ಜಿಲ್ಲಾಡಳಿತದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವರ್ತಕರಿಗೆ ಜಿಲ್ಲಾಧಿಕಾರಿ ಸೂಚನೆ

Friday, September 3rd, 2021
KV Rajendra

ಮಂಗಳೂರು :  ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ವರ್ತಕರು ಪಾಲಿಸಬೇಕು, ಉಲ್ಲಂಘಿಸಿದ್ದಲ್ಲಿ, ಸೂಕ್ತ ಕ್ರಮ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಸೆಪ್ಟೆಂಬರ್ 3ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್, ಜಿಲ್ಲೆಯ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ […]

ಸಮುದ್ರದ ನೀರು, ಸಿಹಿ ನೀರಾಗಿಸುವ ಯಂತ್ರ ಅತ್ಯಂತ ಉಪಯುಕ್ತ: ಎಸ್. ಅಂಗಾರ

Friday, September 3rd, 2021
S Angara

ಮಂಗಳೂರು : ಸಮುದ್ರದಲ್ಲಿ ಆಳ ಹಾಗೂ ಒಳ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಸಮುದ್ರದಲ್ಲಿಯೇ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿಕೊಡುವ ಯಂತ್ರವು ಅತ್ಯಂತ ಉಪಯುಕ್ತವಾಗಿದೆ ಹಾಗೂ ಈ ಯತ್ನ ಯಶಸ್ವಿಯಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಬಣ್ಣಿಸಿದರು. ಅವರು ಸೆ.3ರ ಶುಕ್ರವಾರ ಸಮುದ್ರದ ಹಳೆ ಬಂದರು ಮಾರ್ಗದ ಮೂಲಕ ಬೆಂಗರೆಗೆ ತೆರಳುವ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು. ಆಸ್ಟ್ರೇಲಿಯಾ […]

ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಸಲು ವಿಹೆಚ್ ಪಿ ಮನವಿ

Friday, September 3rd, 2021
cow

ಮಂಗಳೂರು  : ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಸೂಚನೆಗೆ ಸ್ವಾಗತಿಸುತ್ತೇವೆ ಎಂದು  ವಿಶ್ವ ಹಿಂದು ಪರಿಷತ್ ಹೇಳಿದೆ. ಗೋಹತ್ಯೆ ಆರೋಪದಲ್ಲಿ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸುವ ವೇಳೆ ಅಲಹಾಬಾದ್ ಹೈಕೋರ್ಟ್ ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದೆ ಅಲ್ಲದೆ ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯಾದಾಗ ಇಡೀ ದೇಶ ದುರ್ಭಲವಾಗುತ್ತದೆ. […]

ವಾರಾಂತ್ಯದ ಕರ್ಫ್ಯೂ ರದ್ದುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

Friday, September 3rd, 2021
Bommai Kamath

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುಖ್ಯಮಂತ್ರಿ ಬಸವರಾಜು ಬೆಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖವಾಗಿ ಮಂಗಳೂರು ನಗರವು ವಾಣಿಜ್ಯ ವಹಿವಾಟುಗಳ ಕೇಂದ್ರ ಸ್ಥಾನವಾಗಿದೆ. ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವುದರಿಂದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ನಡೆಸಲು ಸಹಕಾರಿಯಾಗಲಿದೆ. ಕೈಗಾರಿಕೋದ್ಯಮ, ವೃತ್ತಿಪರ ನೌಕರರು, ದಿನಕೂಲಿ ಕೂಲಿ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಬಸ್ ನೌಕರರು, ಸಣ್ಣಪುಟ್ಟ ಉದ್ಯಮ ಸೇರಿದಂತೆ ಇನ್ನಿತರ ವರ್ಗದ […]

