“ಎನ್ಎಸ್ಎಸ್ ಸ್ವಯಂಸೇವಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಅವಕಾಶ”

Friday, September 10th, 2021
NSS

ಮಂಗಳೂರು: ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್)ಯ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಘಟಕಗಳು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯುವ ದಿನಾಚರಣೆ- 2021 ನ್ನು ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದವು. ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕೊವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಇರುವ ಮಿತಿಯೊಳಗೆ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಅವರಲ್ಲಿನ […]

‘ದ್ರುವ ನಕ್ಷತ್ರ’ ಸಿನೆಮಾದ ಪ್ರಥಮ ಪೋಸ್ಟರ್ ಹೈದ್ರಾಬಾದ್ ನಲ್ಲಿ ಬಿಡುಗಡೆ

Friday, September 10th, 2021
Druva Nakshatra

ಮಂಗಳೂರು : ದಕ್ಷ ಕ್ರಿಯೇಷನ್ ರವರ ಪ್ರಥಮ ಸಿನೆಮಾ ‘ದ್ರುವ ನಕ್ಷತ್ರ’ ದ ಪ್ರಥಮ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಗುರುವಪ್ಪ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಹೈದ್ರಾಬಾದ್ ನ ಉಡುಪಿ ಉಪಹಾರ್ ಹೋಟೆಲ್ಸ್ ಆವರಣದಲ್ಲಿ ಶುಕ್ರವಾರ ನಡೆಯಿತು. ಪೋಸ್ಟರ್ ಬಿಡುಗಡೆಯನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬಹುಭಾಷಾ ನಟ ಸುಮನ್ ತಲ್ವಾರ್ ನೆರವೇರಿಸಿದರು ಈ ಸಂದರ್ಭ ಉದ್ಯಮಿ ಚೇತನ್ ಆನಂದ್ ಬೋಳಾರ್ ಹಾಗೂ ಚಿತ್ರದ ಸಹ ನಿರ್ಮಾಪಕ ಶರಣ್ ಕುಮಾರ್ ಎಸ್.  ಕದ್ರಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ಶರತ್ ಚಂದ್ರ […]

ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ

Friday, September 10th, 2021
sharavu-Temple

ಮಂಗಳೂರು : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಚೌತಿ ಪ್ರಯುಕ್ತ  ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆಯು  ಸೆಪ್ಟೆಂಬರ್ 10 ಶುಕ್ರವಾರ ನಡೆಯಿತು. ತಾ. 10-09-2021 ಶುಕ್ರವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ. ಬೆಳಿಗ್ಗೆ ಘಂಟೆ 8 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ, ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮ,  ಬೆಳಿಗ್ಗೆ ಘಂಟೆ 11:45 ಕ್ಕೆ ಮಹಾಗಣಪತಿ ಹೋಮದ ಪೂರ್ಣಾಹುತಿ,  ಬೆಳಿಗ್ಗೆ ಘಂಟೆ 12 :16 ಕ್ಕೆ 5000 ತೆಂಗಿನ […]

ಸಂಘನಿಕೇತನದಲ್ಲಿ 74ನೇ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ

Friday, September 10th, 2021
Sangha niketana

ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ 74ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ದಲ್ಲಿ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಜರಗ ಲಿರುವುದು . ಈ ಪ್ರಯುಕ್ತ ಶ್ರೀ ದೇವರ ಮ್ರಿತಿಕೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ಗುರುವಾರ ದಂದು ತರಲಾಯಿತು . ಶುಕ್ರವಾರ ಬೆಳೆಗ್ಗೆ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆಯು ದೀಪ ಬೆಳಗಿಸುವುದರ ಮುಖೇನ ಚಾಲನೆ ನೀಡಲಾಯಿತು. ಬಳಿಕ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನೆ , ಗಣಹೋಮ ರಾತ್ರಿ ಮೂಡಗಣಪತಿ ಸೇವೆ , ರಂಗ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ಸಡಲಿಕೆಯಾಗಲಿದೆ : ಶಾಸಕ ವೇದವ್ಯಾಸ್ ಕಾಮತ್

