ನಟಿ ವಿನ್ನಿ ಫರ್ನಾಂಡಿಸ್‌ ಗೆ ಹೃದಯಾಘಾತ

Thursday, July 29th, 2021
Vinni - Fernandes

ಮಂಗಳೂರು : ಕನ್ನಡ, ತುಳು, ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್‌ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿನ್ನಿ ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪತಿ ವಿನ್ಸೆಂಟ್‌, ಮಕ್ಕಳಾದ ಪ್ರತಾಪ್‌, ಬಬಿತಾ ಅವರನ್ನು ಅಗಲಿದ್ದಾರೆ.    

ಪಾಣೆಮಂಗಳೂರು ಹೊಸ ಸೇತುವೆಯಲ್ಲಿ ಬೈಕ್ ಇಟ್ಟು, ನಾಪತ್ತೆಯಾದ ಯುವಕ

Thursday, July 29th, 2021
Bike

ಬಂಟ್ವಾಳ : ಮೊಬೈಲ್ ಆನ್ಲೈನ್ ಗೇಮ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದು ವ್ಯಕ್ತಿಯೊಬ್ಬ ಪಾಣೆಮಂಗಳೂರು ಹೊಸ ಸೇತುವೆಯಲ್ಲಿ ಬುಧವಾರ ಮಧ್ಯ ರಾತ್ರಿ ಬೈಕ್ ಚಾಲನೆಯಲ್ಲಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ. ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ನಾಪತ್ತೆಯಾದ ಯುವಕ. ಆತ ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.  ಬೈಕ್ ಪೊಲೀಸರ ವಶದಲ್ಲಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈತ ಸುಮಾರು 15 ದಿನಗಳ ಹಿಂದೆ ಇದೇ ರೀತಿ ನದಿಗೆ ಹಾರುವುದಕ್ಕೆ ಬೆಂಗಳೂರಿನಿಂದ […]

ಸಿದ್ಧಕಟ್ಟೆ: ಪತ್ರಿಕಾ ದಿನಾಚರಣೆ, ಸನ್ಮಾನ

Wednesday, July 28th, 2021
Rotary-Club

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಇವರನ್ನು ಸನ್ಮಾನಿಸಿ ಗೌರವಿಸಿದರು. ರೋಟರಿ ಕ್ಲಬ್ಬಿನ ಅಧ್ಯಕ್ಷ ಮೈಕೆಲ್ ಡಿಕೋಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ, ಶಿಕ್ಷಕ ರಾಜೇಶ ನೆಲ್ಯಾಡಿ ಶುಭ ಹಾರೈಸಿದರು. ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಮತ್ತಿತರರು ಇದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ ಸ್ವಾಗತಿಸಿ, ವಂದಿಸಿದರು.

ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ, ಪೊಲೀಸರಿಗೆ ದೂರು

Wednesday, July 28th, 2021
Transgender

ಮಂಗಳೂರು: ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಮಂಗಳೂರು ಮೂಲದ ಮಂಗಳಮುಖಿಯರು ಮತ್ತು ಹೊರಜಿಲ್ಲೆಗಳಿಂದ ಮಂಗಳೂರಿಗೆ ಬಂದವರ ನಡುವೆ ಹೊಡೆದಾಟ ನಡೆದಿದೆ. ಪಣಂಬೂರು ಠಾಣೆಯಲ್ಲಿ ಎರಡು ತಂಡಗಳಿಂದ ದೂರು, ಪ್ರತಿದೂರು ದಾಖಲಾಗಿದೆ. ನಗರದ ಬೈಕಂಪಾಡಿಯ ರೈಲ್ವೆ ಗೇಟ್ ಸಮೀಪ ಎರಡು ಗುಂಪಿನ ನಡುವೆ ಘರ್ಷಣೆ ನಡೆದು ಒಂದು ಗುಂಪು ಪಣಂಬೂರು ಠಾಣೆಯಲ್ಲಿ ದೂರು ನೀಡಿತ್ತು. ಇದೀಗ ಮತ್ತೊಂದು ಗುಂಪಿನವರು ಸಹ ದೂರು ನೀಡಿದ್ದಾರೆ. ಮಂಗಳೂರು ಮೂಲದ ಮಂಗಳಮುಖಿಯರು ಹೊರಜಿಲ್ಲೆಯಿಂದ ಬಂದಿರುವ ಮಂಗಳಮುಖಿಯರಿಗೆ ನಗರದಿಂದ ತೆರಳಬೇಕು ಎಂದು […]

ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆ ಚಾಟ್ ಮಾಡಿದ ಹೆಡ್‌ಕಾನ್‌ಸ್ಟೇಬಲ್ ಬಂಧನ

Wednesday, July 28th, 2021
N Shashikumar

ಮಂಗಳೂರು : ಠಾಣೆಗೆ ದೂರು ಕೊಡಲು ಬಂದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೊಬೈಲ್ ನಂಬರ್ ಪಡೆದು  ಆಕೆಯ ಜತೆ ಮೊಬೈಲ್ ಫೋನ್ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನೀಡಲಾದ ದೂರಿನ ಮೇರೆಗೆ ಮಂಗಳೂರು ನಗರ ಠಾಣೆಯೊಂದರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ನಗರದ ಪೊಲೀಸ್ ಠಾಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೋಷಕರ ಜತೆ ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್ ಸಂಖ್ಯೆಯನ್ನು ಪಡೆದ ಠಾಣೆಯ ಹೆಡ್‌ಕಾನ್‌ಸ್ಟೇಬಲ್ […]

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಜುಲೈ 15, 2021 ಸಂಚಿಕೆ ಓದಿ

Wednesday, July 28th, 2021
July 15,2021Front

ಇಲ್ಲಿ ಕ್ಲಿಕ್ ಮಾಡಿ  ಮಂಗಳೂರು : ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆ ಜುಲೈ 15  2021ರ ಸಂಚಿಕೆ ಆನ್ ಲೈನ್ ನಲ್ಲೂ ಲಭ್ಯ. ಪತ್ರಿಕೆಯನ್ನು ಓದಲು ಮೇಲಿನ ಲಿಂಕನ್ನು ಬಳಸಿ. *ಮುಖ್ಯಾಂಶಗಳು* 🔴 ವರ್ಷದ ಮೊದಲೇ ತುಕ್ಕು ಹಿಡಿಯಲಾರಂಭಿಸಿದ ನೇತ್ರಾವತಿ ಸೇತುವೆ ತಡೆ ಬೇಲಿ 🔴 ದೈವದ ಪಾತ್ರಿ ಮತ್ತು ಗಡಿ ಹಿಡಿದವರನ್ನು ಹೊರತುಪಡಿಸಿ ಇತರರು ದೈವದ ಕಡ್ಸಲೆಯನ್ನು ಹಿಡಿಯುವಂತಿಲ್ಲ. 🔴 ಪತಿ ರಾಮಕೃಷ್ಣನಿಗೆ ಇದ್ದ ಅಕ್ರಮ ಸಂಬಂಧವೇ ವಿಶಾಲ ಗಾಣಿಗ ಹತ್ಯೆಗೆ ಕಾರಣ 🔴 […]

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ರಾಗಿ ಶ್ರೀ ನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧ ಆಯ್ಕೆ

Tuesday, July 27th, 2021
Press Housing Board

ಮಂಗಳೂರು : ಪತ್ರಕ ರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ.ಎಂ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು. ಸಂಘದ ನಿರ್ದೇಶಕರಾದ ಕೇಶವ ಕುಂದರ್ ,ಪುಷ್ಪರಾಜ್ ಬಿ.ಎನ್,ಇಬ್ರಾಹಿಂ ಅಡ್ಕಸ್ಥಳ,ಆರಿಫ್ ಪಡುಬಿದ್ರೆ,ಜಿತೇಂದ್ರ ಕುಂದೇಶ್ವರ,ಆತ್ಮ ಭೂಷಣ್ ಭಟ್, ಸತ್ಯವತಿ, ಕೆ.ವಿಲ್ ಫ್ರೆಡ್ ಡಿ ಸೋಜ, […]

ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ ಪುತ್ತೂರಿನ ವ್ಯಕ್ತಿ ಮುಂಬಯಿಯಲ್ಲಿ ಮೃತ : ಗುರುತು ಪತ್ತೆಗೆ ಮನವಿ

Tuesday, July 27th, 2021
Shashi Poojary

ಪುತ್ತೂರು/ಮುಂಬಯಿ : ಮುಂಬೈಯ ಬಾಂದ್ರಾ ಪೂರ್ವ(ಈಸ್ಟ್ )ನಲ್ಲಿ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ, ಅವಿವಾಹಿತ 55 ವರ್ಷ ಪ್ರಾಯದ, ಶಶಿ ಪೂಜಾರಿಯವರು ದಿನಾಂಕ 26-07-2021 ನೇ ಸೋಮವಾರ ರಾತ್ರಿ ಅಸುನೀಗಿರುತ್ತಾರೆ, ಇವರು ಸುಮಾರು 35 ವರ್ಷ ದಿಂದ ಮುಂಬಯಿಯಲ್ಲಿಯೇ ವಾಸವಾಗಿದ್ದರು, ಅವರ ಹುಟ್ಟೂರು ಪುತ್ತೂರಿನಲ್ಲಿ ಅಕ್ಕ ಮತ್ತು ತಮ್ಮ ಇದ್ದರೆಂದು ಶಶಿ ಪೂಜಾರಿಯವರು ಗೆಳೆಯರೊಂದಿಗೆ ಹೇಳುತ್ತಿದ್ದರು, ಇವರ ಪರಿಚಯ ಇದ್ದವರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಆದಷ್ಟು ಬೇಗ ಈ ಕೆಳಗೆ ಇರುವ […]

ಉದ್ಯೋಗ ಖಾತರಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ.ಗಳದ್ದು : ತಾ.ಪಂ. ಇಒ ನವೀನ್ ಭಂಡಾರಿ

Tuesday, July 27th, 2021
narega

ಪುತ್ತೂರು : ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪಂಚಾಯತ್ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯ. ಈ ಬಗ್ಗೆ ಗ್ರಾ.ಪಂ. ಮಟ್ಟದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಗ್ರಾ.ಪಂ. ಸದಸ್ಯರು ಮುತುವರ್ಜಿ ವಹಿಸಿದರೆ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ಯೋಜನೆಯಿಂದ ದೊರೆಯುವ ಸವಲತ್ತುಗಳನ್ನು ತಿಳಿಸಿ ಅಂಥವರಿಗೆ ತಲುಪಿಸುವ ಜವಾಬ್ದಾರಿ ಗ್ರಾ.ಪಂ. ಸದಸ್ಯರದ್ದು ಎಂದು ಪುತ್ತೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು. ಅವರು ಜು.27 ರಂದು ಪುತ್ತೂರು ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ತಾ.ಪಂ. ವತಿಯಿಂದ ಬನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಕೋಡಿಂಬಾಡಿ ಗ್ರಾಮ […]

ಆಸ್ಕರ್‌ ಫರ್ನಾಂಡಿಸ್‌ ಅವರ ಮಿದುಳಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತೆಗೆದ ವೈದ್ಯರ ತಂಡ

Tuesday, July 27th, 2021
Oscar Fernandese

ಮಂಗಳೂರು : ತೀವ್ರ ನಿಗಾ ಘಟಕದಲ್ಲಿ  ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸಿಗ ಆಸ್ಕರ್‌ ಫರ್ನಾಂಡಿಸ್‌ ಅವರ ಚಿಕಿತ್ಸೆ ಮುಂದುವರೆದಿದ್ದು ಮಂಗಳವಾರ ಮುಂಜಾನೆ ಯಶಸ್ವಿಯಾಗಿ ಶಸ್ತ್ರಕ್ರಿಯೆ ನಡೆಸಲಾಗಿದೆ. ನಗರದ ಖ್ಯಾತ ನ್ಯೂರೊ ಸರ್ಜನ್‌ ಡಾ.ಸುನಿಲ್‌ ಶೆಟ್ಟಿ ಹಾಗೂ ಅವರ ತಂಡ ಆಸ್ಕರ್‌  ಅವರ ಮಿದುಳಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆಯುವಲ್ಲಿ ಯಶಸ್ವಿಯಾಗಿದೆ. ಸೋಮವಾರ ಮಧ್ಯರಾತ್ರಿ 12.30 ರಿಂದಲೇ ಶಸ್ತ್ರಕ್ರಿಯೆ ಪ್ರಾರಂಭಿಸಿದ್ದು ಮಂಗಳವಾರ ಮುಂಜಾನೆ 4.40 ರ ವರೆಗೂ ನಡೆದಿದೆ. ಕಾಂಗ್ರೆಸ್‌ ಮುಖಂಡರಾದ ಮಾಜಿ ಸಚಿವ ಬಿ.ರಮಾನಾಥ ರೈ, ಪ್ರತಾಪಚಂದ್ರ ಶೆಟ್ಟಿ, ವಿನಯ ಕುಮಾರ್‌ […]