ತ್ರಿಪುರದಲ್ಲಿ 25 ವರ್ಷಗಳ ಕಮ್ಯುನಿಸ್ಟ್‌‌ ಆಡಳಿತ ಅಂತ್ಯ: ಇಂದಿನಿಂದ ಬಿಜೆಪಿ ಯುಗಾರಂಭ

Friday, March 9th, 2018
biplab-dev

ಅಗರ್ತಲಾ: ತ್ರಿಪುರದಲ್ಲಿ 25 ವರ್ಷಗಳ ಕಾಲ ಇದ್ದ ಕಮ್ಯುನಿಸ್ಟ್‌‌ ಆಡಳಿತ ಅಂತ್ಯಗೊಂಡಿದ್ದು, ಇಂದಿನಿಂದ ಬಿಜೆಪಿ ಆಡಳಿತ ಆರಂಭವಾಗಲಿದೆ. ನೂತನ ಮುಖ್ಯಮಂತ್ರಿಯಾಗಿ ಬಿಪ್ಲಾಬ್‌ ದೇವ್‌ ಇಂದು ಪದಗ್ರಹಣ ಮಾಡಲಿದ್ದಾರೆ. ತ್ರಿಪುರದಲ್ಲಿ ಸಿಪಿಐಎಂ ಪಕ್ಷ ಸತತ 25 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ದೇಶದ ಬಡ ಮುಖ್ಯಮಂತ್ರಿ ಎಂದೇ ಖ್ಯಾತರಾಗಿದ್ದ 19 ವರ್ಷಗಳ ಕಾಲ ಮಾಣಿಕ್‌ ಸರ್ಕಾರ್‌ ಆಡಳಿತ ನಡೆಸಿದ್ದರು. ಆದರೆ, ಈ ಬಾರಿ ನಡೆದ ವಿಧಾನಸಭೆ ಚುನಾವಣೆಯ 59 ಕ್ಷೇತ್ರಗಳಲ್ಲಿ ಸಿಪಿಐಎಂ ಕೇವಲ 17 ಸ್ಥಾನಗಳನ್ನು ಗೆದ್ದು ಸೋಲು ಕಂಡಿದೆ. […]

ನಾನು ಹಿಂದೂ ಭಕ್ತ… ಈದ್‌‌ ಯಾಕೆ ಆಚರಿಸಬೇಕು?: ಯೋಗಿ ಆದಿತ್ಯನಾಥ್‌

Wednesday, March 7th, 2018
uttar-pradesh

ಲಕ್ನೋ: ನಾನು ಒಬ್ಬ ಹಿಂದೂ ಭಕ್ತ… ನಮ್ಮ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದ್ದು, ನಾನು ಈದ್‌ ಹಬ್ಬ ಯಾಕೆ ಆಚರಣೆ ಮಾಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್‌, “ನಾನು ಹಿಂದೂ ಧರ್ಮದವನಾಗಿದ್ದು, ಹೀಗಾಗಿ ಈದ್‌ ಆಚರಿಸುವುದಿಲ್ಲ. ನನ್ನ ಸ್ವಂತ ಧರ್ಮದಲ್ಲಿ ನಾನು ಹೆಮ್ಮೆ ಪಡುತ್ತೇನೆ… ಇಷ್ಟಕ್ಕೂ ನಾನು ಏಕೆ ಈದ್ ಆಚರಿಸಬೇಕು? ಎಂದಿದ್ದಾರೆ. ಇದೇ ವೇಳೆ ಅವರು […]

ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ… ಅತಂತ್ರದಲ್ಲಿ ಮೇಘಾಲಯ!

Saturday, March 3rd, 2018
nagaland

ನಾಗಾಲ್ಯಾಂಡ್: ಮೂರು ರಾಜ್ಯಗಳ ಚುನಾವಣೆ ಮತ ಎಣಿಕೆ ಭರದಿಂದ ಸಾಗಿದ್ದು ಕುತೂಹಲ ಹೆಚ್ಚಿಸಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುಂದಕ್ಕೆ ಸಾಗಿದ್ರೆ, ಇತ್ತ ಮೇಘಾಲಯದಲ್ಲಿ ಕಾಂಗೈ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಒಟ್ಟು ಇರುವ 59 ಕ್ಷೇತ್ರಗಳ ಪೈಕಿ ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಸಿಪಿಎಂ 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದ್ರೆ ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನದಲ್ಲೂ ಮುನ್ನಡೆ ಸಿಕ್ಕಿಲ್ಲ. ಈಶಾನ್ಯ […]

ಕೊನೆಗೂ ಸಂಕಷ್ಟದಿಂದ ಪಾರಾದ ಕೌರ್‌… ಇನ್ಮುಂದೆ ಡಿಎಸ್‌ಪಿ ಹರ್ಮನ್‌ಪ್ರೀತ್!

Thursday, March 1st, 2018
harmanpreeth-kaur

ದೆಹಲಿ: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ರವರೆಗೆ ಕೊಂಡೊಯ್ಯಲು ಪ್ರಮುಖ ಪಾತ್ರ ನಿರ್ವಹಿಸಿದ ಹರ್ಮನ್‌ಪ್ರೀತ್ ಕೌರ್ ಡಿಎಸ್‌ಪಿ ಆಗಿದ್ದಾರೆ. ಹೌದು, ಮಹಿಳಾ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಮನ್‌ಪ್ರಿತ್‌ ಕೌರ್‌ಗೆ ಪಂಜಾಬ್‌ ರಾಜ್ಯ ಸರ್ಕಾರ ಉದ್ಯೋಗ ನೀಡಿತ್ತು. ಆದ್ರೆ ಇಲ್ಲಿಯವರೆಗೆ ಕೌರ್‌ ಉದ್ಯೋಗಕ್ಕೆ ಸೇರಲು ಸಾಧ್ಯವಾಗಿಲ್ಲ. ಕಾರಣ ಇದಕ್ಕೂ ಮೊದಲು ಉದ್ಯೋಗ ಮಾಡುತ್ತಿದ್ದ ಸಂಸ್ಥೆಯಿಂದ ಅವರಿಗೆ ರಿಲಿವಿಂಗ್‌ ಲೆಟರ್‌ ನೀಡಿಲ್ಲ. ಹೀಗಾಗಿ ಅವರು ಹೊಸ ಉದ್ಯೋಗಕ್ಕೆ ಸೇರಲು ಕಷ್ಟ ಎದರುಸಿದ್ದರು. ಮೂರು ವರ್ಷದ ಹಿಂದೆ ಕೌರ್‌ […]

ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಟಿ ಶ್ರೀದೇವಿಗೆ ಅಂತಿಮ ನಮನ

Wednesday, February 28th, 2018
sri-devi

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿಯ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ವಿಮಾನದ ಮೂಲಕ ದುಬೈನಿಂದ ಮುಂಬೈಗೆ ಕರೆ ತರಲಾಗಿದ್ದು, ಅವರ ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಲೋಖಂಡವಾಲಾದ ದಿ ಸೆಲೆಬ್ರೇಶನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಡಲಾಗಿದೆ. ಬುಧವಾರ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರ ತನಕ ಶ್ರೀದೇವಿ ಯ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 3.30ಕ್ಕೆ ಉಪನಗರ ವಿಲೇಪಾರ್ಲೆಯ ಸೇವಾ ಸಮಾಜ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. ತಮ್ಮ ನೆಚ್ಚಿನ ನಟಿಗೆ ಅಂತಿಮ ನಮನ ಸಲ್ಲಿಸಲು ಬಾಲಿವುಡ್‌ನ […]

ಇತಿಹಾಸ ಸೃಷ್ಟಿ…ಮೊದಲ ಬಾರಿಗೆ ಯುದ್ಧವಿಮಾನ ಹಾರಾಟ ನಡೆಸಿದ ಮಹಿಳಾ ಪೈಲಟ್‌

Thursday, February 22nd, 2018
history

ಸೌರಾಷ್ಟ್ರ: ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್‌ವೊಬ್ಬರು ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಅವನಿ ಚತುರ್ವೇದಿ…ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಭಾರತೀಯ ಸೇನೆಯ ಮಹಿಳಾ ಪೈಲಟ್‌ ಅಧಿಕಾರಿ. ಮಿಗ್‌-21 ಬಿಸನ್‌ ಯುದ್ಧ ವಿಮಾನ ಹಾರಾಟ ನಡೆಸಿ ಅವನಿ ಚತುರ್ವೇದಿ ನೂತನ ಇತಿಹಾಸ ಬರೆದಿದ್ದಾರೆ. ಗುಜರಾತ್‌ನ ಜಮ್‌ನಗರ್‌ನಲ್ಲಿ ಸೋಮವಾರ ಅವನಿ ಚತುರ್ವೇದಿ ಒಬ್ಬರೇ ಮಿಗ್‌-21 ಬಿಸನ್‌ ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಭಾರತೀಯ ವಾಯುಪಡೆ ಹಾಗೂ ಭಾರತಕ್ಕೆ ಇದೊಂದು […]

ಜುಲೈ 1ರಿಂದ ಮೊಬೈಲ್ ಸಂಖ್ಯೆಗಳು 10ರ ಬದಲು 13 ಡಿಜಿಟ್ಸ್‌‌!?

Wednesday, February 21st, 2018
mobile

ನವದೆಹಲಿ: ಈಗಿರುವ ಮೊಬೈಲ್ ಸಂಖ್ಯೆಗಳ 10 ಅಂಕಿಗಳನ್ನು 13ಕ್ಕೆ ಏರಿಸಲು ಭಾರತೀಯ ದೂರವಾಣಿ ಇಲಾಖೆ ನಿರ್ಧರಿಸಿದೆ. ಜುಲೈ 1ರಿಂದ ಈಗಿರುವ 10 ಸಂಖ್ಯೆಗಳ ಬದಲಾಗಿ 13 ಅಂಕಿಗಳ ಮೊಬೈಲ್ ಸಂಖ್ಯೆ ಜಾರಿಗೆ ಬರಲಿದೆ. ನೆಟ್‌ವರ್ಕ್ ಕಂಪನಿಗಳಿಗೆ ಮೊಬೈಲ್ ಸಂಖ್ಯೆಗಳನ್ನು 13ಕ್ಕೆ ಏರಿಸಲು ಕೋರಲಾಗಿದೆ. ಈಗಿರುವ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಸೂಚಿಸಲಾಗಿದೆ. ಬಿಎಸ್‌ಎನ್ಎಲ್ ಸಹ 2018ರ ಡಿಸೆಂಬರೊಳಗೆ 13 ಸಂಖ್ಯೆಗಳನ್ನು ಗ್ರಾಹಕರಿಗೆ ನೀಡಲಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 31ರೊಳಗೆ ಈ ಬದಲಾವಣೆ ಪ್ರಕ್ರಿಯೆ ನಡೆಯಲಿದೆಯಂತೆ. […]

ಕಂಬಳಕ್ಕೆ ಗ್ರೀನ್‌ ಸಿಗ್ನಲ್‌… ಗ್ರಾಮೀಣ ಕ್ರೀಡೆ ಪರ ನಿಂತ ವೀರೂ!

Tuesday, February 20th, 2018
sehwag

ಹೈದರಾಬಾದ್‌: ಕರ್ನಾಟಕ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕರ್ನಾಟಕದ ಗ್ರಾಮೀಣ ಕ್ರೀಡೆ ಕಂಬಳಕ್ಕೆ ನಿನ್ನೆ ರಾಷ್ಟ್ರಪತಿ ರಾಮನಾಥ್‌ ಕೋವಿಂದರಿಂದ ಅಂಕಿತ ಬಿದ್ದ ವಿಷಯ ತಿಳಿದ ಸೆಹ್ವಾಗ್, ಕಂಬಳಕ್ಕೆ ಇದ್ದ ತಡೆ ನಿವಾರಣೆಯಾಗಿದ್ದು ಒಳ್ಳೆಯ ಸಂಗತಿ. ಗ್ರಾಮೀಣ ಕ್ರೀಡೆಗಳನ್ನು ಉಳಿಸಲೇಬೇಕಾಗಿದ. ರಾಷ್ಟ್ರಪತಿಗಳು ಕಂಬಳ ಬಿಲ್‌ ಪಾಸ್‌ ಮಾಡಿದ್ದು ನಿಜಕ್ಕೂ ಗ್ರೇಟ್‌. ಇನ್ಮುಂದೆ ಕಂಬಳ ಕರ್ನಾಟಕದಲ್ಲಿ ಕಾನೂನುಬದ್ಧ ಗ್ರಾಮೀಣ ಕ್ರೀಡೆಯಾಗಿದೆ. ಯುವಕರ ಚೈತನ್ಯವೃದ್ಧಿಸುವಂತಹ ಕ್ರೀಡೆಗಳನ್ನು ತಡೆಯಲು ಯತ್ನಿಸುತ್ತಿರುವ ಕೆಲ ಸಂಸ್ಥೆಗಳ ಯತ್ನವನ್ನು […]

ಪಂಜಾಬ್‌ ಬ್ಯಾಂಕ್‌ ವಂಚನೆ;ಮ್ಯಾನೇಜರ್‌ ಸೇರಿ ಮೂವರ ಸೆರೆ

Saturday, February 17th, 2018
punjab-bank

ಮುಂಬಯಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದ ಸುಮಾರು 11 ಸಾವಿರಕೋ. ರೂ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್‌ ಗೋಕುಲ್‌ ಶೆಟ್ಟಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಗೋಕುಲ್‌ ಶೆಟ್ಟಿ ಅವರೊಂದಿಗೆ ಸಿಂಗಲ್‌ ವಿಂಡೋ ಆಪರೇಟರ್‌ ಆಗಿದ್ದ ಮನೋಜ್‌ ಖಾರತ್‌ ಮತ್ತು ಹೇಮಂತ್‌ ಭಟ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಲಾಗುತ್ತಿದೆ. ಹಗರಣದ ಪ್ರಮುಖ ಆರೋಪಿಗಳಾದ ನೀರಜ್‌ ಮೋದಿ ಹಾಗೂ ಅವರ ಸಂಬಂಧಿ ಮೆಹುಲ್‌ […]

ಪ್ರಶ್ನೆಗಳಿಗೆ ಉತ್ತರಿಸಿ, ಆರೋಪಗಳು ಬೇಡ: ಪ್ರಧಾನಿಗೆ ರಾಹುಲ್ ತಿರುಗೇಟು

Wednesday, February 7th, 2018
rahul-gandhi

ನವದೆಹಲಿ: “ಪ್ರಶ್ನೆಗಳಿಗೆ ಉತ್ತರ ನೀಡಿ. ನಿಮ್ಮ ಆರೋಪಗಳು ಬೇಕಾಗಿಲ್ಲ,” ಎಂದು ಲೋಕಸಭೆಯಲ್ಲಿ ದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಫೆಲ್ ಡೀಲ್, ರೈತರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದರು. ರಾಹುಲ್ ಗಂಭೀರ ಆರೋಪ “ನಾನು ವಿರೋಧ ಪಕ್ಷದ ನಾಯಕ ಅಲ್ಲ, ಪ್ರಧಾನಿ ಎಂಬುದನ್ನು ಅವರು ಮರೆತಂತೆ ಕಾಣಿಸುತ್ತಿದೆ,” ಎಂದು ವರದಿಗಾರರಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು. “ಪ್ರಧಾನಿಗೆ […]