Thursday, September 9th, 2021
Vedavyas Kamath

ಮಂಗಳೂರು  : ಕೋವಿಡ್ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ಸಡಲಿಕೆಯಾಗಲಿದೆ. ಈ ವಾರದಿಂದಲೇ ಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತಿದ್ದ ಕೋವಿಡ್ ನಿಯಂತ್ರಿಸಲು ಹೇರಲಾಗಿದ್ದ ವಾರಾಂತ್ಯದ ಕರ್ಫ್ಯೂ ಸಡಿಲಗೊಳಿಸುವುದರಿಂದ ಸಾರ್ವಜನಿಕರ ಚಟುವಟಿಕೆಗಳಿಗೆ ಸಹಕಾರವಾಗಲಿದೆ. ಎಲ್ಲಾ ವರ್ಗದ ಜನರಿಗೂ ಸಹಕಾರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ. ವಾರಾಂತ್ಯದ ಕರ್ಫ್ಯೂ ಸಡಿಸಿದರೂ ಸಾರ್ವಜನಿಕರು ತಮ್ಮ ಆರೋಗ್ಯದ ಸುರಕ್ಷತಾ ದೃಷ್ಟಿಯಿಂದ ಜಾಗರೂಕರಾಗಿರಬೇಕು. ಮಾಸ್ಕ್ […]

ಸಂಘನಿಕೇತನ ದಲ್ಲಿ 74ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ

Thursday, September 9th, 2021
Sanghaniketana Ganapathi

ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ 74 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ದಲ್ಲಿ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಜರಗ ಲಿರುವುದು. ಈ ಪ್ರಯುಕ್ತ ಶ್ರೀ ದೇವರ ಮ್ರಿತಿಕೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ಗುರುವಾರದಂದು ತರಲಾಯಿತು. ಶುಕ್ರವಾರ ಬೆಳೆಗ್ಗೆ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆಯು ದೀಪ ಬೆಳಗಿಸುವುದರ ಮುಖೇನ ಚಾಲನೆ ನೀಡಲಾಗುವುದು ಬಳಿಕ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನೆ , ಗಣಹೋಮ ರಾತ್ರಿ ಮೂಡಗಣಪತಿ ಸೇವೆ , ರಂಗ ಪೂಜೆ ಬಳಿಕ […]

ಅಧಿಕಾರ ಪಡೆಯಲು ಮಾತ್ರ ಬಿಜೆಪಿ ಬಂದಿಲ್ಲ, ಬಲಿಷ್ಟ ಭಾರತದ ನಿರ್ಮಾಣಕ್ಕಾಗಿಯೇ ಬಿಜೆಪಿ : ಶಾಸಕ ರಾಜೇಶ್ ನಾಯ್ಕ್

Thursday, September 9th, 2021
Rajesh Naik

ಬಂಟ್ವಾಳ  : ಅಧಿಕಾರ ಪಡೆಯಲು ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಭಾರತೀಯ ಜೀವನ ಮೌಲ್ಯವನ್ನು , ಸಾರ್ವಭೌಮತ್ವ ವನ್ನು , ರಾಷ್ಟ್ರೀಯ ವಿಚಾರಗಳನ್ನು ಉಳಿಸುವ ಬೆಳೆಸುವ ಮೂಲಕ ಬಲಿಷ್ಟ ಭಾರತದ ನಿರ್ಮಾಣ ಕಾರ್ಯ ವೇ ಬಿಜೆಪಿ ಪಕ್ಷದ ತತ್ವವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ನೆಟ್ಲಮುಡ್ನೂರು ಗ್ರಾ.ಪಂ.ವ್ಯಾಪ್ತಿಯ 2 ಬೂತ್ ಗಳ ಅಧ್ಯಕ್ಷ ರುಗಳ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದ 6 ನೇ ದಿನದ ಕಾರ್ಯಕ್ರಮ ದಲ್ಲಿ ಅವರು […]

ಶ್ರೀ ಗಣೇಶನ ವಿಡಂಬನೆ ಮಾಡಿ ಅಥವಾ ಅದರ ಮೂಕಸಮ್ಮತಿ ಸೂಚಿಸಿ ಪಾಪದ ಪಾಲುದಾರರಾಗಬೇಡಿ !

Thursday, September 9th, 2021
Ganesha

ಮಂಗಳೂರು : ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಚಿತ್ರಕಾರರು ಮತ್ತು ಮೂರ್ತಿಕಾರರು ತಮ್ಮ ಕಲೆಯ ಮೂಲಕ ಶ್ರೀ ಗಣೇಶನ ಚಿತ್ರ ಮತ್ತು ಮೂರ್ತಿಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಬಿಸ್ಕಿಟ್, ಬೆಣ್ಣೆ, ಕ್ಯಾಡ್‌ಬರಿ, ಜೆಮ್ಸ್, ಚಾಕಲೇಟ್, ಚಿಕ್ಕಿ, ಕುರ್‌ಕುರೆ, ಮಸಾಲೆ, ಹೂವು, ಮಣ್ಣಿನ ಹಣತೆಗಳು, ಚಾಕ್, ಪೆನ್ಸಿಲ್, ಪ್ಲಾಸ್ಟಿಕ್ ತಟ್ಟೆ, ಇತ್ಯಾದಿ ವಿವಿಧ ವಸ್ತುಗಳಿಂದ ಮಾಡಿದ ಗಣೇಶಮೂರ್ತಿ ಹಾಗೂ ಬಾಹುಬಲಿ ಚಲನಚಿತ್ರದ ನಾಯಕ ಶಿವಲಿಂಗವನ್ನು ಹೆಗಲ ಮೇಲಿಟ್ಟುಕೊಂಡು ನಿಂತಿರುವ, ಕ್ರಿಕೇಟ್ ಆಡುವ, ನರ್ತಿಸುವ, ಇತ್ಯಾದಿ ಆಕಾರಗಳ ಗಣೇಶಮೂರ್ತಿಗಳಿಂದಾಗಿ […]

ನಾಳೆ ಹಬ್ಬಕ್ಕೆ ತಯಾರಾಗಿ ನಿಂತಿದೆ ಇಕೋ ಪ್ರೆಂಡ್ಲಿ ಬಣ್ಣದ ಗಣಪತಿಯ ಮಣ್ಣಿನ ವಿಗ್ರಹಗಳು

Thursday, September 9th, 2021
Ganapati

ಮಂಗಳೂರು : ಗಣೇಶ ವಿಗ್ರಹ ತಯಾರಿಯ ಕೆಲಸ ಮುಗಿದು ಹಬ್ಬ ಆಚರಿಸಲು ಗಣಪತಿಯ ಮಣ್ಣಿನ ವಿಗ್ರಹಗಳು ತಯಾರಾಗಿ ನಿಂತಿವೆ. ಮಂಗಳೂರಿನ ಮಣ್ಣಗುಡ್ಡದಲ್ಲಿರುವ ದಿವಂಗತ ಮೋಹನ್ ರಾಯರ ಕುಟುಂಬ ಕಳೆದ 92  ವರ್ಷಗಳಿಂದ ಮಣ್ಣಿನ ಗಣಪತಿಯ ವಿಗ್ರಹಗಳನ್ನು ಸಿದ್ದಗೊಳಿಸುತ್ತಿದೆ. 1929  ರಲ್ಲಿ ಮೋಹನ್ ರಾಯರು ಸುಮಾರು 70 ಗಣಪತಿ ವಿಗ್ರಹಗಳ ತಯಾರಿಯಿಂದ ಆರಂಭಗೊಂಡದ್ದು ಈಗ  230 ವಿಗ್ರಹಗಳ ವರೆಗೆ ತಲುಪಿದೆ. ಪ್ರಸಕ್ತ ಮೋಹನ್ ರಾಯರ ಮಕ್ಕಳಾದ ಪ್ರಭಾಕರ ರಾವ್, ಸುಧಾಕರ ರಾವ್, ರಾಮಚಂದ್ರ ರಾವ್ ವಿಗ್ರಹ ತಯಾರಿಯ ಕೆಲಸವನ್ನು ಮಾಡುತ್ತಿದ್ದಾರೆ. ವಿಗ್ರಹಕ್ಕೆ ಕಚ್ಚಾ […]

ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಸೇವಿಸಿ, ಡ್ರಿಂಕ್ಸ್ ಪಾರ್ಟಿ ಮಾಡಿದ್ದರು, ಚಾರ್ಜ್ ಶೀಟ್‌

Thursday, September 9th, 2021
Anushree

ಮಂಗಳೂರು  : ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ  ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದ ಖ್ಯಾತ ನಿರೂಪಕಿ ಅನುಶ್ರೀ ಹೆಸರು ಇದೀಗ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಕಿರುವ ಚಾರ್ಜ್ ಶೀಟ್‌ನಲ್ಲಿ ಅನುಶ್ರೀ ಹೆಸರು ಇದೆ. ‘’ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು’’ ಎಂದು ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿರುವುದು ಚಾರ್ಜ್ ಶೀಟ್‌ನಲ್ಲಿದೆ. ನಾನು ಸುಮಾರು 2007-08ರ ಸಮಯದಲ್ಲಿ ಬೆಂಗಳೂರಿನ ಒಂದು ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆಂಕರ್ ಆಗಿರುವ ಅನುಶ್ರೀ ಅವರಿಗೆ ಡ್ಯಾನ್ಸ್ […]