ವಾಟರ್ ಆಡಿಟಿಂಗ್ ಮೂಲಕ ವಿಶ್ವ ಜಲ ದಿನಾಚರಣೆ

Tuesday, March 23rd, 2021
water

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘ ಮತ್ತು ಪರಿಸರ ಸಂಘದ ‌ವತಿಯಿಂದ ವಿಶ್ವ ಜಲ ದಿವಸವನ್ನು ವಾಟರ್ ಆಡಿಟಿಂಗ್ ಮಾಡುವ ಮೂಲಕ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಅವರಣದೊಳಗಿನ ನೀರಿನ ಕಾರಂಜಿಯನ್ನು ಶುಚಿಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪರಿಸರ ಸಂಘದ ಸಹ ನಿರ್ದೇಶಕ ಡಾ. ಸಿದ್ಧರಾಜು ಎಂ. ಎನ್ ವಿದ್ಯಾರ್ಥಿಗಳಿಗೆ ವಿಶ್ವ ಜಲ ದಿನದ ಮಹತ್ವ ತಿಳಿಸಿ ವಾಟರ್ ಆಡಿಟಿಂಗ್ ಎಂದರೇನು, ಶಾಲಾ ಕಾಲೇಜುಗಳಲ್ಲಿ ನೀರಿನ ಆಡಿಟಿಂಗ್ ನಡೆಸುವುದು, ದಾಖಲೀಕರಿಸುವುದು ಮತ್ತು ಅದರ ನಿರ್ವಹಣೆ ಹೇಗೆ […]

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅವ್ಯವಹಾರ, ಉಪ ಆಯುಕ್ತರ ಸಭೆ

Monday, March 22nd, 2021
Kolluru

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರದ  ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಬಹಿರಂಗಸಿತ್ತು. ಆ ಬಳಿಕದ 10 ದಿನಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉಪ ಆಯುಕ್ತರು ಭೇಟಿ ನೀಡಿ  2005 ರಿಂದ 2019 ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶಗಳನ್ನು ವಿಚಾರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಬಳಿಕ ಅವರು  ಸಭೆ ನಡೆಸಿ ಕೊಲ್ಲೂರು […]

ರಾಜ್ಯದಲ್ಲಿ ಹೊಸದಾಗಿ ಐದಾರು ಕೈಗಾರಿಕಾ ಟೌನ್ ಶಿಪ್ : ಸಚಿವ ಜಗದೀಶ್ ಶೆಟ್ಟರ್

Sunday, March 21st, 2021
ficci

ಮಂಗಳೂರು : ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಬೈಂದೂರು ಮತ್ತು ಕಾರವಾರದಲ್ಲಿ ವಿಮಾನ ನಿಲ್ದಾಣಗಳನ್ನು ತೆರೆಯುವ ಯೋಜನೆ ಇದೆ ಮತ್ತು ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರಾಜ್ಯ ಮಧ್ಯಮ ಮತ್ತು ಭಾರಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮಾರ್ಚ್ 21, ಭಾನುವಾರದಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್‌ನಲ್ಲಿ ಎಫ್‌ಐಸಿಸಿಐ ಆಯೋಜಿಸಿದ್ದ ಕರ್ನಾಟಕ ಕೋಸ್ಟ್‌ಲೈನ್ ಬಿಸಿನೆಸ್ ಕಾನ್ಕ್ಲೇವ್ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಾ ರಾಜ್ಯದಲ್ಲಿ ಹೊಸದಾಗಿ ಐದಾರು ಕೈಗಾರಿಕಾ ಟೌನ್ ಶಿಪ್ ಮಾಡುವ […]

ಜೆಡಿಎಸ್ ಪಕ್ಷದ ತತ್ವ ಸಿದ್ದಾಂತವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಾ ಬಂದಿದೆ : ಲೀಲಾವತಿ ಆರ್ ಪ್ರಸಾದ್

Sunday, March 21st, 2021
JDS

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾದಳ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾವೇಶ ಮಹಿಳಾ ದಿನಾಚರಣೆ ಮತ್ತು ಸಾಮರಸ್ಯ ಸಂಗಮ ಕಾರ್ಯಕ್ರಮ ಮಂಗಳೂರಿನ ಕದ್ರಿಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಮಾಜಿ ಸಚಿವೆ, ಜೆಡಿಎಸ್ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಲೀಲಾವತಿ ಆರ್ ಪ್ರಸಾದ್ ದೀಪಬೆಳಗಿ ಚಾಲನೆ ನೀಡಿದರು. ಬಳಿಕ ಗ್ರಾಮಾಪಂಚಯತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಮಹಿಳಾ ಸಾಧಕಿಯರಿಗೆ ಸನ್ಮಾನ […]

ನಾಯಿಯನ್ನು ಬೆನ್ನಟ್ಟಿ ಮನೆಯ ಕೋಣೆಯೊಳಗೆ ನುಗ್ಗಿದ ಚಿರತೆ

Sunday, March 21st, 2021
chita

ಬ್ರಹ್ಮಾವರ : ಚಿರತೆಯೊಂದು ರವಿವಾರ ನಸುಕಿನ ವೇಳೆ ಮನೆಯ ಕೋಣೆ ಯೊಳಗೆ ನುಗ್ಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ.   ನೈಲಾಡಿ ಸಮೀಪ ಬೇಟೆ ಅರಸಿ ನಾಡಿಗೆ ಬಂದ ಚಿರತೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದಾಗ, ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿ ಸೇರಿಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಚಿರತೆಯು ಕೋಣೆಯೊಳಗೆ ಸೇರಿಕೊಂಡಿತು. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆಯ ಬಾಗಿಲು ಹಾಕಿದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ […]

ಮಂಗಳೂರು ಬಿಎಎಸ್‍ಎಫ್ ಕಂಪೆನಿಯಲ್ಲಿ ರಾಸಾಯನಿಕ ದುರಂತ : ಅಣುಕು ಪ್ರದರ್ಶನ

Saturday, March 20th, 2021
BSF

ಮಂಗಳೂರು : ನಗರದ ಹೊರವಲಯದಲ್ಲಿರುವ ಬಿಎಎಸ್‍ಎಫ್ ರಾಸಾಯನಿಕ ಕಾರ್ಖಾನೆಗೆ ಶನಿವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳು, ಕೆಲವೇ ಗಂಟೆಗಳಲ್ಲಿ ಘಟಕದಲ್ಲಿ ತಾಪಮಾನ ಹೆಚ್ಚಾಗಿ ರಾಸಾಯನಿಕ ಸೋರಿಕೆ ಉಂಟಾಗಿರುವುದನ್ನು ಗಮನಿಸಿ , ನೀರು ಸಿಂಪಡಿಸತೊಡಗಿದರು. ಆದರೆ ಎರಡು ರಾಸಾಯನಿಕ ಘಟಕದ ಸ್ಪಿಂಕ್ಲರ್ ಗಳಿಂದ ನೀರು ಚಿಮ್ಮತೊಡಗಿತು. ಅಪಾಯದ ಸೂಚನೆಗಾಗಿ ಕಂಪೆನಿ ಆವರಣದಲ್ಲಿ ಅಳವಡಿಸಿದ್ದ ಸೈರನ್ ಮೊಳಗಿ, ಕಾರ್ಮಿಕರಿಗೆ ಎಚ್ಚರಿಕೆ ನೀಡಿತು. ತಕ್ಷಣವೇ ಹೊರಬಂದ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತ್ತು. ಘಟಕದಿಂದ ಕೊನೆಯದಾಗಿ ಹೊರಬಂದ ಕಾರ್ಮಿಕ ತೀವ್ರ ಅಸ್ವಸ್ಥನಾಗಿ ಬಿದ್ದಾಗ ವೈದ್ಯಕೀಯ […]

ಪುತ್ತೂರು ಹಿಂದೂ ಐಕ್ಯತಾ ಸಮಾವೇಶ, ಮದ್ಯದಂಗಡಿಗಳನ್ನು ಮುಚ್ಚಲು – ಆದೇಶ

Saturday, March 20th, 2021
Hindu-Aikya

ಮಂಗಳೂರು : ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆಯುವ ಹಿಂದೂ ಐಕ್ಯತಾ ಸಮಾವೇಶ ಮತ್ತು ಶೋಭಾಯಾತ್ರೆಯು ಮಾರ್ಚ್ 21 ರಂದು ಪುತ್ತೂರು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದೆ. ಸದರಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡಲು ಸಾರ್ವಜನಿಕರ ಹಿತದೃಷ್ಠಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಪುತ್ತೂರು ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣಾ ಸರಹದ್ದಿನ ಎಲ್ಲಾ […]

ತೊಕೊಟ್ಟು ಗುಜರಿ ಅಂಗಡಿಗೆ ಬೆಂಕಿ, ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ

Saturday, March 20th, 2021
Kallapu-fire

ಮಂಗಳೂರು : ತೊಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಗುಜರಿ ಅಂಗಡಿ ಬೆಂಕಿ ಅನಾಹುತದಿಂದ ಹೊತ್ತಿ ಉರಿದ ಘಟನೆ ಶನಿವಾರ ಸಂಜೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಗುಜರಿ ಸಾಮಾನುಗಳು ಭಸ್ಮಗೊಂಡಿದೆ ಎನ್ನಲಾಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿ ಶಾಮಕದಳದಿಂದ ಕಾರ್ಯಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದ್ದು,  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಕರ್ತರ ಕ್ಷೇಮಾಭಿವೃದ್ಧಿನಿಧಿಗೆ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಚಾಲನೆ

Saturday, March 20th, 2021
Journalist welfare

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹ ಭಾಗಿತ್ವದಲ್ಲಿ ಆರಂಭಿಸಲಾಗಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೀಶ್ವರ್ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಜಿಲ್ಲಾಧಿಕಾರಿ ಡಾ. […]

ಗೋಶಾಲೆಯಲ್ಲಿರೋ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ : ಮೊಯ್ದೀನ್ ಬಾವಾ

Saturday, March 20th, 2021
Kapila Goshala

ಮಂಗಳೂರು   :  ಕಪಿಲಾ ಗೋಶಾಲೆಯನ್ನು ಹಾಡಹಗಲೇ ಧ್ವಂಸ ಮಾಡಿದ್ದು ಖಂಡನೀಯ. ಗೋಶಾಲೆಯಲ್ಲಿರೋ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ನೆಲಸಮಗೊಂಡ ಗೋಶಾಲೆಯ ಮಾಲೀಕನಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವಾಗಿ ನೀಡುತ್ತೇನೆ ಎಂದು  ಮಾಜಿ ಶಾಸಕ ಮೋಯ್ದಿನ್‌ ಬಾವಾ ಅವರು ಚೆಕ್ಕನ್ನು ಮಾಲೀಕ‌ ಪ್ರಕಾಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಇವತ್ತು ಬೀಫ್ ರಫ್ತು ಮಾಡುವುದರಲ್ಲಿ ದೇಶ ನಂಬರ್ ವನ್ ಆಗಿರೋದಕ್ಕೆ ಬಿಜೆಪಿ ಕಾರಣ.  ಗೋವಿನ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಆಡಳಿತವೇ ಕಪಿಲ […]