ಕಾಂಗ್ರೆಸ್‌ ಉಪವಾಸ ಸತ್ಯಾಗ್ರಹ…ನಾಯಕರ ಉಪಹಾರ ಸೇವನೆ ಫೋಟೋ ಹರಿಬಿಟ್ಟ ಬಿಜೆಪಿ!

Monday, April 9th, 2018
delhi-congress-2

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಉಪವಾಸ ನಿರಶನ ಕೈಗೊಂಡಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ರಾಜ್‌ಘಾಟ್‌ನಲ್ಲಿ ಕೈ ನಾಯಕರು ಸತ್ಯಾಗ್ರಹ ನಡೆಸಿದರು. ದಲಿತರ ಮೇಲಿನ ದೌರ್ಜನ್ಯ ತಡೆ ಹಾಗೂ ಸಂಸತ್ತಿನ ಕಲಾಪ ಸರಿಯಾಗಿ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತು. ಈ ವೇಳೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ […]

ಕೃಷ್ಣ ಮೃಗಗಳ ಬೇಟೆ ಪ್ರಕರಣ; ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ

Thursday, April 5th, 2018
salman-khan

ಹೊಸದಿಲ್ಲಿ: ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೋಧ್ ಪುರದ ಸಿಜೆಎಂ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ರಾಜಸ್ಥಾನದ ಜೋಧ್ ಪುರ ಸಿಜೆಎಂ ನ್ಯಾಯಾಲಯದ ನ್ಯಾಯಾಶಧೀಶ ದೇವ್ ಕುಮಾರ್ ಖತ್ರಿ ಗುರುವಾರ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ವೇಳೆ ಎರಡು […]

ನಮ್ಮ ದೇಶವನ್ನು ಮುನ್ನಡೆಸಲು ಸಮರ್ಥರನ್ನು ಹೊಂದಿದ್ದೇವೆ: ಆಫ್ರಿದಿಗೆ ಸಚಿನ್‌ ತಿರುಗೇಟು

Thursday, April 5th, 2018
sachin-tendulkar

ಮುಂಬೈ: ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟರ್‌‌ ಶಾಹಿದ್‌ ಆಫ್ರಿದಿಗೆ ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಸರಿಯಾಗಿ ತಿರುಗೇಟು ನೀಡಿದ್ದಾರೆ. ‘ನಮ್ಮ ದೇಶವನ್ನು ನಿರ್ವಹಿಸಲು ಹಾಗೂ ಮುನ್ನಡೆಸಲು ನಾವು ಸಮರ್ಥ ಜನತೆಯನ್ನು ಹೊಂದಿದ್ದೇವೆ’ ಎಂದು ‘ಕ್ರಿಕೆಟ್‌ ದೇವರು’ ಖ್ಯಾತಿಯ ಸಚಿನ್‌ ಹೇಳಿದ್ದಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ ಭಾರತೀಯ ಸೇನೆ 12 ಜನ ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಪಾಕಿಸ್ತಾನಿ ಮಾಜಿ ಕ್ರಿಕೆಟರ್‌‌ ಆಫ್ರಿದಿ, ‘ಕಾಶ್ಮೀರದಲ್ಲಿ ಅಮಾಯಕರು ಹತರಾಗುತ್ತಿದ್ದಾರೆ. ವಿಶ್ವಸಂಸ್ಥೆ ಮತ್ತಿತರ ಅಂತಾರಾಷ್ಟ್ರೀಯ ಮಂಡಳಿಗಳು ಎಲ್ಲಿವೆ? […]

ಶಾಸಕನ ವಿರುದ್ಧ ದೂರು ನೀಡಲು ಹೋದ್ರೆ ಸಿಎಂ ಯೋಗಿ ದೂರ ತಳ್ಳಿದರು: ವ್ಯಕ್ತಿಯ ಆರೋಪ

Wednesday, April 4th, 2018
yogi-adithyanath

ಗೋರಖ್‌‌ಪುರ್‌: ಶಾಸಕರೊಬ್ಬರ ವಿರುದ್ಧ ದೂರು ಕೊಡಲು ಹೋದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌‌ ನನ್ನನ್ನು ದೂರ ತಳ್ಳಿದ್ದಾರೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ. ಆಯೂಶ್‌ ಸಿಂಘಾಲ್‌ ಎಂಬಾತ ಇಂತಹ ಆರೋಪ ಮಾಡಿದ್ದು, ಗೋರಖ್‌‌ಪುರ್‌ನಲ್ಲಿ ನಡೆಯುತ್ತಿದ್ದ ‘ಜನತಾ ದರ್ಬಾರ್‌’ನಲ್ಲಿ ಸಿಎಂ ಯೋಗಿ ಆದಿತ್ಯನಾಥ್‌‌ ಅವರು ನನ್ನ ದೂರ ನೂಕಿದರು ಎಂದು ಸಿಂಘಾಲ್‌ ಹೇಳಿದ್ದಾರೆ. ಶಾಸಕ ಅಮನ್‌ಮಣಿ ತ್ರಿಪಾಠಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ. ಈ ಸಂಬಂಧ ಯೋಗಿ ಸಿಎಂ ಆದಿತ್ಯನಾಥ್‌‌ ಅವರ ಮೊರೆ ಹೋಗಿ, ನಾನು ದಾಖಲೆ ಪತ್ರಗಳನ್ನು ಕೊಟ್ಟು […]

ಐಪಿಎಲ್‌ ಸಮರಕ್ಕೆ ಆರ್‌ಸಿಬಿ ಸಜ್ಜು: ಸೀಸನ್‌ 2018 ರ ಎಲ್ಲ ಸವಾಲುಗಳಿಗೂ ಕೊಹ್ಲಿ ಪಡೆ ರೆಡಿ!

Wednesday, April 4th, 2018
royal-chalenge

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್‌ ಪ್ರೀಮಿಯರ್‌‌ ಲೀಗ್‌ ಟೂರ್ನಿ ಆರಂಭಗೊಳ್ಳಲು ಕೆಲ ದಿನ ಮಾತ್ರ ಬಾಕಿ ಉಳಿದಿದ್ದು, ಎಲ್ಲ ತಂಡಗಳು ಈಗಾಗಲೇ ಭರ್ಜರಿ ತಯಾರಿಯಲ್ಲಿ ಮಗ್ನವಾಗಿವೆ. ತವರು ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಹ ತಾಲೀಮು ನಡೆಸಿದೆ. ಈ ಹಿಂದಿನ ಎಲ್ಲ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಇಲ್ಲಿಯವರೆಗೆ ಯಾವುದೇ ಸೀಸನ್‌‌ನಲ್ಲಿ ಟ್ರೋಫಿಗೆ ಮಾತ್ರ ಮುತ್ತಿಕ್ಕಿಲ್ಲ. ಹೀಗಾಗಿ ಈ ಸಲ ಎಲ್ಲ ರೀತಿಯ ಸವಾಲುಗಳಿಗೂ ಸಜ್ಜುಗೊಂಡಿರುವ ವಿರಾಟ್‌‌ ಕೊಹ್ಲಿ ನೇತೃತ್ವದ ಪಡೆ ಈ ಸಲ ಟೂರ್ನಿ ಕೈವಶ […]

ದೇಶದಲ್ಲೇ ಮೊದಲು… ಮುಂಬೈನ ಎಂಟು ಸ್ಟೇಷನ್‌ಗಳು ಮಹಿಳಾ ಅಧಿಕಾರಿಗಳ ಕೈಯಲ್ಲಿ!

Wednesday, April 4th, 2018
police

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿರುವ ಪೊಲೀಸ್‌ ಠಾಣೆಗಳ ಪೈಕಿ ಎಂಟು ಸ್ಟೇಷನ್‌ಗಳಲ್ಲಿ ಮಹಿಳೆಯರೇ ಇನ್‌ಚಾರ್ಜ್‌ ಅಧಿಕಾರಿಗಳಿದ್ದಾರೆ. ಹೀಗಾಗಿ ಮಹಿಳೆಯರೇ ಪೊಲೀಸ್‌ ಠಾಣೆಗಳ ಇನ್‌ಚಾರ್ಜ್‌ ಆಗಿರುವ ದೇಶದ ಮೊದಲ ನಗರವಾಗಿ ಮುಂಬೈ ಹೊರಹೊಮ್ಮಿದೆ. ಒಂದೇ ನಗರದಲ್ಲಿ ಇಷ್ಟೊಂದು ಪೊಲೀಸ್‌ ಠಾಣೆಗಳಲ್ಲಿ ಅಧಿಕಾರ ಹೊಂದಿದ್ದು ಇದೇ ಮೊದಲಾಗಿದ್ದು, ಇವರಿಗೆ ಹಿರಿಯ ಅಧಿಕಾರಿಗಳು ಸಹ ಸಾಥ್‌ ನೀಡುತ್ತಿದ್ದಾರೆ. ಮಹಿಳಾ ಅಧಿಕಾರಿಗಳ ಕರ್ತವ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಂಬೈನ ಅಲ್ಕಾ ಮಂಡವೆಯಲ್ಲಿರುವ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ರಶ್ಮಿ ಜಾಧವ್, […]

ಚುನಾವಣೆಗೆ ಜೆಡಿಯು ಸಿದ್ಧ, ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಮಹಿಮಾ ಪಟೇಲ್‌

Tuesday, April 3rd, 2018
janathdal

ಬೆಂಗಳೂರು: ಮೇ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧೆ ಮಾಡಲು ಸಜ್ಜಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಎನ್‌ಡಿಎ ಭಾಗವಾದರೂ ನಾವು ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಬಿಜೆಪಿ ವಿರುದ್ಧವೂ ಇಲ್ಲಿ ನಮ್ಮ ಸ್ಪರ್ಧೆ ಇರಲಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆ ಪ್ರವಾಸ ಮಾಡಿದ್ದು, ಪಕ್ಷದ ಸಂಘಟನೆ ಮಾಡಿ ಪದಾಧಿಕಾರಿಗಳನ್ನು ನೇಮಿಸಿ ಚುನಾವಣೆಗೆ ಸಂಪೂರ್ಣ ಸನ್ನದ್ಧರಾಗಿದ್ದೇವೆ. ಏಪ್ರಿಲ್ 11 ರಂದು ಪಕ್ಷದ […]

ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಧೋನಿ ಬಗ್ಗೆ ಹರ್ಭಜನ್‌ ಟ್ವೀಟ್‌

Tuesday, April 3rd, 2018
mahindra-singh

ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ ಸೇನೆಯ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಲೆಫ್ಟಿನೆಂಟ್‌ ಕರ್ನಲ್‌ ಆಗಿರುವ ಅವರು ನಿನ್ನೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವಾಗ ಸೇನಾ ಸಮವಸ್ತ್ರದಲ್ಲಿ ಮಿಂಚಿದ್ದರು. ಅವರು ಸೇನಾಗೆ ನೀಡಿರುವ ಗೌರವಕ್ಕೆ ನಮ್ಮ ಸ್ಪಿನ್‌ ಮಾಂತ್ರಿಕ ಭಜ್ಜಿ ಸಂತಸಗೊಂಡಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದರಿಂದ ಮಹೇಂದ್ರ ಸಿಂಗ್‌ ಧೋನಿಗೆ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಭಾರತೀಯ ಭೂ ಸೇನೆಯ ಲೆಪ್ಟಿನೆಂಟ್‌‌ ಕರ್ನಲ್‌‌ ಸಮವಸ್ತ್ರದಲ್ಲಿ ಧೋನಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು. ಇದರಿಂದ ಕ್ರಿಕೆಟಿಗ […]

