರೆಜಿಲ್​ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್​ಗೆ ಲಗ್ಗೆ!

Saturday, July 7th, 2018
belgium

ಮಾಸ್ಕೋ: ಫಿಫಾ ವಿಶ್ವಕಪ್ ಫುಟ್ಬಾಲ್ 2018 ರ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಬ್ರೆಜಿಲ್ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವರ್ಟರ್ ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಬೆಲ್ಜಿಯಂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬೆಲ್ಜಿಯಂ ಪರ ಫೆರ್ನಾಂಡಿನ್ಹೋ 13ನೇ ನಿಮಿಷದಲ್ಲಿ ಗೋಲ್ ಗಳಿಸುವುದರ ಮೂಲಕ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು. ಅನಂತರದಲ್ಲಿ ಅಂದರೆ 31 ನೇ ನಿಮಿಷದಲ್ಲಿ ಬೆಲ್ಜಿಯಂನ ಮತ್ತೊಬ್ಬ ಆಟಗಾರ […]

ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಮಾಜಿ ಸಿಎಂ.. ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ !

Tuesday, July 3rd, 2018
siddaramaih

ಬೆಂಗಳೂರು: ಮಾಜಿ ಸಿಎಂ ಆದರೂ ಕೂಡ ಸಿದ್ದರಾಮಯ್ಯ ಅದೇ ಖದರ್ ಉಳಿಸಿಕೊಂಡಿದ್ದಾರೆ. ಇದು ಸೋಮವಾರ ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಸಾಬೀತಾಯಿತು. ಪ್ರಕೃತಿ ಚಿಕಿತ್ಸೆಗೆ ತೆರಳಿದ್ದಾಗ ಹಲವು ಶಾಸಕರು, ಸಚಿವರು, ಮಾಜಿ ಸಚಿವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೇ ಬೆಂಗಳೂರಿಗೆ ವಾಪಸಾದ ಮೇಲೆ ಕೂಡ ಭೇಟಿ ಮಾಡಿ ಚರ್ಚಿಸಿದ್ದರು. ವಿವಿಧ ಸಭೆಗಳಲ್ಲಿ ಪಾಲ್ಗೊಂಡಿದ್ದಾಗಲೂ ಸಿದ್ದರಾಮಯ್ಯನವರೇ ಹೈಲೈಟ್ ಆಗಿದ್ದರು. ಸಮನ್ವಯ ಸಮಿತಿ ಸಭೆ, ಕಾಂಗ್ರೆಸ್ ಪಕ್ಷದ ನಾಯಕರ ಸಭೆಯಲ್ಲಿ ಇವರು ಸಿಎಂ, ಡಿಸಿಎಂಗಿಂತ ಹೆಚ್ಚು ಹೈಲೈಟ್ ಆಗಿದ್ದರು. ಸ್ವಂತ […]

ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ..!

Tuesday, July 3rd, 2018
priyanka-chaturvedy

ಮುಂಬೈ: ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಟ್ವಿಟ್ಟರ್ ನಲ್ಲಿ ಕಿಡಿಗೇಡಿಯೊಬ್ಬ ಅತ್ಯಾಚಾರದ ಬೆದರಿಕೆ ಒಡ್ಡಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ @GirishK1605 ಎಂಬ ಖಾತೆಯಿಂದ ಬೆದರಿಕೆ ಬಂದಿದೆ. ‘ನಾವು ರಾಜಕಾರಣಿಗಳು ಪ್ರತಿದಿನ ಟ್ರೋಲ್ ಆಗುತ್ತೇವೆ. ಅದೇನು ಹೊಸತಲ್ಲ. ಆದರೆ ನನ್ನ ಮಗಳ ಬಗ್ಗೆ ಮಾತನಾಡುವುದು ಸರಿಯೇ? ಅದೂ ಇಷ್ಟು ಅವಾಚ್ಯವಾಗಿ? ಅದಕ್ಕೆಂದೇ ನಾನು ಅವರ ವಿರುದ್ಧ ದೂರು ನೀಡಬೇಕೆಂದು ನಿರ್ಧರಿಸಿದ್ದೇನೆ’ […]

ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಪ್ಲಾಸ್ಟಿಕ್ ಬಾಟಲ್ ಎಸೆಯಲು ಕ್ರಷರ್ ಯಂತ್ರ..!

