ಎರಡು ದಿನದ ನವಜಾತ ಶಿಶುವನ್ನು ಫಲ್ಗುಣಿ ನದಿಗೆ ಎಸೆದ ಪಾಪಿಗಳು

Sunday, January 3rd, 2021
Palguni River

ಮಂಗಳೂರು : ಎರಡು ದಿನದ ನವಜಾತ ಶಿಶುವಿನ ಮೃತದೇಹವು ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಫಲ್ಗುಣಿ ನದಿಯಲ್ಲಿ ಶನಿವಾರದಂದು ತೇಲುತ್ತಿರುವುದು ಕಂಡು ಬಂದಿದೆ. ಮೀನುಗಾರಿಕೆ ನಡೆಸಿ ಫಲ್ಗುಣಿ ನದಿಯ ದಂಡಕ್ಕೆ ಮರಳುವ ಸಂದರ್ಭದಲ್ಲಿ ನವಜಾತ ಶಿಶುವಿನ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ದೋಣಿಯಲ್ಲಿದ್ದ ಫೈಜಲ್ ಮತ್ತು ರಹೀಮ್ ನವಜಾತ ಶಿಶುವಿನ ಮೃತದೇಹ ನೀರಿನ ಮೇಲೆ ತೇಲುತ್ತಿರುವುದನ್ನು ಗಮನಿಸಿದ್ದು ತಕ್ಷಣ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನವಜಾತ ಶಿಶುವು ಹೆಣ್ಣಾಗಿದ್ದು ಒಂದು ಅಥವಾ ಎರಡು ದಿನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಜೀವಂತ  ಮಗುವನ್ನು ಅಥವಾ […]

ಈಶ್ವರಮಂಗಲದ ಮದುವೆಯ ಬಸ್ಸು ದುರಂತ ; ಮೃತರ ಸಂಖ್ಯೆ ಎಂಟಕ್ಕೇರಿಕೆ

Sunday, January 3rd, 2021
suraksha bus

ಕಾಸರಗೋಡು : ಸುಳ್ಯದ ಈಶ್ವರಮಂಗಲದಿಂದ  ಕಾಸರಗೋಡಿನ ಪಾಣತ್ತೂರು ಕರಿಕೆಗೆ ಮದುವೆಯ ದಿಬ್ಬಣ ಹೊರಟಿದ್ದ ಸುಮಾರು ಅರವತ್ತು ಜನರಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಇಬ್ಬರು ಮಕ್ಕಳು ಸೇರಿದಂತೆ 8 ಜನ ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಪಾಣತ್ತೂರು ಕಲ್ಲಪ್ಪಳ್ಳಿ ಬಳಿ ನಡೆದಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮತ್ತು ಪುತ್ತೂರಿನ ನಿವಾಸಿಗಳಾದ ರಾಜೇಶ್, ರವಿ ಚಂದ್ರನ್, ಸುಮತಿ, ಜಯಲಕ್ಷ್ಮಿ, ಶ್ರೇಯಸ್ ಮತ್ತು ಆದರ್ಶ್  ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾದ 29 […]

ಅತ್ತಾವರ ದೈವಸ್ಥಾನದ ಹುಂಡಿಯಲ್ಲಿ“ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟು ಪತ್ತೆ

Sunday, January 3rd, 2021
note

ಮಂಗಳೂರು  : ಅತ್ತಾವರದಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ದುಷ್ಕರ್ಮಿಗಳು ಪ್ರವೇಶಿಸಿ ದೇವರ ಹುಂಡಿಯಲ್ಲಿ “ಪ್ರಭು ಏಸು ಕ್ರಿಸ್ತನು ಮಾತ್ರ ಆರಾಧನೆ ಹೊಂದಲು ಸೂಕ್ತ ವ್ಯಕ್ತಿ”, “ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟುಗಳನ್ನು ಹಾಕಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋಯಿಸುವ ದುರುದ್ದೇಶದಿಂದಲೇ ಈ ರೀತಿ ದುಷ್ಕೃತ್ಯ ಮಾಡಲಾಗಿದೆ, ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಇಂತಹ ಘಟನೆಗಳು ನಡೆದಿದ್ದಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಮತ್ತು ಮಾಧ್ಯಮಗಳು ಧ್ವನಿ ಎತ್ತುತ್ತವೆ. ಈ ಸಂದರ್ಭದಲ್ಲಿಯೂ ಸರ್ಕಾರವು ದುಷ್ಕರ್ಮಿಗಳ […]

ಹೆಣ್ಣು ಕೊಟ್ಟ ಮಾವನ ಕಪಾಳ ಕ್ಕೊಡೆದು ಸಾಯಿಸಿದ ಅಳಿಯ

Saturday, January 2nd, 2021
Shiek Aboobakkar

ಕಾರ್ಕಳ :  ಹತ್ತು ದಿನದ ಹಿಂದೆ ಮಗಳನ್ನು ಮದುವೆಯಾಗಿದ್ದ ಅಳಿಯನೊಬ್ಬ ಮಾವನ ಕಪಾಳಕ್ಕೆ ಬಾರಿಸಿದ್ದೇ ಅಲ್ಲದೆ ಮರ್ಮಾಂಗಕ್ಕೂ ತುಳಿದು ಸಾಯಿಸಿದ ಘಟನೆ ಬಂಗ್ಲೆಗುಡ್ಡೆಯ  ಹಂಚಿಕಟ್ಟೆ ಫ್ಲಾಟ್ ಒಂದರಲ್ಲಿ ನಡೆದಿದೆ. ಕ್ಷುಲಕ ಕಾರಣದಿಂದ ಉಂಟಾದ ಜಗಳದಲ್ಲಿ ಶೇಖ್ ಅಬೂಬಕ್ಕರ್ (57) ಜೀವ ಕಳೆದುಕೊಂಡವರು. ಶೇಖ್ ಅಬೂಬಕ್ಕರ್ ಹಾಗೂ ಅವರ ಅಳಿಯ ತೌಫಿಕ್ ನಡುವೆ ಡಿಸೆಂಬರ್ 31ರ ರಾತ್ರಿ 8.00ಗಂಟೆಗೆ ಫ್ಲಾಟ್‌‌ನಲ್ಲಿ  ಜಗಳ ಏರ್ಪಟ್ಟಿತ್ತು. ಮಾತಿಗೆ ಮಾತು ವಿಕೋಪಕ್ಕೆ ತಿರುಗಿದಾಗ ತೌಫಿಕ್ ತನ್ನ ಮಾವ ಶೇಖ್ ಅಬೂಬಕ್ಕರ್‌‌ನ ಎಡ ಕೆನ್ನೆಗೆ ಹೊಡೆದು ಬಲವಾಗಿ […]

ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್ ವಿತರಣೆ

Saturday, January 2nd, 2021
smartPhone

ಮಂಗಳೂರು : ಕೋವಿಡ್-19 ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರು ಜೀವದ ಹಂಗು ತೊರೆದು , ಕೊರೊನಾ ನಿಯಂತ್ರಣಕ್ಕೆ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು. ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸ್ಮಾರ್ಟ್‍ಫೋನ್ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದರು. ಪೋಷಣ ಅಭಿಯಾನ ಯೋಜನೆಯು ಕುಂಠಿತ ಬೆಳವಣಿಗೆ, ಅಪೌಷ್ಠಿಕತೆ, ರಕ್ತಹೀನತೆ, ಕಡಿಮೆ […]

ವಸ್ತು ನಿಷ್ಠ, ಮೌಲ್ಯಯುತ ವರದಿಗೆ ಆದ್ಯತೆ ಅಗತ್ಯ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

Saturday, January 2nd, 2021
PaGo Award

ಮಂಗಳೂರು: ಕಟ್ ಆ್ಯಂಡ್ ಫೇಸ್ಟ್ ಸುದ್ದಿಯ ಬದಲು ವಸ್ತು ನಿಷ್ಠ ಮೌಲ್ಯಯುತ ಜತೆಗೆ ವಿಮರ್ಶೆಯಿಂದ ಕೂಡಿದ ಪತ್ರಿಕಾ ವರದಿಗಳು ಜನಪರ ಆಡಳಿತ ನಡೆಸಲು ಪೂರಕವಾಗುತ್ತವೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು. ಗುರುವಾರ ನಗರದ ಪತ್ರಿಕಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರುಗಿದ 2019ನೇ ಸಾಲಿನ ಪ.ಗೋ.(ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲಾಖೆಯಲ್ಲಿ ವರ್ಷಕ್ಕೆ ಒಂದು ಬಾರಿ ಅಡಿಟ್ ನಡೆಯುವ ಮೂಲಕ ಪಾರದರ್ಶಕತೆಯನ್ನು ಹೆಚ್ಚು ಮಾಡುವಂತೆ […]

