ಗಿಲ್ ನೆಟ್ ಬೋಟ್ ನಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Monday, September 13th, 2021
Azar Boat

ಮಂಗಳೂರು, : ಪಣಂಬೂರು ಸಮುದ್ರ ತೀರದಲ್ಲಿ ಸೆ.11 ರಂದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹವು ತಣ್ಣೀರುಬಾವಿ ಬೀಚ್ ಭಾನುವಾರ ರಾತ್ರಿ ವೇಳೆ ಪತ್ತೆಯಾಗಿದೆ. ನಾಪತ್ತೆಯಾಗಿದ್ದ  ಕಸಬಾ ಬೆಂಗರೆ ನಿವಾಸಿ ಮುಹಮ್ಮದ್ ಶರೀಫ್ (35) ಎಂಬ ಮೀನುಗಾರನ  ಮೃತದೇಹ ಪತ್ತೆಯಾಗಿದೆ. ಸೆ. 11 ರಂದು ಗಿಲ್ ನೆಟ್ ಬೋಟ್ ಮೀನುಗಾರಿಕೆಗೆ ತೆರಳುತ್ತಿರುವಾಗ ಅವಘಡ ಸಂಭವಿಸಿ ಮೀನುಗಾರರು ನೀರುಪಾಲಾಗಿದ್ದು ಈ ಪೈಕಿ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ಶರೀಫ್ […]

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ

Monday, September 13th, 2021
Oscar fernandise

ಮಂಗಳೂರು : ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.13 ರಂದು ನಿಧನರಾಗಿದ್ದಾರೆ. ಮನೆಯಲ್ಲಿ ಯೋಗ ಮಾಡುತ್ತಿರುವಾಗ ಕುಸಿದು ಬಿದ್ದು  ತಲೆಯ ಒಳಗೆ ರಕ್ತಸ್ರಾವವಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯಲು ವೈದ್ಯರು ಸರ್ಜರಿ ಮಾಡಿದ್ದರು. ಆ ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಾ.27, 1941 ರಲ್ಲಿ ಜನಿಸಿದ್ದ ಆಸ್ಕರ್ ಫರ್ನಾಂಡಿಸ್, ಐಎನ್ ಸಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅನುಭವವುಳ್ಳ ನಾಯಕರಾಗಿದ್ದರು. ಮಾಜಿ ಪ್ರಧಾನಿ ರಾಜೀವ್ […]

ಮಾಂಸ ತಿನ್ನುವ ಅಸೆ ತೋರಿಸಿ, ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

Monday, September 13th, 2021
Arif pasha

ಮಂಗಳೂರು  :  ಐದು ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ಮೂಲತ: ಬೆಂಗಳೂರು ಕಲಾಸಿಪಾಳ್ಯ ನಿವಾಸಿ ಸದ್ಯ ಕಲ್ಕಟ್ಟದಲ್ಲಿ ವಾಸಿಸುವ ಆರೀಫ್ ಪಾಷಾ(30) ಎಂದು ಗುರುತಿಸಲಾಗಿದೆ. ಆರೀಫ್ ಪಾಷಾ ಕೂಲಿ ಕಾರ್ಮಿಕನಾಗಿದ್ದಾನೆ. ಬಾಲಕಿ ತಂದೆಗೆ ಪರಿಚಿತನಾಗಿರುವ ಆರೋಪಿ ಆಕೆಗೆ ತಿನ್ನಲು ಮಾಂಸ ಕೊಡಿಸುವುದಾಗಿ ನಂಬಿಸಿ , ಮನೆಯಿಂದಲೇ ಕರೆತಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಓಡಿ […]

ಅನಾರೋಗ್ಯ ಪೀಡಿತರಿಗೆ ನೆರವಾಗಲು ಗಣೇಶೋತ್ಸವದಲ್ಲಿ ವೇಷ ಹಾಕಿದ ಯುವಕ

Sunday, September 12th, 2021
Dhanu Poojary

ಮಂಗಳೂರು: ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿದ ಯುವಕನೊಬ್ಬ ಅದರಿಂದ ಸಂಗ್ರವಾದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಮೂವರಿಗೆ ನೀಡಲು ಮುಂದಾಗಿದ್ದಾರೆ. ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ರೂ 26,994 ವನ್ನು ಮೂವರು ಅನಾರೋಗ್ಯ ಪೀಡಿತರಿಗೆ ನೀಡಲಿದ್ದಾರೆ. ಕಲಾವಿದರಾಗಿರುವ ಧನಂಜಯ(ಧನು) ಪೂಜಾರಿಯ ಸುರತ್ಕಲ್ ಆಪತ್ಬಾಂಧವ ಸಮಾಜ ಸೇವಾ ಸಂಘದ ಸದಸ್ಯರಾಗಿದ್ದಾರೆ.

ಕೊರಗರು ತಮ್ಮ ಕೀಳರಿಮೆ ಬಿಟ್ಟು ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು : ಸಚಿವ ಎಸ್.ಅಂಗಾರ

Sunday, September 12th, 2021
Angara

ಪುತ್ತೂರು  : ಸರಕಾರದ ಸೌಲ್ಯಭ್ಯಗಳಿಂದ ಇಂದಿಗೂ ವಂಚಿತರಾಗಿರುವ ಕೊರಗ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ಆಯಾಯ ತಾಲೂಕುಗಳಲ್ಲೇ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಬಂದರು, ಮೀನುಗಾರಿಕೆ, ಒಳನಾಡು ಮತ್ತು ಜಲಸಾರಿಗೆ ಸಚಿವ ಎಸ್.ಅಂಗಾರ ಮಾಹಿತಿ ನೀಡಿದರು. ಪುತ್ತೂರಿನಲ್ಲಿ ನಡೆದ ಕೊರಗ ಸಮುದಾಯದ ಮುಖಂಡರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಈ ಮಾಹಿತಿ ನೀಡಿದರು. ಕೊರಗ ಸಮುದಾಯಗಳು ಜಮೀನು ಹಕ್ಕು ಪತ್ರ, […]

ಭಜನೆ ಮಂಗಳವಾಗುತ್ತಿದ್ದಂತೆಯೇ ಹೃದಯಾಘಾತಕ್ಕೊಳಗಾದ ಭಜನಾಪಟು

Sunday, September 12th, 2021
Moohan Kodle

ಮಂಜೇಶ್ವರ : ಹೊಸಂಗಡಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ವಾರದ ಭಜನೆಯ ಮಂಗಳವಾಗುತ್ತಿದ್ದಂತೆಯೇ ಮೋಹನ್ ದಾಸ್ ಕೊಡ್ಡೆ (55) ಅವರು ಶನಿವಾರ ರಾತ್ರಿ  ಹೃದಯಾಘಾತಕ್ಕೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ  ವಿಧಿವಶರಾಗಿದ್ದಾರೆ. ಮಂಜೇಶ್ವರದ ಬಲ್ಲಂಗುಡೇಲು ನಿವಾಸಿಯಾಗಿರುವ ಅವರು ಅಲ್ಲೇ ಭಜನಾ ತಂಡವನ್ನು ರಚಿಸಿ ಹಲವಾರು ವಿದ್ಯಾರ್ಥಿಗಳನ್ನು ಸೇರಿಸಿ ತರಗತಿ ನಡೆಸುತ್ತಿದ್ದರು. ಮಂಜೇಶ್ವರ ಗಣೇಶೋತ್ಸವದಲ್ಲಿ ರಾತ್ರಿ ಹಗಲೆನ್ನದೆ ಅಹರ್ನಿಶಿ ಶ್ರಮಿಸಿದ್ದ ಅವರು ಅನೇಕ ಧಾರ್ಮಿಕ ಕೇಂದ್ರಗಳಲ್ಲಿ ಗುರುತಿಸಿಕೊಂಡಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯರಾಗಿದ್ದು, ಭಜನಾ ಸಂಕೀರ್ತನಾಕಾರರಾಗಿ, ಭಜನಾ ಸಂಘಟಕರಾಗಿ ಕನಿಲ ಶ್ರೀ ಭಗವತೀ […]

ಅದಾನಿ ಸಂಸ್ಥೆಯ ಹೆಸರು ತೆಗೆದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೊಸ ಬೋರ್ಡ್

Saturday, September 11th, 2021
Mangalore Airport

ಮಂಗಳೂರು : ಅದಾನಿ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದ ಅದಾನಿ ಏರ್ಪೋರ್ಟ್ ಹೆಸರು ತೆಗೆದು ಹಾಕಿ ಮತ್ತೆ ಎಲ್ಲಾ ಬೋರ್ಡ್ಗಳಲ್ಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಎಂದು ನಮೂದಿಸಿದೆ. ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಿ ಅದಾನಿ ಏರ್ಪೋರ್ಟ್ ಎಂದು ನಾಮಕರಣ ಮಾಡಿರುವುದರಿಂದ ಮುಂದೆ ಈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಯೇ ನಿರ್ಮಿಸಿದೆ ಎಂಬ ತಪ್ಪು ಅಭಿಪ್ರಾಯ ಬಿಂಬಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡಬೇಕಾಯಿತು. ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರಕಿದೆ. ಇದು ನಮಗೆ ಸಂತಸ ತಂದಿದೆ ಎಂದು […]

ಜನರ ಹಿತದೃಷ್ಟಿಯಿಂದ ಮಾಡಿದ ಸಾರ್ವಜನಿಕ ಆಸ್ತಿಯನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾರಾಟಕ್ಕಿಟ್ಟಿದೆ : ಖರ್ಗೆ

Saturday, September 11th, 2021
Karghe

ಮಂಗಳೂರು : ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರು 3.5 ಲಕ್ಷ ಕೋಟಿ ರೂ.ಗಳಿಗೆ ಅನೇಕ ಪಿಎಸ್‌ಯುಗಳನ್ನು ಮಾರಾಟ ಮಾಡಿದ್ದಾರೆ. ಬಿಜೆಪಿಯೊಂದಿಗೆ ನಿಕಟ ಸಂಪಂಧ ಹೊಂದಿರುವ ಕೆಲವು ಆಯ್ದ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಯನ್ನು ಇಂದು ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ನಾಲ್ಕು ವಿಮಾ ಕಂಪನಿಗಳನ್ನು ಹೂಡಿಕೆ ಹಿಂದೆಗೆದುಕೊಳ್ಳುವಿಕೆ ಯೋಜನೆಯಡಿ ತರುವ ತಿದ್ದುಪಡಿ ಮಸೂದಿಗೆ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದೆ. ಈ ವಿಮಾ ಕಂಪೆನಿಗಳಲ್ಲಿ 1 ಲಕ್ಷ ಖಾಯಂ ಉದ್ಯೋಗಿಗಳು ಹಾಗೂ 12 ಲಕ್ಷ ಪಿಗ್ಮಿ […]

ಅಮಾಯಕ ಹಿಂದುಗಳಿಗೆ ಆಮಿಷ ಒಡ್ಡಿ ಮತಾಂತರ ಸಹಿಸಲು ಸಾಧ್ಯವಿಲ್ಲ : ಕಾರ್ಕಳ ಬಿಜೆಪಿ

Saturday, September 11th, 2021
Pragathi Center

ಕಾರ್ಕಳ   : ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ನಡೆಸಿ ಮತಾಂತರ ಮಾಡುವ ಆರೋಪಗಳು ಕಾರ್ಕಳದ ವಿವಿಧೆಡೆ ಕಂಡು ಬರುತ್ತಿದೆ, ಇತ್ತೀಚೆಗೆ ಮಿಷನರಿಗಳ ಕುಕೃತ್ಯ ಮಿತಿಮೀರಿದ್ದು ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ನಡೆಸಿ ಹಿಂದೂಗಳ ಸಹನೆಯನ್ನ ಪರೀಕ್ಷೆಗೆ ಒಡ್ಡುತ್ತಿದ್ದಾರೆ. ಒಂದೆಡೆಯಲ್ಲಿ ಮತಾಂತರ ಮತ್ತೊಂದು ಕಡೆ ಗೋಕಳ್ಳತನ ಹಿಂದುಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತಿದೆ ಇದು ತಕ್ಷಣ ನಿಲ್ಲಬೇಕು ಇಲ್ಲವಾದಲ್ಲಿ, ಇಂತಹ ಕೃತ್ಯಗಳು ಮುಂದೆ ಸಾಮಾಜಿಕ ಅಶಾಂತಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಕೃತ್ಯಗಳನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಸಾಮಾಜಿಕ ಶಾಂತಿ ಕದಡುವ […]

ಕಲಾತ್ಮಕ ಉಮಾಮಹೇಶ್ವರ ಶಿಲ್ಪ ಪತ್ತೆ

Saturday, September 11th, 2021
Uma Maheshwara

ಉಡುಪಿ : ಜಿಲ್ಲೆಯ  ಬೈಂದೂರು ತಾಲೂಕಿನ ಮಾರಣಕಟ್ಟೆಯ ಸಂನ್ಯಾಸಿಬೆಟ್ಟಿನಲ್ಲಿ ಅತ್ಯಂತ ಕಲಾತ್ಮಕವಾದ ಉಮಾಮಹೇಶ್ವರ ಶಿಲ್ಪ ಪತ್ತೆಯಾಗಿದೆಯೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿಯವರು  ತಿಳಿಸಿದ್ದಾರೆ. ಕೇವಲ 9 ಸೆ.ಮೀ ಎತ್ತರ, 9 ಸೆ.ಮೀ. ಉದ್ದ ಮತ್ತು 4 ಸೆ.ಮೀ. ಅಗಲವಾಗಿರುವ ಈ ಕಿರು ಶಿಲ್ಪ , ತನ್ನ ಕಲಾತ್ಮಕತೆಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ. ಉಮಯಾ ಸಹ ದೇವೇಶ ನಂದಿವಾಹನ ಮೇವಚ ಎಂಬ ಉಕ್ತಿಯಂತೆ, ಉಮೆಯ […]