ಕುಕ್ಕೆ ಸುಬ್ರಹ್ಮಣ್ಯ ಸಮೀಪ ರಸ್ತೆಗೆ ಬಂದ ಕಾಡಾನೆಗಳ ಹಿಂಡು

Saturday, October 10th, 2020
Kodagu Elephant

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪ ಇರುವ ಕೊಡಗು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾಡಾನೆಗಳ ಹಿಂಡು ಪ್ರತ್ಯಕ್ಷ ಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪ‌ ಅರಣ್ಯ ಪ್ರದೇಶ ಇದ್ದು ಇಲ್ಲಿ ಹೆಚ್ಚಾಗಿ ಕಾಡಾನೆಗಳು ಇದೆ.  ಶನಿವಾರ ಕಾಡಾನೆಗಳ ಹಿಂಡು ರಸ್ತೆ ಇದ್ದಕ್ಕಿದ್ದಂತೆ ರಸ್ತೆ ದಾಟುವ ದೃಶ್ಯ ಕಂಡು ಬಂತು. ಆನೆಗಳ ಹಿಂಡನ್ನು ಕಂಡ ವಾಹನ ಸವಾರರು ಸ್ವಲ್ಪ ಹೊತ್ತು ಅಲ್ಲೇ ವಾಹನಗಳನ್ನು ನಿಲ್ಲಿಸಿ ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ದೃಶ್ಯವನ್ನು ಸೆರೆ ಹಿಡಿದರು.

ನಾಥ ಪಂಥದ ಗುರು ಹಾಗೂ ಹಿಂದೂ ಧರ್ಮದ ನಿಂದನೆ ಯುವ ಕಾಂಗ್ರೆಸ್​ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು

Saturday, October 10th, 2020
Mithun-Rai

ಪುತ್ತೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ, ಮಿಥುನ್ ರೈ ವಿರುದ್ಧ ಕ್ರಮ ಕೈಗೊಳ್ಳುವಂತೆ  ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಿಥುನ್ ರೈ ಅವಹೇಳನಕಾರಿಯಾಗಿ ಮಾತನಾಡಿರುವುದು ಹಿಂದೂ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದೆ. ಯೋಗಿ ಆದಿತ್ಯನಾಥ್ ಹಿಂದೂ ಧರ್ಮದ ಹಾಗೂ ನಾಥ ಪಂಥದ […]

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ ಹರಣ ಶಿಕ್ಷೆ ನೀಡಬೇಕು : ಶೋಭಾ ಕರಂದ್ಲಾಜೆ

Saturday, October 10th, 2020
shobha

ಉಡುಪಿ :  ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ ಹರಣ ಶಿಕ್ಷೆ ವಿಧಿಸುವುದು ಸೂಕ್ತ, ಅತ್ಯಾಚಾರ ಪ್ರಕರಣಗಳಿಗೆ ಧರ್ಮ, ಜಾತಿಯ ಲೇಪನ ಹಚ್ಚುವುದು ಸರಿಯಲ್ಲ. ಇದು ಮಾನಸಿಕ ಸ್ಥಿತಿಯ ಮೇಲೆ ಅವಲಂಭಿತವಾಗಿರುತ್ತದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಕಡೆಗಳಲ್ಲಿ ಪದೇ ಪದೇ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇದೇ ಸಂದರ್ಭದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆಯೂ ಎಲ್ಲ ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅತ್ಯಾಚಾರಿಗೆ ಗಲ್ಲು ಶಿಕ್ಷೆಗಿಂತಲೂ ಪುರುಷತ್ವ […]

ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುವ ಮಾಜಿ ಸಚಿವ ಜೈನ್

Friday, October 9th, 2020
AbhayachandraJain

ಮಂಗಳೂರು: ಮಾಜಿ‌ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಅವರು ಈಗ ಕಾರು ಬಿಟ್ಟು  ಪ್ರತಿದಿನ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುತ್ತಿದ್ದು ಯುವಕರಿಗೆ, ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‍ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ. ಅವರು ಹೊಸದಾಗಿ ಸೈಕಲೊಂದನ್ನು ಖರೀದಿಸಿದ್ದು ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿರುವ ಅಭಯಚಂದ್ರ ಜೈನ್ ಅವರು 71ರ ಇಳಿ ವಯಸ್ಸಿನಲ್ಲಿಲ್ಲೂ ಬಾಸ್ಕೆಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು […]

ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ, ಐವರು ವಶಕ್ಕೆ

Friday, October 9th, 2020
Kusuma

ಮಂಗಳೂರು : ಅವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಮಂಗಳೂರು ದಕ್ಷಿಣ ಎಸಿಪಿ ನೇತೃತ್ವದ ಪೊಲೀಸ್ ತಂಡ ಶಂಕಿತ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಕಣಂತೂರು ಬೆಳ್ಳೇರಿ ಸಮೀಪ  ಸೆ. 25ರಂದು 50 ವರ್ಷದ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗ್ಯಾಸ್ ಸ್ಟೌವ್ ತೆರೆದ ಸ್ಥಿತಿಯಲ್ಲಿ ಮತ್ತು ಮನೆಯ ಕರ್ಟೈನ್ಗೆ ಬೆಂಕಿ ಹಾಕಿರುವ ದುಷ್ಕರ್ಮಿಗಳು, ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ಪೊಲೀಸರ ತನಿಖೆಗೆ […]

ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಅಪರಿಚಿತ

Friday, October 9th, 2020
Robery

ಮಂಗಳೂರು : ವಿಟ್ಲ ಮೇಗಿನಪೇಟೆಯಲ್ಲಿ ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಯೊಂದಕ್ಕೆ ನುಗ್ಗಿ ಅಪರಿಚಿತ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ  ನಡೆದಿದೆ. ಮೇಗಿನಪೇಟೆ ನಿವಾಸಿ ಲಲಿತಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಅವರ ಮನೆಯ ಮುಂಬಾಗಿಲು ಮೂಲಕ ಅಪರಿಚಿತ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ, ಕೃತ್ಯ ಎಸಗಿದ್ದಾನೆ. ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈಕಟ್ಟಿ ಹಾಕಿ ಒಂದು ಜೊತೆ ಕಿವಿಯೋಲೆ ದರೋಡೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ಮತ್ತು […]

ಚಲಿಸುತ್ತಿದ್ದ ಮಿನಿ ಟೆಂಪೋ ಚಕ್ರ ಸ್ಫೋಟ, ವಾಹನ ಜಖಂ

Friday, October 9th, 2020
Tyre Blast

ಕಾಪು : ಹಳೆ ಸಾಮಗ್ರಿಗಳನ್ನು ತುಂಬಿಕೊಂಡು ಚಲಿಸುತ್ತಿದ್ದ ಮಿನಿ ಟೆಂಪೋ ಒಂದು ಚಕ್ರ ಸ್ಫೋಟಗೊಂಡು ಮಗುಚಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ನಾರಾಯಣ ಗುರು ಸಂಘದ ಸಮೀಪ ಗುರುವಾರ ನಡೆದಿದೆ. ಉಡುಪಿ ಕಡೆಯಿಂದ ಉಚ್ಚಿಲಕ್ಕೆ  ಚಲಿಸುತ್ತಿದ್ದ ಮಿನಿ ಟೆಂಪೊದ ಹಿಂಭಾಗದ ಚಕ್ರ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿ ಬಿದ್ದಿದೆ. ಅಪಘಾತದಲ್ಲಿ ಚಾಲಕ ಹಾಗೂ ಸಹ ಪ್ರಯಾಣಿಕ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ವಾಹನ ಜಖಂಗೊಂಡಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ತನಿಖೆ ಮಾಡಬೇಕಾಗಿದೆ : ಐವನ್

Friday, October 9th, 2020
Ivan

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಅಂದಾಜು ವೆಚ್ಚವು ಈ ಯೋಜನೆಯ ಈ ಹಿಂದಿನ ಅಂದಾಜು ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ  ಈ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಅಕ್ಟೋಬರ್ 8 ರ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,  ಸ್ಮಾರ್ಟ್ ಸಿಟಿ ಯೋಜನೆಯ ಅಂದಾಜು ವೆಚ್ಚ ಮತ್ತು ಡಿಪಿಆರ್ ಬಗ್ಗೆ ಸಾರ್ವಜನಿಕರಿಗೆ ಅನುಮಾನವಿದೆ. ಸ್ಮಾರ್ಟ್ ಸಿಟಿ […]

ಮಾನಸಿಕವಾಗಿ ನೊಂದ ಹದಿಮೂರರ ಬಾಲಕಿ ಆತ್ಮಹತ್ಯೆಗೆ ಶರಣು

Thursday, October 8th, 2020
pooja

ಮೂಡುಬಿದಿರೆ : ಸಹೋದರಿ ಬುದ್ದಿ ಮಾತು ಹೇಳಿದ ಕಾರಣ  ಮಾನಸಿಕವಾಗಿ ನೊಂದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮೂಡುಮಾರ್ನಾಡಿನ ಗುಡ್ಡದ ಮೇಲು ಎಂಬಲ್ಲಿ ಗುರುವಾರ ನಡೆದಿದೆ. ಕರುಣಾಕರ ಹಾಗೂ ಸುಶೀಲಾ ದಂಪತಿಯ ಪುತ್ರಿ ಪೂಜಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಪೂಜಾ ಮಧ್ಯಾಹ್ನ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಅವರೊಂದಿಗೆ ಜಗಳವಾಡಿ ಹೊಡೆದು ತೊಂದರೆ ನೀಡುತ್ತಿದ್ದಳು. ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಸಹೋದರಿ ಬುದ್ಧಿ ಮಾತು ಹೇಳಿದ್ದಾರೆ. ಇದರಿಂದಾಗಿ ಖಿನ್ನತೆಗೆ ಒಳಗಾದ ಪೂಜಾ ಮನೆ ಬಳಿ ಇರುವ ಹಾಡಿಯಲ್ಲಿ ಮರದ […]

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸರ್ಪ ಸಂಸ್ಕಾರ ಅರ್ಚಕ ನೇಣಿಗೆ ಶರಣು

Thursday, October 8th, 2020
sarpa samskaara

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸರ್ಪ ಸಂಸ್ಕಾರ ಕೆಲಸ ನಿರ್ವಹಿಸುತ್ತಿದ್ದ ಅರ್ಚಕರೊಬ್ಬರು ತಾನು ವಾಸವಿದ್ದ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಗುರುವಾರ ಸಂಜೆ ವರದಿಯಾಗಿದೆ. ಉಪ್ಪಿನಂಗಡಿ ನಾಳ ನಿವಾಸಿಯಾದ ಕೃಷ್ಣ ಮಯ್ಯ ಭಟ್ (55) ಕಳೆದ ಐದು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಕ್ರಿಯಾಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ತಾನು ವಾಸವಿದ್ದ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು […]