‘ಸೂಪರ್ ಮರ್ಮಯೆ’ ಆಗಸ್ಟ್ ತಿಂಗಳಲ್ಲಿ ತೆರೆಗೆ

Friday, July 17th, 2015
super marmaye

ಮಂಗಳೂರು : ತುಳು ಚಿತ್ರರಂಗದ 44 ವರ್ಷಗಳ ಇತಿಹಾಸದಲ್ಲಿ 56 ಸಿನಿಮಾಗಳು ತೆರೆ ಕಂಡಿವೆ. 2014ರ ವರ್ಷದಲ್ಲೇ 7 ತುಳು ಚಿತ್ರಗಳು ತೆರೆ ಕಂಡು 3 ಚಿತ್ರ ಶತದಿನೋತ್ಸವ ಆಚರಿಸಿದೆ. ಈ ವರ್ಷ 4 ಚಿತ್ರಗಳು ತೆರೆಕಂಡಿದ್ದು, ಆ ನಾಲ್ಕೂ ಚಿತ್ರಗಳು ಅರ್ಧ ಶತಕ ಭಾರಿಸಿದೆ. ಇದೀಗ ತುಳು ನಾಡಿನ ಜನರನ್ನು ನಗಿಸಲು ಸಿದ್ದವಾಗುತ್ತಿದೆ ಇನ್ನೊಂದು ಕಾಮಿಡಿ ಫಿಲ್ಮ್ ಸೂಪರ್ ಮರ್ಮಯೆ. ಈ ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಮೆಚ್ಚುಗೆ ಗಳಿಸಿ ಯು ಸರ್ಟಿಫೀಕೆಟ್ ಪಡೆದಿದ್ದು ಆಗಸ್ಟ್ ತಿಂಗಳ […]

ನೂತನ ಗ್ರಾ.ಪಂ. ಸದಸ್ಯರಿಗೆ ಜಿ.ಪಂ. ಅಧ್ಯಕ್ಷರ ಅಭಿನಂದನೆ

Friday, July 10th, 2015
Asha Timmappa

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ/ಉಪಾಧ್ಯಕ್ಷ/ ಸದಸ್ಯರುಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಶುಭ ಹಾರೈಸಿದ್ದಾರೆ. ನೂತನ ಆಡಳಿತಾವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಆರೋಗ್ಯ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಯಾವುದೇ ಸಮಸ್ಯೆ ಬಾರದಂತೆ ಆಡಳಿತ ನಡೆಸುವಂತಾಗಬೇಕು. ಈ ರೀತಿ ಮಾಡಿದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಭಾರತ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸದಸ್ಯರು ಸಮಾರೋಪಾದಿಯಲ್ಲಿ […]

ಅಧಿಕ ಬಡ್ಡಿ: ಫೈನಾನ್ಸ್‌ಗಳಿಗೆ ಎಚ್ಚರಿಕೆ

Friday, July 10th, 2015
BK Saleem

ಮಂಗಳೂರು : ಇತ್ತೀಚಿನ ದಿನಗಳಲ್ಲಿ ರೈತರು ಸಹಕಾರ ಸಂಘಗಳಿಂದ ಮತ್ತು ಖಾಸಗಿ ಲೇವಾದೇವಿ/ ಹಣಕಾಸು ಸಂಸ್ಥೆಗಳಿಂದ ಸಾಲ ಪಡಕೊಂಡು ಸಾಲ ಮರುಪಾವತಿಸಲು ಅಶಕ್ತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಕರ್ನಾಟಕ ಲೇವಾದೇವಿ ಕಾಯ್ದೆ ಹಾಗೂ ಗಿರವಿ ಕಾಯ್ದೆಯಡಿ ಪರವಾನಗಿ ಪಡಕೊಂಡ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳು ಹಾಗೂ ಗಿರವಿದಾರರು ಕರ್ನಾಟಕ ಲೇವಾದೇವಿ ಕಾಯ್ದೆ 1961 ಕಲಂ 28ರ ಪ್ರಕಾರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 16 […]

‘ಜುಗಾರಿ’ ತುಳು ಚಲನಚಿತ್ರಕ್ಕೆ ಮುಹೂರ್ತ

Friday, July 10th, 2015
jugari tulu film

ಮಂಗಳೂರು : ‘ನೈನ್‌ ಓ ಕ್ಲಾಕ್‌’ ಕ್ರಿಯೇಷನ್ಸ್‌ ಲಾಂಛನದಲ್ಲಿ ತಯಾರಾಗುತ್ತಿರುವ ‘ಜುಗಾರಿ’ ತುಳು ಚಲನಚಿತ್ರದ ಮುಹೂರ್ತ ಸಮಾರಂಭ ಗುರುವಾರ ಶ್ರೀ ಭಗವತೀ ದೇವಸ್ಥಾನದ ಬಳಿಯ ಪಿ.ವಿ.ಎಸ್‌. ಕಲಾಕುಂಜದಲ್ಲಿ ಜರಗಿತು. ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಆರಂಭದ ಫಲಕ ತೋರಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶಾಂಭವಿ ಮುಹೂರ್ತ ಕಾರ್ಯಕ್ರಮ ಉದ್ಘಾಟಿಸಿದರು. ‘ಕುಡ್ಲದ ಜನಕುಲೆಗ್‌ ಎನ್ನ ಸೊಲ್ಮೆಲು’ ಎಂದು ಮಾತು ಪ್ರಾರಂಭಿಸಿದ ರಾಗಿಣಿ ದ್ವಿವೇದಿ, ತುಳು ಚಿತ್ರರಂಗದದಲ್ಲಾಗುತ್ತಿರುವ ಅಭಿವೃದ್ಧಿ, ಬೆಳೆಯುತ್ತಿರುವ ಪರಿ ಕೇಳಿ ಬಹಳಷ್ಟು ಸಂತೋಷವಾಗಿದೆ. ಇಲ್ಲಿನ […]

ಬಿಸಿರೋಡು ಕೈಕಂಬಕ್ಕೆ ಹೋದವರು ಕಾಣೆ

Friday, July 10th, 2015
Sulaiman

ಬಂಟ್ವಾಳಃ  ಮಂಗಳವಾರ ದಿನಾಂಕ 07 ರಂದು ಮದ್ಯಾಹ್ನ 2-30 ಗಂಟೆಗೆ ತನ್ನ ಮನೆ ಬಿ.ಮೂಡ ಗ್ರಾಮದ ಪರ್ಲಿಯಾ ಎಂಬಲ್ಲಿಂದ ಸುಲೈಮಾನ್‌ (58) ರವರು ಬಿಸಿರೋಡು ಕೈಕಂಬಕ್ಕೆ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಸುಲೈಮಾನ್‌ ಅವರ ಪ್ರಾಯ 58 ವರ್ಷ, ಎತ್ತರ: 5.3 ಅಡಿ, ಬಣ್ಣ: ಬಿಳಿ ಮೈ,  ಗೊತ್ತಿರುವ ಭಾಷೆ :ಕನ್ನಡ, ತುಳು, ಬ್ಯಾರಿ, ಉರ್ದು, ಬಟ್ಟೆಬರೆ: ಗೆರೆಗಳುಳ್ಳ ಲುಂಗಿ, ಮತ್ತು ಶರ್ಟು. ಇವರು ಪಿರ್ಯಾದಿದಾರರಾದ ಅಬ್ದುಲ್ ಸಮದ್‌ ಎಂಬವರ ತಂದೆಯಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಸಂಯೋಜಕ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

Friday, July 10th, 2015
Consumer Training

ಮಂಗಳೂರು: ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಆಶ್ರಯದಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಗ್ರಾಹಕ ಕ್ಲಬ್ ಗಳ ಸಂಯೋಜಕ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಮಂಗಳೂರಿನ ತಾಲ್ಲೂಕು ಪಂಚಾಯತ್ ಕಟ್ಟಡದ ಸಾಮರ್ಥ್ಯ ಸೌಧದಲ್ಲಿ ಜುಲೈ 10 ರಂದು ನಡೆಸಲಾಯಿತು. ಶಿಕ್ಷಕರಾದವರು ಮಕ್ಕಳನ್ನು ಹೇಗೆ ಬೆಳೆಸಬೇಕು, ಪ್ರೇರೇಪಿಸಬೇಕು ಎಂಬ ಹಲವಾರು ಉದಾಹರಣೆಗಳ ಮೂಲಕ ಸಂಪನ್ಮೂಲ ವ್ಯಕ್ತಿ ಅಡ್ಡೂರು ಕೃಷ್ಣ ರಾವ್ ರವರು ಮಾತನಾಡಿದರು. ಗ್ರಾಹಕ ಶಿಕ್ಷಣದ ಜಾಗೃತಿಯ ಹಲವಾರು ಮಜಲುಗಳನ್ನು ತೆರೆದಿಟ್ಟು ಕಾರ್ಯದರ್ಶಿ ವಿಷ್ಣು ಪಿ.ನಾಯಕ್ ರವರು […]

ಗೋಸಂರಕ್ಷಣೆಗಾಗಿ ಜು. 13 ರಂದು ಕರಾವಳಿ ಜಿಲ್ಲೆಗಳ ಬೃಹತ್‌ ಪ್ರತಿಭಟನೆ

Thursday, July 9th, 2015
VHP Rally

ಮಂಗಳೂರು : ಗೋಹತ್ಯೆ, ಗೋ ಕಳ್ಳ ಸಾಗಾಟ, ಪ್ರಕರಣಗಳನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್‌, ಗೋಸಂರಕ್ಷಣಾ ಸಮಿತಿ ವತಿಯಿಂದ ಕರಾವಳಿ ಜಿಲ್ಲೆಗಳ ಬೃಹತ್‌ ಪ್ರತಿಭಟನೆ ಜು. 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌, ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಗೋಹತ್ಯೆ, ದನಗಳ ಸರಣಿ ಕಳ್ಳತನ, ಹಿಂಸಾತ್ಮಕ ರೀತಿಯ ಸಾಗಾಟದಂತಹ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಗುಡ್ಡದಲ್ಲಿ ಮೇಯಲು ಬಿಟ್ಟ ದನಗಳು ಸುರಕ್ಷಿತವಾಗಿ ಮರಳುತ್ತವೆ ಎಂಬ ನಂಬಿಕೆ ಇಲ್ಲದಾಗಿದೆ. ಹಟ್ಟಿಯಲ್ಲಿ […]

ಕರಾವಳಿ ಹುಡುಗಿ ನೇಹಾ ಕನ್ನಡ ಚಿತ್ರ ‘ಮುಂಗಾರು ಮಳೆ 2′ ರಲ್ಲಿ ನಾಯಕಿ

Thursday, July 9th, 2015
Neha Shetty

ಮಂಗಳೂರು : ಶಶಾಂಕ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಮುಂಗಾರು ಮಳೆ 2’ ಚಿತ್ರಕ್ಕೆ ಕರಾವಳಿ ಬೆಡಗಿ 2014ರ ‘ಮಿಸ್ ಮಂಗಳೂರು ಚೆಲುವೆ’ ನೇಹಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ನಟನಾಗಿ ಆಭಿನಯಿಸಲಿದ್ದಾರೆ. ನಿರ್ದೇಶಕ ಶಶಾಂಕ್ ತಮ್ಮ ಚಿತ್ರಕ್ಕೆ ಗ್ಲಾಮರಸ್ ಲುಕ್, ಜೊತೆಗೆ ಸ್ಟೈಲೀಷ್ ಆಗಿರುವ ಹೊಸ ಹುಡುಗಿಯ ಹುಡುಕಾಟದಲ್ಲಿದ್ದರು. ಅಡೀಷನ್ ಸಂದರ್ಭದಲ್ಲಿ ಕೊನೆಯದಾಗಿ ನೇಹಾ ಶೆಟ್ಟಿ ಆಯ್ಕೆಯಾದರು. ಇದೀಗ ‘ಮುಂಗಾರು ಮಳೆ 2’ ಚಿತ್ರಕ್ಕೆ ನಾಯಕಿ ಪಕ್ಕಾ ಆಗಿರುವುದರಿಂದ ಇದೇ ಜುಲೈ 28 […]

ಜಾತಿ/ಆದಾಯ ಪ್ರಮಾಣಪತ್ರ: ತ್ವರಿತಗತಿಯಲ್ಲಿ ನೀಡಲು ಡಿಸಿ ಸೂಚನೆ

Thursday, July 9th, 2015
DC

ಮಂಗಳೂರು : ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ, ಪ್ರಮಾಣಪತ್ರಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಹಶೀಲ್ದಾರ್‌ಗಳಿಗೆ ಸೂಚಿಸಿದ್ದಾರೆ. ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಲಾ-ಕಾಲೇಜು ಆರಂಭವಾಗಿರುವುದರಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ನಾಡಕಚೇರಿಗಳ ಮುಂದೆ ಸಾರ್ವಜನಿಕರು ಜಮಾಯಿಸುತ್ತಿದ್ದು, ಪ್ರತೀನಿತ್ಯವೂ ಜನಜಂಗುಳಿಯಿಂದ ಕೂಡಿರುತ್ತವೆ. ಜನಸಾಮಾನ್ಯರೂ ಕೂಡಾ ಇದಕ್ಕಾಗಿ ತಮ್ಮ ಕೆಲಸ ಕಾರ್ಯ […]

ಲಕ್ಷದ್ವೀಪ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಿಆರ್‌ಝಡ್ ಎನ್‌ಓಸಿ

Monday, June 29th, 2015
DC crz

ಮಂಗಳೂರು : ಲಕ್ಷದ್ವೀಪ ಆಡಳಿತವು ಮಂಗಳೂರು ಬಂದರು ಪ್ರದೇಶದಲ್ಲಿ ಕಚೇರಿ , ವಸತಿ ಹಾಗೂ ಉಗ್ರಾಣ ಕಟ್ಟಡಗಳ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ನೀಡಲು ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ(ಸಿಆರ್‌ಝಡ್) ಸಭೆಯಲ್ಲಿ ಇಂದು ನಿರ್ಧರಿಸಲಾಯಿತು. ಸೋಮವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು. ಲಕ್ಷದ್ವೀಪ ಆಡಳಿತವು ಮಂಗಳೂರು ಹಳೇ ಬಂದರು ಪ್ರದೇಶದಲ್ಲಿ ತನ್ನದೇ ಜಮೀನು ಹೊಂದಿದೆ. ಕರಾವಳಿ ವಲಯ ಅಧಿಸೂಚನೆಯಂತೆ ಈ ಸ್ಥಳವು ವಲಯದಿಂದ ಹೊರಗಿದ್ದು, ಸಿಆರ್‌ಝಡ್ 2ನೇ […]