ಸರಕಾರಿ ಸೇವೆ ಜನಾರ್ದನ ಸೇವೆ ಯುವಜನತೆ ಮುಂದೆ ಬನ್ನಿರಿ

Sunday, October 31st, 2021
Christopher

ಮಂಗಳೂರು :  ಸಂತ ಕ್ರಿಸ್ಟೋಫರ್ ಎಸೋಸಿಯೆಶನ್ ಮಂಗಳೂರು ಇವರ ಆಶ್ರಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸದಸ್ಯರ ಕುಟುಂಬದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಸಾಧನೆಗೈದ ಯುವಪ್ರತಿಭೆಗಳನ್ನು ಸನ್ಮಾನಿಸುವ ಕಾರ್ಯಕ್ರಮ ರೋಜಾರಿಯೊ ಕಲ್ಚರಲ್ ಸಭಾಂಗಣಗದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಾಣಿಜ್ಯತೆರಿಗೆ ನಿರೀಕ್ಷಕರಾದ ಕುಮಾರಿ ಆಮ್ಲಿನ್ ಡಿಸೋಜ ಮಾತನಾಡಿ ಇಂದು ಯುವಜನತೆಯನ್ನು ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಗೌರವಿಸುವುದು ಶ್ಲಾಘನೀಯ. ಇವತ್ತಿನ ಈ ಸಮಾಜದಲ್ಲಿ ಪ್ರತ್ಯೇಕವಾಗಿ ಯುವಜನತೆಯಲ್ಲಿ ನಾವು ಸರಕಾರ ಕಚೇರಿಗಳಲ್ಲಿ ಕೆಲಸ ಮಾಡಲು […]

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ

Sunday, October 31st, 2021
Rohith Hegde

ಮೂಡುಬಿದಿರೆ: ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರಾಗಿ ಕಟಪಾಡಿ ವ್ಯವಸ್ಥಾಪಕ ಎರ್ಮಾಳ್ ರೋಹಿತ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಜೈನ್ ಆಯ್ಕೆಯಾಗಿದ್ದಾರೆ. ಶನಿವಾರ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಕಂಬಳ ಸಮಿತಿ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

‘ಹಲಾಲ್’ ಮೂಲಕ ಭಾರತದಲ್ಲಿ ‘ಆರ್ಥಿಕ ಏಕಸಾಮ್ಯ’ ನಿರ್ಮಿಸುವ ಪ್ರಯತ್ನ ! – ಆಶೀಷ ಧರ

Sunday, October 31st, 2021
AshiraDhara

ಮಂಗಳೂರು : ‘ಹಲಾಲ್’ ಈಗ ಕೇವಲ ಮಾಂಸಕ್ಕಷ್ಟೇ ಸೀಮಿತವಾಗಿಲ್ಲ, ಶರಿಯತ್ ಕಾನೂನಿಗನುಸಾರ ಓರ್ವ ಮುಸಲ್ಮಾನನು ಏನೆಲ್ಲವನ್ನು ಅಂಗೀಕರಿಸುತ್ತಾನೆಯೋ ಅದೆಲ್ಲವೂ ‘ಹಲಾಲ್’ ಆಗಿದೆ ! ಮುಸಲ್ಮಾನೇತರರನ್ನು ಇಸ್ಲಾಮಿಕ್ ಜೀವನ ಪದ್ದತಿಗೆ ಪರಿವರ್ತಿಸುವ ಪ್ರಯತ್ನವೆಂದರೆ ‘ಹಲಾಲ್’, ಎಂಬುದನ್ನು ಗಮನದಲ್ಲಿಡಬೇಕು. ಕೇರಳದಲ್ಲಿ ‘ಹಲಾಲ್’ಮುಕ್ತ ಉಪಹಾರಗೃಹವನ್ನು ತೆರೆದ ಓರ್ವ ಹಿಂದೂ ಮಹಿಳೆಯ ಮೇಲೆ ಮತಾಂಧರು ದಾಳಿ ನಡೆಸಿ ಆಕೆಯನ್ನು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದೂ ಸಮಾಜದ ಸ್ಥಿತಿ ಎಷ್ಟು ದಯನೀಯವಾಗಿದೆ ಎಂದರೆ, ಭಾರತದ ಹಿಂದೂ ಸಮಾಜವು ತಮ್ಮ ಹಕ್ಕುಗಳ […]

