ಕಸದರಾಶಿ ತುಂಬಿದ್ದ ಬ್ಲ್ಯಾಕ್ ಸ್ಪಾಟನ್ನು ಸ್ವಚ್ಛಗೊಳಿಸಿ “ಸೆಲ್ಫಿ ಸ್ಪಾಟ್” ಆಗಿ ಪರಿವರ್ತನೆ

Thursday, July 8th, 2021
Kodikal

ಮಂಗಳೂರು  : ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬ ನಾಗರಿಕರಲ್ಲಿ ಅರಿವಿರಬೇಕು ಸಾರ್ವಜನಿಕ ಸ್ಥಳದಲ್ಲಿ ಕೆಲವರು ಪ್ರತಿನಿತ್ಯ ಕಸವನ್ನು ಎಸೆದು ಬ್ಲ್ಯಾಕ್ ಸ್ಪಾಟನ್ನಾಗಿಸಿ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಅಂತಹ ಒಂದು ಸ್ಥಳವನ್ನು ಸ್ವಚ್ಛಗೊಳಿಸಿ ಸಮಾಜಕ್ಕೆ ಸುಂದರ ಸಂದೇಶಕೊಡುವ ಪರಿಸರ ಸಂರಕ್ಷಣೆಯ ವರ್ಣರಂಜಿತ ಚಿತ್ರ ಬಿಡಿಸಿ ಸೆಲ್ಫಿ ಸ್ಪಾಟಾಗಿ ಪರಿವರ್ತಿಸಲು ಮ.ನ.ಪಾ ಸದಸ್ಯ ಕಿರಣ್ ಕುಮಾರ್ ರವರೊಂದಿಗೆ ಕೈ ಜೋಡಿಸಿದ ಶ್ರೀ ನಾಗಬ್ರಹ್ಮ ತರುಣ ವೃಂದ(ರಿ.)ಕೋಡಿಕಲ್. ಹಾಗೂ”pixncil” ಎಂಬ ಖ್ಯಾತ ಕಲಾವಿದರ ತಂಡದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಮಂಗಳೂರು ಉತ್ತರ ಶಾಸಕ ಡಾ. […]

ಸಿಡಿಲು ಬಡಿದು ಮನೆಗೆ ಹಾನಿ, ಇಯರ್ ಫೋನ್ ಹಾಕಿ ಪಾಠಕೇಳುತ್ತಿದ್ದ ವಿದ್ಯಾರ್ಥಿನಿಗೆ ಆಘಾತ

Wednesday, July 7th, 2021
Bantwal Thunder

ಬಂಟ್ವಾಳ : ಸಿಡಿಲು ಬಡಿದು ಮನೆಗೆ ಹಾನಿಯಾಗಿ,  ಅಲ್ಲೇ  ಆನ್ಲೈನ್ ಕ್ಲಾಸ್ ನಲ್ಲಿದ್ದ ವಿದ್ಯಾರ್ಥಿನಿಯೊರ್ವಳು ಆಘಾತಕ್ಕೆ ಒಳಗಾದ  ಘಟನೆ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಕಲ್ಮಲೆ ನಿವಾಸಿ ರಘರಾಮ ಶೆಟ್ಟಿ ಅವರ ಮನೆಗೆ ಸಂಜೆ ವೇಳೆ ಸಿಡಿಲು ಬಡಿದು  ಮನೆಯ ಸಂಪೂರ್ಣ ಬಿರುಕುಬಿಟ್ಟಿದ್ದು, ವಿದ್ಯುತ್ ಮೀಟರ್ ಹಾಗೂ ವಯರ್ ಗಳು ಸಂಪೂರ್ಣ ಕೆಟ್ಟುಹೋಗಿದೆ. ಘಟನೆಯಿಂದ ಸುಮಾರು 1 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ರಘುರಾಮ ಅವರ ಮಗಳು ಪ್ರಜಿತ ಅವರಿಗೆ […]

ಒಂದೇ ಸ್ಥಳದಲ್ಲಿ ಇಬ್ಬರು ಮೃತ್ಯು, ಒಬ್ಬರು ಕೆರೆಯಲ್ಲಿ ಮುಳುಗಿದರೆ, ಇನ್ನೊಬ್ಬರಿಗೆ ಹೃದಯಾಘಾತ

Wednesday, July 7th, 2021
jokim

ಮಂಗಳೂರು : ಪಂಜಿಮೊಗರು ಸಮೀಪದ ಮಾಯಿಲ ಎಂಬಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಪತ್ನಿ ಮತ್ತು ಪುತ್ರನ ಎದುರಲ್ಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಪಂಜಿಮೊಗರು ಸಮೀಪದ ಅಂಬಿಕಾನಗರದ ನಿವಾಸಿ ಜೋಕಿಂ ಮಸ್ಕರೇನಸ್ (58) ಮೃತಪಟ್ಟ ಮೀನುಗಾರ. ಕೆರೆಯಲ್ಲಿ ಜೋಕಿಂ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರು. ತಕ್ಷಣ ಅಲ್ಲೇ ಇದ್ದ ಶೇಷಪ್ಪ (50) ಎಂಬವರು ಮಸ್ಕರೇನಸ್‌ರನ್ನು ರಕ್ಷಿಸಲು ಮುಂದಾದರು. ಆದರೆ ಈ ಆಘಾತದಿಂದ ಶೇಷಪ್ಪ […]

ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಡಾ. ಭಾರತಿ ಪ್ರಕಾಶ್‌

Wednesday, July 7th, 2021
Bharathi

ಮಂಗಳೂರು: ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ  2020-21 ಸಾಲಿನ ಅಧ್ಯಕ್ಷೆ ನಿರ್ಮಲಾ ಪೈ ಅವರು ನೂತನ ಅಧ್ಯಕ್ಷೆ, ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆಯೂ ಆಗಿರುವ ಡಾ. ಭಾರತಿ ಪ್ರಕಾಶ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಹಿಳೆಯರು ಸಮಾಜದಲ್ಲಿನ ವಿಲಕ್ಷಣಗಳನ್ನು ಎದುರಿಸುವಷ್ಟು ಬಲಶಾಲಿಯಾಗಬೇಕು ಎಂದರಲ್ಲದೆ ಇನ್ನರ್‌ ವೀಲ್‌ ಕ್ಲಬ್‌ನ ಹೊಸ ತಂಡವನ್ನು ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಮಂಗಳೂರು ಉತ್ತರದ ರೋಟರಿ ಕ್ಲಬ್‌ನ ಪಿಡಿಜಿ […]

ಲಾರಿ- ಬೈಕ್ ಮುಖಾಮುಖಿ ಢಿಕ್ಕಿ ಬ್ಯಾಂಕ್ ಉದ್ಯೋಗಿ ಮೃತ, ಲಾರಿ ನಿಲ್ಲಿಸದೆ ಪರಾರಿ

Wednesday, July 7th, 2021
Ganesh Naik

ಬಂಟ್ವಾಳ : ಲಾರಿ ಮತ್ತು ಬೈಕ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಪಾಣೆಮಂಗಳೂರಿನಲ್ಲಿ ಬುಧವಾರ ನಡೆದಿದೆ. ಮಂಚಿ ಗ್ರಾಮದ ನಿವಾಸಿ, ಬ್ಯಾಂಕ್ ಉದ್ಯೋಗಿ ಗಣೇಶ್ ನಾಯ್ಕ್ ಕಂಚಿಲ (54) ಮೃತಪಟ್ಟ ಬೈಕ್ ಸವಾರ. ಗಣೇಶ್ ನಾಯ್ಕ್ ಅವರು ಕರ್ನಾಟಕ ಬ್ಯಾಂಕ್ ಮಂಗಳೂರು ಬ್ರಾಂಚ್ ನಲ್ಲಿ ಉದ್ಯೋಗಿಯಾಗಿದ್ದು, ಇಂದು ಬೆಳಗ್ಗೆ ಬ್ಯಾಂಕ್ ಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಪಾಣೆಮಂಗಳೂರು ಸಮೀಪ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ […]

ನಿಟ್ಟೆ : ‘ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

Tuesday, July 6th, 2021
Vathsalya

ಕಾರ್ಕಳ   : ವಾತ್ಸಲ್ಯ ಮಕ್ಕಳ ಆರೋಗ್ಯ ತಪಸಣಾ ಶಿಬಿರವು ನಿಟ್ಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಕೋಟ್ಯಾನ್ ರವರು ನಿರ್ವಹಣೆಯಲ್ಲಿ ಶಾಸಕರ ಪಾತ್ರ ಮಹತ್ತರವಾದದ್ದು ಅವರ ಜನಪರ ಕಾಳಜಿ ಕ್ರಿಯಾಶೀಲ ಚಿಂತನೆಗಳು ಎರಡನೇ ಅಲೆಯನ್ನು ಸಮರ್ಪಕವಾಗಿ ಎದುರಿಸಿ ಯಶಸ್ಸನ್ನು ಸಾಧಿಸುವಲ್ಲಿ ಸಹಕಾರಿಯಾಗಿದೆ. ಮೂರನೆಯದಾಗಿ ನಡೆಸುತ್ತಿರುವ ಮಕ್ಕಳ ಆರೋಗ್ಯ ತಪಾಸಣಾ ಶಿಬಿರದ ‘ವಾತ್ಸಲ್ಯ’ ಹೆಸರೇ ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುತ್ತದೆ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ […]

ಆರು ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿ ಕೊಲೆಗೈದ ಕಮ್ಯುನಿಸ್ಟ್ ಪಾರ್ಟಿ ಕಾರ್ಯಕರ್ತ

Tuesday, July 6th, 2021
Arjun

ಕಾಸರಗೋಡು  :  ಆರು ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆಘಾತಕಾರಿ ಘಟನೆ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕ  ಅರ್ಜುನ್ (22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಕಳೆದ ಮೂರು ವರ್ಷಗಳಿಂದ ಬಾಲಕಿಗೆ ಸ್ವೀಟ್ ಕೊಡಿಸುವ ಅಮಿಷವೊಡ್ದಿ ಆಕೆಯನ್ನು ಭೇಟಿ ಮಾಡಿ ಅತ್ಯಾಚಾರವೆಸಗುತ್ತಿದ್ದ . ಅದೇ ರೀತಿ ಜೂನ್ 30ರಂದು ಆಕೆಯ ಮನೆಯ ಕೋಣೆಯೊಳಗೆ ಹೋದ ಆದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆ ವೇಳೆ ಬಾಲಕಿ ಮೂರ್ಛೆ ಹೋಗಿದ್ದಾಳೆ. […]

ಗಂಭೀರ ಗಾಯಗೊಂಡಿದ್ದ ಛಾಯಾಗ್ರಾಹಕ ಆಸ್ಪತ್ರೆಯಲ್ಲಿ ಸಾವು

Tuesday, July 6th, 2021
Ashok Shetty

ಕುಂದಾಪುರ : ದಾವಣಗೆರೆಯಲ್ಲಿ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರದ ಛಾಯಾಗ್ರಾಹಕ ಗಂಭೀರ ಗಾಯಗೊಂಡಿದ್ದು, ಇಂದು ಬೆಳ್ಳಗ್ಗೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರಗೊಂಡು ಮೃತಪಟ್ಟವರನ್ನು ಕುಂದಾಪುರದ ಹಿರಿಯ ಛಾಯಾಚಿತ್ರಗಾರ, ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆಯ ಮಾಜೀ ಅಧ್ಯಕ್ಷ, ಹಾಲೀ ಸಂಚಾಲಕ ಹೇರೂರು ಅಶೋಕ ಕುಮಾರ್ ಶೆಟ್ಟಿ(58) ಎಂದು ಗುರುತಿಸಲಾಗಿದೆ. ನಾವುಂದದಲ್ಲಿ ಮಾನಸ ಸ್ಟುಡಿಯೋ ಮಾಲಕರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ಎಂಬುವರ […]

ಈಗ ಸರ್ಕಾರ ನಡೆಸುತ್ತಿರುವವರಿಗೆ ಮೀನುಗಾರರ ನೋವು ಗೊತ್ತಿಲ್ಲ : ಡಿ.ಕೆ.ಶಿವಕುಮಾರ್

Tuesday, July 6th, 2021
DK Shivakumar

ಮಂಗಳೂರು: ಕರಾವಳಿಯಲ್ಲಿ ಮೀನುಗಾರರ ಬೆಂಬಲವನ್ನೂ ದೊಡ್ಡಮಟ್ಟದಲ್ಲಿ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಆದರೆ ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಸಮುದ್ರದ ಜತೆಗಿನ ಬದುಕಿನಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬದುಕುತ್ತಿರುವ ಸಮುದಾಯಕ್ಕೆ ಯಾವ ರೀತಿ ನೆರವಾಗಬಹುದು ಎಂದು ತಿಳಿಯಲು ಸ್ವತಃ ಬಂದಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಆಗ ಮೊಗವೀರರ ವಿವಿಧ ಸಾಲಗಳಿಗೆ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ಅವರು ಹೇಳಿದರು. ಸುಲ್ತಾನ್ ಬತ್ತೇರಿಯ ಬೋಳೂರು ಮೊಗವೀರ ಮಹಾಸಭಾ […]

ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

Tuesday, July 6th, 2021
Thawar-Chand-Gehlot

ಬೆಂಗಳೂರು:  ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ. ಈ ಮೂಲಕ ಕರ್ನಾಟಕದ 19ನೇ ರಾಜ್ಯಪಾಲರಾಗಿ ಗೆಹ್ಲೋಟ್ ಅಧಿಕಾರ ವಹಿಸಿಕೊಳ್ಳುವ ಮೂಲಕ ವಜುಬಾಯಿ ವಾಲಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಂಪುಟ ವಿಸ್ತರಣೆ ಸಂಬಂಧ ನಡೆಯಲಿರುವ ಬಹುನಿರೀಕ್ಷಿತ ಸಭೆಗೆ ಮುನ್ನ ರಾಜ್ಯಪಾಲರುಗಳ ನೇಮಕದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿದ ಅನುಭವ ಗೆಹ್ಲೋಟ್ ಅವರಿಗಿದೆ. ನರೇಂದ್ರ ಮೋದಿ […]