ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಪಕೋಡ ಮಾರಿ ಆಚರಿಸಿದ ಎನ್ಎಸ್ ಯುಐ

Thursday, September 17th, 2020
nsui

ಮಂಗಳೂರು: ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಎನ್ಎಸ್ ಯುಐ ಸದಸ್ಯರು  ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿ ಪಕೋಡ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಎನ್ಎಸ್ಯುಐ ದ‌.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ,  ವರ್ಷಕ್ಕೆ 12 ಕೋಟಿ‌ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂದು ಹೇಳಿದ ಕೇಂದ್ರ ಸರ್ಕಾರ, ವರ್ಷಕ್ಕೆ 2.50 ಕೋಟಿ ಉದ್ಯೋಗ ನಷ್ಟ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದೆ. ಅವೈಜ್ಞಾನಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ವಿದ್ಯಾರ್ಥಿಗಳನ್ನು, ಕೃಷಿಕರನ್ನು, ಬಡವರನ್ನು ಬೀದಿಗೆ […]

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಾಲಾ ಕಾಲೇಜು ಸಮೀಪ ತಂಬಾಕು ಮಾರಾಟ – ಕಠಿಣ ಕ್ರಮ

Thursday, September 17th, 2020
tobaco

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ, ಮಾರಾಟ ಮಾಡುವ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು. ಅವರು ಮಂಗಳವಾರ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಕೋಟ್ಪಾ-2003 ಕಾಯ್ದೆಯ ಅನುಷ್ಠಾನ ಮತ್ತು ತಂಬಾಕು ಮಾರಾಟಗಾರಿಗೆ ಪ್ರತ್ಯೇಕ ವ್ಯಾಪಾರ ಪರವಾನಗಿ ಅವಕಾಶ ಮತ್ತು ಪ್ರಯೋಜನಗಳು ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು. ಈಗಾಗಲೇ ಪಾಲಿಕೆ ವ್ಯಾಪ್ತಿಯ ಪ್ರತೀ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ ಕೊರೆತ, ಜಿಲ್ಲಾಧಿಕಾರಿ ಭೇಟಿ

Thursday, September 17th, 2020
Kamagari

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ ಕೊರೆತ  ತೀವ್ರವಾಗಿದ್ದು, ಸಮುದ್ರ ಭಾಗದಲ್ಲಿ ವಾಸವಾಗಿರುವ ಜನರಲ್ಲಿ ಆಂತಕ ಮನೆ ಮಾಡಿದೆ. ಕಡಲ ಕೊರೆತ ಸಮಸ್ಯೆಯ ಹಾನಿ ತಡೆಗಟ್ಟಲು ಸರ್ಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಅದಷ್ಟು ಬೇಗನೆ ರೂಪಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮ್ಯಾರಿಟೈಮ್ ಬೋರ್ಡ್ ಸಿಇಓ ಕಪಿಲ್ ಮೋಹನ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲೆಯ ವಿವಿದೆಡೆ ಕಡಲಕೊರೆತ ನಿಯಂತ್ರಣಕ್ಕೆ ನಡೆಯುತ್ತಿರುವ ವಿವಿಧ […]

ಮಂಗಳೂರು: ಹಣವಿಲ್ಲದೆ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಗೆ ಹಣಕಾಸಿನ ನೆರವು ಬಂದರೂ ಆತನನ್ನು ಉಳಿಸಲಾಗಲಿಲ್ಲ

Thursday, September 17th, 2020
geetha

ಮಂಗಳೂರು: ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಹಣಕಾಸಿನ ನೆರವು  ಬಂದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು  ಪತ್ನಿ ಕಣ್ಣೀರಿಟ್ಟಿದ್ದಾರೆ. ಹಣವಿಲ್ಲದೆ ನಗರದ ಯೆನೆಪೋಯ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಯನ್ನು ಮೊದಲು ಹಣವಿಲ್ಲದ ಕಾರಣ ಚಿಕಿತ್ಸೆ ನೀಡಲು ಒಪ್ಪಲಿಲ್ಲ ಬಳಿಕ,  ತಮ್ಮ ಪತಿಯನ್ನು ಉಳಿಸಲು ಹಣಕಾಸಿನ ನೆರವು ನೀಡಿ ಎಂದು ಮಹಿಳೆಯೋರ್ವರು ವೀಡಿಯೋ ಮೂಲಕ ಮಾಡಿದ ಮನವಿಗೆ ಒಂದೇ ದಿನ 14 ಲಕ್ಷ ರೂ. ನೆರವು ಹರಿದು ಬಂದಿದೆ. ಆದರೆ ಕೊನೆಯ ಕ್ಷಣದವರೆಗೆ ಹೋರಾಡಿದರೂ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ […]

ದುಬೈ ಕಾರ್ ರೇಸಿನಲ್ಲಿ ಭಾಗವಹಿಸಲಿರುವ ಮೂಡಬಿದಿರೆಯ ಸುಹೈಬ್

Wednesday, September 16th, 2020
suhail

ಮಂಗಳೂರು  : ದುಬೈನಲ್ಲಿ ಸೆಪ್ಟೆಂಬರ್ 17 ರಂದು ನಡೆಯಲಿರುವ “ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020” ಕಾರ್ ರೇಸ್‌ನ ಭಾರತೀಯ ತಂಡದಲ್ಲಿ ಮೂಡಬಿದಿರೆಯ ಯುವಕ ಸುಹೈಬ್ ಅಲಿ ಭಾಗವಹಿಸುತ್ತಿದ್ದಾರೆ. ದುಬೈನಲ್ಲಿ  ಸೆಪ್ಟೆಂಬರ್ 17 ರಂದು ಗುರುವಾರ 6ಗಂಟೆಗಳ ಕಾಲ ನಡೆಯಲಿರುವ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್ 2020  ಕಾರ್ ರೇಸ್‌ನಲ್ಲಿ ಐವರನ್ನೊಳಗೊಂಡ ಭಾರತದ ತಂಡ ಭಾಗವಹಿಸಲಿದೆ. ಐವರ ಪೈಕಿ ಮೂಡಬಿದಿರೆಯ ಸುಹೈಬ್ ಅಲಿ(28)ಕೂಡ ಒಬ್ಬರಾಗಿದ್ದು ನಿನ್ನೆ ಬಜಪೆ ಏರ್‌ಪೋರ್ಟಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದ.ಕ.ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ.ಕೆ.ಅಬೂಬಕ್ಕರ್(ಮಡಿಕೇರಿ) ಪುತ್ರ ಸುಹೈಬ್ […]

ಅಂಗಡಿಯಿಂದ ಹಾಡಹಗಲೇ ಒಂದು ಲಕ್ಷ ರೂ. ಹಣ ಕದ್ದ ಆರೋಪಿಯ ಬಂಧನ

Wednesday, September 16th, 2020
safi

ಮಂಗಳೂರು : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ತಿಂಗಳಾಡಿ ಎಂಬಲ್ಲಿ ಅಂಗಡಿಯಿಂದ ಹಾಡಹಗಲೇ ಹಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು  ಬುಧವಾರ ಬಂಧಿಸಿದ್ದಾರೆ. ಆರೋಪಿ ಮಹಮ್ಮದ್ ಶಾಫಿ ( 28 ) ಯನ್ನು ಮನೆಯಿಂದ  ದಸ್ತಗಿರಿ ಮಾಡಿ ಕಳುವಾಗಿದ್ದ ಒಂದು ಲಕ್ಷ ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಂಧನಸೆ. 14 ರಂದು ಮಧ್ಯಾಹ್ನ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ಮಾತೃಶ್ರೀ ಕಾಂಪ್ಲೆಕ್ಸ್ನ ಅಂಗಡಿಯೊಂದರಿಂದ ಆರೋಪಿ 1 ಲಕ್ಷ ಹಣ ಕಳವು […]

ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಪ್ರಸ್ತಾಪಗಳು ಸರಕಾರದ ಮುಂದಿಲ್ಲ: ಶಾಸಕ ಕಾಮತ್ ಸ್ಪಷ್ಟನೆ

Wednesday, September 16th, 2020
Income tax Road

ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. […]

ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಎರಡು ಅಂಗಡಿಯಲ್ಲಿ ಬೆಂಕಿ ಅನಾಹುತ

Wednesday, September 16th, 2020
fire Udupi

ಉಡುಪಿ : ಇಲ್ಲಿನ  ಸರ್ವೀಸ್ ಬಸ್ ನಿಲ್ದಾಣದಲ್ಲಿನ ಎರಡು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಎರಡು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬುಧವಾರ  ಮುಂಜಾನೆ ಈ ಅವಘಡ ಉಂಟಾಗಿದೆ ಎಂದು ಹೇಳಲಾಗಿದ್ದು 2 ಅಂಗಡಿ ಸಂಪೂರ್ಣ ಸುಟ್ಟುಹೋಗಿವೆ. ಈ ಅಗ್ನಿ ಅನಾಹುತದಿಂದಾಗಿ ಎರಡು ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ ಎನ್ಮಲಾಗಿದೆ. ಸ್ಥಳಕ್ಕೆ ನಗರ ಸಭಾ ಸದಸ್ಯರು ಮತ್ತು  ಅಧಿಕಾರಿಗಳು ಬೇಟಿ ನೀಡಿ ದ್ದಾರೆ.

ಕರಾವಳಿಯ ಕೆಲವಡೆ ಹಸುರು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು

Wednesday, September 16th, 2020
green Water

ಸುರತ್ಕಲ್‌:  ಕರಾವಳಿಯ ಕೆಲವಡೆ ಸಮುದ್ರದ ನೀರು  ಹಸುರು ಬಣ್ಣದಲ್ಲಿ ರಾತ್ರಿ ವೇಳೆ ನೀಲಿ ಬಣ್ಣದಲ್ಲೂ ಗೋಚರವಾಗಿರುವುದು ಮಂಗಳವಾರ ಕಂಡು ಬಂದಿದೆ. ಸಮೀಪದ ಹೊಸಬೆಟ್ಟು, ಮುಕ್ಕ ಸಮುದ್ರದಲ್ಲಿ ಈ ರೀತಿ ಗೋಚರವಾಗಿದ್ದು ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ವಿವಿಧೆಡೆಯಿಂದ ನೀರು ಸಮುದ್ರ ಸೇರಿದೆ. ನೀರಿನಲ್ಲಿ ಅತೀ ಸೂಕ್ಷ್ಮ ಆಲ್ಗಾಲ್ ನಿಂದ‌ ಹೆಚ್ಚಾಗಿ ಉಪ್ಪು ನೀರಿನ ಬಣ್ಣ ಬಣ್ಣ ಬದಲಾಗುತ್ತದೆ. ಹೀಗಾಗಿ ಸಮುದ್ರದ ಬಣ್ಣ ಹಸುರಾಗಿ ಗೋಚರಿಸುತ್ತದೆ. ಇದು ಸಮುದ್ರ ತೀರದುದ್ದಕ್ಕೂ ಗೋಚರಿಸದೇ ಕೆಲವು ಭಾಗದ ದಡದಲ್ಲಿ ಮಾತ್ರ ಕಂಡು ಬರುತ್ತದೆ […]

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನಾಮಕರಣ ಮಾಡಲು ಮನವಿ

Tuesday, September 15th, 2020
Biruver Kudla

ಮಂಗಳೂರು  : ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿ ವತಿಯಿಂದ  ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀನಾರಾಯಣ ಗುರುಗಳ ಹೆಸರು ನೀಡಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ದಿವಾಕರ್ ಅವರಿಗೆ ಮತ್ತು ಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಅವರಿಗೆ  ಮನವಿ ನೀಡಲಾಯಿತು. ಮನವಿಯನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಅವರಿಗೆ ಈ ಮೊದಲೇ ಬಗ್ಗೆ 2018 ಕ್ಕೆ ಮನವಿಯನ್ನು ನೀಡಿದ್ದೇವೆ. ಈಗ ಮತ್ತೊಮ್ಮೆ ಮರು ಮನವಿಯನ್ನು ಶಾಸಕರಿಗೆ ನಮ್ಮ ಸಂಸ್ಥೆಯ ವತಿಯಿಂದ ನೀಡಿದ್ದೇವೆ […]