ಕೊವಿಡ್‌ ನಡುವೆಯೂ ಮೊದಲ ದಿನ ಸಾಂಗವಾಗಿ ನಡೆದ ಪರೀಕ್ಷೆ

Monday, August 2nd, 2021
VV-Exam

ಮಂಗಳೂರು:  ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿದ್ದ ಪರೀಕ್ಷೆಗಳು ಆರಂಭವಾಗಿದ್ದು, ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು (ಆಗಸ್ಟ್‌ 2) 839 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ (ಬೆಳಗ್ಗೆ 456, ಮಧ್ಯಾಹ್ನ 383). ಪ್ರಥಮ ಬಿ.ಎ (36), ಬಿ.ಎಸ್ಸಿ (109), ಬಿ.ಕಾಂ (289), ತೃತೀಯ ಬಿಸಿಎ (12), ಅಂತಿಮ ಬಿ.ಎ (29), ಬಿ.ಎಸ್ಸಿ (127), ಬಿ. ಕಾಂ (224) ಮತ್ತು ಅಂತಿಮ ಬಿಬಿಎಂ (3) ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೊರೋನಾ- 19 ದಿಂದ ಪೀಡಿತವಾಗಿರುವ ಕೇರಳದ […]

ಮಲ್ಪೆ ಬೀಚ್‌ನಲ್ಲಿ ನಾಪತ್ತೆಯಾಗಿದ್ದ ಯುವತಿಯ ಮೃತ ದೇಹ ಪತ್ತೆ

Monday, August 2nd, 2021
Dejamma

ಮಲ್ಪೆ : ಮೈಸೂರಿನಿಂದ ಪ್ರವಾಸ ಬಂದಿದ್ದ ತಂಡದಲ್ಲಿ ಮಲ್ಪೆ ಬೀಚ್‌ನಲ್ಲಿ ರವಿವಾರ ನಾಪತ್ತೆಯಾಗಿದ್ದ ಯುವತಿಯ ಮೃತ ದೇಹ ಪತ್ತೆಯಾಗಿದೆ. ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ರವಿವಾರ ನಾಪತ್ತೆಯಾಗಿದ್ದರು. ಈಕೆಯ ಜೊತೆ ಇದ್ದ ಸ್ನೆಹಿತರಾದ ಮೈಸೂರು ವಿಜಯಪುರದ ಎಂ.ಯು.ಶೈನಿ(20), ನವ್ಯ ಮಂದಣ್ಣ (20), ನಿಖಿಲ್ ಗೌಡ (20) ಎಂಬವರನ್ನು ಸ್ಥಳೀಯರು ರಕ್ಷಿಸಿದ್ದರು. ಇವರಲ್ಲಿ ತೀವ್ರ ಅಸ್ವಸ್ಥಗೊಂಡ ನಿಖಿಲ್ ಗೌಡ ಉಡುಪಿ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ. ಇವರು  ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ ಜು.31ರಂದು ಮಧ್ಯಾಹ್ನ ಮಲ್ಪೆ […]

ರವಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು 410 ಕೊರೊನಾ ಸೋಂಕು ಪತ್ತೆ, 6 ಮಂದಿ ಸಾವು, ಉಡುಪಿ ಜಿಲ್ಲೆ 162

Sunday, August 1st, 2021
corona virus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ರವಿವಾರ ಪತ್ತೆಯಾದ ಕೇಸುಗಳ ಪಟ್ಟಿಯಲ್ಲಿ ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು (410) ಪಾಸಿಟಿವ್ ಪ್ರಕರಣ ವರದಿಯಾಗಿವೆ. ದ.ಕ. ಜಿಲ್ಲೆಯಲ್ಲಿ ರವಿವಾರ 410 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇದೇ ವೇಳೆ 6 ಮಂದಿ ಸಾವನ್ನಪ್ಪಿದ್ದು, 264 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,943 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 1,00,780 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 1,430 ಮಂದಿ ಸಾವನ್ನಪ್ಪಿದ್ದಾರೆ. 96,407 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು […]

ಮೈಸೂರಿನಿಂದ ಪ್ರವಾಸ ಬಂದಿದ್ದ ಯುವತಿ ಮಲ್ಪೆ ಬೀಚ್‌ನಲ್ಲಿ ನಾಪತ್ತೆ, ಮೂವರ ರಕ್ಷಣೆ

Sunday, August 1st, 2021
dejamma

ಮಲ್ಪೆ : ಮೈಸೂರಿನಿಂದ ಪ್ರವಾಸ ಬಂದಿದ್ದ ಯುವತಿಯೊಬ್ಬಳು ಮಲ್ಪೆ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಸಮುದ್ರ ಪಾಲಾಗಿದ್ದು, ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರ ನಡೆದಿದೆ. ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ನಾಪತ್ತೆಯಾಗಿರುವ ಯುವತಿ. ಈಕೆಯ ಜೊತೆ ಇದ್ದ ಸ್ನೆಹಿತರಾದ ಮೈಸೂರು ವಿಜಯಪುರದ ಎಂ.ಯು.ಶೈನಿ(20), ನವ್ಯ ಮಂದಣ್ಣ (20), ನಿಖಿಲ್ ಗೌಡ (20) ಎಂಬವರನ್ನು ರಕ್ಷಿಸಲಾಗಿದೆ. ಇವರಲ್ಲಿ ತೀವ್ರ ಅಸ್ವಸ್ಥಗೊಂಡ ನಿಖಿಲ್ ಗೌಡ ಉಡುಪಿ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ. ಇವರು  ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ ಜು.31ರಂದು […]

ಒಂದು ಕೋಟಿ ರೂ.ಗಳಷ್ಟು ನಷ್ಟ, ಬೈಕಂಪಾಡಿಯ ಕ್ಯಾಶು ಪ್ಯಾಕ್ಟರಿ ಮಾಲಕ ನಾಪತ್ತೆ

Sunday, August 1st, 2021
Ramanjaneya

ಮಂಗಳೂರು : ಬೈಕ್‌ನಲ್ಲಿ ಮನೆ ನೋಡಿಕೊಂಡು ಬರುವುದಾಗಿ ಹೇಳಿ ಹೋದ ಬೈಕಂಪಾಡಿಯ ಗೇರುಬೀಜ ಕಾರ್ಖಾನೆಯೊಂದರ ಮಾಲಕ ಹಿಂತಿರುಗದೆ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕಂಪಾಡಿಯ ಜೈ ಶ್ರೀ ರಾಮ ಲಕ್ಷ್ಮೀ ಕ್ಯಾಶುಸ್’ ಹೆಸರಿನ ಗೇರುಬೀಜ ಕಾರ್ಖಾನೆಯ ಮಾಲಕ ರಾಮಾಂಜನೇಯ ಡಿ. (41) ನಾಪತ್ತೆಯಾದವರು. ಇತ್ತೀಚೆಗೆ ಕಾರ್ಖಾನೆಯು ಸುಮಾರು ಒಂದು ಕೋಟಿ ರೂ.ಗಳಷ್ಟು ನಷ್ಟ ಹೊಂದಿದ್ದರಿಂದ ಬೇಸರ ಗೊಂಡಿದ್ದರು ಎನ್ನಲಾಗಿದೆ. ಜು.29ರಂದು ಅಪರಾಹ್ನ ಬೇರೊಂದು ಮನೆ ನೋಡಿಕೊಂಡು ಬರುವುದಾಗಿ ಹೇಳಿ ಬೈಕ್‌ನಲ್ಲಿ ಹೋದವರು ನಾಪತ್ತೆ ಯಾಗಿದ್ದಾರೆ ಎಂದು ಅವರ […]

ಕೋವಿಡ್ ಸೋಂಕು ನಿಯಂತ್ರಿಸಲು ಕಠಿಣಾತಿ ಕಠಿಣ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗಳ ಸೂಚನೆ

Sunday, August 1st, 2021
Basavaraaja Bommai

ಮಂಗಳೂರು : ಕೋವಿಡ್-19 ಸೋಂಕು ನಿರ್ವಹಣೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಉಪಯುಕ್ತ ಕ್ರಮಗಳಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರನ್ನು ಅಭಿನಂದಿಸಿದರು. ಕೋವಿಡ್‍ಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಂತ ಅಗತ್ಯವಿರುವ ಪ್ರಾಣವಾಯು ವೈದ್ಯಕೀಯ ಆಮ್ಲಜನಕದ 17 ಘಟಕಗಳು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, ಅವುಗಳಲ್ಲಿ ಈಗಾಗಲೇ 8 ಆಮ್ಲಜನಕ ಘಟಕಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದೆ, ಉಳಿದ ಘಟಕಗಳನ್ನು ಮುಂದಿನ 2 ವಾರಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಡಿಸಿ ಡಾ.ರಾಜೇಂದ್ರ ಅವರ ಕೆಲಸಕ್ಕೆ ಅತೀವ […]

ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ನಳೀನ್ ಕುಮಾರ್ ಕಟೀಲು

Sunday, August 1st, 2021
Kerala Bus

ಮಂಗಳೂರು : ನೆರೆಯ ಕೆರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯಿಂದ ಕಾಸರಗೋಡುಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ಆಗಸ್ಟ್ 1 ರಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಸಂಸದರಾದ ನಳೀನ್ ಕುಮಾರ್ ಕಟೀಲು ಅವರು ತಿಳಿಸಿದರು. ಅವರು ಜುಲೈ 31ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ಪಾಸಿಟಿವಿಟಿ ಪ್ರಕರಣಗಳು ಕಳೆದ ಕೆಲವು […]

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಸಬಿಹಾ ಭೂಮಿಗೌಡ ಅವರಿಗೆ ಬೀಳ್ಕೊಡುಗೆ

Saturday, July 31st, 2021
Sabiha bhoomi gowda

ಮಂಗಳೂರು : ತಮ್ಮ 38 ವರ್ಷಗಳ ಅಧ್ಯಾಪನ ವೃತ್ತಿಯಿಂದ ನಿವೃತ್ತರಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರಿಗೆ ಮಾತೃ ಸಂಸ್ಥೆಯಾದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಿಂದ ಶನಿವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕಳೆದ ವರ್ಷ ಕುಲಪತಿ ಹುದ್ದೆಯಿಂದ ನಿವೃತ್ತ ಪ್ರೊ. ಸಬಿಹಾ ತಮ್ಮ ಮಾತೃ ಸಂಸ್ಥೆ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬೋಧನೆ ಮುಂದುವರಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಅಧ್ಯಯನ ಸಂಸ್ಥೆಯ ಪ್ರಸ್ತುತಿಯಲ್ಲಿ ಚಂದ್ರಶೇಖರ್ ಎಂ. ಬಿ ಮತ್ತು ಮುಸ್ತಾಫ ಕೆ […]

ಸಹಕಾರಿ ಖಾತೆ ಸರಿಯಾದ ದಿಕ್ಕಿನಲ್ಲಿ ಸೂಕ್ತ ನಿರ್ಧಾರ: ಆರ್ಥಿಕ ತಜ್ಞ ಡಿ ಬಿ ಮೆಹ್ತಾ

Saturday, July 31st, 2021
mehta

ಮಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಅದೆಷ್ಟೋ ಸಹಕಾರಿ ಬ್ಯಾಂಕ್‌ಗಳು ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದ ನೆಲಕಚ್ಚಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಸಹಕಾರಿ ಖಾತೆ ಸರಿಯಾದ ದಿಕ್ಕಿನಲ್ಲಿ ಸೂಕ್ತ ನಿರ್ಧಾರ, ಎಂದು ಕ್ರೆಡಾಯ್‌ ಉಪಾಧ್ಯಕ್ಷ, ಆರ್ಥಿಕ ತಜ್ಞ ಸಿಎ ಡಿ ಬಿ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗ ಮತ್ತು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆ (ಮಂಗಳೂರು ವಿಭಾಗ) ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ “ಜಾಗತಿಕ ಸನ್ನಿವೇಶದಲ್ಲಿ ಭಾರತೀಯ ಆರ್ಥಿಕತೆ” ಎಂಬ […]

ಜನಜಾಗೃತಿ ವೇದಿಕೆ: ವಾರ್ಷಿಕ ವರದಿ ಬಿಡುಗಡೆ

Saturday, July 31st, 2021
dharmasthala

ಉಜಿರೆ: ಜನಜಾಗೃತಿ ವೇದಿಕೆಯ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಮತ್ತು ಪ್ರಾಕೃತಿಕ ದುರಂತಗಳು ಹಾಗೂ ನಿರ್ವಹಣೆ ಬಗ್ಯೆ ಮಾಹಿತಿ ಕೈಪಿಡಿಯನ್ನು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು. ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಸೇವಾ ಕಾರ್ಯ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಕೂಡಾ ಸ್ಥಳೀಯರ ಸಹಕಾರದೊಂದಿಗೆ ಉತ್ತಮವಾಗಿ ಮೂಡಿ ಬರುತ್ತಿವೆ. ಕೊರೊನಾದಿಂದಾಗಿ ಮದ್ಯವರ್ಜನ ಶಿಬಿರಗಳು […]