ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ವೇಳಾಪಟ್ಟಿ ಪ್ರಕಟ

Wednesday, October 20th, 2021
kambala

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಸಿದ್ಧತೆ ನಡೆದಿದ್ದು ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನ.27ರಿಂದ 2020ರ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಕಂಬಳ ಮೂಡುಬಿದಿರೆಯಲ್ಲಿ ಹಾಗೂ ಕೊನೆಯ ಕಂಬಳ ವೇಣೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ. ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಬಾರಿ […]

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸ, ವಿಶ್ವ ಹಿಂದು ಪರಿಷತ್ ಪ್ರತಿಭಟನೆ

Wednesday, October 20th, 2021
VHP protest

ಮಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಿಖ್ಖರ ಮೇಲಿನ ದೌರ್ಜನ್ಯ, ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸವನ್ನು ಖಂಡಿಸಿ ವಿಶ್ವಹಿಂದು ಪರಿಷತ್ ವತಿಯಿಂದ  ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಬುಧವಾರ ಪ್ರತಿಭಟನೆ ನಡೆಯಿತು. ಮಲ್ಲಿಕಟ್ಟೆ ದ್ವಾರದ ಬಳಿ ಸೇರಿದ ನೂರಾರು ಕಾರ್ಯಕರ್ತರು ಬಾಂಗ್ಲಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಾಂಗ್ಲಾ ಸರಕಾರದ ನಡೆಯನ್ನು ಖಂಡಿಸಿದರು. ಅಲ್ಲದೆ ಕೆಲಹೊತ್ತು ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ […]

ಬಜರಂಗದಳ ಕಾರ್ಯಕರ್ತರು ಸುಲಿಗೆ ಮಾಡುವವರು ಎಂದಿದ್ದಕ್ಕೆ ಐವನ್ ಮನೆಗೆ ಮುತ್ತಿಗೆ ಯತ್ನ

Wednesday, October 20th, 2021
Bajrangdal

ಮಂಗಳೂರು : ಬಜರಂಗದಳದವರು ಕೇಸರಿ ಬಟ್ಟೆ ಹಾಕಿ ಅನೈತಿಕ ವರ್ತನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಕೇಸರಿ ಬಟ್ಟೆ ಹಾಕಿದ ಬಜರಂಗದಳ ಕಾರ್ಯಕರ್ತರು ಸುಲಿಗೆ ಮಾಡುವವರು, ಸಮಾಜದ್ರೋಹಿಗಳು ಎಂದು ಇತ್ತೀಚೆಗೆ ಐವನ್ ಹೇಳಿಕೆ ನೀಡಿದ್ದರೆನ್ನಲಾಗಿದೆ. ಆ ಹೇಳಿಕೆಯನ್ನು ಖಂಡಿಸಿ ಬಜರಂಗದಳದಿಂದ ಐವನ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪಾಂಡೇಶ್ವರ ಪೊಲೀಸರು ತಡೆದರು. ಐವನ್ ಡಿಸೋಜ ಹಾವೇರಿ ಜಿಲ್ಲೆಯ ಹಾನಗಲ್ […]

ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

Wednesday, October 20th, 2021
Baby Girl

ಬಂಟ್ವಾಳ : ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಆಂಬ್ಯುಲೆನ್ಸ್ ನಲ್ಲಿ ಮಗುವಿಗೆ  ಜನ್ಮ ನೀಡಿರುವ ಘಟನೆ ಬಂಟ್ವಾಳದ ಫರಂಗಿಪೇಟೆಯ ಸಮೀಪ ನಡೆದಿದೆ. ಅನಂತಾಡಿ ನಿವಾಸಿ ಸಂದೀಪ್ ಅವರ ಪತ್ನಿ ಸುಪ್ರಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ನಿವಾಸಿ ಗರ್ಭಿಣಿಯಾಗಿದ್ದ ಸುಪ್ರಿತಾ ಅವರನ್ನು ಹೆರಿಗೆಗಾಗಿ 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಫರಂಗಿಪೇಟೆಯ ಸಮೀಪ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾಣಿ ವ್ಯಾಪ್ತಿಯ 108 ಆ್ಯಂಬುಲೆನ್ಸ್ ಮೂಲಕ […]

ಪೊಲೀಸರಿಗೆ ದೂರು ನೀಡಿದಕ್ಕೆ ಗ್ಯಾಸ್ ರಿಪೇರಿ ಅಂಗಡಿ ಮಾಲೀಕನನ್ನು ಚೂರಿಯಿಂದ ಇರಿದ ವ್ಯಕ್ತಿ

Tuesday, October 19th, 2021
Harish Ganiga

ಉಳ್ಳಾಲ: ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಕೋಪದಲ್ಲಿ ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಘಟನೆ ಉಳ್ಳಾಲದಲ್ಲಿ ಮಂಗಳವಾರ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಕರಾಟೆ ಶಿಕ್ಷಕ ಉಳಿಯ ನಿವಾಸಿ ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಹರೀಶ್ ಗಾಣಿಗ (42) ಎಂದು ಗುರುತಿಸಲಾಗಿದೆ. ಉಳಿಯ ನಿವಾಸಿ ವಿಶಾಲ್ ಚೂರಿಯಿಂದ ಇರಿದ ಆರೋಪಿ ಎಂದು ತಿಳಿದುಬಂದಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಹರೀಶ್ ಗಾಣಿಗ ಅವರ ಜೊತೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ವಿಶಾಲ್ ಗಲಾಟೆ ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ […]

ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಜಿಹಾದಿ ದಾಳಿಯ ವಿರುದ್ಧ 15 ರಾಜ್ಯಗಳಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ; 137 ಸ್ಥಳಗಳಲ್ಲಿ ಸರಕಾರಕ್ಕೆ ಮನವಿ !

