ಮಂಗಳೂರು ನೂತನ ಪೊಲೀಸ್ ಕಮಿಷನರ್ ಉತ್ತಮ ಹಾಡುಗಾರ ಜೊತೆಗೆ ಮಲ್ಟಿ ಟ್ಯಾಲೆಂಟೆಡ್

Monday, January 11th, 2021
shashikumar

ಮಂಗಳೂರು : ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ  ಎನ್. ಶಶಿಕುಮಾರ್  ಮಲ್ಟಿ ಟ್ಯಾಲೆಂಟೆಡ್ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಸಂಚಲನ ಮೂಡಿಸುತ್ತಿದ್ದಾರೆ. ಪೊಲೀಸ್ ಕಮಿಷರ್ ಅವರು ನಗರದ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಕ್ತಿಗೀತೆ ಹಾಡುವುದರ ಮೂಲಕ ತಾನೊಬ್ಬ ಉತ್ತಮ ಹಾಡುಗಾರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ರಾತ್ರಿ ಕಾರ್ಯನಿಮಿತ್ತ ಮೂಡುಬಿದಿರೆಗೆ ಹೋಗಿದ್ದ ಕಮಿಷನರ್ ತಡರಾತ್ರಿ ಮರಳಿ ಬರುವಾಗ ಕುಲಶೇಖರ ಬಳಿ […]

ಮಂಜನಾಡಿಯಲ್ಲಿ ಸತ್ತ ಕಾಗೆಗಳಿಗೆ ಹಕ್ಕಿಜ್ವರವಿಲ್ಲ – ವರದಿ

Monday, January 11th, 2021
crow

ಮಂಗಳೂರು: ಮಂಜನಾಡಿ ಗ್ರಾಮದ ಆರಂಗಡಿ ಬಳಿ ಸತ್ತು ಬಿದ್ದಿದ್ದ ಕಾಗೆಯ ಮರಣೋತ್ತರ ವರದಿ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕೈ ಸೇರಿದ್ದು, ವರದಿಯಲ್ಲಿ ನೆಗೆಟಿವ್‌ ಕಾಣಿಸಿಕೊಂಡಿದೆ. ಇದರೊಂದಿಗೆ ಸಾರ್ವಜನಿಕರಲ್ಲಿದ್ದ ದೊಡ್ಡ ಆತಂಕ ಕೂಡ ಮರೆಯಾಗಿದೆ. ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರದ ಭೀತಿ ನಡುವೆ  ಮಂಜನಾಡಿಯಲ್ಲಿ ಸತ್ತು ಬಿದ್ದ ಕಾಗೆಗಳಿಂದ ಜನ ಆತಂಕ ಗೊಂಡಿದ್ದರು. ಅದರಂತೆ  ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಇದರಲ್ಲಿ ಒಂದು ಕಾಗೆ ಹೊರತುಪಡಿಸಿ ಉಳಿದ ಕಾಗೆಗಳ ಅಸ್ತಿಪಂಜರ ಪೂರ್ಣವಾಗಿ ಕೊಳೆತು ಹೋಗಿತ್ತು. […]

ಸಮುದ್ರ ಮದ್ಯದಲ್ಲಿ ಸಿಲಿಂಡರ್‌ ಸ್ಫೋಟ, ದೋಣಿಯಲ್ಲಿದ್ದ 11 ಮೀನುಗಾರರ ರಕ್ಷಣೆ

Sunday, January 10th, 2021
cylinder blast

ಮಂಗಳೂರು: ಮೀನುಗಾರಿಕೆಗೆಂದು ತೆರಳಿದ್ದ ತಮಿಳುನಾಡು ಮೂಲದ ಈ ಮೀನುಗಾರಿಕಾ ದೋಣಿಯೊಂದರಲ್ಲಿ ಅರಬ್ಬಿ ಸಮುದ್ರ  ಮದ್ಯದಲ್ಲಿ ಸಿಲಿಂಡರ್‌ ಸ್ಫೋಟಗೊಂಡಿದ್ದು, ತಕ್ಷಣ ಬೋಟ್ನಲ್ಲಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯವರು  ರಕ್ಷಿಸಿದ್ದಾರೆ. ಮಂಗಳೂರಿನಿಂದ ಸುಮಾರು 140 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿತ್ತು. ಈ ಸಂದರ್ಭ ಬೋಟ್ನಲ್ಲಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಯಗೊಂಡಿರುವ ಓರ್ವ ಮೀನುಗಾರ ಹಾಗೂ ಇತರ ಮೀನುಗಾರರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ […]