ರಾಜ್ಯೋತ್ಸವ: 58 ಸಾಧಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರಕಟ

Sunday, October 31st, 2021
KV Rajendra Kumar

ಮಂಗಳೂರು : ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಅ.30ರ ಶನಿವಾರ ಜಿಲ್ಲಾಡಳಿತದಿಂದ ಪ್ರಕಟಿಸಲಾಗಿದೆ. ಒಟ್ಟು 58 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಧಕರ ಪಟ್ಟಿ ಇಂತಿದೆ: ಸಮಾಜ ಸೇವೆಯಲ್ಲಿ-ಮಂಗಳೂರಿನ ಎಸ್.ಎಸ್. ನಾಯಕ್, ಕ್ರೀಡೆಯಲ್ಲಿ-ಬಂಟ್ವಾಳ ತಾಲೂಕಿನ ಬದಿಗುಡ್ಡ ಮನೆಮಾಣಿ ಉದಯ ಚೌಟ, ಕಂಬಳದಲ್ಲಿ-ಹಳದಂಗಡಿ ರವಿಕುಮಾರ್, ಸಮಾಜ ಸೇವೆಯಲ್ಲಿ-ಕಾಟಿಪಳ್ಳದ ಕೂಸಪ್ಪ ಶೆಟ್ಟಿಗಾರ್, ಸಮಾಜ ಸೇವೆಯಲ್ಲಿ-ಬೆಳ್ತಂಗಡಿಯ ವಿವೇಕ್ ವಿನ್ಸೆಂಟ್ ಪಾಯಿಸ್, ಸಮಾಜ ಸೇವೆಯಲ್ಲಿ- ಮಂಗಳೂರಿನ ಕೆ. ರಾಮ ಮೊಗರೋಡಿ, ಸಮಾಜ ಸೇವೆಯಲ್ಲಿ […]

ಗುದದ್ವಾರದೊಳಗೆ ಇಟ್ಟು ಚಿನ್ನ ಸಾಗಾಟ, ಓರ್ವ ವ್ಯಕ್ತಿಯ ಬಂಧನ

Saturday, October 30th, 2021
Gold siezed

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದದ್ವಾರದೊಳಗೆ  ಇಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಈತ ದೇಹದೊಳಗೆ ಮರೆಮಾಚಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಪಾಸಣೆ ವೇಳೆ ಈತನ ಬಳಿ 663 ಗ್ರಾಂ ತೂಕದ 32,55,330 ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನ […]

ಸಾಂಪ್ರದಾಯಿಕ ವಸ್ತ್ರಧಾರಣೆಯ ವಿಚಾರದಲ್ಲಿ ಯನೆಪೊಯೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಒಡೆದಾಟ

Saturday, October 30th, 2021
Group Assult

ಮಂಗಳೂರು: ನಗರದ ಮೂಡುಬಿದಿರೆ ಯನೆಪೊಯೆ ಎಂಜಿನಿಯರಿಂಗ್ ಕಾಲೇಜಿನ ಎರಡು ತಂಡದ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಘಟನೆ ವೇಳೆ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ನಿನ್ನೆ ಕಾಲೇಜಿನಲ್ಲಿ ಸಾಂಪ್ರದಾಯಿಕ ವಸ್ತ್ರಧಾರಣೆಯ ವಿಚಾರದಲ್ಲಿ ಪೂರ್ವ ತಯಾರಿ ನಡೆದಿತ್ತು. ಇದೇ ವಸ್ತ್ರದ ವಿಚಾರದಲ್ಲಿ ಒಂದು ತಂಡದ ವಿದ್ಯಾರ್ಥಿಗಳು ಮತ್ತೊಂದು ತಂಡದ […]

ನಂದಿನಿ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ಉಚಿತ ಸೇವೆ ನೀಡಿದ್ದ ಪುನೀತ್ ರಾಜ್ ಕುಮಾರ್