Tuesday, October 19th, 2021
HJJ

ಮಂಗಳೂರು : ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಜಿಹಾದಿ ದಾಳಿಯ ವಿರುದ್ಧ ಭಾರತ ಮತ್ತು ಬಾಂಗ್ಲಾದೇಶದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಆಂದೋಲನಗಳನ್ನು ನಡೆಸಿತು. ಇದರಲ್ಲಿ ಜಿಹಾದಿ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಯಾಗಬೇಕು, ಎಂಬ ಬೇಡಿಕೆಗಾಗಿ ಬಾಂಗ್ಲಾದೇಶ, ಅದೇರೀತಿ ಭಾರತದ ನವದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಗೋವಾ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮಗಳಲ್ಲಿ ಬಂಗಾಳ, ಮೇಘಾಲಯ, ಅಸ್ಸಾಂ ಮತ್ತು ತ್ರಿಪುರಾ, ಒಡಿಶಾ ಈ 15 ರಾಜ್ಯಗಳಲ್ಲಿನ ಹಿಂದೂಗಳು ಭಾಗವಹಿಸಿದ್ದರು. […]

ಮಾಸಾವಧಿಯ ಯೋಗ ಶಿಬಿರ ಸಮಾರೋಪ

Tuesday, October 19th, 2021
Yoga

ಮಂಗಳೂರು : ಜವಾಹರ್ ನವೋದಯ ವಿದ್ಯಾಲಯ, ಮುಡಿಪು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗಗಳು ಜಂಟಿಯಾಗಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ತಿಂಗಳಾವಧಿಯ ಯೋಗ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸೂಕ್ತ ಮನೋಭಾವ, ಶಿಸ್ತುಬದ್ಧ ಜೀವನ ಅಗತ್ಯ. ಇದನ್ನು ಸಾಧಿಸಲು ಯೋಗ ಸಹಕಾರಿ, ಎಂದರು. ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ಕೃಷ್ಣ ಶರ್ಮ, […]

ಕಣ್ಣಿಗೆ ಬಟ್ಟೆ ಕಟ್ಟಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೃದ್ಧ

Monday, October 18th, 2021
Muthappa Shetty

ಉಪ್ಪಿನಂಗಡಿ : ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೃದ್ಧನೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಗೇರುಕಟ್ಟೆಯ ಪರಪ್ಪು ನಿವಾಸಿ ಮುತ್ತಪ್ಪ ಶೆಟ್ಟಿ (70) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ ಬಂದು ನೇತ್ರಾವತಿ ನದಿ ಸೇತುವೆ ಮೇಲಿಂದ ಮುತ್ತಪ್ಪ ಹಾರಿದ್ದಾರೆ. ತಕ್ಷಣ ಸ್ಥಳೀಯ ನಿವಾಸಿಗಳು ರಕ್ಷಣೆಗಾಗಿ ನದಿಗೆ ಹಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು […]

ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭ

Monday, October 18th, 2021
school re open

ಮಂಗಳೂರು : ಕೊರೋನಾ ಮಹಾಮಾರಿಯಿಂದ ಮುಚ್ಚಲಾಗಿದ್ದ ಶಾಲೆಗಳ ಆರಂಭ ಕ್ರಮವಾಗಿ ನಡೆಯುತ್ತಿದ್ದು ಇದೀಗ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಶಾಲೆ ಆರಂಭ ಆಗಲಿದೆ. ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ್ದರಿಂದ ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಇನ್ನು ಶಾಲೆಗಳ ಆರಂಭ ಕುರಿತಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯ. ಮಕ್ಕಳಿಗೆ ಶಾಲೆ ಹಾಜರಾತಿ ಕಡ್ಡಾಯವಿಲ್ಲ. ಶಿಕ್ಷಕರು ಮತ್ತು […]

ಮೀನಿನ ಖಾದ್ಯ ಕಿರು ಉದ್ದಿಮೆಗಳಿಗೆ 10 ಲಕ್ಷ ಸಹಾಯಧನ

Monday, October 18th, 2021
Fish chatni

ಮಂಗಳೂರು : ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಕಾರ್ಯಕ್ರಮದಡಿ ವೈಯಕ್ತಿಕ ಕಿರು ಉದ್ದಿಮೆಗಳಿಗೆ 10 ಲಕ್ಷ ರೂ.ಗಳ ಸಹಾಯಧನ ಪಡೆಯಲು ಅವಕಾಶವಿದೆ. ಯೋಜನೆಯಡಿ ಮೀನಿನ ಖಾದ್ಯಗಳಾದ ಚಟ್ನಿ ಪುಡಿ, ಉಪ್ಪಿನಕಾಯಿ, ಚಕ್ಕುಲಿ, ಸೆಂಡಿಗೆ, ಚಿಪ್ಸ್, ರೋಟಿ, ಇತ್ಯಾದಿಗಳನ್ನು ತಯಾರಿಸುವುದು, ಮೀನನ್ನು ಭಾಗಗಳಾಗಿ ಮಾಡಿ ಫಿಲ್ಲೆಟ್ಸ, ಸ್ಟೀಕ್ಸ್ ಮಾದರಿಯಲ್ಲಿ ಶೀತಲೀಕರಿಸಿ, ಮಾರಾಟ ಮಾಡುವುದು, ಮೀನನ್ನು ಉಪ್ಪು ಹಾಕಿ ಅಥವಾ ಉಪ್ಪಿಲ್ಲದೇ ಆಧುನಿಕ ರೀತಿಯಲ್ಲಿ ಒಣಗಿಸುವುದು ಹಾಗೂ ಇವುಗಳನ್ನು ಆಕರ್ಷಕ […]