ಆಟವಾಡುತ್ತಿದ್ದ ಮಗು ಸೀಮೆ ಎಣ್ಣೆ ಸೇವಿಸಿ ಮೃತ್ಯು

Sunday, January 10th, 2021
Ruthik

ಕಾಸರಗೋಡು : ಮನೆಯಲ್ಲಿ ಆಟವಾಡುತ್ತಿದ್ದ ಮಗು ಸೀಮೆ ಎಣ್ಣೆ ಸೇವಿಸಿದ ಪರಿಣಾಮ ಮೃತಪಟ್ಟ ದಾರುಣ ಘಟನೆ ಉದುಮದಲ್ಲಿ ನಡೆದಿದೆ. ಉದುಮ ಏರೋಲ್‌ನ ದಾಸ್ ಮತ್ತು ರೇಣುಕಾ ದಂಪತಿ ಪುತ್ರ ಋತಿಕ್ ಮೃತಪಟ್ಟ ಮಗು. ಬಾಟಲಿಯಲ್ಲಿದ್ದ ಸೀಮೆಎಣ್ಣೆಯನ್ನು ಸೇವಿಸಿದ್ದು , ಮಗು ಅಸ್ವಸ್ಥವಾಗಿ ಬಿದ್ದಿದ್ದು ಸಮೀಪ ಸೀಮೆ ಎಣ್ಣೆ ತುಂಬಿದ್ದ ಬಾಟಲಿ ಪತ್ತೆಯಾಗಿತ್ತು. ತಕ್ಷಣ ಮಗುವನ್ನು ಉದುಮದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಸರಕಾರಕ್ಕೆ ಹಿಂದೂ ದೇವಾಲಯಗಳ ಆದಾಯ ಬೇಕಿದ್ದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ : ಎಂ. ನಾಗೇಶ್ವರ ರಾವ್

Sunday, January 10th, 2021
sanathana

ಮಂಗಳೂರು  : 2020 ರಲ್ಲಿ ಆಂಧ್ರಪ್ರದೇಶದಲ್ಲಿ 228 ದೇವಾಲಯಗಳಲ್ಲಿ ವಿಧ್ವಂಸದ ಘಟನೆಗಳು ನಡೆದಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ಹಿಂದೂವಿರೋಧಿ ಘಟನೆಗಳ ಹಿಂದೆ ಯೋಜಿತ ಪಿತೂರಿ ಇದೆ. ವಾಸ್ತವದಲ್ಲಿ ಸರಕಾರವು ಎಲ್ಲಾ ಧರ್ಮಗಳಿಗೆ ಭದ್ರತೆಯನ್ನು ಒದಗಿಸಬೇಕು; ಆದರೆ ಸರ್ಕಾರ ಒಂದು ನಿರ್ದಿಷ್ಟ ಧರ್ಮದತ್ತ ವಾಲುತ್ತಿದೆ. ಇದು ಜಾತ್ಯತೀತತೆಯ ಲಕ್ಷಣವಲ್ಲ. ಹಿಂದೂ ಸಮುದಾಯವು ಒಗ್ಗೂಡಿ ಆಂಧ್ರಪ್ರದೇಶ ಸರಕಾರವು ಆಕ್ರಮಿಸಿಕೊಂಡಿರುವ 24,632 ದೇವಾಲಯಗಳ ರಕ್ಷಣೆಗಾಗಿ ‘ಶ್ಯಾಡೋ ಕ್ಯಾಬಿನೆಟ್’ನಂತಹ ‘ಶ್ಯಾಡೋ’ ಟ್ರಸ್ಟ್‌ಗಳನ್ನು ಪ್ರತಿಯೊಂದು ದೇವಾಲಯಗಳಲ್ಲಿ ಸ್ಥಾಪಿಸುವ ಮೂಲಕ ಹೋರಾಡಬೇಕು. […]

ಏಕಾಏಕಿ ಸಾಲಗಾರರ ಆಸ್ತಿ ಜಪ್ತಿ ಮಾಡಲು ಆದೇಶಿಸುವುದು ಕಾನೂನಿಗೆ ವಿರೋಧವಾಗಿದೆ

Sunday, January 10th, 2021
pucl

ಮಂಗಳೂರು  : ಆರ್.ಬಿ. ಐ ವರದಿ ಪ್ರಕಾರ ಕಳೆದ ಹಣ ಕಾಸು ವರ್ಷದಲ್ಲಿ ದೇಶದಲ್ಲಿ 1.80 ಲಕ್ಷ ಕೋಟಿ ರೂಪಾಯಿ ವಂಚನೆ ಸೃಷ್ಟಿಯಾಗಿದ್ದು,ಸರ್ಫೆಸಿಯ ಕಾನೂನು ಪ್ರಕಾರ ಬ್ಯಾಂಕ್ ವಸೂಲಾತಿ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗಳು ಸಮರ್ಪಕ ಪ್ರೊಸೀಡಿಂಗ್ಸ್ ನಡೆಸದೆ ಏಕಾಏಕಿ ಸಾಲಗಾರರ ಆಸ್ತಿ ಜಪ್ತಿ ಮಾಡಲು ಆದೇಶಿಸುವುದು ಕಾನೂನಿಗೆ ವಿರೋಧವಾಗಿದೆ. ಮುಂದೆ ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳಲ್ಲಿ, ಬ್ಯಾಂಕ್ ಗಳ ವಸೂಲಾತಿ ಅರ್ಜಿ ಆದೇಷಗಳಲ್ಲಿ,ಬ್ಯಾಂಕ್ ಸಲ್ಲಿಸುವ ದಾಖಲೆಗಳು ಸಮರ್ಪಕ ವಾಗಿದೆಯೆ ಎಂದು ಕೂಲಂಕಷ ತನಿಖೆ ನಡೆಸಿ ಮತ್ತು ಸಾಲಗಾರರಿಗೆ ನಿರ್ಧಿಷ್ಟ ವಿಧದ […]

ಕರಂಗಲ್ಪಾಡಿಯಲ್ಲಿ ತಂದೂರು ಮದ್ಯದಂಗಡಿಯಿಂದ ಜನರಿಗೆ ತೊಂದರೆ

Sunday, January 10th, 2021
trv

ಮಂಗಳೂರು : ವಿನಯ ಹಾಸ್ಪಿಟಲ್, ಶ್ರೀ ದೇವಿ ನರ್ಸಿಂಗ್ ಹೋಮ್, ಕೃಷ್ಣ ನರ್ಸಿಂಗ್ ಹೋಮ್ ಕ್ಯಾನ್ಸರ್ ಹಾಸ್ಪಿಟಲ್, ಸ್ಟಾರ್ ಕಿಡ್ಸ್ ಪ್ಲೇಸ್ಕೂಲ್, ಸೈಂಟ್ ಆಂತೋನಿ ಶ್ರೈನ್, ಚಂದ್ರಮೌಲೇಶ್ವರ ದೇವಸ್ಥಾನ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ಕೇಂದ್ರ ಪಶು ವೈದ್ಯಕೀಯ ಆಸ್ಪತ್ರೆ ಮತ್ತು ಆಸುಪಾಸಿನಲ್ಲಿ ಆನಂದ, ಮಿಶ್ರಿ ಗಾರ್ಡನ್ ವಸತಿ ಸಂಕೀರ್ಣ ಸೇರಿದಂತೆ ಹಲವಾರು ವಸತಿ ಸಂಕೀರ್ಣ ಇಲ್ಲಿನ ಪ್ರದೇಶದ ಹಲವಾರು ವಿದ್ಯಾರ್ಥಿನಿಯರು, ಮಹಿಳೆಯರು, ಆಸ್ಪತ್ರೆ, ಸ್ಕೂಲ್‌ಗಳಿಗೆ ಇದೇ ಮದ್ಯದಂಗಡಿ ಬಳಿಯಿಂದಲೇ ಹಾದು ಹೋಗಬೇಕಾಗುತ್ತದೆ. ತಂದೂರು […]

