ಗುಳಿಗ ಸಾನಿಧ್ಯದಲ್ಲಿ ಚಪ್ಪಲಿ ಹಾಕಿದ ದುಷ್ಕರ್ಮಿಗಳು

Tuesday, April 6th, 2021
guligajja

ಮಂಗಳೂರು : ಗುಳಿಗ ಸಾನಿಧ್ಯದ ಕಟ್ಟೆಯ ಬಳಿ ಚಪ್ಪಲಿ ಹಾಕಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬ್ಲಪದವಿನಲ್ಲಿ ನಡೆದಿದೆ. ಮುಚ್ಚಿರಕಲ್ಲು ಗುಳಿಗ ಸಾನಿಧ್ಯದಲ್ಲಿ ಸೋಮವಾರ ಈ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದೆ. ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು, ಎಲ್ಲ ಧರ್ಮೀಯರು ಭಕ್ತಿಯಿಂದ ನಮಿಸಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಅನ್ಯಕೋಮಿನ ಯುವಕನೋರ್ವ ದುರಹಂಕಾರದಿಂದ ವಿಕೃತಿ ಮೆರೆದಿದ್ದು ಕೆಲವೇ ದಿವಸಗಳಲ್ಲಿ ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ […]

ಪಚ್ಚನಾಡಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕಕ್ಕೆ ನ್ಯಾಯಾಧೀಶೆ ಶೀಲಾ ಎ.ಜಿ ಭೇಟಿ

Tuesday, April 6th, 2021
pacchanady

ಮಂಗಳೂರು : ನಗರದ ಹೊರವಲಯದ ಪಚ್ಚನಾಡಿಯಲ್ಲಿರುವ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಕಿಗಾಹುತಿಯಾಗಿ ನಷ್ಟಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಭೇಟಿ ನೀಡಿ ಸಂಗ್ರಹಣೆಯಾಗಿರುವ ಕಸಕ್ಕೆ ಬೆಂಕಿ ಬಿದ್ದು ಸ್ಥಳೀಯರಿಗೆ ತೊಂದರೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ಈ […]

ಸುರತ್ಕಲ್‌ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ನಲ್ಲಿ ಕಾವಲುಗಾರನ ಶವ

Monday, April 5th, 2021
dredger

ಮಂಗಳೂರು : ಸುರತ್ಕಲ್‌ನ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ನಲ್ಲಿ ಕಾವಲುಗಾರನ ಶವ ಪತ್ತೆಯಾಗಿದೆ. ಸುರತ್ಕಲ್‌ನ ಗುಡ್ಡಗಾಡು ಕೊಪ್ಲ ಬಳಿಯ ಸಮುದ್ರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ಭಗವತಿ ಪ್ರೇಮ್ ನಲ್ಲಿ ಶವ ಪತ್ತೆಯಾಗಿದೆ. ಈ ಡ್ರಜ್ಜರ್ ಒಡೆಯಲು ಕಂಪನಿಯೊಂದು ಗುತ್ತಿಗೆ ಪಡೆದಿದೆ. ಇದನ್ನು ನೋಡಿಕೊಳ್ಳಲು ಕಾವಲುಗಾರರನ್ನು ನೇಮಿಸಲಾಗಿತ್ತು. ಈ ಕಾವಲುಗಾರರಲ್ಲಿ ಉತ್ತರ ಕರ್ನಾಟಕ ಮೂಲದ ಶಂಕರ್ (32) ಎಂಬುವರು ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಬೆಳಗ್ಗೆ ಡ್ರಜ್ಜರ್ನಲ್ಲಿ ಅವರ ಶವ ಪತ್ತೆಯಾಗಿದೆ. ಈ ಸಂಬಂಧ ಸುರತ್ಕಲ್ ಠಾಣಾ […]

ಶೋ ರೂಮ್​ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಆತ್ಮಹತ್ಯೆ

Monday, April 5th, 2021
deeksha

ಕಡಬ : ಶೋ ರೂಮ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡಬ ತಾಲೂಕಿನ ರೆಂಜಿಲಾಡಿ ಎಂಬಲ್ಲಿ ನಡೆದಿದೆ. ರೆಂಜಿಲಾಡಿ ಗ್ರಾಮದ ಹೊಸಮನೆ ನಿವಾಸಿ ಚೆನ್ನಪ್ಪ ಗೌಡ ಎಂಬುವವರ ಪುತ್ರಿ ಪುಷ್ಪಲತಾ ಯಾನೆ ದೀಕ್ಷಾ (25) ಮೃತ ಯುವತಿ. ಕಡಬದ ಶೋ ರೂಮ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ದೀಕ್ಷಾ, ತನ್ನ ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಬೆಂಕಿ, ಸುತ್ತಮುತ್ತಲಿನ ಪರಿಸರದಲ್ಲಿ ದಟ್ಟ ಹೊಗೆ

Monday, April 5th, 2021
pachanady

ಮಂಗಳೂರು: ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಆ ಪ್ರದೇಶದ ಸುತ್ತ ದಟ್ಟವಾದ ಹೊಗೆ ಕಂಡುಬಂತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಐದಾರು ಅಗ್ನಿಶಾಮಕ ವಾಹನಗಳಲ್ಲಿ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಭಾರತದ ಎಲ್ಲಾ ಮುಸ್ಲಿಮರ ಪೂವರ್ಜರು ಹಿಂದುಗಳೇ, ನಾವೆಲ್ಲರೂ ಹಿಂದೂಗಳ ಸಂತಾನ : ಮೌಲಾನಾ ತಾರೀಕ್ ಜಮೀಲ್

Saturday, April 3rd, 2021
maulana-tariq-jameel

ಪಾಕಿಸ್ತಾನದ ಪ್ರಖ್ಯಾತ ಮೌಲಾನಾ ಹಾಗು ಬಾಲಿವುಡ್‌ನ ಅಮೀರ್ ಖಾನ್‌ನ ಧಾರ್ಮಿಕ ಗುರು ಮೌಲಾನಾ ತಾರೀಕ್ ಜಮೀಲ್ ಮಾತನಾಡುತ್ತ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗು ಇತರ ದೇಶಗಳ ಎಲ್ಲಾ ಮುಸಲ್ಮಾನರೂ ಹಿಂದುಗಳ ಸಂತಾನವೇ ಆಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ತಾನು ಕೂಡ ಹಿಂದುಗಳ ಸಂತಾನ, ಹಿಂದುಗಳ ವಂಶಸ್ಥನೆಂದು ಘೋಷಿಸಿಕೊಂಡಿದ್ದು ತಾನು ಪ್ರಥ್ವಿರಾಜ್ ಚೌಹಾಣ್ ವಂಶಜನೆಂದೂ ಹೇಳಿಕೊಂಡಿದ್ದಾರೆ. ತಾರೀಕ್ ಜಮೀಲ್ ಮುಸಲ್ಮಾನರ ತುಂಬಿದ ಸಭೆಯಲ್ಲಿ ಇಸ್ಲಾಮಿಕ್ ಪ್ರವಚನ ನೀಡುತ್ತಿದ್ದರು, ಮಾತನಾಡುವ ಸಂದರ್ಭದಲ್ಲಿ ಅವರು ನಾವಂತೂ ಪೃಥ್ವಿರಾಜ್ ಚೌಹಾಣ್‌ನ ವಂಶಸ್ಥರೇ […]

ಕೆಳಗಿನ ಕುಂಜಾಡಿ ತರವಾಡು‌ ಮನೆಯಲ್ಲಿ ಏಪ್ರಿಲ್ 8 ಮತ್ತು 9ರಂದು ಧರ್ಮ ‌ನೇಮೋತ್ಸವ

Friday, April 2nd, 2021
Kunjady

ಮಂಗಳೂರು :  ಕೆಳಗಿನ ಕುಂಜಾಡಿ ತರವಾಡು‌ ಮನೆಯ ಧರ್ಮ ‌ನೇಮೋತ್ಸವ ಏಪ್ರಿಲ್ 8 ಮತ್ತು 9ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು  ಸುಮಾರು 6 ದಶಕಗಳಿಂದ ನಿಂತು ಹೋಗಿದ್ದ  ಬಂಬಿಲಗುತ್ತು ಮೇಗಿನ ಕುಂಜಾಡಿ ಮತ್ತು ಕೆಳಗಿನ ಕುಂಜಾಡಿ ಮಧ್ಯಸ್ಥರ ಮುಂದಾಳತ್ವದಲ್ಲಿ ಈ ಧರ್ಮನೇಮೋತ್ಸವ ನಡೆಯುತ್ತವೆ ಎಂದರು. ಕೊರೊನಾ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಟ್ಟು ನಾಲ್ಕು ದಿನಗಳ ಬದಲು ಎರಡು ‌ದಿನಗಳ ನೇಮೋತ್ಸವ […]

ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಕೊರೋನ ದೃಢ

Friday, April 2nd, 2021
Sunil Kumar

ಕಾರ್ಕಳ : ಸದಾ ಬ್ಯುಸಿಯಲ್ಲಿರುವ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಕೊರೋನ ಪಾಸಿಟಿವ್‌ ದೃಢಪಟ್ಟಿದೆ. ಕೇರಳ ಬಿಜೆಪಿ ಸಹ ಪ್ರಭಾರಿಯಾಗಿರುವ ಸುನಿಲ್‌ ಕುಮಾರ್‌ ಅವರು ಕಳೆದ ಮೂರು ತಿಂಗಳಿನಿಂದ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಇಂದು ಅವರಿಗೆ ಕೊರೋನ ಪಾಸಿಟಿವ್‌ ದೃಢಪಟ್ಟಿದ್ದು, ಶಾಸಕರು ಕ್ವಾರಂಟೈನ್‌ನಲ್ಲಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್‌ ಟೆಸ್ಟ್‌ ಮಾಡಿಸುವಂತೆ ಅವರು ವಿನಂತಿಸಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು: ನೂತನ ಪ್ರಾಂಶುಪಾಲರಾಗಿ ಡಾ. ಅನಸೂಯಾ ರೈ ನೇಮಕ

Friday, April 2nd, 2021
Anusuya Rai

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಿಕೆ ಡಾ. ಅನಸೂಯಾ ರೈ, ನೂತನ ಪ್ರಾಂಶುಪಾಲರಾಗಿ (ಪ್ರಭಾರ) ಮಾರ್ಚ್‌ 31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಸುಮಾರು 35 ವರ್ಷಗಳಿಂದ ವಾಣಿಜ್ಯಶಾಸ್ತ್ರ ಬೋಧಿಸುತ್ತಿರುವ ಡಾ. ಅನಸೂಯಾ ರೈ, ದಿ.ಪಠೇಲ್‌ ಶ್ರೀ ಇಂದುಹಾಸ ರೈ- ಸುಲೋಚನಾ ರೈ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಸಂತ ಆಗ್ನೇಸ್‌ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾರೆ. ಕಲಿಕೆಯಲ್ಲಿ ಯಾವತ್ತೂ ಮುಂದಿದ್ದ ಅವರು ರಾಜ್ಯದಲ್ಲೇ 66ನೇ ರ‍್ಯಾಂಕ್ನೊಂದಿಗೆ […]

ಯುವತಿಯೊಂದಿಗಿದ್ದ ಅನ್ಯ ಕೋಮಿನ ಯುವಕನಿಗೆ ಹಲ್ಲೆ : ಎಂಟು ಶಂಕಿತರು ವಶಕ್ಕೆ

Friday, April 2nd, 2021
Shashikumar

ಮಂಗಳೂರು : ಬೆಂಗಳೂರಿಗೆ ಕೆಲಸ ಹುಡುಕಲು ಅನ್ಯ ಕೋಮಿನ ಯುವಕನೊಂದಿಗೆ ಗುರುವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯುವತಿಯೊಂದಿಗಿದ್ದ ಇದ್ದ ಯುವಕನ ಮೇಲೆ ಹಿಂದೂ ಸಂಘಟನೆಗಳು ಹಲ್ಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಎನ್.ಶಶಿಕುಮಾರ್,  ಕಂಕನಾಡಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ತಡೆದು ಅದರಲ್ಲಿ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದು, ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,  ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 8 ಶಂಕಿತರನ್ನು ವಿಚಾರಣೆಗಾಗಿ […]