Friday, October 29th, 2021
Nandini Puneeth

ಮಂಗಳೂರು : ಕರ್ನಾಟಕದ ರಾಜ್ಯದ ಜನಪ್ರಿಯ ಚಲನಚಿತ್ರ ನಟರಾದ ಪುನೀತ್ ರಾಜ್ ಕುಮಾರ್ ರವರ ಅಕಾಲಿಕವಾಗಿ ವಿಧಿವಶವಾಗಿರುವುದು ಹೈನುಗಾರರಿಗೆ ಅಪಾರವಾದ ದು:ಖವನ್ನು ತಂದಿದೆ. ಕರ್ನಾಟಕ ರಾಜ್ಯದ ನಾಡು ನುಡಿ, ಸಂಸ್ಕ್ರತಿಯ ಅಭಿವೃದ್ಧಿಗೆ ಸದಾ ಹೋರಾಟ ಮಾಡುತ್ತಿದ್ದು ವಿಶೇಷವಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಅಭಿವೃದ್ಧಿಗೆ ಅನುಕೂಲವಾಗುವಂತೆ ನಂದಿನಿ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿ ಉಚಿತ ಸೇವೆ ನೀಡುವ ಮೂಲಕ ಹೈನುಗಾರರಿಗೆ ಸೇವೆ ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಮೃತರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು […]

ತುಳುನಾಡು ರಾಜ್ಯ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತುಳುವೆರೆ ಪಕ್ಷದಿಂದ ಮನವಿ ಸಲ್ಲಿಕೆ

Friday, October 29th, 2021
Narendra Modi

ಮಂಗಳೂರು : ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತುಳು, ತಮಿಳ್, ತೆಲುಗು, ಕನ್ನಡ, ಮಲಯಾಲಂ ಇವುಗಳನ್ನು ಪಂಚ ದ್ರಾವಿಡ ಭಾಷೆಗಳೆನ್ನುತ್ತಾರೆ. ತುಳು ಭಾಷೆ ದ್ರಾವಿಡ ಮೂಲದಿಂದ ಸ್ವತಂತ್ರವಾದ ಅತ್ಯಂತ ಹಳೆಯ ಭಾಷೆಯಾಗಿದೆ ಎಂದು ಭಾಷಾ ತಜ್ಙರು ತಿಳಿಸಿದ್ದಾರೆ. ತುಳು ಭಾಷೆಯು ಸ್ವಂತ ಲಿಪಿಯನ್ನು ಹೊಂದಿದ್ದು ಸಾಹಿತ್ಯ ಕ್ಷೇತ್ರದಲ್ಲು ಸಮೃದ್ದವಾಗಿದೆ. ತುಳು ಲಿಪಿಯಲ್ಲಿ ಬರೆದಂತಹ ಗ್ರಂಥಗಳಿದ್ದು, ಶಿಲಾ ಶಾಸನಗಳು ಪತ್ತೆಯಾಗಿದೆ. ಸ್ವತಂತ್ರ ಭಾರತದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಲಂ ಭಾಷೆಗಳು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿ ರಾಷ್ಟ್ರೀಯ ಸ್ಥಾನಮಾನವು […]

ತಣ್ಣೀರುಬಾವಿ ತೀರದಲ್ಲಿ ಸಂಭ್ರಮದ ಲಕ್ಷ ಕಂಠಗಳ ಗೀತ ಗಾಯನ

Friday, October 29th, 2021
Geetha Gayana

ಮಂಗಳೂರು : ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಅ. 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಕನ್ನಡ ಭಾಷೆಯ ಮಹತ್ವ ಸಾರುವ ಲಕ್ಷ ಕಂಠಗಳ ಸಮೂಹ ಗೀತ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೀತಗಾಯನ ಕಾರ್ಯಕ್ರಮವನ್ನು ಡೊಂಗರಕೇರಿಯ ಕೆನರಾ ಪ್ರೌಢಶಾಲೆ, ಕೊಡಿಯಾಲ್ ಬೈಲ್‍ನ ಶಾರದ ವಿದ್ಯಾಲಯ, ಸುರತ್ಕಲ್‍ನ ಗೋವಿಂದ ದಾಸ್ ಪಿಯು ಕಾಲೇಜು, ರಥಬೀದಿಯ ಸರಕಾರಿ […]

ಕಾರ್ಕಳ ದ ವಿವಿಧೆಡೆ ಲಕ್ಷ ಕಂಠಗಳ ಗೀತ ಗಾಯನ

Thursday, October 28th, 2021
Geetha Gayana

ಕಾರ್ಕಳ : ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ವಿ ಸುನಿಲ್ ಕುಮಾರ್‌ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ವಿನೂತನ, ವಿಭಿನ್ನವಾದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಇಂದು ಕಾರ್ಕಳ ದಾದ್ಯಂತ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಮತ್ತು ಮಲ್ಪೆ ಕಡಲ ತೀರ ಸೇರಿದಂತೆ […]