Friday, June 29th, 2018
railway

ಆಂಧ್ರ ಪ್ರದೇಶ: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಹತ್ವದ ಕಾರ್ಯ ಕೈಗೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಪ್ಲಾಸ್ಟಿಕ್ ಬಾಟಲ್ ಎಸೆಯಲು ಕ್ರಷರ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ತೆಲಂಗಾಣದ ಸಿಕಿಂದರಾಬಾದ್, ಕಾಚಿಗುಡ ಮತ್ತು ನಿಜಾಮಾಬಾದ್ ಹಾಗೂ ಆಂಧ್ರ ಪ್ರದೇಶದ ವಿಜಯವಾಡ ರೈಲ್ವೆ ನಿಲ್ದಾಣಗಳಲ್ಲಿ ದಕ್ಷಿಣ ಮಧ್ಯ ರೈಲ್ವೆ ಈ ಬಾಟಲ್ ಕ್ರಷರ್ ಯಂತ್ರಗಳನ್ನು ಅಳವಡಿಸಿದೆ. ಪ್ಲಾಸ್ಟಿಕ್ಗಳ ಮರು ಉತ್ಪನ್ನ ಮತ್ತು ಮರುಬಳಕೆ ಮಾಡಲೆಂದು ಯಂತ್ರಗಳನ್ನು ಸ್ಥಾಪಿಸಲಾಗಿದೆ. ಫ್ರಿಡ್ಜ್ ಮಾದರಿಯಲ್ಲಿ ಈ ಯಂತ್ರಗಳಿದ್ದು, ಒಂದು ದಿನದಲ್ಲಿ ಸುಮಾರು 5,000 […]

ಮುಂಬೈನಲ್ಲಿ ಸಣ್ಣ ವಿಮಾನ ಪತನ..ಐವರ ದುರ್ಮರಣ!

Thursday, June 28th, 2018
mumbai

ಮುಂಬೈ: ಪರಿಕ್ಷಾರ್ಥ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಮುಂಬೈನ ಜನನಿಬಿಡ ಪ್ರದೇಶದ ನಿರ್ಮಾಣ ಹಂತದ ಬಿಲ್ಡಿಂಗ್ ಬಳಿ ಅಪ್ಪಳಿಸಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಜುಹು ಏರ್ ಪೋರ್ಟ್ ನಿಂದ ಟೇಕ್ ಆಫ್ ಆಗಿದ್ದ ವಿಮಾನ ಘಾಟ್ಕೋಪರ್ದ ಸರ್ವೋದಯ ನಗರದ ಬಳಿ ಲ್ಯಾಂಡಿಂಗ್ ಆಗುವ ವೇಳೆ ನೆಲಕ್ಕೆ ಅಪ್ಪಳಿಸಿದೆ. ಮಧ್ಯಾಹ್ನ 1.15ಕ್ಕೆ ಅಪಘಾತ ಸಂಭವಿಸಿದ್ದು, ನಾಲ್ವರ ಮೃತದೇಹಗಳನ್ನು ಹೀಗಾಗಲೇ ಹೊರ ತರಲಾಗಿದೆ. ಬೀಚ್ಕ್ರಾಫ್ಟ್ ಕಿಂಗ್ ಏರ್ C90 ಟರ್ಬೊಪ್ರೊಪ್ ನ ವಿಮಾನ ಅಪಘಾತಕ್ಕೀಡಾಗಿದೆ ಎಂದು ಗುರುತಿಸಲಾಗಿದೆ. ಈ […]

ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ..ಡಾಲರ್​ ಎದುರು ಸಾರ್ವಕಾಲಿಕ ಇಳಿಕೆ!

