ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಸೆಂಬರ್ 1 ರಂದು ಷಷ್ಠಿ ಮಹೋತ್ಸವ

Tuesday, November 16th, 2021
Kukke Shasti

ಸುಬ್ರಹ್ಮಣ್ಯ  : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಸೆಂಬರ್ 1 ರಂದು ಕೊಪ್ಪರಿಗೆ ಏರಿ ಷಷ್ಠಿ ಮಹೋತ್ಸವ ನಡೆಯಲಿದೆ. ಡಿಸೆಂಬರ್ 3 ರಂದು ಲಕ್ಷ ದೀಪೋತ್ಸವ, ಡಿಸೆಂಬರ್ 7 ಚೌತಿ, ಡಿಸೆಂಬರ್ 8ಪಂಚಮಿ, ಡಿಸೆಂಬರ್ 9 ಮಹಾರಥೋತ್ಸವ ನಡೆಯಲಿದೆ ಎಂದು   ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್‌ ಉಳ್ಳಾಲ್‌ ಹೇಳಿದರು. ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ. ಕೋವಿಡ್‌- 19 ನಿಯಮಗಳನ್ನು ಅನುಸರಿಸಿಕೊಂಡು ಜಾತ್ರೋತ್ಸವವು ಸಾಂಗವಾಗಿ ನೆರವೇರಲು ಬೇಕಾದ ಸಕಲ […]

ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ ಡಿಸೆಂಬರ್ 10ರಂದು

Tuesday, November 16th, 2021
legislative-council

ಮಂಗಳೂರು  : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಚುನಾಯಿತರಾದ ಅವಧಿಯು 2022ರ ಜನವರಿ 5ರಂದು ಮುಕ್ತಾಯಗೊಳ್ಳುವ ಕಾರಣ ಈ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ವಿವರ ಇಂತಿದೆ: 2021ರ ನ.16ರ ಮಂಗಳವಾರ ಅಧಿಸೂಚನೆ ಹೊರಡಿಸುವ ದಿನವಾಗಿದೆ. ನ.23ರ ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ. 26ರ ಶುಕ್ರವಾರ ನಾಮಪತ್ರ ಹಿಂತೆಗೆದುಕೊಳ್ಳಬಹುದಾಗಿದೆ.  ಡಿಸೆಂಬರ್ 10ರ ಬೆಳಿಗ್ಗೆ 8 […]

ಬಿಲ್ಲವ ಸಂಘಟನೆಯ ವಿರುದ್ದ ಶರಣ್‌ ಪಂಪ್ವೆಲ್‌ ಆರೋಪ ಖಂಡನೀಯ – ಅಕ್ಷಿತ್‌ ಸುವರ್ಣ

Tuesday, November 16th, 2021
Akshith Suvarna

ಮಂಗಳೂರು: ಎರಡು ಸಂಘಟನೆಗಳ ಮಧ್ಯದ ಮನಸ್ತಾಪದ ವಿಚಾರದಲ್ಲಿ ಬಜರಂಗದಳ ನಾಯಕರಾದ ಶರಣ್‌ ಪಂಪ್ವೆಲ್‌ ಅವರು ಸದಾ ಒಂದೇ ಜಾತಿ ಒಂದೆ ಮತ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ ಬಿಲ್ಲವ ಸಂಘಟನೆಯ ಹೆಸರನ್ನು ಎಳೆದು ತಂದಿರುವುದು ಖಂಡನೀಯವಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ ಅಕ್ಷಿತ್‌ ಸುವರ್ಣ ಹೇಳಿದ್ದಾರೆ. ನಾರಾಯಣ ಗುರುಗಳ ತತ್ವದಡಿಯಲ್ಲಿ ಎಲ್ಲರೂ ಕೂಡ ಒಂದೇ ಜಾತಿ ಒಂದೇ ಧರ್ಮ ಎಂಬ ಧ್ಯೇಯದೊಂದಿಗೆ ಜಿಲ್ಲೆಯಲ್ಲಿ ಬಿಲ್ಲವ ಸಂಘಟನೆ ಕಾರ್ಯಾಚರಿಸುತ್ತಿದ್ದು ಯಾವುದೇ ರೀತಿಯ ಘರ್ಷಣೆ ಕಲಹಕ್ಕೆ ಅವಕಾಶ ಮಾಡಿಕೊಡದೆ […]

ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಚುನಾವಣಾ ಕಾರ್ಯಾಲಯದ ಉದ್ಘಾಟನೆ

Tuesday, November 16th, 2021
MN Rajendrakumar

ಮಂಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನಗರದ “ಇನ್‌ಲ್ಯಾಂಡ್ ಓರ್ನೆಟ್” ನಲ್ಲಿ ನಡೆಯಿತು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ‌ ಹರೀಶ್ ಶೆಟ್ಟಿ ಕಾರ್ಯಾಲಯವನ್ನು ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ  ಅವರು ಸಹಕಾರಿ ಧುರೀಣ  ಅತ್ಯಂತ ಪ್ರಾಮಾಣಿಕರಾದ, ಜನಸಾಮಾನ್ಯರ ಸೇವಕರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪಕ್ಷಾತೀತ ವ್ಯಕ್ತಿ. ಸಮಾಜ ಸೇವಕರಿಗೆ ಯಾವುದೇ ಪಕ್ಷದ ಅಗತ್ಯವಿಲ್ಲ, ಜನಸಾಮಾನ್ಯರ ಸಹಕಾರವೇ ಶಕ್ತಿಯಾಗಿದೆ. ಈ ಶಕ್ತಿಯಿಂದಲೇ […]

ಶರಣ್ ಪಂಪ್‌ವೆಲ್‌ ಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ : ಬಿರುವೆರ್ ಕುಡ್ಲ

Tuesday, November 16th, 2021
Birver Kudla

ಮಂಗಳೂರು : ಬಲ್ಲಾಳ್ ಭಾಗ್ ಘಟನೆಯ ಬಗ್ಗೆ ಪೂರ್ಣ ಮಾಹಿತಿಯಿಲ್ಲದೆ  ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ ಬಿರುವೆರ್ ಕುಡ್ಲ ಸಂಘಟನೆಯ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು  ಸಂಘಟನೆಯ ಮುಖ್ಯಸ್ಥ ಲಕ್ಷ್ಮೀಶ್ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು. ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲದ ಬಗ್ಗೆ ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗಾಗಿ […]

ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ

Monday, November 15th, 2021
Corroption-free

ಮಂಗಳೂರು  :  ಕರ್ನಾಟಕ ಲೋಕಾಯುಕ್ತ, ನಗರದ ರಥಬೀದಿಯ  ಡಾ. ದಯಾನಂದ ಪೈ – ಪಿ. ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಸಹಯೋಗದಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹ -2021ರ ಅಂಗವಾಗಿ ಪ್ರತಿಜ್ಞಾವಿಧಿ, ಜಾಗೃತಿ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಲೋಕಾಯುಕ್ತದ ಮಂಗಳೂರು ನಿರೀಕ್ಷಕರಾದ ಅಮಾನುಲ್ಲಾ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣದ ಜವಬ್ದಾರಿ ಪ್ರತಿಯೊಬ್ಬ ಭಾರತೀಯರದ್ದಾಗಿದೆ, ಅದರಲ್ಲೂ ಯುವ ಸಮಾಜ ಸ್ಪಂದಿಸಿದ್ದಲ್ಲಿ ಹಾಗೂ ಎಚ್ಚೆತ್ತ […]

ಕೋಡಿಕಲ್ ಕ್ರಾಸ್ ರಸ್ತೆಯ ಬಳಿ ಖಾಸಗಿ ಎಕ್ಸ್‌ಪ್ರೆಸ್ ಬಸ್ಸಿಗೆ ಕಲ್ಲೆಸದ ಕಿಡಿಗೇಡಿಗಳು

Monday, November 15th, 2021
akms travels

ಮಂಗಳೂರು : ಮಂಗಳೂರಿನಿಂದ ಕುಂದಾಪುರಕ್ಕೆ ಚಲಿಸುತ್ತಿದ್ದ  ಖಾಸಗಿ ಎಕ್ಸ್‌ಪ್ರೆಸ್ ಬಸ್ಸಿಗೆ ಕೋಡಿಕಲ್ ಕ್ರಾಸ್ ರಸ್ತೆಯ ಬಳಿ  ಕಿಡಿಗೇಡಿಗಳು ಕಲ್ಲೆಸೆದ ಘಟನೆ ಸೋಮವಾರ ಮಧ್ಯಾಹ್ನ 12.20 ಕ್ಕೆ ನಡೆದಿದೆ. ಕುಂದಾಪುರದ ಸೈಫ್ ಎನ್ನುವವರ ಮಾಲಕತ್ವದ ಎಕೆಎಂಎಸ್ ಎಕ್ಸ್‌ಪ್ರೆಸ್ ಬಸ್ ಗೆ ಕೋಡಿಕಲ್ ಕ್ರಾಸ್  ಬಳಿ ಇಬ್ಬರು ಯುವಕರು ಕೈ ತೋರಿಸಿ ನಿಲ್ಲಿಸಲು ಸೂಚಿಸಿ ಎರಡು ಕಲ್ಲುಗಳನ್ನು ಬಸ್ಸಿನ ಗಾಜಿಗೆ ಎಸೆದು ಬಳಿಕ ಕೋಡಿಕಲ್ ರಸ್ತೆಯಲ್ಲಿ  ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕಲ್ಲೆಸೆತದಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ. ಕಿಡಿಗೇಡಿಗಳು ದ್ವಿಚಕ್ರ ವಾಹನದ ನಂಬರ್ ಪ್ಲೇಟ್ […]

ಮಂಗಳೂರು ವಿ.ವಿ: ಉದ್ಯೋಗಮೇಳ ಮುಂದೂಡಿಕೆ

Monday, November 15th, 2021
job fair

ಮಂಗಳೂರು ವಿಶ್ವವಿದ್ಯಾನಿಲಯದ, ವಿಶ್ವವಿದ್ಯಾನಿಲಯ ತರಬೇತಿ ಮತ್ತು ಉದ್ಯೋಗ ಕೋಶ, ಹಾಗೂ ಉದ್ಯೋಗ ಮಾಹಿತಿ ಮಾರ್ಗದರ್ಶನ ಕೇಂದ್ರದ ವತಿಯಿಂದ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನವೆಂಬರ್‌ 16  ಮತ್ತು 17 (ಮಂಗಳವಾರ ಮತ್ತು ಬುಧವಾರ) ನಡೆಯಲಿದ್ದ ಉದ್ಯೋಗಮೇಳವನ್ನು ಚುನಾವಣಾ ನೀತಿಸಂಹಿತೆಯಿಂದಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು, ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

ಬೆಳ್ತಂಗಡಿ : ತಾವರೆ ಕೆರೆಗೆ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

Monday, November 15th, 2021
Shreya

 ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಯೊಬ್ಬರು ತಾವರೆ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದಾ ದಂಪತಿ ಪುತ್ರಿ, ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18)ಮೃತಪಟ್ಟ ದುರ್ದೈವಿ. ಈಕೆ ಬೆಳಗ್ಗೆ ತನ್ನ ಮನೆ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶ್ರೇಯಾ ಹಿಂತಿರುಗಿ ಬಾರದೆ ಇದ್ದ […]

ಅಬತರ ತುಳು ಚಲನ ಚಿತ್ರದ ಆಡಿಯೋ ಬಿಡುಗಡೆ, ಜನವರಿ 21, 2022 ರಂದು ಚಲನ ಚಿತ್ರ ಬಿಡುಗಡೆ

Sunday, November 14th, 2021
Abatara

ಮಂಗಳೂರು  : ಬಹು ನಿರೀಕ್ಷಿತ ತುಳು ಚಲನಚಿತ್ರ ಅಬತರ ಜನವರಿ 21, 2022 ರಂದು ಥಿಯೇಟರ್‌ಗೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಮತ್ತು ಗಾನ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್ ಮತ್ತು ಹಲವಾರು ಇತರ ತುಳು ನಟರು ನಟಿಸಿದ್ದಾರೆ. ಸುಮಾರು ಎರಡು ವರ್ಷಗಳ ನಂತರ ಅರ್ಜುನ್ ಕಾಪಿಕಾಡ್ ಅವರ ನಿರ್ದೇಶನದ ಅಬತರ ಚಲನಚಿತ್ರ ದಲ್ಲಿ ಅವರೇ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಅಬತರ ಚಿತ್ರದ ಆಡಿಯೋವನ್ನು ನವೆಂಬರ್ 13, ಶನಿವಾರದಂದು […]