ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಹಾರಿ ನಾಪತ್ತೆ ಯಾದ ಮಹಿಳೆ

Saturday, November 20th, 2021
Netravathi

ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಮಹಿಳೆಯೋರ್ವಳು ನದಿಗೆ ಹಾರಿ ನಾಪತ್ತೆ ಯಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆ ಗೆ ನೇತ್ರಾವತಿ ಸೇತುವೆಯಿಂದ ಮಹಿಳೆಯೊರ್ವಳು ಹಾರಿದ್ದನ್ನು ವಾಹನ ಸವಾರರು ನೋಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳೀಯ ಮುಳುಗುಗಾರರು ದೋಣಿಯ ಮೂಲಕ ನೇತ್ರಾವತಿ ಸೇತುವೆಯ ಬಳಿಗೆ ಬಂದರೂ ಅದಾಗಲೇ ಮಹಿಳೆ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದಾರೆ. ನದಿಗೆ ಹಾರಿದ ಮಹಿಳೆ ಯಾರು ಎಂಬ ಮಾಹಿತಿ […]

ದ.ಕ. ಜಿಲ್ಲೆಯಿಂದ ಪರಿಷತ್ ಚುನಾವಣೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿಗೆ ಟಿಕೆಟ್

Friday, November 19th, 2021
srinivas Poojary

ಮಂಗಳೂರು :ವಿಧಾನ ಪರಿಷತ್  ಚುನಾವಣೆಗೆ ದ.ಕ. ಜಿಲ್ಲೆಯಿಂದ ಬಿಜೆಪಿಯಿಂದ ಹಾಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಟಿಕೆಟ್ ಪಡೆದುಕೊಂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಎರಡು ಸ್ಥಾನಗಳಲ್ಲಿ ಬಿಜೆಪಿಯಿಂದ ಒಂದು ಸ್ಥಾನವನ್ನು ಕೋಟ ಶ್ರೀನಿವಾಸ್ ಪೂಜಾರಿಯವರು  ಪಡೆದಿದ್ದು , ಈ ಹಿಂದೆಯೂ ಕೂಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ಅವರನ್ನೇ ಆಯ್ಕೆ ಮಾಡಲಾಗಿದ್ದು, ಗೆಲುವು ಬಹುತೇಕ ಫಿಕ್ಸ್ ಆಗಿದೆ. ಇನ್ನೊಂದೆಡೆ ಕೋಟ ಶ್ರೀನಿವಾಸ್ ಪೂಜಾರಿ ಈ ಹಿಂದೆ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನವರ […]

ಕಣಜದ ಹುಳುಗಳ ದಾಳಿ, ವಿದ್ಯಾರ್ಥಿಗಳನ್ನು ರಕ್ಷಿಸಿ ಪ್ರಾಣ ಬಿಟ್ಟ ಗೃಹರಕ್ಷಕ ದಳದ ಸಿಬ್ಬಂದಿ

Friday, November 19th, 2021
Santhosh

ಮಂಗಳೂರು: ಕಣಜದ ಹುಳುಗಳ ದಾಳಿಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಬಂದಿದ್ದ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ತನ್ನ ಪ್ರಾಣವನ್ನೇ ಬಿಟ್ಟ ಘಟನೆ ಕಿನ್ನಿಗೋಳಿ ಎಂಬಲ್ಲಿ ಶುಕ್ರವಾರ ನಡೆದಿದೆ. ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್(35) ಮೃತ ದುರ್ದೈವಿ. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಸಂತೋಷ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಿಗೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಕಣಜದ ಹುಳುಗಳ ದಾಳಿಯಿಂದ ಶಾಲಾ ಮಕ್ಕಳನ್ನು ರಕ್ಷಿಸಿದ್ದರು. ಈ ವೇಳೆ ಸಂತೋಷ್ಗೆ ಕಣಜದ ಹುಳುಗಳ ಕಡಿದಿದ್ದವು. ಕಣಜದ ಹುಳುಗಳ ಕಡಿತಕ್ಕೆ […]

ನಾಗ ದೇವರ ಕಲ್ಲನ್ನು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ

Friday, November 19th, 2021
vishwas kumar das

ಮಂಗಳೂರು  : ಮಂಗಳೂರಿನ ಕೋಡಿಕಲ್ ನಲ್ಲಿ ನಾಗ ಬನದ ನಾಗ ದೇವರ ಕಲ್ಲನ್ನು ದುಷ್ಕರ್ಮಿಗಳು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಸ್ಥಾನ ಮತ್ತು ದೇವಸ್ಥಾನ ಕಾಣಿಕೆ ಡಬ್ಬಿಗಳಿಗೆ ಕಾಂಡೊಮ್ ಹಾಕುವುದು ಮತ್ತು ಇನ್ನಿತರ ದುಷ್ಕೃತ್ಯಗಳನ್ನು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದೆ. ನಗರ ಪೊಲೀಸ್ ಉಪ ಆಯುಕ್ತ ರವರಿಗೆ ಕೆಪಿಸಿಸಿ ಸಂಯೋಜಕ ಇಂಟಕ್ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ […]

ದಸ್ ಕದಮ್ ಸ್ವಚ್ಛ ಹರ್ ದಮ್ ಕಾರ್ಯಕ್ರಮದ ಮಾಹಿತಿ ಪೋಸ್ಟರ್ ಬಿಡುಗಡೆ

Wednesday, November 17th, 2021
Zp-poster

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಗ್ರಾಮಗಳನ್ನು ODF Plus Aspiring ಎಂದು ಘೋಷಿಸುವ ಕುರಿತು ಹರೀಶ್ ಆರ್  ಉಪನಿರ್ದೇಶಕರು ಸ್ವಚ್ಛ ಭಾರತ್ ಮಿಷನ್ (ಗ್ರಾ), RDWSD ಇವರು ಮಂಗಳೂರು, ಬಂಟ್ವಾಳ  ಮತ್ತು ಪುತ್ತೂರು ತಾಲ್ಲೂಕುಗಳ PDO ಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು  ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ದಸ್ ಕದಮ್ […]

ಯುನಿವರ್ಸಿಟಿ ಸಂಧ್ಯಾ ಕಾಲೇಜಿನಲ್ಲಿ ತುಳು ಎಂಎ ಪ್ರವೇಶಾತಿ ಆರಂಭ

Wednesday, November 17th, 2021
MA in Tulu

ಮಂಗಳೂರು : ಒಂದು ಭಾಷೆ ಶೈಕ್ಷಣಿಕವಾಗಿ ಗಟ್ಟಿಯಾದಷ್ಟು ಎಲ್ಲ ಸ್ತರಗಳಲ್ಲಿ ಬಲವರ್ಧನೆಗೊಳ್ಳುತ್ತಾ ಹೋಗುತ್ತದೆ. ತುಳು ಭಾಷೆಯಾಗಿ ಬೆಳೆದಿದ್ದರೂ, ಶೈಕ್ಷಣಿಕ ಅವಕಾಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 2018-19ನೇ ಸಾಲಿನಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಿತ್ತು. ಈ ಮೂಲಕ ತುಳು ಭಾಷೆಯ ಜನಪದ, ಸಾಹಿತ್ಯ, ಇತಿಹಾಸ, ಪರಂಪರೆಯ ಬಗ್ಗೆ ತಿಳಿಯಲು ಉನ್ನತ ಶಿಕ್ಷಣದಲ್ಲಿ ಅವಕಾಶ ಸೃಷ್ಟಿಸಲಾಗಿದೆ. ಹೈಸ್ಕೂಲ್ ಮತ್ತು ಪದವಿ ಹಂತದಲ್ಲಿ ಈಗಾಗ್ಲೇ ತುಳು ಕಲಿಕೆಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳು […]

ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಭಜನೆ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ

Wednesday, November 17th, 2021
Veeranarayana Temple

ಮಂಗಳೂರು: ಕುಲಶೇಖರ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ನವೆಂಬರ್ 14 ರಂದು ರವಿವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಭಜನೆ. ಗೋಪೂಜೆ. ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳಾಗಿರುವ ಶ್ರೀಹರಿ ಉಪಾಧ್ಯಾಯರು ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನರ್ಧನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ನಡೆಸಿದರು. ಆ ಬಳಿಕ ದಕ್ಷಿಣ ಕನ್ನಡ […]

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್. ವಾಸುದೇವ ಸ್ಪರ್ಧೆ

Wednesday, November 17th, 2021
MR Vasudeva

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್. ವಾಸುದೇವ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಾನು ಚುನಾಯಿತನಾದರೆ ದಕ್ಷಿಣ ಕನ್ನಡ ಜಿಲ್ಲೆಗೆ ಕನ್ನಡ ಭವನ ನಿರ್ಮಾಣಕ್ಕೆ ಪ್ರಯತ್ನ ಪಡುವುದಾಗಿ ಹೇಳಿದರು. ಕನ್ನಡ ಶಾಲೆಗಳು ಮುಚ್ಚದಂತೆ ಸರಕಾರವನ್ನು ಹಾಗೂ ಸಾರ್ವಜನಿಕರನ್ನು ರಾಜ್ಯ ಮಟ್ಟದ ಅಧ್ಯಕ್ಷರೊಂದಿಗೆ ಸೇರಿ ಪ್ರೇರೇಪಿಸುತ್ತೇನೆ. ನಾನು ಮಂಗಳೂರು ವಿಮಾನ ನಿಲ್ದಾಣದಲ್ಲಿ 15 ವರ್ಷಕ್ಕೂ ಹೆಚ್ಚಿನ ಕಾಲ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದೇನೆ. 14 […]

ದಿ. ಸುಧೀರ್ ಪುರಾಣಿಕ್ ಹಾಗೂ ದಿ. ಪ್ರದೀಪ್ ಕೋಟ್ಯಾನ್ ರವರಿಗೆ ಪುಷ್ಪ ನಮನ

Wednesday, November 17th, 2021
Karkala-BJP

ಕಾರ್ಕಳ   : ಕಾರ್ಕಳದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದ ಅಜಾತ ಶತ್ರು ಎಂಬ ಖ್ಯಾತಿಯ ಶ್ರೀ ಸುಧೀರ್ ಪುರಾಣಿಕ್ ಹಾಗೂ ಪುರಸಭಾ ಮಾಜಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ, ಬಿಲ್ಲವ ಸಮಾಜದ ಮುಂದಾಳು ಸ್ನೇಹ ಜೀವಿಯಾಗಿ ಭಾರತೀಯ ಜನತಾ ಪಕ್ಷದ ಮುಂದಾಳು ಆಗಿರುವ ಶ್ರೀ ಪ್ರದೀಪ್ ಕೋಟ್ಯಾನ್ ಇವರ ಶ್ರದ್ಧಾಂಜಲಿ ಕಾರ್ಯಕ್ರಮ, ನುಡಿನಮನ ಮತ್ತು ಪುಸ್ಪಾರ್ಚನೆ ಕಾರ್ಕಳ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆಯಿತು. ಪಕ್ಷದ ಪ್ರಮುಖರಾದ ಬೋಳ ಪ್ರಭಾಕರ ಕಾಮತ್, ಹಿರಿಯರಾದ ರಾಮಚಂದ್ರ ನಾಯಕ್, ಕರ್ನಾಟಕ […]

ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖ: ಡಾ.ಕಿಶೋರ್ ಆಳ್ವ

Tuesday, November 16th, 2021
Kishor Alva

ಮಂಗಳೂರು : ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ತರವೋ, ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರವೂ ಹಿರಿದು ಎಂದು ಇಂಡಿಯನ್ ಅಸೋಸಿಯೇಶ್ ಆಫ್ ಪೆಥಾಲಜಿಸ್ಟ್‌ನ ಕರ್ನಾಟಕ ಸ್ಟೇಟ್ ಚಾಪ್ಟರ್‌ನ ನೂತನ ಅಧ್ಯಕ್ಷ ಡಾ.ಎನ್. ಕಿಶೋರ್ ಆಳ್ವ ಮಿತ್ತಳಿಕೆ ಅಭಿಪ್ರಾಯಿಸಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಯಿಂದ ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೋವಿಡ್ […]