ಹುತಾತ್ಮ ಯೋಧರ ಕುಟುಂಬಗಳ ಪರಿಹಾರವನ್ನು 25 ಲಕ್ಷಕ್ಕೆ ಹೆಚ್ಚಿಸಿದ ‘ಮಹಾ’ ಸರ್ಕಾರ

Thursday, February 1st, 2018
devendra-fadnavis

ಮುಂಬೈ: ಹುತಾತ್ಮ ಯೋಧರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ ನೀಡುತ್ತಿದ್ದ ಪರಿಹಾರ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಗಡಿಯಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಇನ್ಮುಂದೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾವುದು ಎಂದು ಸಿಎಂ ದೇವೇಂದ್ರ ಫಡ್ನವಿಸ್‌ ಘೋಷಿಸಿದ್ದಾರೆ. ಬುಧವಾರ ನಡೆದ ಹುತಾತ್ಮರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಫಡ್ನವಿಸ್‌ ಈ ಘೋಷಣೆ ಮಾಡಿದ್ದಾರೆ. ಮೊದಲು ಹುತಾತ್ಮ ಯೋಧರ ಕುಟುಂಬಗಳಿಗೆ 8.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಇದನ್ನು 8.5 ಲಕ್ಷದಿಂದ 20 […]

ಪ್ರಧಾನಿ ಮೋದಿ ದಾವೋಸ್‌ ಭಾಷಣಕ್ಕೆ ತಲೆದೂಗಿದ ಚೀನಾ!

Friday, January 26th, 2018
modi-speak

ನವದೆಹಲಿ: ಸ್ವಿಡ್ಜರ್‌ಲ್ಯಾಂಡ್‌‌ನ ದಾವೋಸ್‌ನಲ್ಲಿ ನಡೆದ ವರ್ಲ್ಡ್‌‌‌ ಎಕನಾಮಿಕ್ಸ್‌ ಫೋರಂ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣವನ್ನು ಚೀನಾ ಸ್ವಾಗತಿಸಿದೆ. ದಾವೋಸ್‌ನಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌‌ ಟ್ರಂಪ್‌ ಅವರ ‘ಅಮೆರಿಕ ಫಸ್ಟ್‌‌’ ನೀತಿ ವಿರುದ್ಧ ಪರೋಕ್ಷವಾಗಿ ಮೋದಿ ದನಿ ಎತ್ತಿದ್ದರು. ಪ್ರಧಾನಿ ಮೋದಿ ಅವರ ಈ ಭಾಷಣವನ್ನು ಸ್ವಾತಿಸಿರುವ ಚೀನಾ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು […]

69ನೇ ಗಣರಾಜ್ಯೋತ್ಸವ ಆಚರಣೆಗೆ ದೇಶ ಸಜ್ಜು…ಈ ಬಾರಿಯ ವಿಶೇಷತೆ ಏನು?

Friday, January 26th, 2018
republic-day

ನವದೆಹಲಿ: ಇಂದು ದೇಶದ 69ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ದೇಶದ ರಾಜಧಾನಿ ದೆಹಲಿ ಸೇರಿದಂತೆ ಎಲ್ಲಡೆ ಗಣರಾಜ್ಯೋತ್ಸವ ಆಚರಣೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ದೆಹಲಿಯ ಇಂಡಿಯಾ ಗೇಟ್‌ ಬಳಿ ಗಣರಾಜ್ಯೋತ್ಸವ ಆಚರಣೆಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಪರೇಡ್‌ ಹಾಗೂ ಮುಖ್ಯ ಅತಿಥಿಗಳಿಂದ ಗಣರಾಜ್ಯೋತ್ಸವ ವಿಶೇಷ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಆಷಿಯಾನ್‌ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಥಾಯ್ಲೆಂಡ್, ವಿಯೆಟ್ನಾಂ, ಮಲೇಷ್ಯಾ, ಫಿಲಿಫೈನ್ಸ್, […]

ರನ್‌ವೇಯಿಂದ ಸಮುದ್ರದತ್ತ ಜಾರಿದ 168 ಜನರಿದ್ದ ಪ್ಯಾಸೆಂಜರ್‌ ವಿಮಾನ!

Tuesday, January 16th, 2018
airoplane

ಟರ್ಕಿ: ಟರ್ಕಿಯ ಟ್ರಬ್ಜೊನ್‌ ಏರ್‌ಪೋರ್ಟ್‌ನಲ್ಲಿ 168 ಜನರಿದ್ದ ವಿಮಾನವೊಂದು ರನ್‌ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಈ ಘಟನೆ ಜರುಗಿದೆ. ವಿಮಾನದಲ್ಲಿ 162 ಜನ ಪ್ರಯಾಣಿಕರು, ಇಬ್ಬರು ಪೈಲಟ್‌‌ ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ವಿಮಾನದಿಂದ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಬೋಯಿಂಗ್‌ 737-800 ಪ್ಯಾಸೆಂಜರ್‌ ವಿಮಾನ ಟರ್ಕಿ ರಾಜಧಾನಿ ಅಂಕಾರಾದಿಂದ ಟ್ರಬ್ಜೊನ್‌ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಏಕಾಏಕಿ ಅಲುಗಾಡಲು […]

ಕೇವಲ 99 ರೂಪಾಯಿಗೇ ವಿಮಾನ ಟಿಕೆಟ್‌‌…ಅತಿ ಕಡಿಮೆ ದರದಲ್ಲಿ ಈ 7 ನಗರಗಳಲ್ಲಿ ಸುತ್ತಾಡಿ!

Monday, January 15th, 2018
airasia

ನವದೆಹಲಿ: ಹಬ್ಬದ ಸಂಭ್ರಮದಲ್ಲಿ ಏರ್‌‌ಏಷ್ಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಬಂಪರ್‌‌ ಆಫರ್‌ ಪ್ರಕಟಿಸಿದೆ. ಕೇವಲ 99 ರೂಪಾಯಿಗೆ ವಿಮಾನ ಟಿಕೆಟ್‌‌ಅನ್ನು ಘೋಷಿಸಿದೆ. ಭಾರತದ ಏಳು ಪ್ರಮುಖ ನಗರಗಳಿಗೆ ಪ್ರಯಾಣಿಸುವವರಿಗೆ 99 ರೂಪಾಯಿಯ ಟಿಕೆಟ್‌ ನೀಡಲಿದೆ. ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಸುವವರಿಗೆ ಈ ಭರ್ಜರಿ ಆಫರ್‌ ನೀಡಿದೆ. ಇಂದಿನಿಂದ ಜನವರಿ 21ರವರೆಗೆ ಗ್ರಾಹಕರು 99ರೂಪಾಯಿ ಬೆಲೆ ಟಿಕೆಟ್‌ ಬುಕ್ ಮಾಡಬಹುದಾಗಿದೆ. ಜನವರಿ 15ರಿಂದ ಜುಲೈ 31ರೊಳಗೆ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, […]

ಕರ್ನಾಟಕ ಚುನಾವಣೆ: ದಿಲ್ಲಿಯಲ್ಲಿಂದು ಮೋದಿ, ಅಮಿತ್‌ ಶಾ ಭೇಟಿ

Thursday, January 11th, 2018
narendra-modi

ಹೊಸದಿಲ್ಲಿ : ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಲಕ್ಷಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರುಗಳನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರು ಸಹೋದ್ಯೋಗಿಗಳಿಗೆ ಭೋಜನ ಕೂಟವೊಂದನ್ನು ಏರ್ಪಡಿಸಲಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಈ ವರ್ಷ ಮೇಘಾಲಯ, ನಾಗಾಲ್ಯಾಂಡ್‌, ಮಿಜೋರಾ,, ಮಧ್ಯ ಪ್ರದೇಶ, ರಾಜಸ್ಥಾನ, ತ್ರಿಪುರ ಮತ್ತು ಛತ್ತೀಸ್‌ಗಢ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅದಕ್ಕೆ ಈಗಲೇ ಕಾರ್ಯ ತಂತ್ರ ರೂಪಿಸುವ […]

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನ ವಿವಾದಕ್ಕೆ ತೆರೆ

Tuesday, January 9th, 2018
National-Anthem

ನವದೆಹಲಿ: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನ ವಿವಾದಕ್ಕೆ ತೆರೆ ಬಿದ್ದಿದೆ. ಇನ್ಮುಂದೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದು ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಚಿತ್ರಮಂದಿರಗಳಲ್ಲಿನ ಯಾವುದೇ ಚಲನಚಿತ್ರ ಪ್ರಸಾರವಾಗುವುದಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಗಾಯನ ಕಡ್ಡಾಯವಾಗಿತ್ತು. ಆದರೆ, ಈ ಬಗ್ಗೆ ತೀವ್ರ ಪರ-ವಿರೋಧ ಚರ್ಚೆ ನಡೆದ ಹಿನ್ನಲೆಯಲ್ಲಿ ಸುಪ್ರೀಂ ತನ್ನ ಆದೇಶದಲ್ಲಿ ಬದಲಾವಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿ ಪರಿಗಣಿಸಿದ ಸರ್ವೋಚ್ಛ ನ್ಯಾಯಾಲಯ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದು ಮತ್ತು ಆಗ ಪ್ರೇಕ್ಷಕರು ಎದ್ದು […]

ಭಾರತ ಆತಂಕದಲ್ಲಿದೆ…ಬಹ್ರೇನ್‌ನಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

Tuesday, January 9th, 2018
rahul-gandhi

ಬಹ್ರೇನ್: ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹ್ರೇನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಹ್ರೇನ್‌ನ ಮನಮ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ರಾಹುಲ್ ಭೇಟಿಯಾಗಿ ಸಂವಾದ ನಡೆಸಿದರು. ಬಹ್ರೇನ್ ಬಳಿಕ ಕಾಂಗ್ರೆಸ್ ಯುವರಾಜ ಕೆನಡಾ ಹಾಗೂ ಸಿಂಗಪೂರ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅನಿವಾಸಿ ಭಾರತಿಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮೋದಿ ಸರ್ಕಾರದ ಜಿಎಸ್‌ಟಿ ಹಾಗೂ ನೋಟ್ ಬ್ಯಾನ್ ನಿರ್ಧಾರದಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ದೂರಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರ್ಕಾರ […]

ಅನಾರೋಗ್ಯಪೀಡಿತಳೆಂದು ತಾಯಿಯನ್ನು ಟೆರೆಸ್ ನಿಂದ ನೂಕಿ ಕೊಂದ ಮಗ!

Friday, January 5th, 2018
suicide

ರಾಜ್ ಕೋಟ್: ಅನಾರೋಗ್ಯ ಪೀಡಿತ ತಾಯಿ ಜಯಶ್ರೀ(64) ಎಂಬುವವರನ್ನು ಸ್ವಂತ ಮಗನೇ ಟೆರೆಸ್ ನಿಂದ ನೂಕಿ ಕೊಲೆ ಮಾಡಿದ ಅಮಾನವೀಯ, ಹೀನಾತಿಹೀನ ಘಟನೆ ಗುಜರಾತಿನ ರಾಜಕೋಟ್ ನಲ್ಲಿ ನಡೆದಿದೆ. ತಾಯಿಯನ್ನು ಟೆರೆಸ್ ನಿಂದ ನೂಕಿ ಕೊಲೆ ಮಾಡಿದ ನಂತರ, ಮನೆಯಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಕುಳಿತಿದ್ದ ಮಗ ಸಂದೀಪ್(36) ಗೆ ಅಪಾರ್ಟ್ ಮೆಂಟಿನ ಭದ್ರತಾ ಸಿಬ್ಬಂದಿ ಬಂದು, ‘ನಿಮ್ಮ ತಾಯಿ ಟೆರೆಸ್ ನಿಂದ ಬಿದ್ದಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ. ನಂತರ ಆತಂಕಗೊಂಡವನಂತೆ ಓಡಿದ ಕಾಲೇಜೊಂದರಲ್ಲಿ ಅಸಿಸ್ಟಂಟ್ […]

ತಾಜ್‌ ವೀಕ್ಷಣೆ… ದೇಶಿ ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕಲು ಕೇಂದ್ರ ನಿರ್ಧಾರ

Wednesday, January 3rd, 2018
tajmahal

ಆಗ್ರಾ: ಪ್ರೇಮದ ಸಂಕೇತ, ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜ್‌‌ ಮಹಲ್‌ ನೋಡುವುದೇ ಒಂದು ಭಾಗ್ಯ. ಆದ್ರೆ ಕೇಂದ್ರ ಸರ್ಕಾರ ತಾಜ್‌ ಮಹಲ್‌ ವೀಕ್ಷಣೆಗೆ ಬರುವ ದೇಶಿ ಪ್ರವಾಸಿಗರ ಸಂಖ್ಯೆಗೆ ಮಿತಿ ಹೇರಲು ಮುಂದಾಗಿದೆ. ಹೌದು, ಪ್ರವಾಸ ದಿನಗಳಲ್ಲಿ ಪ್ರತಿನಿತ್ಯ ತಾಜ್‌ ವೀಕ್ಷಣೆಗೆ 60 ರಿಂದ 70 ಸಾವಿರಕ್ಕೂ ಭಾರತೀಯರು ಭೇಟಿ ನೀಡುತ್ತಾರೆ. ಈ ವೇಳೆ ಕೆಲವರು ಕಾಲ್ತುಳಿತಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಭಾರತೀಯ ಪ್ರವಾಸಿಗರಿಗೆ ದಿನನಿತ್ಯ ಮಕ್ಕಳು ಸೇರಿದಂತೆ ಒಟ್ಟು […]