ಕೇರಳಕ್ಕೆ ಮರಳು ಅಕ್ರಮ ಸಾಗಾಟ: ಟಿಪ್ಪರ್, ಲಾರಿ ಮುಟ್ಟುಗೋಲು

Monday, October 22nd, 2018
Lorry

ಮಂಗಳೂರು: ಅಡ್ಯಾರ್ ಕಣ್ಣೂರಿಂದ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಟಿಪ್ಪರ್, ಲಾರಿಗಳನ್ನು ಸಂಚಾರಿ‌ ಪೊಲೀಸರು  ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಮುಟ್ಟುಗೋಲು ಹಾಕಿದ್ದಾರೆ. ಸಬ್ ಇನ್ ಸ್ಪೆಕ್ಟರ್ ಕಬ್ಬಲ್ ರಾಜ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ಬೆಳಗ್ಗಿನ ಜಾವ ದಾಳಿ  ನಡೆಸಿ 10 ಚಕ್ರದ ಬೃಹತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಲಪಾಡಿ ಬಳಿ ಮುಟ್ಟುಗೋಲು ಹಾಕಿಕೊಂಡರು. ತಲಪಾಡಿ ದೇವಿನಗರ ಮೂಲಕ ಕೇರಳಕ್ಜೆ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಮರಳನ್ನು ಅಕ್ರಮವಾಗಿ ಟಿಪ್ಪರ್ ನಲ್ಲೂ ಸಾಗಿಸಲಾಗುತ್ತಿತ್ತು. ಟಿಪ್ಪರನ್ನೂ ಪೊಲೀಸರು ವಶಕ್ಕೆ […]

ಯೋಗಾಸನ ಸ್ಪರ್ಧೆ: ಆಳ್ವಾಸ್‍ನ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Monday, October 22nd, 2018
alwas-clg

ಮೂಡುಬಿದಿರೆ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ಪ್ರಶಸ್ತಿ ಅದರಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕನ್ನಡ ಮಾಧ್ಯಮ ಐವರು ವಿದ್ಯಾರ್ಥಿಗಳು ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ, ನವೆಂಬರ್‍ನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 14ರ ವಯೋಮಿತಿಯ ಬಾಲಕರ ವಿಭಾಗದ ಗುಂಪು ಯೋಗದಲ್ಲಿ ಆಳ್ವಾಸ್‍ನ ಸಂಜು ಮುತ್ತಪ್ಪ , 17ರ ವಯೋಮಿಯ ಬಾಲಕರ ವಿಭಾಗದಲ್ಲಿ ಅಥ್ಲೇಟಿಕ್ ಯೋಗದಲ್ಲಿ ಮಿಲನ್ ಲೋಕೇಶ್ , ರಿದೇಮಿಕ್ ಯೋಗಾ ಪವನ್ […]

ಶಿಷ್ಯವೇತನ ಪಾವತಿಸದ ವಿರುದ್ಧ ವೈದ್ಯ ವಿದ್ಯಾರ್ಥಿಗಳು ನಗರದ ವೆನ್ಲಾಕ್ ಆಸ್ಪತ್ರೆ ಎದುರು ಪ್ರತಿಭಟನೆ

Monday, October 22nd, 2018
wenlock1

ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೌಲಭ್ಯ ಪಡೆಯುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಸರ್ಕಾರಿ ಕೋಟಾದ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 8 ತಿಂಗಳಿನಿಂದ ಶಿಷ್ಯವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಇಂದು ವೈದ್ಯ ವಿದ್ಯಾರ್ಥಿಗಳು ನಗರದ ವೆನ್ಲಾಕ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು‌. ಈ ಬಗ್ಗೆ ಮಾತನಾಡಿದ ವೈದ್ಯ ವಿದ್ಯಾರ್ಥಿಗಳು, ದಿನದ 24 ಗಂಟೆಗಳ ಕಾಲ ದುಡಿಯುತ್ತೇವೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬ ಭೀತಿಯಿದೆ. ಆದರೂ ನಾವು ಎಲ್ಲಾ ರೀತಿಯಲ್ಲಿ ರೋಗಿಗಳ ಶುಶ್ರೂಷೆಯನ್ನು ಮಾಡುತ್ತಿದ್ದೇವೆ. ಸರ್ಕಾರಿ […]

ಮಹಿಳಾ ಪ್ರವೇಶ ವಿರೋಧಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

Monday, October 22nd, 2018
protest

ಪುತ್ತೂರು: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕು. ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೊಲನದಲ್ಲಿ ಒಕ್ಕೊರಲಿನ ಒತ್ತಾಯ. ಪುತ್ತೂರು, ಅ. 22 ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟುಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ. ಇಂದು ದೇಶದಲ್ಲಿ […]

ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋದ ನಟಿ ರಾಗಿಣಿ ದ್ವಿವೇದಿ

Monday, October 22nd, 2018
ragini-fish

ಮಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋಗಿದ್ದಾರೆ. ನಾನ್ವೆಜ್ ಪ್ರಿಯೆ ರಾಗಿಣಿ ಎರಡು ದಿನ ಮಂಗಳೂರಿನಲ್ಲಿದ್ದರು. ನಿನ್ನೆ ರಾತ್ರಿ ಏರ್ಪೋರ್ಟ್ಗೆ ತೆರಳುವ ವೇಳೆ ಯೆಯ್ಯಾಡಿಯ ರೆಸ್ಟೋರೆಂಟ್ಗೆ ಎಂಟ್ರಿ ಕೊಟ್ಟ ಅವರು, ಕಾನೆ ಮೀನು, ಏಡಿ, ಅಂಜಲ್, ಸಿಗಡಿ ಮತ್ತು ನೀರು ದೀಸ ಸವಿದರು. ಈ ವೇಳೆ ಬಿಗ್ ಎಫ್ಎಂ ಆರ್ಜೆ ಎರೋಲ್ ಅವರು ರಾಗಿಣಿಗೆ ಸಾಥ್ ನೀಡಿದ್ರು .

ತಪಾಸಣೆ ಮಾಡಲು ಬಂದ ಲೇಡಿ ಎಸ್​ಐಗೆ ಗೇಲಿ… ಐವರ ಬಂಧನ

Monday, October 22nd, 2018
arrested

ಮಂಗಳೂರು: ವಾಹನ ತಪಾಸಣೆ ಮಾಡಲು ಬಂದ ಲೇಡಿ ಟ್ರಾಫಿಕ್ ಎಸ್ಐಗೆ ನಿಂದಿಸಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಟ್ರಾಫಿಕ್ ಠಾಣೆಯ ಎಸ್ಐ ಮಂಜುಳಾ ಕೆ.ಎಂ. ಅವರು ಸಿಬ್ಬಂದಿ ಜೊತೆ ಬಿ.ಸಿ. ರೋಡ್ ನಾರಾಯಣ ಗುರು ಸರ್ಕಲ್ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಟಿಂಟೆಡ್ ಗ್ಲಾಸ್ ಮತ್ತು ಸೀಟ್ ಬೆಲ್ಟ್ ಹಾಕದಿರುವ ಕಾರನ್ನು ನಿಲ್ಲಿಸಿ ಅವರು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಐವರು ಲೇಡಿ ಎಸ್ಐಗೆ ನಿಂದಿಸಿದ್ದಾರೆ. ಮೂಡಬಿದ್ರೆಯ ಜಿತೇಶ್ (31), ವಿಕೆಶ (27), ಆಸ್ಟಿನ್ (23), […]

ಶೃತಿ ಹರಿಹರನ್​ ಆರೋಪ ಪ್ರಕರಣ: ನಿಜವಾಗಿ ನಡೆದಿದ್ದರೆ ಖಂಡಿತ ಶಿಕ್ಷೆಯಾಗಬೇಕು: ರಾಗಿಣಿ ದ್ವಿವೇದಿ

Monday, October 22nd, 2018
ragini-2

ಮಂಗಳೂರು: ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಈ ಘಟನೆ ನಿಜವಾಗಿ ನಡೆದಿದ್ದರೆ ಖಂಡಿತ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಮಿ ಟೂ ಮೂಮೆಂಟ್ ಪ್ರತಿದಿನ ಬೆಳೆಯುತ್ತಿದೆ. ಎಲ್ಲರೂ ಅವರವರ ನೋವು ಹೇಳುತ್ತಿದ್ದಾರೆ. ಹುಡುಗಿಯರಿಗಾಗಲಿ, ಹುಡುಗರಿಗಾಗಲಿ ಹೀಗಾದಾಗ ನೋವು ಆಗುತ್ತೆ ಎಂದರು. ಮಿ ಟೂ ಅಭಿಯಾನದಿಂದ ನಿಜವಾದ ಘಟನೆ ಹೊರಬರುತ್ತಿದೆ. ಇದು ತುಂಬಾ ಒಳ್ಳೆಯ ಅಭಿಯಾನ. ಸುಮ್ ಸಮ್ಮನೇ ಯಾರು […]

ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ನಟಿ ರಾಗಿಣಿ ದ್ವಿವೇದಿ ಭೇಟಿ..!

Monday, October 22nd, 2018
ragini

ಮಂಗಳೂರು: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ನಿನ್ನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಂಜೆ ದೇವಸ್ಥಾನದ ಬಾಗಿಲು ತೆಗೆಯುವ ಮೊದಲೇ ಕಾರಿನಲ್ಲಿ ಬಂದು ಕಾದಿದ್ದ ರಾಗಿಣಿ ದ್ವಿವೇದಿ ದೇವಾಲಯದ ಬಾಗಿಲು ತೆಗೆಯುತ್ತಿದ್ದಂತೆ ದೇವಸ್ಥಾನದ ಬದಿಯ ಹೂವಿನ ಅಂಗಡಿಯಲ್ಲಿ ತಾವೇ ಮಲ್ಲಿಗೆ ಹೂವನ್ನು ಖರೀದಿಸಿ ತಂದು ದೇವರ ಪೂಜೆಗೆ ನೀಡಿದರು. ತಲೆಗೆ ದುಪಟ್ಟಾ ಹೊದ್ದು ದೇವಾಲಯ ಪ್ರವೇಶಿಸಿದ ರಾಗಿಣಿ, ಈಗಷ್ಟೇ ಬಿಡುಗಡೆಯಾಗಿರುವ ‘ಟೆರರಿಸ್ಟ್’ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು […]

ಮಂಗಳೂರು ದಸರಾದಲ್ಲಿ ಪಾಲ್ಗೊಂಡ 75ಕ್ಕೂ ಅಧಿಕ ಆಕರ್ಷಕ ಟ್ಯಾಬ್ಲೋಗಳು

Saturday, October 20th, 2018
Kudroli sharadhe

ಮಂಗಳೂರು : ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಪ್ರಯುಕ್ತ ಕಳೆದ ಒಂಬತ್ತು ದಿನಗಳ ಕಾಲ  ಭಕ್ತರಿಂದ ಪೂಜಿಸಲ್ಪಟ್ಟ ನವದುರ್ಗೆಯರು, ಶಾರದಾ ಮಾತೆ ಹಾಗೂ ಗಣಪತಿಯ ವಿಗ್ರಹವನ್ನು ಶನಿವಾರ ಬೆಳಗ್ಗೆ ಕ್ಷೇತ್ರದ  ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು. ಶನಿವಾರ ಬೆಳಗ್ಗೆ 8:29ರರ ವೇಳೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ಸನ್ನಿಧಿಯ ಪುಷ್ಕರಿಣಿಯಲ್ಲಿ ಶಾರದಾ ಮಾತೆ ಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಮಾಪನಗೊಂಡಿತು. ರಾತ್ರಿಯುದ್ದಕ್ಕೂ ಸಾಗಿದ ಶೋಭಾಯಾತ್ರೆ ಸುಮಾರು 9 ಕಿ.ಮೀ. ಸಾಗಿದ್ದು, ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನಸಮೂಹ ಆಗಮಿಸಿದ್ದರು. 75ಕ್ಕೂ ಅಧಿಕ ವಿವಿಧ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. […]

ಟೆಲಿಕಾಂ ನಿವೃತ್ತ ಡಿಜಿಎಂ ಶಿವರಾಮ್ ಎಂ. ಹೆಗ್ಡೆ ನಿಧನ

Saturday, October 20th, 2018
sm-hegde

ಮಂಗಳೂರು : ಮಂಗಳೂರು ದೂರ ಸಂಪರ್ಕ ಇಲಾಖೆಯ ಕದ್ರಿ ವಿಭಾಗದ ಕನ್ಸೂಮ್ ಮೊಬಿಲಿಟಿಯಲ್ಲಿ ಡಿಜಿಎಂ ಆಗಿದ್ದ ಎಸ್.ಎಂ ಹೆಗಡೆ (65) ಶುಕ್ರವಾರ ಸಂಜೆ ಹೃದಯಾಘತದಿಂದ ನಿಧನ ಹೊಂದಿದರು. ಅವರು ಮಂಗಳೂರಿನ ತನ್ನ ಮನೆಯಿಂದ ಹೊನ್ನವರದ ಮನೆಗೆ ಬಸ್ಸಿನಲ್ಲಿ ಹೊಗುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಬಳಿಕ ಖಾಸಗಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೊನ್ನಾವರದ ಇಡಗುಂಜಿಯವರಾದ ಶಿವರಾಮ್ ಎಂ ಹೆಗ್ಡೆ 1973 ರಲ್ಲಿ ಕಾರವಾರದಲ್ಲಿ ಭಾರತೀಯ ದೂರ ಸಂಪರ್ಕ ಇಲಾಖೆಯಲ್ಲಿ ಕರ್ತವ್ಯ ಆರಂಭಿಸಿದರು. ಎರಡು ವರ್ಷದ ನಂತರ ಹುಬ್ಬಳ್ಳಿಗೆ ಅಲ್ಲಿಂದ ಎರಡು ವರ್ಷದ […]