ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ

Monday, February 8th, 2021
Tobaco

ಮಂಗಳೂರು : ಪುತ್ತೂರು ತಾಲೂಕು ಜಿಲ್ಲಾ ತಂಬಾಕು ನಿಯಂತ್ರಣ ದಳ ಹಾಗೂ ಪುತ್ತೂರು ತಾಲೂಕು ಉತ್ಪನ್ನಗಳ ನಿಯಂತ್ರಣ ತನಿಖಾ ದಳದಿಂದ ಪುತ್ತೂರು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಸಾರ್ವಜನಿಕ ಸ್ಥಳಗಳಿಗೆ ತಂಬಾಕು ಉತ್ಪನ್ನಗಳ ಸೇವನೆ COTPA 2003 ಕಾಯ್ದೆ ಉಲ್ಲಂಘಿಸುವವರ ಮೇಲೆ ಸೆಕ್ಷನ್ 4 ಹಾಗೂ 6 ಎ ಅಡಿಯಲ್ಲಿ 61 ಪ್ರಕರಣಗಳು ದಾಖಲಿಸಿ 10,970 ದಂಡ ವಿಧಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕುರಿತು ಜಾಗೃತಿ […]

ಕೇರಳದಲ್ಲಿ ಕೊರೋನ ಉಲ್ಬಣ ಜಿಲ್ಲೆಗೆ ಆಗಮಿಸುವ ಜನರಿಗೆ ತಪಾಸಣೆಗೊಳಪಡಸಲು ಕ್ರಮ

Monday, February 8th, 2021
KV Rajendra

ಮಂಗಳೂರು : ಪಕ್ಕದ ರಾಜ್ಯ ಕೇರಳದಲ್ಲಿ ಕೊರೋನ ಉಲ್ಬಣ ವಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಗೆ ಆಗಮಿಸುವ ಅಲ್ಲಿನವರನ್ನು ಸೂಕ್ತ ತಪಾಸಣೆಗೊಳಪಡಿಸಿ ಜಿಲ್ಲೆಯಲ್ಲಿ ಕೊರೋನ ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಆಯುಷ್ ಕಚೇರಿಯಲ್ಲಿ ಇಂದು ಪೊಲೀಸ್ ಆಯುಕ್ತರು, ಡಿಎಚ್‌ಒ ಜತೆ ನಡೆಸಲಾದ ತುರ್ತು ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಡಾ. ರಾಜೇಂದ್ರ ಈ ಪ್ರತಿಕ್ರಿಯೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ದಿನನಿತ್ಯ ಕೆಲಸ ಕಾರ್ಯ, ಕಾಲೇಜುಗಳಿಗಾಗಿ ಕೇರಳದಿಂದ ಕರ್ನಾಟಕಕ್ಕೆ ಬರುವುದರಿಂದ ಕೋವಿಡ್ ಅನ್‌ಲಾಕ್ ಮಾರ್ಗಸೂಚಿಗಳನ್ನು […]

ಬೈಕಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಬೊಲೆರೊ, ಓರ್ವ ಮೃತ್ಯು

Monday, February 8th, 2021
Kashi Matt Accident

ಬಂಟ್ವಾಳ : ಬೈಕ್ ಹಾಗೂ ಬೊಲೆರೊ ವಾಹನದ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ಸೋಮವಾರ ನಡೆದಿದೆ. ಮಾಣಿ ಬರಿಮಾರು ನಿವಾಸಿ ಬಾಲಕೃಷ್ಣ (55) ಮೃತರು ಎಂದು ಗುರುತಿಸಲಾಗಿದೆ. ಬೈಕ್ ಹಾಗೂ ಬೊಲೆರೊ ವಿಟ್ಲದಿಂದ ಉಕ್ಕುಡ ಮಾರ್ಗವಾಗಿ ತೆರಳುತ್ತಿದ್ದು, ಕಾಶಿಮಠ ಸಮೀಪ ಬೊಲೆರೊ ಬೈಕಿನ ಹಿಂಭಾಗಕ್ಕೆ ಢಿಕ್ಕಿಯಾಗಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಬಾಲಕೃಷ್ಣ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ […]

ಎಸ್ ಸಿಡಿಸಿಸಿ ಬ್ಯಾಂಕ್ ವತಿಯಿಂದ ಸಚಿವ ಎಸ್.ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ

Saturday, February 6th, 2021
SCDCC Bank

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ರಾಜ್ಯ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ನೇಮಕಗೊಂಡ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರಿಗೆ  ಶನಿವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು. ಎಸ್ ಸಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಸಭಾಂಗಣದಲ್ಲಿಂದು ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ […]

ಯಾರಿಗೂ ಬೇಸರವಾಗಿ ನನಗೆ ಜೀವನ ಬೇಡ, ನಾನು ಸಲ್ಲೇಖನ ವ್ರತವನ್ನು ತೆಗೆದುಕೊಳ್ಳಲು ಯೋಚನೆ ಮಾಡುತ್ತಿದ್ದೇನೆ : .ಜಗದೀಶ್ ಅಧಿಕಾರಿ

Saturday, February 6th, 2021
Jagdeesh Adhikari

ಮೂಡುಬಿದಿರೆ : ಜಗದೀಶ್ ಅಧಿಕಾರಿ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಇತಿಹಾಸವನ್ನು ತಿರುಚಿ ಮಾತನಾಡಿದ್ದಾರೆ ಹಾಗೂ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಬಿಲ್ಲವ ಸಮಾಜದವರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು   ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ನಾನು  ಬಿಲ್ಲವ ಸಮಾಜಕ್ಕೆ ಯಾವುದೇ ರೀತಿಯ ಅಗೌರವ ತೋರಿಲ್ಲ. ಆದರೂ ಬಿಲ್ಲವ ಸಮಾಜ ಬಾಂಧವರಿಗೆ ನನ್ನಿಂದಾಗಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ, ನಾನು  ಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ದೊಡ್ಡ […]

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿಇಬ್ಬರು ಮಹಿಳೆಯರ ಮೃತ ದೇಹ ಪತ್ತೆ

Friday, February 5th, 2021
Dead Body

ಉಜಿರೆ  : ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಬಳಿ ಗುರುವಾರ ಪತ್ತೆಯಾಗಿವೆ. ಸ್ನಾನ ಘಟ್ಟದ ಸಿಬ್ಬಂದಿ  ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ಯಾತ್ರಾರ್ಥಿಗಳು ಬಂದು, ಅವರ ಬಳಿ ಮೃತದೇಹ ಇರುವುದಾಗಿ ತಿಳಿಸಿದ್ದಾರೆ. ಅಂದಾಜು 40 ರಿಂದ 45 ವರ್ಷ ಮತ್ತು 20 ರಿಂದ 25 ವರ್ಷ ಪ್ರಾಯದ ಅಪರಿಚಿತ ಮಹಿಳೆಯರ ಮೃತದೇಹ ಕವುಚಿ ಮಲಗಿದ ಸ್ಥಿತಿಯಲ್ಲಿ ನೀರಿನಲ್ಲಿ ಕಂಡುಬಂದಿತ್ತು.‌ ಈ ಇಬ್ಬರು ಅಪರಿಚಿತ ಮಹಿಳೆಯರು ಯಾವುದೋ ಕಾರಣಕ್ಕೆ ನೀರಿಗೆ ಹಾರಿ ಅಥವಾ ಕಾಲು […]

ಬೈಕ್ ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ ವಿದ್ಯಾರ್ಥಿ ಮೃತ್ಯು

Friday, February 5th, 2021
Abhinav

ಪುತ್ತೂರು: ಕಾಲೇಜ್ ವಿದ್ಯಾರ್ಥಿಯೊಬ್ಬ ಬೈಕ್ ಮತ್ತು ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮುರ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೈಕ್ ಚಲಾಯಿಸುತ್ತಿದ್ದ ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ಅಭಿನವ್(23) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಅಭಿನವ್ ಅವರು ಸುಳ್ಯ ಕೆ.ವಿ.ಜಿ ಕಾಲೇಜ್ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ದೇವಸ್ಥಾನಕ್ಕೆ 1ಲಕ್ಷ ರೂ. ದಾನ ನೀಡಿದ ಭಿಕ್ಷುಕಿ

Friday, February 5th, 2021
Ashwathamma

ಕುಂದಾಪುರ :  ಸಾಲಿಗ್ರಾಮದ ಆಂಜನೇಯ ಸ್ವಾಮಿ ಗುಡಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಗೊಳ್ಳಿಯ ಅಶ್ವತ್ಥಮ್ಮ ಎಂಬವರು ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕಳೆದ 30 ವರ್ಷಗಳಿಂದ ಆಂಜೆನೇಯ ಸ್ವಾಮಿ ಗುಡಿಯಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ಅಶ್ವತ್ಥಮ್ಮ ಮದುವೆಯಾಗಿ ಎಳೆವೆಯಲ್ಲಿಯೆ ಪತಿ ಮತ್ತು ಮಕ್ಕಳನ್ನು ಕಳೆದುಕೊಂಡ ಅತಂತ್ರರಾಗಿ ಭಕ್ತರು ನೀಡಿದ ಹಣವನ್ನು ಊಟಕ್ಕೆ ಕೊಟ್ಟು ಉಳಿದ ಹಣವನ್ನು ಪಿಗ್ಮಿಗೆ ಹಾಕಿ ಉಳಿತಾಯ ಮಾಡುತ್ತಿದ್ದರು. ಹೀಗೆ ಪಿಗ್ಮಿಯಲ್ಲಿ ಒಂದು ಲಕ್ಷ ರೂ. ಸಂಗ್ರಹ ಆದಾಗ ಅದನ್ನು […]

ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ ಕಡ್ಡಾಯ

Friday, February 5th, 2021
yellow Auto

ಮಂಗಳೂರು : ಮಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಮಂಗಳೂರು ನಗರ ವ್ಯಾಪ್ತಿಯೊಳಗೆ ತುರ್ತು ಸಂದರ್ಭದಲ್ಲಿ, ರೋಗಿಗಳನ್ನು ಹಾಗೂ ವಯೋ ವೃದ್ಧರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದು ಹೋಗುವಾಗ ಮತ್ತು ನಗರದೊಳಗೆ ಪ್ರಯಾಣಿಕರನ್ನು ಅವರು ಹೇಳಿರುವ ಸ್ಥಳಗಳಿಗೆ ತಲುಪಿಸುವಂತಹಾ ಆಟೋರಿಕ್ಷಾಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಈಗಾಗಲೇ ನಿರ್ಣಯಿಸಿರುವಂತೆ ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ (ಬಜಾಜ್ ಗ್ರೀನ್) ಕಡ್ಡಾಯವಾಗಿ ಬಳಿದು ಪ್ರದರ್ಶಿಸಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಿರ್ದೇಶಿಸಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದೆ.

ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ಪತ್ತೆಯಾದ ಬೃಹತ್ ಕಡಲು ಹಂದಿಯ ಕಳೇಬರ

Thursday, February 4th, 2021
Ullal Timingila

ಮಂಗಳೂರು : ಉಳ್ಳಾಲದ ಮೊಗವೀರ ಪಟ್ಣದ ಸಮುದ್ರ ಕಿನಾರೆಯಲ್ಲಿ ಕಡು ನೀಲಿ ಬಣ್ಣದ ತಿಮಿಂಗಿಲ ಮಾದರಿಯ ಬೃಹತ್ ಕಡಲು ಹಂದಿಯ ಕಳೇಬರ ಪತ್ತೆಯಾಗಿದೆ. ಸಮುದ್ರದಲ್ಲಿರುವ ಕಡಲು ಹಂದಿಗಳು ಸಾಧಾರಣವಾಗಿ ತಿಮಿಂಗಿಲಗಳನ್ನೇ ಹೋಲುತ್ತವೆ. ತಿಮಿಂಗಿಲದ್ದೇ ಒಂದು ಪ್ರಭೇದವಾಗಿದ್ದು ಸ್ಥಳೀಯರು ಆಡುಭಾಷೆಯಲ್ಲಿ ಕಡಲು ಹಂದಿ ಎನ್ನುತ್ತಾರೆ. ಸ್ಥಳೀಯ ಮೀನುಗಾರರ ಪ್ರಕಾರ, ಇದು ತಿಮಿಂಗಿಲ ಅಲ್ಲ. ಕಡಲು ಹಂದಿಯಂತೆ. ಸುಮಾರು ಹತ್ತು ಫೀಟ್ ಉದ್ದವಿದೆ. ಸ್ಥಳೀಯರು ತಿಮಿಂಗಿಲದ ಕಳೇಬರವನ್ನು ಕಡಲಿಗೆ ದೂಡಿರುವುದಾಗಿ ತಿಳಿದು ಬಂದಿದೆ. ಆದರೆ ಇದು ಹೆಚ್ಚು ಕೊಳೆತಿರಲಿಲ್ಲ. ಸಾಮಾನ್ಯವಾಗಿ […]