ಮಂಗಳೂರು : ದುಬೈಯಲ್ಲಿದ್ದ ಪತ್ನಿಗೆ ಉಗ್ರರ ನಂಟು, ಪತಿಯಿಂದ ಪೊಲೀಸರಿಗೆ ದೂರು

Thursday, September 2nd, 2021
chidananda

ಮಂಗಳೂರು : ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ವ್ಯಕ್ತಿಯೊಬ್ಬರು ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಂತೆ  ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ  ಚಿದಾನಂದ ಎಂಬವರು  ತನ್ನ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಇದ್ದು, ಸದ್ಯ ನಾಪತ್ತೆಯಾಗಿದ್ದಾಳೆ. ಈ ಹಿನ್ನೆಲೆ ದ.ಕ. ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಪತ್ನಿ‌ ರಾಜಿ ರಾಘವನ್ ಗೆ ಉಗ್ರ ಸಂಘಟನೆಯೊಂದಿಗೆ ನಂಟಿದೆ. ಕಳೆದ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾಳೆ. […]

ಮೊದಲ ಬಾರಿ ಕ್ರೀಡಾ ಗಾಯಗಳ ಚಿಕಿತ್ಸೆಗೆ ಒಪಿಡಿ ಆರಂಭಿಸಿದ ಕೆಎಂಸಿ ಹಾಸ್ಪಿಟಲ್

Thursday, September 2nd, 2021
kmc-sports

ಮಂಗಳೂರು : ಯಾವುದೇ ಕ್ರೀಡೆಗೆ ಸಂಬಂಧಿಸಿದ ಗಾಯಗಳಿಗೆ ಸಂಪೂರ್ಣ ಹಾಗೂ ಸಮಗ್ರ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಆರಂಭಿಸಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕ್ರೀಡಾ ಗಾಯಗಳು, ಆರ್ಥೋಪೆಡಿಕ್ಸ್, ಸೊಂಟ ಮತ್ತು ಮಂಡಿ ವಿಷೇಶತಜ್ಞ ಸರ್ಜನ್ ಆಗಿರುವ ಡಾ. ಯೋಗೇಶ್ ಕಾಮತ್ ಅವರು ಎಲ್ಲಾ ರೀತಿಯ ಕ್ರೀಡಾ ಸಂಬಂಧಿ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ವಿಭಾಗದ ಮುಖ್ಯಸ್ಥರ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಅಥ್ಲೀಟ್‍ಗಳಾಗಿರುವ ಶ್ರೀ ಚೆಲ್ಸಾ ಮೇದಪ್ಪ […]

ವೀಕೆಂಡ್ ಕರ್ಫ್ಯೂ ತೆರವುಗೊಳಿಸದಿದ್ದಲ್ಲಿ ಅಂಗಡಿ ತೆರದಿಟ್ಟು ಪ್ರತಿಭಟನೆ : ಜೋನ್ ಕುಟಿನ್ಹಾ

Thursday, September 2nd, 2021
Puttur Weekend curfew

ಪುತ್ತೂರು : ಜಿಲ್ಲಾಡಳಿತವು ವೀಕೆಂಡ್ ಕರ್ಫ್ಯೂ ತೆರವುಗೊಳಿಸದಿದ್ದಲ್ಲಿ ಶನಿವಾರ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟು ತೆರದಿಟ್ಟು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಎಚ್ಚರಿಸಿದ್ದಾರೆ. ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಂಜೆ 7ರ ಬಳಿಕ ನಡೆಯುವ ಅನೇಕ ಉದ್ಯಮಗಳಿವೆ. ಅಲ್ಲದೆ ಶನಿವಾರ ಮತ್ತು ರವಿವಾರ ಮಾತ್ರ ನಡೆಯುವ ಸಾಕಷ್ಟು ವ್ಯವಹಾರಗಳಿವೆ, ಆದರೆ ಕೊರೋನ ನಿರ್ನಾಮವಾಗಲು ಇನ್ನೂ ಹಲವು ವರ್ಷಗಳು ತಗಲಬಹುದು. ಇದಕ್ಕೆ ಲಾಕ್ಡೌನ್, […]

ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಪ್ರಗತಿ ಪರಿಶೀಲನೆ ಸಭೆ

Wednesday, September 1st, 2021
Highway meeting

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಪ್ರಗತಿ ಪರಿಶೀಲನೆ ಸಭೆ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧವಾರದಂದು ಜರಗಿತು. ಮೊದಲನೆಯದಾಗಿ ರಾಷ್ಟ್ರೀಯ ಹೆದ್ದಾರಿಯವರಿಂದ ಸಮಸ್ಯೆಗಳು ಎದುರಾಗುತ್ತಿರುವುದನ್ನು ಪಾಲಿಕೆಯ ಸದಸ್ಯರು ಮನದಟ್ಟು ಮಾಡಿದರು ಹಾಗೂ ಸದ್ರಿ ಇಲಾಖೆಯವರು ನಿವ೯ಹಿಸುವ ಕಾಮಗಾರಿಗಳು ಅಸಮದಾನಕರವಾಗಿರುವುದನ್ನು ಉಲ್ಲೇಖಿಸಿದರು. ಕುಂಟಿಕಾನ ಸವಿ೯ಸ್ ರಸ್ತೆಯ ಪೈಪ್ ಲೈನ್ ಕುರಿತು ಎತ್ತಿದ ಪ್ರಶ್ನೆಗೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸದ್ರಿ ಕಾಮಗಾರಿಯನ್ನು ಮಹಾನಗರಪಾಲಿಕೆಯ […]

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮಾ ರಾವ್ ಎಂ ಅಧಿಕಾರ ಸ್ವೀಕಾರ

Wednesday, September 1st, 2021
Kurma-Rao

ಉಡುಪಿ : ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮಾ ರಾವ್ ಎಂ. ಮಂಗಳವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೂರ್ಮಾ ರಾವ್, ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಲಾಗುವುದು ಮತ್ತು ಜಿಲ್ಲೆಯಲ್ಲಿ ಹೆಚ್ಚು ಪ್ರವಾಸ ಮಾಡವುದರೊಂದಿಗೆ ಕೆಳ ಹಂತದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅವರುಗಳ ಅವಶ್ಯಕತೆಗಳನ್ನು ಅರಿತು ಅವುಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು. ಉಡುಪಿ ಜಿಯಲ್ಲಿ ವಿಕೇಂಡ್ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರ ಪಾಲನೆ ಬಗ್ಗೆ ಎಲ್ಲರ […]

ಗೌರಿ ಲಂಕೇಶ ಹತ್ಯೆಯ ದೋಷಾರೋಪಿಗಳಿಗೆ ಕೋಕಾ ಕಾಯಿದೆ ಮತ್ತು ಹಿಂದೂ ಸಂಘಟಕರನ್ನು ಹತ್ಯೆ ಮಾಡಿದವರಿಗೆ ಜಾಮೀನು : ಪ್ರಮೋದ ಮುತಾಲಿಕ್

Wednesday, September 1st, 2021
Pramod Muthalika

ಮಂಗಳೂರು  : ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಅಮಾಯಕರು ಮತ್ತು ಅವರ ಹಿಂದೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ. ಇಂತಹ ಮುಗ್ಧ ಜನರ ಮೇಲೆ ಅನ್ಯಾಯವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಾಕುವ ಕೋಕಾ ಕಾಯಿದೆಗಳನ್ನು ಹಾಕಲಾಗಿದೆ. ಆದರೆ ನಿಜವಾಗಿ ಭಯೋತ್ಪಾದನೆ ಕೃತ್ಯ ಮಾಡುವ, ದಂಗೆ ಮಾಡುವ, ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಮತಾಂಧ ಪಿ.ಎಫ್.ಐ ಸಂಘಟನೆಯ ಮೇಲೆ ಕಠಿಣ ಕಾಯಿದೆ ಹಾಕದೇ ಇದ್ದ ಕಾರಣ ಅವರು ರಾಜಾರೋಷವಾಗಿ ತಿರುಗುತ್ತಿದ್ದಾರೆ. ಗೌರಿ ಪ್ರಕರಣದಲ್ಲಿ ವಿಶೇಷ ತನಿಖಾ ದಳ […]