2011ರ ವಿಶ್ವಕಪ್‌ ಸಂಭ್ರಮಕ್ಕೆ 7 ವರ್ಷ.. 28 ವರ್ಷದ ಕನಸು ನನಸಾಗಿಸಿದ ಧೋನಿ ಪಡೆ

Monday, April 2nd, 2018
world-cup

ಮುಂಬೈ: ಭಾರತೀಯರ ಮೂರು ದಶಕಗಳ ಕನಸು, ಸಚಿನ್‌ರ ಎರಡು ದಶಕಗಳ ಕನವರಿಕೆ, ಗಂಭೀರ್‌ ಅವರ ಕೆಚ್ಚದೆಯ ಬ್ಯಾಟಿಂಗ್‌, ಯುವರಾಜ್‌ ಸಿಂಗ್‌ರರ ನೋವಿನ ಆಲ್‌ರೌಂಡ್‌ ಆಟ ಹಾಗೂ ಧೋನಿಯ ಚತುರ ನಾಯಕತ್ವದಿಂದ ಭಾರತ ತಂಡ 2011ರ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ಬರೆಯಿತು. ಏಕದಿನ ವಿಶ್ವಕಪ್‌ ಗೆದ್ದು ಇಂದಿಗೆ 7 ವರ್ಷ ತುಂಬಿದೆ. 1983 ರಲ್ಲಿ ಬಲಿಷ್ಟ ತಂಡಗಳನ್ನು ಮಣಿಸಿ ಕಪಿಲ್‌ ದೇವ್‌ ಪಡೆ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಶ್ವಕಪ್‌ ಗೆದ್ದು ಬೀಗಿತ್ತು. ಬಲಿಷ್ಠ ವೆಸ್ಟ್‌ ಇಂಡೀಸ್‌ ತಂಡ ಹ್ಯಾಟ್ರಿಕ್‌ […]

ಆಸ್ಟ್ರೇಲಿಯಾ ಪರ ಕ್ರಿಕೆಟ್‌ ಆಡುವುದಿಲ್ಲ: ಡೇವಿಡ್‌ ವಾರ್ನರ್‌ ಕಠಿಣ ನಿರ್ಧಾರ

Saturday, March 31st, 2018
david-warner-2

ಸಿಡ್ನಿ: ಚೆಂಡು ವಿರೂಪ ಪ್ರಕರಣದ ಸಂಬಂಧ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಡೇವಿಡ್‌ ವಾರ್ನರ್‌, ಕಣ್ಣೀರು ಸುರಿಸುತ್ತಲೇ ಮತ್ತೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್‌ ಆಡುವುದಿಲ್ಲ ಎಂಬ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ. ಕ್ರಿಕೆಟ್‌ ಆಸ್ಟ್ರೇಲಿಯಾದ 12 ತಿಂಗಳ ನಿಷೇಧದ ಬಳಿಕವೂ ಆಸ್ಟ್ರೇಲಿಯಾ ತಂಡದಲ್ಲಿ ಕ್ರಿಕೆಟ್‌ ಆಡದಿರುವ ನಿರ್ಧಾರ ಘೋಷಿಸಿದ್ದಾರೆ. ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಒತ್ತರಿಸಿ ಬಂದ ಕಣ್ಣೀರು ತಡೆಯದೇ ಬರೆದು ತಂದಿದ್ದ ಪ್ರಕಟಣೆಯನ್ನು ಡೇವಿಡ್‌ ವಾರ್ನರ್‌ ಓದುತ್ತಾ ತನ್ನದು ಅಕ್ಷಮ್ಯ ಕಾರ್ಯ ಎಂದಿದ್ದಾರೆ. ‘ನನ್ನ […]