Thursday, June 28th, 2018
dollers

ಮುಂಬೈ: ದೇಶದ ರೂಪಾಯಿ ಮೌಲ್ಯ ಇಂದು ಸಾರ್ವಕಾಲಿಕ ಕುಸಿತ ಕಂಡಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಡಾಲರ್ವೊಂದಕ್ಕೆ 69 ರೂಪಾಯಿ ಏರಿಕೆ ಆಗುವ ಮೂಲಕ ಸಾರ್ವಕಾಲಿಕ ಕುಸಿದಿದೆ. ಗುರುವಾರ ಬೆಳಗಿನ ಟ್ರೆಂಡ್ ಪ್ರಕಾರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 69 ರೂಪಾಯಿ ಆಗಿದೆ. ಇಂದು ಬೆಳಗ್ಗೆ 49 ಪೈಸೆ ಕುಸಿತ ಕಂಡು 69.10 ರೂಪಾಯಿಗಳ ಪಾತಾಳಕ್ಕಿಳಿತು. ಬುಧವಾರ ರೂಪಾಯಿ ಮೌಲ್ಯ ಡಾಲರ್ ಮುಂದೆ 37 ಪೈಸೆ ಕುಸಿದು 68.61 ರೂಪಾಯಿಗೆ ನಿಂತಿತ್ತು. ಇಂದು ಮತ್ತಿಷ್ಟು […]

ಇನ್ಮುಂದೆ ರೈಲು ನಿಲ್ದಾಣದ ಒಳಗೆ ಸೆಲ್ಪಿ ತೆಗೆದುಕೊಂಡರೆ 2 ಸಾವಿರ ರೂ. ದಂಡ!

Friday, June 22nd, 2018
selfie

ಚೆನ್ನೈ: ಸೆಲ್ಪಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ಓಡುವ ರೈಲಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ದಿನೇಶ್‌ ಕುಮಾರ್‌ ಎಂಬ 16 ವರ್ಷದ ಬಾಲಕ ಮೃತಪಟ್ಟಿದ್ದ. ಇನ್ನೊಂದು ಪ್ರಕರಣದಲ್ಲಿ ಪಾರ್ಥಸಾರಥಿ ಎಂಬುವವ ಪ್ರಾಣ ಕಳೆದುಕೊಂಡಿದ್ದ. ಇಂತಹ ಘಟನೆಗಳಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆ, ತಮಿಳುನಾಡಿನ ರೈಲ್ವು ನಿಲ್ದಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವವರಿಗೆ ಸುಮಾರು 2 ಸಾವಿರ ರೂ. ದಂಡ ಹಾಕಲು ನಿರ್ಧರಿಸಿದೆ. ಈ ಬಗ್ಗೆ ಚೆನ್ನೈನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಮಂಡಳಿ, ಸೆಲ್ಪಿ […]

2019ರಲ್ಲಿ ಮಾತ್ರವಲ್ಲ, 2029ರವರೆಗೂ ಮೋದಿ ಗೆಲ್ಲಬೇಕು: ಎಸ್.ಎಲ್. ಭೈರಪ್ಪ

Friday, June 22nd, 2018
s-l-bairappa

ಮೈಸೂರು: 2019ರಲ್ಲಿ ಮಾತ್ರವಲ್ಲ, 2024 ಮತ್ತು 2029ರಲ್ಲೂ ನರೇಂದ್ರ ಮೋದಿ ಗೆಲ್ಲಲೇಬೇಕು. ಇಲ್ಲವಾದರೆ ಈ ದೇಶ ಉದ್ಧಾರವಾಗುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅಭಿಪ್ರಾಯಪಟ್ಟರು. ಇಂದು ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರನ್ನ ಭೇಟಿ ಮಾಡಿ, ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಪುಸ್ತಕ ನೀಡಿದರು. ಜೊತೆಗೆ ಮೈಸೂರಿಗೆ ಕೇಂದ್ರ ಸರ್ಕಾರ ನೀಡಿರುವ ಪ್ರತಿಯೊಂದು ಯೋಜನೆ ಬಗ್ಗೆ ಸಾಹಿತಿಗಳಿಗೆ ಸಂಸದರು ಮಾಹಿತಿ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿತಿ ಎಸ್.ಎಲ್ […]