ಸಿಎನ್‌ಆರ್ ರಾವ್, ಸಚಿನ್‌ಗೆ ‘ಭಾರತ ರತ್ನ’ ಪ್ರದಾನ

Tuesday, February 4th, 2014
Sachin-Tendulkar

ನವದೆಹಲಿ: ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿಎನ್‌ಆರ್ ರಾವ್ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅವರು, ದೇಶದ ಎರಡು ರತ್ನಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ […]

ಏ ಮೇರೆ ವತನ್‌…ಗೆ ಐದು ದಶಕ

Tuesday, January 28th, 2014
Latha-Mangeshkar

ಮುಂಬೈ : ಚೀನಾ ಜತೆಗಿನ ಯುದ್ಧದಲ್ಲಿ ಭಾರತ ಸೋತು ನೂರಾರು ಸೈನಿಕರು ಮಡಿದ ಸಂದರ್ಭದಲ್ಲಿ  ಗಾಯಕಿ ಲತಾ ಮಂಗೇಷ್ಕರ್‌ ಅವರು ಹಾಡಿದ್ದ ‘ಏ ಮೇರೆ ವತನ್‌ ಕೆ ಲೋಗೊ’ ಗೀತೆಗೆ ಈಗ 51 ವರ್ಷ. 1962ರಲ್ಲಿ ಚೀನಾ ಯುದ್ಧದಲ್ಲಿ ಮಡಿದ ಭಾರತೀಯರ ಯೋಧರ ಸ್ಮರಣಾರ್ಥ 1963ರ ಜನವರಿ 27ರಂದು ಅಂದಿನ ಪ್ರಧಾನಿ ನೆಹರೂ ಅವರ ಸಮ್ಮುಖದಲ್ಲಿ ಲತಾ ಈ  ಹಾಡನ್ನು ಪ್ರಸ್ತುತಪಡಿಸಿದ್ದರು. ಲತಾ ಹಾಡಿದ್ದ ಈ ಹಾಡು ಕೇಳಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಜನರ ಕಣ್ಣಾಲಿಗಳು […]

ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ : ಅಡ್ವಾಣಿ

Monday, January 27th, 2014
Adwani

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಮೋದಿ ಅವರ ಕೈಗೆ ಚುನಾವಣೆ ಹೊಣೆ ಸಿಕ್ಕ ಮೇಲೆ ಅಡ್ವಾಣಿ ಅವರು ರಾಜ್ಯಸಭೆ ಕಣಕ್ಕಿಳಿಯಬಹುದು ಎನ್ನುವ ಊಹಾಪೋಹ ಎದ್ದಿತ್ತು. ಆದರೆ, ಎಲ್ಲಾ ಸುದ್ದಿಗಳನ್ನು ಬದಿಗೊತ್ತಿ ಲೋಕಸಭೆ ಸ್ಪರ್ಧೆ ಬಗ್ಗೆ ಅಡ್ವಾಣಿ ಖಚಿತಪಡಿಸಿದ್ದಾರೆ. ರಾಜ್ಯಸಭೆಗೆ ಸ್ಪರ್ಧಿಸುವ ಕುರಿತು ಈವರೆಗೆ ನಾನು ಏನೂ ಹೇಳಿಲ್ಲ. ಯಾರಾದರೂ ಈ ಕುರಿತು ಹೇಳಿದರೆ ಈ ಕುರಿತು ಯೋಚಿಸುತ್ತೇನೆ. ಒಂದು ವೇಳೆ ರಾಜ್ಯಸಭೆಗೆ […]

ಸುನಂದಾ ಸಾವಿನ ತನಿಖೆ ಕ್ರೈಮ್ ಬ್ರಾಂಚ್ ಪೊಲೀಸರಿಗೆ

Friday, January 24th, 2014
Sunanda-Pushkar

ನವದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆಯನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದಲ್ಲಿ ಒಳಗೊಂಡ ವಿವಿಧ ಅಂಶಗಳನ್ನು ಪರಿಗಣಿಸಿ ಈ ಪ್ರಕರಣನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಸುನಂದಾ ಸಾವಿನ ತನಿಖೆ ನಡೆಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಕರಣದ ಹತ್ಯೆ ಅಥವಾ ಆತ್ಮಹತ್ಯೆಯ ವಿವಿಧ ಕೋನಗಳನ್ನು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಔಷಧಿಯ ಅತಿಸೇವನೆಯಿಂದ ವಿಷಕಾರಿಯಾಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ತರೂರ್ ಜತೆ […]

ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಡ್ವಾಣಿ

Monday, June 10th, 2013
lk advani

ನವದೆಹಲಿ: ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಗೈರು ಆಗಿದ್ದ ಆಡ್ವಾಣಿ,  ಸೋಮವಾರ ಬಿಜೆಪಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ರಾಜಿನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ತನ್ನ ಆಪ್ತರಲ್ಲಿ ರವಾನಿಸಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ಹಿರಿಯ ನಾಯಕ […]

ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

Thursday, March 14th, 2013
ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

ನವದೆಹಲಿ : ಭಾರತೀಯ ಮೀನುಗಾರರಿಬ್ಬರನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆಯ ಸಿಬ್ಬಂದಿಯಿ ಬ್ಬರನ್ನು ಮರಳಿ ಒಪ್ಪಿಸುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ. ತಮ್ಮ ದೇಶದಲ್ಲಿನ ಮತದಾನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಇಟಲಿಗೆ ತೆರಳಿದ ಇಬ್ಬರು ನೌಕಾ ಸಿಬ್ಬಂದಿಯನ್ನು ವಾಪಾಸು ಕಳುಹಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತು ತಪ್ಪಿರುವ ಇಟಲಿಯ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಮ್ ಕೋರ್ಟ್ ದೆಹಲಿಯಲ್ಲಿರುವ ಇಟಲಿ ರಾಯಭಾರಿ ಭಾರತ ಬಿಟ್ಟು ತೆರಳುವುದಕ್ಕೆ ಗುರುವಾರ ತಡೆಯಾಜ್ಞೆ ನೀಡಿದೆಯಲ್ಲದೆ, ಈ ಕುರಿತು ಮಾರ್ಚ್ 18  ರೊಳಗೆ ಉತ್ತರಿಸುವಂತೆ […]

ಪೆಟ್ರೋಲ್ ಬೆಲೆ ೧ ರೂ. ಅಗ್ಗ, ಡೀಸೆಲ್ ೫೦ ಪೈಸೆ ಹೆಚ್ಚಳ

Thursday, March 14th, 2013
Petrol and deasel price

ನವ ದೆಹಲಿ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿರುವ ಪರಿಣಾಮ ಪೆಟ್ರೋಲ್ ಬೆಲೆಯೂ ಒಂದು ರೂಪಾಯಿಯಷ್ಟು ಇಳಿಯಲಿದೆ. ಪೆಟ್ರೋಲ್ ಬೆಲೆ ಒಂದು ರೂಪಾಯಿಯಷ್ಟು  ಇಳಿಕೆಯಾಗಲಿದ್ದರೆ, ಜನವರಿಯಲ್ಲಿ ಪ್ರತಿ ತಿಂಗಳು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದರಿಂದ, ಡೀಸೆಲ್ ಬೆಲೆ ೪೦ ರಿಂದ ೫೦ ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆಯು  ಮಾರ್ಚ್ ೧೫ ಶುಕ್ರವಾರ ಅಥವಾ ಮಾರ್ಚ್ ೧೬ ಶನಿವಾರದಿಂದು ಪ್ರಕಟಗೊಳ್ಳುವ  ಸಾಧ್ಯತೆಯಿದೆ.

ಡ್ರಗ್ಸ್ ಸ್ಮಗ್ಲಿಂಗ್, ಬಾಕ್ಸರ್ ವಿಜೇಂದರ್‌ ಸಿಂಗ್‌ ಮೇಲೆ ಆರೋಪ

Friday, March 8th, 2013
Vijendar Sing

ಮೊಹಾಲಿ : ಡ್ರಗ್ಸ್ ಸ್ಮಗ್ಲಿಂಗ್ ಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ನ ಪದಕ ವಿಜೇತ  ಬಾಕ್ಸರ್‌ ವಿಜೇಂದರ್‌ ಸಿಂಗ್‌ ರವರ ಮೇಲೆ ಆರೋಪ ಕೇಳಿ ಬಂದಿದೆ. ಮೊಹಾಲಿಯ ಫ್ಲಾಟ್‌ ಒಂದರಲ್ಲಿ 130 ಕೋಟಿ ರೂಪಾಯಿ ಮೌಲ್ಯದ 26 ಕಿಲೋ ಹೆರಾಯಿನ್‌ ನನ್ನು ವಶಪಡಿಸಿಕೊಂಡ ಪಂಜಾಬ್ ಪೊಲೀಸರು ಈ ವೇಳೆ ಅನೂಪ್‌ ಖಲೋನ್‌ ಎಂಬಾತನನ್ನು ಸೆರೆಹಿಡಿದಿದ್ದಾರೆ. ವಿಚಾರಣೆಯ ವೇಳೆ ಈತ ತನಗೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಜತೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ವಿಜೇಂದರ್‌ ಕುಮಾರ್‌ಗೆ […]

ಪೆಟ್ರೋಲು ಬೆಲೆ ಲೀಟರಿಗೆ 1.40 ರೂಪಾಯಿ ಏರಿಕೆ

Saturday, March 2nd, 2013
Petrol price hike

ಹೊಸದಿಲ್ಲಿ : ಪೆಟ್ರೋಲು ಬೆಲೆಯನ್ನು ಲೀಟರಿಗೆ 1.40 ರೂಪಾಯಿಯಂತೆ ಏರಿಸಲಾಗಿದ್ದು, ಇದು ಇತ್ತೀಚೆಗಿನ ಕೆಲವು ವಾರಗಳಲ್ಲಿ ಆಗಿರುವ ದೊಡ್ಡ ಮೊತ್ತದ ಹೆಚ್ಚಳ.ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯೇರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲು ಬೆಲೆಯನ್ನು ರೂ. 1.40ರಂತೆ ಏರಿಸುವುದು ಅನಿವಾರ್ಯ ಎಂದು ಭಾರತೀಯ ತೈಲ ನಿಗಮ ಹೇಳಿದೆ. ಈ ಏರಿಕೆಯಲ್ಲಿ ಸ್ಥಳೀಯ ತೆರಿಗೆಗಳು ಒಳಗೊಂಡಿಲ್ಲ. ವ್ಯಾಟ್‌ ಸೇರಿಸಿದ ಬಳಿಕ ಏರಿಕೆ ಇನ್ನೂ ತುಸು ಹೆಚ್ಚಾಗಲಿದೆ. ಫೆ. 16ರಂದು ವ್ಯಾಟ್‌ ಸೇರಿಸದೆ ರೂಪಾಯಿ 1.50 […]

ಕೊಲ್ಕತ್ತಾ ಮಾರುಕಟ್ಟೆ ಸಂಕೀರ್ಣದಲ್ಲಿ ಅಗ್ನಿ ದುರಂತ ಸಾವಿನ ಸಂಖ್ಯೆ19 ಕ್ಕೆ ಏರಿಕೆ

Wednesday, February 27th, 2013
Kolkata market complex

ಕೊಲ್ಕತ್ತಾ  : ಬುಧವಾರ ಕೇಂದ್ರ ಕೊಲ್ಕತ್ತಾ ದ ಸೀಲ್ಡಾ ಪ್ರದೇಶದಲ್ಲಿ ಗೋದಾಮು ಮತ್ತು ಕಚೇರಿ ಸಂಕೀರ್ಣಗಳಿರುವ ಮಾರುಕಟ್ಟೆಯಲ್ಲಿ ನಸುಕಿನ ಜಾವ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸುಮಾರು 19 ಜನರು ಮೃತಪಟ್ಟಿದ್ದು, 12ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ  26 ತಂಡಗಳು ಸತತವಾಗಿ ಮೂರು ಗಂಟೆಗಳ ಸತತ ಪರಿಶ್ರಮದಿಂದ ಬೆಂಕಿಯನ್ನು ಶಮನಗೊಳಿಸಲು ಪ್ರಯತ್ನಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಮೃತರಲ್ಲಿ […]