ಕೈರಂಗಳದಲ್ಲಿ ಸೊಸೆಯ ಮೇಲೆಯೇ ಅತ್ಯಾಚಾರ ನಡೆಸಿದ ಮಾವ

Saturday, January 2nd, 2021
Lakshmi Narayana

ವಿಟ್ಲ : ಮುಡಿಪು ಸಮೀಪದ ಕೈರಂಗಳ ನಿವಾಸಿ ಹವ್ಯಕ ವಲಯದ ಗುರಿಕ್ಕಾರನೊಬ್ಬ ತನ್ನ ಮಗನ ಹೆಂಡತಿ(ಸೊಸೆ)ಯ ಮೇಲೆಯೇ ಅತ್ಯಾಚಾರ ನಡೆಸಿ ಜೀವಬೆದರಿಕೆ ಹಾಕಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಮೂಲತ: ವಿಟ್ಲ ಸಮೀಪದ ಕಾಂತಿಲ ನಿವಾಸಿಯಾಗಿದ್ದು ಇದೀಗ ಮುಡಿಪು ಸಮೀಪದ ಬಾಳೆಪುಣಿ ಗ್ರಾಮದ ಕೈರಂಗಳ ನಿವಾಸಿ ಹವ್ಯಕ ವಲಯದ ಗುರಿಕ್ಕಾರ ಲಕ್ಮಿನಾರಾಯಣ ಭಟ್ಟ(60)ಪ್ರಾಣಿಗಿಂತಲೂ ಕೀಳಾಗಿ ವರ್ತಿಸಿದ ವಿಕೃತ ಕಾಮುಕ. ಆರು ವರ್ಷಗಳ ಹಿಂದೆ ಈತನ ಪುತ್ರ ಎಸ್.ಜಿ.ಆರ್. ಅರ್ಥ್‌ಮೂವರ್‍ಸ್ ಮಾಲಿಕ ಶಿವರಂಜನ್ ವಿಟ್ಲ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಯುವತಿಯನ್ನು […]

ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಶಶಿಕುಮಾರ್ ಅಧಿಕಾರ ಸ್ವೀಕಾರ

Saturday, January 2nd, 2021
Shashikumar

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್  ಆಗಿ  ಐಪಿಎಸ್  ಅಧಿಕಾರಿ ಶಶಿಕುಮಾರ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಪೊಲೀಸ್ ರೀತಿಯಲ್ಲಿ ಕೆಲಸ ಮಾಡಿದರೆ ಅಪರಾಧ ರಹಿತ ಸಮಾಜ ನಿರ್ಮಾಣ ಸಾಧ್ಯ. ಪೊಲೀಸ್ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಹಿಂದೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿದ್ದ ಪೋನ್ ಇನ್ ಕಾರ್ಯಕ್ರಮ ಮುಂದುವರಿಯುವ ಜೊತೆಗೆ ಪ್ರತಿ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಅಹವಾಲು ಆಲಿಸುವ ಪೊಲ್ ವ್ಯವಸ್ಥೆ ರೂಪಿಸುವುದಾಗಿ ಹೇಳಿದ್ದಾರೆ. ಮಂಗಳೂರಿನಲ್ಲಿ ಪೊಲೀಸ್ ಮೇಲೆ ಹಲ್ಲೆ ಪ್ರಕರಣಗಳು ಕೇಳಿ […]

ಸಾಮಾನ್ಯ ಯುವತಿಯೊಬ್ಬಳು ಪಂಚಾಯತ್ ಅಧ್ಯಕ್ಷೆಯಾದಾಗ..

Friday, January 1st, 2021
Bharati

ಬಂಟ್ವಾಳ : ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಮಹಿಳಾ ಸಬಲೀಕರಣವೆಂಬುದು ಸಾಮಾನ್ಯ ವಿಷಯವಲ್ಲ. ಮಹಿಳೆ ಅಬಲೆಯಲ್ಲ,ಸಬಲೆ ಎಂದು ಎಷ್ಟೇ ಬೀಗಿದರೂ ಅವರಿಗೆ ಸಿಗಬೇಕಾದ ಅವಕಾಶಗಳನ್ನು ಸರಿಯಾಗಿ ನೀಡಿದರೆ ಮಾತ್ರ ಎಂತಹ ಕ್ಷೇತ್ರದಲ್ಲೂ ಮಿಂಚಬಲ್ಲರು ಎಂಬುದಕ್ಕೆ ಕೇರಳದ ತಾಜಾ ಉದಾಹರಣೆಗಳು ನಮ್ಮ ಮುಂದಿದೆ.ಈಗಾಗಲೇ ಎಳೆಯ ಪ್ರಾಯದ ಯುವತಿಯರು ಕೇರಳದ ರಾಜದಾನಿಯ ಮೇಯರ್ ಹುದ್ದೆಯಿಂದ ಹಿಡಿದು ಪಂಚಾಯತ್ ಅಧ್ಯಕ್ಷೆಯವರೆಗೆ ಹಲವಾರು ಮಂದಿ ಆಯ್ಕೆಯಾಗಿರುವುದು ಮಹಿಳಾ ಸಮುದಾಯಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಅದರಂತೆ ಗಡಿನಾಡ ಪ್ರದೇಶವಾದ ಮಂಜೇಶ್ವರದ ವರ್ಕಾಡಿ ಯಲ್ಲೂ ಅಂತಹ ಘಟನೆ […]

ಮತ ಎಣಿಕಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ : ಜಿಲ್ಲಾಧಿಕಾರಿ

Tuesday, December 29th, 2020
KV Rajendra

ಮಂಗಳೂರು :  ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ-2020 ರ ಸಂಬಂಧ ಎಲ್ಲಾ ಮತ ಎಣಿಕಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಡಿಸೆಂಬರ್ 29 ರಂದು ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 30 ರ ಮಧ್ಯರಾತ್ರಿ 12 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಂತೆ ನಿಷೇಧಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ […]