ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ: ಛದ್ಮವೇಷ ಸ್ಫರ್ಧೆಯಲ್ಲಿ ರಂಜಿಸಿದ ದೇವಳ ನೌಕರರು

Tuesday, October 23rd, 2018
veerendra-hegde

ಉಜಿರೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಮಂಗಳವಾರ ಎಲ್ಲೆಲ್ಲೂ ಸಂಭ್ರಮ – ಸಡಗರ. ಹಬ್ಬದ ವಾತಾವರಣ. ದೇವಳ ನೌಕರರು ಛದ್ಮವೇಷ ಸ್ಪರ್ಧೆಯಲ್ಲಿಉತ್ಸಾಹದಿಂದ ಭಾಗವಹಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರಯ ಸ್ಫರ್ದೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳು ಸಾಹಿತ್ಯ ಸಮ್ಮೇಳನ-2018

Tuesday, October 23rd, 2018
putturu

ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಸಹಕಾರದೊಂದಿಗೆ ನವೆಂಬರ್ 03 ರಂದು ಪುತ್ತೂರಿನ ಸುದಾನ ವಸತಿಯುತ ಶಾಲಾ ವಠಾರದಲ್ಲಿ ಆಕರ್ಷಕ ಮೆರವಣಿಗೆ, ವಸ್ತು ಪ್ರದರ್ಷನ, ಆಹಾರ ಮೇಳ,  ವಿವಿಧ ಸಾಹಿತ್ಯಿಕ ಗೋಷ್ಠಿಗಳು,   ಮತ್ತು ಸಾಂಸ್ಕೃತಿಕ ಮನರಂಜನೆ, ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗುತ್ತಿರುವ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ –  ತುಳು ಪರ್ಬ-2018 ರ ಆಮಂತ್ರಣವನ್ನು ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಬಿ.ಎ.ವಿವೇಕ ರೈ ಯವರಿಗೆ ಸಮ್ಮೇಳನ […]

ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Tuesday, October 23rd, 2018
HJS1

ಮಂಗಳೂರು: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ, ಅಯ್ಯಪ್ಪ ಭಕ್ತರ ಸಮೂಹ ಹಾಗೂ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ ಅವರು, ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ […]

ಟೋಲ್‌ಗೇಟ್‌ ಅಧಿಕಾರಿಗಳಿಗೆ ಹಣ ಮಾಡುವ ಸ್ಕೀಮ್‌: ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ

Tuesday, October 23rd, 2018
surathkal

ಸುರತ್ಕಲ್‌: ಕಾನೂನಿಗೆ ವಿರುದ್ಧವಾಗಿ ಸುರತ್ಕಲ್‌ನಲ್ಲಿ ಟೋಲ್‌ಗೇಟ್‌ ನಿರ್ಮಿಸಿ ಹಲವು ವರ್ಷಗಳಿಂದ ಜನರ ಹಣ ಸುಲಿಗೆ ಮಾಡಲಾಗುತ್ತಿದೆ. ಟೋಲ್‌ಗೇಟ್‌ ಅಧಿಕಾರಿಗಳಿಗೆ ಹಣ ಮಾಡುವ ಸ್ಕೀಮ್‌ ಎಂದು ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಹೇಳಿದರು. ಎನ್‌ಐಟಿಕೆ ಸಮೀಪ ಇರುವ ಟೋಲ್‌ಗೇಟ್‌ನ ಪರವಾನಿಗೆ ನವೀಕರಣ ವಿರೋಧಿಸಿ ಹಾಗೂ ಮುಚ್ಚುವಂತೆ ಆಗ್ರಹಿಸಿ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸುರತ್ಕಲ್‌ನಲ್ಲಿ ಪ್ರಾರಂಭಿಸಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಮಾತನಾಡಿ, […]

ಶಬರಿಮಲೆಗೆ ಪ್ರವೇಶಿಸಿದ ಆ ಹುಡುಗಿ ಹೇಳಿದ್ದೇನು ಗೊತ್ತಾ?

Monday, October 22nd, 2018
Janani sabharimala

ತಿರುವನಂತಪುರಂ : ಪ್ಲೆಕಾರ್ಡ್ ಹಿಡಿದು ಶಬರಿಮಲೆಗೆ ಬಂದ  ಹುಡುಗಿಯೊಬ್ಬಳ ನಡೆ ಲಕ್ಷಾಂತರ ಭಕ್ತರನ್ನು ಗಮನವನ್ನು  ಸೆಳೆಯಿತು. ಅಷ್ಟಕ್ಕೂ ಆ ಹುಡುಗಿ ಹೇಳಿದ್ದೇನು. ಶುಕ್ರವಾರದಂದು ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತಂದೆಯ ಜೊತೆ  9 ವರ್ಷದ  ಹುಡುಗಿಯೊಬ್ಬಳು ಬಂದಿದ್ದಳು. ಪ್ಲೆಕಾರ್ಡ್ ಹಿಡಿದಿದ್ದ ಆ ಹುಡುಗಿ ನನಗೀಗ 9 ವರ್ಷ ವಯಸ್ಸು, ನನಗೆ ಇನ್ನು 50 ವರ್ಷ ವಯಸ್ಸಾದ ಮೇಲೆ ಮತ್ತೆ ನಿನ್ನ ದರ್ಶನಕ್ಕೆ ಬರುತ್ತೇನೆ” ಎಂದು ಪುಟ್ಟ ಬಾಲಕಿಯೊಬ್ಬಳು ಅಯ್ಯಪ್ಪನನ್ನು ಪ್ರಾರ್ಥಿಸಿದಳು. 9 ವರ್ಷದ ಜನನಿ ಶುಕ್ರವಾರದಂದು ಕೈಯಲ್ಲಿ ಪ್ಲೆಕಾರ್ಡ್ ಹಿಡಿದಿದ್ದ ಆಕೆ ಮತ್ತು ತಂದೆ ಸತೀಶ್ ಕುಮಾರ್, ‘ಸುಪ್ರೀಂ ಕೋರ್ಟ್ […]

ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಕ್ಕೆ ತಡೆಯೊಡ್ಡಿದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

Monday, October 22nd, 2018
dyfi

ಮಂಗಳೂರು  : ಚಿಲ್ಲರೆ ಬೀಡಿ ಸಿಗರೇಟ್-ತಂಬಾಕು ಪದಾರ್ಥಗಳ ಮಾರಾಟಕ್ಕೆ ಪ್ರತ್ಯೇಕ ಲೈಸೆನ್ಸ್ ಪಡೆಯಬೇಕೆಂಬ ರಾಜ್ಯ ಸರ್ಕಾರದ ಅವೈಜ್ಞಾನಿಕ ತೀರ್ಮಾನದ ವಿರುದ್ಧ, ವಿನಾ:ಕಾರಣ ಪೋಲಿಸ್ ದೌರ್ಜನ್ಯದ ವಿರುದ್ಧ, ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರ ಬದುಕನ್ನು ರಕ್ಷಿಸಲು ಒತ್ತಾಯಿಸಿ ದ.ಕ.ಜಿಲ್ಲಾ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರ ಸಂಘದ ನೇತ್ರತ್ವದಲ್ಲಿ ನಗರದಲ್ಲಿ ಸೋಮವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಬೃಹತ್ ಪ್ರತಿಭಟನಾ ಪ್ರದರ್ಶನ ಜರುಗಿತು. 300ಕ್ಕೂ ಮಿಕ್ಕಿದ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರು ನಗರದ ಮಿನಿ ವಿಧಾನಸೌಧದಿಂದ ಮೆರವಣಿಗೆಯಲ್ಲಿ ಹೊರಟು,ಬೀಡಿ ಸಿಗರೇಟ್ ಮಾರಾಟಕ್ಕೆ ಪ್ರತ್ಯೇಕ ಲೈಸನ್ಸ್ […]

ರೆಹನಾ ಫಾತಿಮಾಗೆ ಕೇರಳ ಮುಸ್ಲಿಂ ಜಮಾತ್ ಕೌನ್ಸಿಲ್ ಬಹಿಷ್ಕಾರ

Monday, October 22nd, 2018
Rehena fathima

ಕೊಚ್ಚಿ: ಕೇರಳದ ಬಿಎಸ್‌ಎನ್‌ಎಲ್ ಉದ್ಯೋಗಿ ಹಾಗೂ ಹೋರಾಟಗಾರ್ತಿ ರೆಹನಾ ಫಾತಿಮಾ ಅವರನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಯತ್ನಿಸಿ ಮುಸ್ಲಿಂರ ಮಾನ ಹರಾಜು ಮಾಡಿದಕ್ಕೆ  ಮುಸ್ಲಿಂ ಸಮುದಾಯದ ಉಚ್ಚಾಟಿಸಿದೆ. ಅಯ್ಯಪ್ಪ ದೇಗುಲ ಪ್ರವೇಶಿಸಲು ಪ್ರಯತ್ನಿಸುವ ಮೂಲಕ ಲಕ್ಷಾಂತರ ಹಿಂದು ಭಕ್ತರ ಭಾವನೆಗಳಿಗೆ ಘಾಸಿಗೊಳಿಸಿದ ಕಾರಣಕ್ಕೆ ರೆಹನಾ ಫಾತಿಮಾ ಹಾಗೂ ಆಕೆಯ ಕುಟುಂಬವನ್ನು ಅವರನ್ನುಸಮುದಾಯದಿಂದ ಬಹಿಷ್ಕರಿಸಲಾಗಿದೆ ಎಂದು ಕೇರಳ ಮುಸ್ಲಿಂ ಜಮಾತ್ ಕೌನ್ಸಿಲ್ ತಿಳಿಸಿದೆ. ‘ಕಿಸ್ ಆಫ್ ಲವ್’ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ರೆಹನಾ, ಬೆತ್ತಲೆಯಾಗಿ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಯ್ಯಪ್ಪ […]

ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ಮಾಹಿತಿ ಕಾರ‍್ಯಗಾರ

Monday, October 22nd, 2018
Alvas Photography

ಮೂಡಬಿದಿರೆ: ಛಾಯಾಗ್ರಹಣ ಪತ್ರಿಕೋದ್ಯಮದ ಒಂದು ಅಂಗವಾಗಿದೆ. ವರದಿಗಾರರು ಘಟನೆಗಳನ್ನು ಬರವಣಿಗೆಯ ಮೂಲಕ ಜನರಿಗೆ ತಲುಪಿಸಿದರೆ ಛಾಯಾಗ್ರಾಹಕರು ತಮ್ಮ ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿಯುದರ ಮೂಲಕ ನೀಡುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಛಾಯಾಗ್ರಾಹಕ ರವಿ ಪೊಸವಣಿಕೆ ತಿಳಿಸಿದರು. ಆಳ್ವಾಸ್ ಪದವಿ ಪತ್ರಿಕೋದ್ಯಮ ವಿಭಾಗ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಛಾಯಾಗ್ರಹಣದ ಕುರಿತಾದ ಮಾಹಿತಿ ಕಾರ‍್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಛಾಯಾಗ್ರಹಣ ಒಂದು ಅದ್ಬುತ ಕಲೆಯಾದ್ದರಿಂದ, ಛಾಯಾಗ್ರಾಹಕರಿಗೆ ಅಗಾಧ ತಾಳ್ಮೆ ಹಾಗೂ ಸಮಯ ಪ್ರಜ್ಞೆಯಿರಬೇಕು ಎಂದರು. ಕಾರ‍್ಯಕ್ರಮದಲ್ಲಿ ಛಾಯಾಗ್ರಾಹಣದ […]

ಮೀನುಗಾರಿಕಾ ಕಾಲೇಜಿನಲ್ಲಿ 3 ದಿನಗಳ ಫಿಶ್ಕೋ ಫೆಸ್ಟಿವಲ್ ಗೆ ಚಾಲನೆ

Monday, October 22nd, 2018
fishco festival

ಮಂಗಳೂರು : ನಗರದ ಮೀನುಗಾರಿಕಾ ಮಹಾವಿದ್ಯಾಲಯವು 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್ ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ರವರು ಚಾಲನೆ ನೀಡಿದರು. ಕಾಲೇಜಿನ ನುರಿತ ಪ್ರಾದ್ಯಾಪಕರು ವಿಶೇಷವಾದ ಸಂಶೋದನೆ ಮಾಡುವಲ್ಲಿ ನುರಿತರಾಗಿದ್ದರೂ ಸಹಾ ಮೀನುಗಾರಿಕೆಗೆ ಪೂರಕ ಸಂಶೋದನೆಗಳನ್ನು ಮಾಡುವ ಅಗತ್ಯತೆ ಇದೆ ಎಂದು ಅವರು ಹೇಳಿದರು. ಅಲ್ಲದೇ, ಶೈಕ್ಷಣಿಕವಾಗಿ ಮಾಹಿತಿ ರವಾನಿಸಲು ಎಲ್ಲಾ ಅದ್ಯಾಪಕ ವೃಂದದವರ ಜವಾಬ್ದಾರಿಯಾಗಿರುತ್ತದೆ ಎಂದು […]

ಡಿಸಿ ಮನ್ನಾ ಭೂಮಿ ಒತ್ತುವರಿ ತೆರವುಗೊಳಿಸಲು ಕಂದಾಯ ಇಲಾಖೆಗೆ ಡಿಸಿ ಸೂಚನೆ

Monday, October 22nd, 2018
DC-Manna land

ಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ಸಮಾಜ ಕಲ್ಯಾಣ ಇಲಾಖೆಯು ಪ್ರಕರಣ ವಿಚಾರಣಾ ಹಂತದಲ್ಲಿ ನಿರಂತರವಾಗಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೌರ್ಜನ್ಯ ಪ್ರಕರಣಗಳ ದೂರುಗಳು ಬಂದಾಗ ವಿಳಂಭವಿಲ್ಲದೇ ದಾಖಲಿಸಬೇಕು. ಪ್ರಕರಣಗಳು ದಾಖಲಾದ ನಂತರ ವಿಚಾರಣೆಯಾಗಿ, ನೈಜ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು […]