ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌‌ ಮೇಘನಾ ಶ್ಯಾನ್‍ಬೋಗ್‍ಗೆ ಸನ್ಮಾನ..!

Friday, June 22nd, 2018
woman-pilot

ಚಿಕ್ಕಮಗಳೂರು: ದಕ್ಷಿಣ ಭಾರತದ ಮೊದಲ ಯುದ್ಧ ವಿಮಾನದ ಮಹಿಳಾ ಪೈಲಟ್ ಮೇಘನಾ ಶ್ಯಾನ್‍ಬೋಗ್‍ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯ್ತು. ಇಂದು ಹುಟ್ಟೂರಿಗೆ ಬಂದಿದ್ದ ಮೇಘನಾಗೆ ನಗರದ ರಂಗಣ್ಣ ಛತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೇಘನಾ, ತನ್ನ ಬಾಲ್ಯ, ಕಾಲೇಜು, ಅಡ್ವೆಂಚರಸ್ ಸಾಧನೆ, ಯುದ್ಧ ವಿಮಾನದ ಪೈಲಟ್ ಆಗಲು ಪಡೆದ ಟ್ರೈನಿಂಗ್, ಸೆಲೆಕ್ಷನ್ ಹಾಗೂ ಪಟ್ಟ ಪರಿಶ್ರಮದ ಹಾದಿಯನ್ನ ಮೆಲುಕು ಹಾಕಿದ್ರು. ಇದೇ ವೇಳೆ ನನ್ನ ಅಪ್ಪ-ಅಮ್ಮ ಇಬ್ಬರೂ ಲಾಯರ್ಸ್. ನಮ್ಮ […]

ರುಡ್‌ಸೆಟ್‌ನಲ್ಲಿ ಮಹಿಳೆಯರ ಟೈಲರಿಂಗ್ ತರಬೇತಿ!

Friday, June 22nd, 2018
womens-tailors

ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮಹಿಳೆಯರ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪದ ಉದ್ಘಾಟನಾ ಸಮಾರಂಭವು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಂಡಿಕೇಟ್‌ಬ್ಯಾಂಕಿನ ಮಂಗಳೂರು ವಲಯದ ಉಪ ಮಹಾಪ್ರಬಂಧಕರಾದ ಶ್ರೀ ತಿಮ್ಮಯ್ಯರವರು ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಾ ಬ್ಯಾಂಕಿನಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಸ್ವಂತ ಉದ್ಯೋಗ ಪ್ರಾರಂಬಿಸಿ ಎಂದು ಹಿತವಚನ ನೀಡಿದರು. ವೇದಿಕೆಯಲ್ಲಿ ಸಿಂಡಿಕೇಟ್‌ಬ್ಯಾಂಕಿನ ಮಂಗಳೂರು ವಲಯದ ಸಹಾಯಕ ಮಹಾಪ್ರಬಂಧಕರಾದ ಶ್ರೀ ಶಿವಸ್ವಾಮಿಯವರು ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಅತಿಥಿಗಳನ್ನು ಸ್ವಾಗತಿಸಿ […]

ರೈಲಿನಡಿಗೆ ಬಿದ್ದು ಅಮೆಮಾರ್ ನಿವಾಸಿ ಮೃತ್ಯು

Friday, June 22nd, 2018
farangipete

ಮಂಗಳೂರು: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಅಮೆಮಾರಿನ ನಿವಾಸಿ ಫಾರೂಕ್(45) ಎಂದು ಗುರುತಿಸಲಾಗಿದೆ. ಫಾರೂಕ್ ಅವರು ಮಂಗಳೂರು ಬಂದರಿನ ಧಕ್ಕೆಯಲ್ಲಿ ಉದ್ಯೋಗಿಯಾಗಿದ್ದು, ಇಂದು ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಳಿ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಬಳಿಕ ಇದೇ ದಾರಿಯಲ್ಲಿ ಹೋಗುವವರು ಇವರನ್ನು ಕಂಡು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. […]

ಮಂಗಳೂರಿನ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ, 6 ಮಂದಿ ಯುವತಿಯರ ರಕ್ಷಣೆ!

Friday, June 22nd, 2018
prostitution

ಮಂಗಳೂರು: ನಗರದ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆಗಾಗಿ ಕೂಡಿ ಹಾಕಿದ್ದ ಆರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಲಾಡ್ಜ್‌ನಲ್ಲಿದ್ದ 15 ಯುವಕರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ರಕ್ಷಿಸಲ್ಪಟ್ಟ ಯುವತಿಯರು ಬಾಂಗ್ಲಾ ಮೂಲದವರು ಎನ್ನಲಾಗಿದೆ. ಮೈಸೂರಿನ ಒಡನಾಡಿ ಸೇವಾಸಂಸ್ಥೆ, ಮಂಗಳೂರಿನ ಚೈಲ್ಡ್ ಲೈನ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯುವತಿಯರನ್ನು ರಕ್ಷಿಸಿದ್ದಾರೆ.

ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಬಾಲಕ…ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿದ ಸ್ನೇಹಿತ!

Friday, June 22nd, 2018
saved

ಮಂಗಳೂರು: ಕಾಲು ಸಂಕ ದಾಟುವಾಗ ತುಂಬಿ ಹರಿಯುತ್ತಿದ್ದ ತೊರೆಯೊಂದಕ್ಕೆ ಬೀಳುತ್ತಿದ್ದ ಆದಿತ್ಯನನ್ನು ಆತನ ಗೆಳೆಯ ಸುಜಯ್‌ ರಕ್ಷಿಸಿದ್ದಾನೆ. ಈ ಘಟನೆ ನಿಟ್ಟಡೆ ಗ್ರಾಮದ ಫಂಡಿಜೆ ಎಂಬಲ್ಲಿ ನಡೆದಿದೆ. ಫಂಡಿಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಆದಿತ್ಯ ಹಾಗೂ ಆತನ ಸ್ನೇಹಿತ 5ನೇ ತರಗತಿಯ ಸುಜಯ್‌ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದರು. ಆಗ ಆದಿತ್ಯ ದಿಢೀರ್‌ ಕಾಲು ಜಾರಿ ಬೀಳುತ್ತಿದ್ದ. ನೀರಿನ ರಭಸ ಸಹ ಹೆಚ್ಚಾಗಿದ್ದುದನ್ನು ನೋಡಿದ ಸುಜಯ್‌ ತನ್ನ ಗೆಳೆಯನ ಒಂದು ಕಾಲನ್ನು […]

ಬಹು ನಿರೀಕ್ಷಿತ ತುಳು ಚಿತ್ರ `ಅಮ್ಮೆರ್ ಪೊಲೀಸ್ 14 ಥಿಯೇಟರ್ ಗಳಲ್ಲಿ ಬಿಡುಗಡೆ

Friday, June 22nd, 2018
ammer-tulu

ಮಂಗಳೂರು: ಮಂಗಳೂರಿನ ಜ್ಯೋತಿ ಚಿತ್ರಮಂದಿರ ದಲ್ಲಿ ಗಣ್ಯರ ಸಮ್ಮುಖದಲ್ಲಿ ಖ್ಯಾತ  ಯಕ್ಷಗಾನ ಭಾಗವತ ಸತೀಶ್ ಪಟ್ಲಾ  ದೀಪ ಬೆಳಗಿಸುವ  ಮೂಲಕ `ಅಮ್ಮೆರ್ ಪೊಲೀಸ್, ತುಳು ಚಿತ್ರಕ್ಕೆ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಿದರು. ಲಕುಮಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಸೂರಜ್ ಶೆಟ್ಟಿ ನಿರ್ದೇಶನದ, ರಾಜೇಶ್.ಬಿ.ಶೆಟ್ಟಿ ನಿರ್ಮಾಣದ ಅಮ್ಮೆರ್ ಪೊಲೀಸ್ ತುಳು ಸಿನಿಮಾ ಇಂದು ಜಿಲ್ಲೆಯಾದ್ಯಂತ 14 ಟಾಕೀಸ್ ಗಳಲ್ಲಿ ತೆರೆ ಕಾಣಲಿದೆ. ಅಮ್ಮೆರ್ ಪೊಲೀಸ್ ಸಿನಿಮಾವು ಮಂಗಳೂರಿನ ಜ್ಯೋತಿ , ಪಿವಿಆರ್, ಸಿನಿಪೊಲೀಸ್, ಬಿಗ್ ಸಿನಿಮಾಸ್, ಸುರತ್ಕಲ್ ನಲ್ಲಿ ನಟರಾಜ್, ಮೂಡಬಿದಿರೆಯಲ್ಲಿ ಅಮರಶ್ರೀ, […]

ತಲ್ವಾರ್ ಹಿಡಿದು ಯುವಕರ ಮೇಲೆ ಹಲ್ಲೆ ಆರೋಪ, ಸುರೇಂದ್ರ ಶೆಟ್ಟಿ ಸೇರಿ ಮೂವರ ಬಂಧನ..!

Friday, June 22nd, 2018
surendra-shetty

ಮಂಗಳೂರು: ತಲ್ವಾರ್ ಹಿಡಿದುಕೊಂಡು ಜೂ. 11ರಂದು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಯುವಕರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪಿ, ನಟ ಸುರೇಂದ್ರ ಮತ್ತು ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸತೀಶ್ ಕುಲಾಲ್ ಹಾಗೂ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪೃಥ್ವಿರಾಜ್ ಜೆ. ಶೆಟ್ಟಿ (35) ಎಂಬಾತನನ್ನು ಕೂಡ ಬಂಧಿಸಲಾಗಿದೆ. ಜೂ. 11ರಂದು ಬಡ್ಡಕಟ್ಟೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಾದ ಗಣೇಶ್ ರೈ, ಪುಷ್ಪರಾಜ್, ಮನೋಜ್ ಮತ್ತು ಇತರರ ಮೇಲೆ ಆರೋಪಿ ಸುರೇಂದ್ರ ಕೊಲೆ ಯತ್ನ ನಡೆಸಿದ್ದ […]

ಶಿರೂರು ರಾಷ್ಟ್ರೀಯ ಹೆದ್ದಾರಿ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿ..!

Thursday, June 21st, 2018
ration-card

ಬೈಂದೂರು: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ. ಬಂಟ್ವಾಳ ಗ್ರಾಮ ಪಂಚಾಯತ್ ಸಂಬಂಧಪಟ್ಟಿರುವ 2003,2004 ಹಾಗೂ 2011 ಇಸವಿಯ ಸಾಕಷ್ಟು ಪಡಿತರ ಚೀಟಿಗಳು ಪತ್ತೆಯಾಗಿದೆ. ಇಷ್ಟೇ ಅಲ್ಲದೇ ಗ್ರಾಮ ಪಂಚಾಯತ್‍ನ ಹಲವಾರು ದಾಖಲೆಗಳು ಕೂಡ ಪತ್ತೆಯಾಗಿದೆ. ಬುಧವಾರ ತಡರಾತ್ರಿ ಅಪರಿಚಿತರು ಬಂದು ಬಿಸಾಡಿರುವುದು ಅಥವಾ ಗುಜರಿ ವಾಹನದಿಂದ ಗೋಣಿ ಚೀಲ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬೈಂದೂರು ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ […]

ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅವರು ದಾಳಿ ನಡೆಸಿದ್ದು ರಾಜಕೀಯ ಆಗಿತ್ತಾ: ಶೋಭಾ ಕರಂದ್ಲಾಜೆ

Thursday, June 21st, 2018
shobha-karandlaje

ಚಿಕ್ಕಮಗಳೂರು: ದೇಶದ ಎಲ್ಲ ರಾಜ್ಯಗಳಲ್ಲಿರುವ ಹಲವಾರು ಸರ್ಕಾರಿ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಅವರವರ ಕೆಲಸ ನೋಡಿಕೊಂಡು ತೆರಿಗೆ ದಾಳಿ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಲವಾರು ದಾಳಿ ನಡೆಸುತ್ತಾರೆ. ಕರ್ನಾಟಕದಲ್ಲಿ ಮಾತ್ರ ಅಲ್ಲವೆಂದು ಸಚಿವ ಡಿ ಕೆ ಶಿವಕುಮಾರ್‌ ವಿರುದ್ಧ ಪ್ರಕರಣ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು. ನಗರದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಮಾಡಿದ ಅವರು, ದೇಶದಲ್ಲಿ 70 ವರ್ಷಗಳಿಂದ ತನಿಖಾ ವ್ಯವಸ್ಥೆ ನಡೆದುಕೊಂಡು ಬಂದಿದೆ. ಆದ್ರೆ ಕಾಂಗ್ರೆಸ್ ಮುಖಂಡರು ಸಚಿವ […]

ಜಿಲ್ಲೆಯಲ್ಲಿ ಧಾರಾಕಾರ ಮಳೆ..ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ!

Thursday, June 21st, 2018
rain-udupi

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ರಾತ್ರಿಯಿಂದಲೇ ವರುಣನ ಆರ್ಭಟವಿದ್ದು, ಯೋಗ ದಿನಾಚರಣೆಗೆ ಅಡ್ಡಿಯಾಗಿದೆ. ಕುಂದಾಪುರ, ಕಾರ್ಕಳ, ಕೊಲ್ಲೂರು ಬೈಂದೂರಿನಲ್ಲೂ ಎಡೆಬಿಡದೇ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಹಾವಳಿ ಭೀತಿ ಎದುರಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ದಿನವಿಡಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.