ನಂದಿನಿ ಗ್ರಾಹಕರಿಗೆ ಸಿಹಿ ಸುದ್ಧಿ : ನಂದಿನಿ ಸಿಹಿ ಉತ್ಸವ ಅವಧಿ ವಿಸ್ತರಣೆ

Saturday, January 9th, 2021
Nandini Utsava

ಮಂಗಳೂರು  : ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ ಸಿಹಿ ಉತ್ಸವ ಯೋಜನೆಯನ್ನು ಕರ್ನಾಟಕ ರಾಜ್ಯಾದ್ಯಂತ ದಿನಾಂಕ 24-12-2020 ರಿಂದ 07-01-2021 ರವರೆಗೆ ಆಚರಿಸಲಾಗಿದೆ. ಸಂಕ್ರಾತಿ ಹಬ್ಬದ ನಿಮಿತ್ತ ಗ್ರಾಹಕರ ಆಪೇಕ್ಷೆ ಮೇರೆಗೆ ನಂದಿನಿ ಸಿಹಿ ಉತ್ಸವವನ್ನು ದಿನಾಂಕ 14-04-2021 ರವರೆಗೆ ವಿಸ್ತರಿಸಲಾಗಿರುವುದನ್ನು ತಿಳಿಸಲು ಹರ್ಷಿಸುತ್ತೇವೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿರುತ್ತದೆ. ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ […]

40 ಪಾರಿವಾಳಗಳನ್ನು ಕದ್ದ ಕಳ್ಳರು, 24 ಗಂಟೆಯಲ್ಲಿ ಆರೋಪಿಗಳ ಬಂಧನ

Thursday, January 7th, 2021
pigeon

ಬಂಟ್ವಾಳ : ವಿಟ್ಲ ಸಮೀಪದ ಒಕ್ಕೆತ್ತೂರು ಮೂಲೆ ಎಂಬಲ್ಲಿ  ಸುಮಾರು 29 ಸಾವಿರ ರೂ. ಮೌಲ್ಯದ 40 ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ. ಪಾರಿವಾಳ ಸಾಕಿದ ಸುಲೈಮಾನ್  ಎಂಬವರು  ದೂರು ನೀಡಿ 24 ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಕರಡಿ ನಾಸಿರ್ (24), ಕಾವಲಕಟ್ಟೆ ಮೂಲದ ವಿಟ್ಲ ಸಮೀಪದ ಪಾತ್ರತೋಟ ನಿವಾಸಿ ರಿಝ್ವಾನ್ (19), ಬೋಳಂತೂರು ಮೂಲದ ಅಮ್ಟೂರು ನಿವಾಸಿ ಅಫೀಝ್ (18) ಬಂಧಿತ […]

ದಾರಿಯಲ್ಲಿ ಹೋಗಬೇಕಾದ ಪೊಲೀಸ್ ಜೀಪು ಅಂಗಡಿ ನುಗ್ಗಿ ಚೆಲ್ಲಾಪಿಲ್ಲಿ

Thursday, January 7th, 2021
Police Jeep

ಬೆಳ್ತಂಗಡಿ:  ಮಡಿಕೇರಿಯತ್ತ ತೆರಳ ಬೇಕಾದ  ಪೊಲೀಸ್ ಜೀಪ್ವೊಂದು ಗುರುವಾರ  ಬೆಳಗ್ಗೆ ಅಂಗಡಿಗೆ ನುಗ್ಗಿದ ಘಟನೆ ನಾರಾವಿ ಸಮೀಪದ ಈದು ಕ್ರಾಸ್ ಬಳಿ ನಡೆದಿದೆ. ಕಾರ್ಕಳದಿಂದ ಮಡಿಕೇರಿಯತ್ತ ಇನ್ಸ್ ಪೆಕ್ಷನ್ ಗಾಗಿ ತೆರಳುತ್ತಿದ್ದ ಪೊಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಜೀಪ್ನಲ್ಲಿದ್ದ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗಡಿ ಶೋಕೇಸ್ ಸೇರಿ ಇನ್ನಿತರ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ತಲೆಗೆ ಸ್ವಲ್ಪ ಗಾಯವಾಗಿದ್ದು, ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.