ಜ.20ರಿಂದ 22 ರವರೆಗೆ 11 ನೇ ಒಣಮೆಣಸಿನಕಾಯಿ ಮೇಳ

Wednesday, January 11th, 2023
dry-chilly

ಹುಬ್ಬಳ್ಳಿ (ಶಂಭು ನಾಗನೂರಮಠ) : ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃಧ್ಧಿ ಮಂಡಳಿ, ಹುಬ್ಬಳ್ಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ, ತೋಟಗಾರಿಕೆ ಇಲಾಖೆ ಧಾರವಾಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹುಬ್ಬಳ್ಳಿ, ಅಮರಶಿವ ರೈತ ಉತ್ಪಾದಕ ಸಂಸ್ಥೆ ಸಂಶಿ ಮತ್ತು ಉಳವಾಯೋಗಿ ರೈತ ಉತ್ಪಾದಕ ಸಂಸ್ಥೆ ಅಮರಗೋಳ ಇವುಗಳ ಸಂಯುಕ್ತಾಶ್ರಯದಲ್ಲಿ 11 ನೇ ಒಣಮೆಣಸಿನಕಾಯಿ ಮೇಳವನ್ನು ಜನೇವರಿ 20ರಿಂದ 22ರವರೆಗೆ ಮೂರುಸಾವಿರ ಮಠದ ಹೈಸ್ಕೂಲ ಮೈದಾನದಲ್ಲಿ ಆಯೋಜಿಸಲಾಗಿದೆ. ಆಸಕ್ತ ರೈತರು ಮುಂಚಿತವಾಗಿ ನೋಂದಣಿಯನ್ನು ತಾಲ್ಲೂಕಾ ತೋಟಗಾರಿಕೆ ಕಛೇರಿಗಳಲ್ಲಿ, […]

ಅಭಿವೃದ್ಧಿಗೆ ಜನರ ಸಹಕಾರ ಮುಖ್ಯ : ಮಾಜಿ ಸಿಎಂ ಶೆಟ್ಟರ್

Wednesday, January 11th, 2023
shetter

ಹುಬ್ಬಳ್ಳಿ (ಶಂಭು ನಾಗನೂರಮಠ) : ಮಾದರಿ ನಗರ ಮಾಡುವ ಕನಸು ನನಸಾಗಲಿದೆ. ನಗರದಲ್ಲಿನ ಅಭಿವೃದ್ಧಿ ಪರ ಕೆಲಸ ಕಾರ್ಯಗಳಿಗೆ ಜನರ ಸಹಕಾರ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು. ಅವರು ಮಂಗಳವಾರ ಗಿರಿರಾಜನಗರದಲ್ಲಿ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗಿರಿರಾಜನಗರ ಕೊಳಚೆ ಪ್ರದೇಶ ನಿವಾಸಿಗಳಿಗೆ ಪರಿಚಯ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಥಿಕ, ಹಿಂದುಳಿದ ವರ್ಗದ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ನಿಮ್ಮ ಹಕ್ಕುಗಳನ್ನು ನೀವು ಪಡೆದುಕೊಳ್ಳಬೇಕು. […]

ಹು-ಧಾ ಬೈಪಾಸ್ ಕಾಮಗಾರಿ ಆರಂಭಿಸಿಲ್ಲ ‌: ರಾಜು ನಾಯಕವಾಡಿ ಆರೋಪ

Tuesday, January 10th, 2023
nayakavadi

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ಇತ್ತೀಚೆಗೆ ನಗರಕ್ಕೆ ಬಂದಿದ್ದ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹು-ಧಾ (ಹುಬ್ಬಳ್ಳಿ- ಧಾರವಾಡ) ಬೈಪಾಸ್‌ 30 ಕಿಮೀಗೆ 1200 ಕೋಟಿ ರೂ. ಘೋಷಿಸಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇದೂವರೆಗೂ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಹೆಚ್ಚಿನ ಪ್ರಮಾಣದ ಅಪಘಾತಗಳು ಸಂಭವಿಸಿ ಅನೇಕ ಜನರ ಜೀವ ಹಾನಿಯಾಗುತ್ತಿದೆ ಎಂದು ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್‌ (73) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಲು ಸಿದ್ಧತೆ […]

ರಾಷ್ಟ್ರೀಯ ಯುವ ಜನೋತ್ಸವ : ಕಾಶ್ಮೀರ ತಂಡಕ್ಕೆ ಅದ್ದೂರಿ ಸ್ವಾಗತ

Tuesday, January 10th, 2023
Kashmiri-Team

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ಧಾರವಾಡದಲ್ಲಿ ಜ.12ರಿಂದ ನಡೆಯಲಿರುವ ರಾಷ್ಟ್ರೀಯ 6ನೇ ಯುವ ಜನೋತ್ಸವ ಕ್ಕೆ ಸಾಂಸ್ಕೃತಿಕ ರಾಯಭಾರಿಗಳ ತಂಡಗಳು ಆಗಮಿಸುತ್ತಿದ್ದು, ಭಾರತದ ಮುಕುಟ ಜಮ್ಮು-ಕಾಶ್ಮೀರ ತಂಡ ಮೊದಲು ಆಗಮಿಸಿದೆ. ಯುವ ಪ್ರತಿನಿಧಿಗಳು ಮತ್ತು ತಂಡದ ನಾಯಕರನ್ನು ಒಳಗೊಂಡ 80 ಸದಸ್ಯರ ತಂಡಕ್ಕೆ ಕೆಸಿಡಿ ಆವರಣದಲ್ಲಿ ಆರತಿ ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಅದ್ಧೂರಿ ಸ್ವಾಗತ ನೀಡಲಾಯಿತು. ಯುವ ಜನೋತ್ಸವದ ವಸತಿ ಉಸ್ತುವಾರಿ ಅಧಿಕಾರಿ ಹಾಗೂ ಜೆಯುಡಿ ಕುಲಸಚಿವ ಯಶಪಾಲ್ ಕ್ಷೀರಸಾಗರ ಹಾಗೂ ಹುಡಾ ಆಯುಕ್ತ ಸಂತೋಷ ಬಿರಾದರ […]

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ 4 ಲಕ್ಷ ಮಿರ್ಚಿ ವಿತರಣೆ

Tuesday, January 10th, 2023
mirchi

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ತ್ರಿವಿಧ ದಾಸೋಹಕ್ಕೆ ಸಾಕ್ಷಿಯಾಗಿರುವ ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಸತತ 15 ದಿನಗಳ ಕಾಲ ಮಹಾದಾಸೋಹ ನಡೆಯಲಿದೆ. ಕೊಪ್ಪಳದ ಸಮಾನ ಮನಸ್ಕರ ಗೆಳೆಯರು ಸೇರಿಕೊಂಡು ಮಿರ್ಚಿ ವಿತರಣೆ ಮಾಡುತ್ತಿರುವುದು ವಿಶೇಷವಾಗಿದೆ. ಸೋಮವಾರ ಬೆಳಗ್ಗೆ 4 ಗಂಟೆಯಿಂದಲೇ ಮಿರ್ಚಿ ಹಾಕಲು ಆರಂಭಿಸಿದ್ದು, ಭಕ್ತರು ಉ.ಕ ಭಾಗದ ಮಿರ್ಚಿ ಸವಿದರು. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ಸುಮಾರು ನಾಲ್ಕು ಲಕ್ಷಮಿರ್ಚಿ ತಯಾರಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 6 ಲಕ್ಷ ರೂ.ಹಣವನ್ನು ತಾವೇ ಹಾಕಿಕೊಂಡಿದ್ದಾರೆ. 25 ಕ್ವಿಂಟಲ್‌ ಕಡಲೆ […]

ಮಹಾ ದಾನಿ ಸಿರಸಂಗಿ ಲಿಂಗರಾಜ ದೇಸಾಯಿ

Tuesday, January 10th, 2023
sirasangi

ಹುಬ್ಬಳ್ಳಿ : ಸಂಸ್ಥಾನದ ಆಸ್ತಿಯನ್ನೆಲ್ಲ ಸಮಾಜಕ್ಕೆ ಧಾರೆ ಎರೆದ ಮಹಾಮಹಿಮರು ಸಿರಸಂಗಿ ಲಿಂಗರಾಜ ರು. ವರದಕ್ಷಿಣೆ ನಿರ್ಮೂಲನೆ, ವಿದ್ಯಾಭಿವೃದ್ಧಿ, ಮಹಿಳೆಯರಿಗೆ ಶಿಕ್ಷಣ, ನೀತಿ ಶಿಕ್ಷಣ, ಒಕ್ಕಲುತನಕ್ಕೆ ಒತ್ತು ಕೊಟ್ಟವರು. ಬೆಳಗಾವಿಯ ಕೆ.ಎಲ್.ಇ ,ವಿಜಯಪುರದಲ್ಲಿ ಬಿ.ಎಲ್.ಡಿ.ಇ., ಬಾಗಲಕೋಟೆಯಲ್ಲಿ ಬಸವೇಶ್ವರ ವಿದ್ಯಾವರ್ಧಕ ಎಚ್.ಕೆ.ಇ., ಬಳ್ಳಾರಿಯಲ್ಲಿ ವೀರಶೈವ ಸಂಘ, ಬೆಂಗಳೂರಿನಲ್ಲಿ ವೀರಶೈವ ವಿದ್ಯಾವರ್ಧಕ ಸಂಘಗಳು ಆರಂಭದಲ್ಲಿ ಇವರ ಪರಿಶ್ರಮ ಹೆಚ್ಚು. ಈ ಸಂಸ್ಥೆಗಳ ಮೂಲಕ ಸಾ ತಂತ್ರ, ಪೂರ್ವದಲ್ಲಿಯೇ ಅಂದು ಶಿಕ್ಷಣ ವಂಚಿತರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ, ಅನ್ನ, ಅಕ್ಷರ, ಆಶ್ರಯ ಒದಗಿಸಿದರು. […]

ಬಾಬ್ರಿ ಮಸೀದಿ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಸಮಾಧಿ ಮಾಡಬೇಕಿದೆ : ಮುತಾಲಿಕ್

Monday, January 9th, 2023
Muthalik

ಬೆಳಗಾವಿ: ಒಂದು ಪಕ್ಷಕ್ಕಾಗಿ ಅಲ್ಲ, ಭಾರತೀಯತೆ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿಯ ಅಗತ್ಯವಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಭಾನುವಾರ ಹೇಳಿದ್ದಾರೆ. ಬೆಳಗಾವಿಯ ಧರ್ಮವೀರ ಸಂಭಾಜಿ ಮೈದಾನದಲ್ಲಿ ಶ್ರೀರಾಮ ಸೇನೆ ಮತ್ತು ಹಿಂದು ರಾಷ್ಟ್ರ ಸೇನಾ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಮುತಾಲಿಕ್ ಅವರು ಮಾತನಾಡಿದರು. ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿಯ ಅಗತ್ಯವಿದೆ. ಒಂದು ಪಕ್ಷಕ್ಕಾಗಿ ಅಲ್ಲ, ರಾಮ ಮಂದಿರ, ಶ್ರೀಕೃಷ್ಣ ಮಂದಿರ ಪೂರ್ಣವಾಗಲು ಹಾಗೂ ಹಿಂದು ಧರ್ಮಕ್ಕೋಸ್ಕರ […]

ಯುವತಿಯರಿಗೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ನೌಕರಿ ಆಮಿಷ :ಲಕ್ಷಗಟ್ಟಲೇ ಹಣ ಪಂಗನಾಮ

Monday, January 9th, 2023
airlines

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) : ಗದಗ ಜಿಲ್ಲೆಯಲ್ಲಿನ ಮುಗ್ಧ ಯುವತಿಯರಿಗೆ ಇಂಡಿಗೋ ಏರ್‌ಲೈನ್‌ನಲ್ಲಿ ಗ್ರೌಂಡ್ ಸ್ಟಾಫ್ ನೌಕರಿ ಕೊಡಿಸುವದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪೀಕುವ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ನೂರಾರು ಯುವತಿಯರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಯುವತಿಯರ ಮೊಬೈಲ್‌ಗೆ ಮುಂಬೈ, ಹೈದರಾಬಾದ್‌ಗಳಿಂದ ದೂರವಾಣಿ ಕರೆ ಮಾಡಿ ನಿಮಗೆ ಏರ್‌ಲೈನ್ಸ್‌ದಲ್ಲಿ ನೌಕರಿ ಕೊಡಿ ಸುತ್ತೇವೆ. ನೌಕರಿ ಪಡೆಯಲು ನೋಂದಣಿ ಶುಲ್ಕವಾಗಿ 50 ಸಾವಿರ ರೂಪಾಯಿ, ನೌಕರಿ ನೇಮಕಾತಿ ಪತ್ರ ಬಂದ ಮೇಲೆ ಉಳಿದ ನಾಲ್ಕು ಲಕ್ಷ ರೂಪಾಯಿಗಳನ್ನು […]

ಯುವಕರಿಂದಲೇ ಬದಲಾವಣೆ ಸಾಧ್ಯ : ಸಚಿವ ಪ್ರಲ್ಹಾದ ಜೋಶಿ

Saturday, January 7th, 2023
ಯುವಕರಿಂದಲೇ ಬದಲಾವಣೆ ಸಾಧ್ಯ : ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) ಯಾವುದೇ ಒಂದು ವ್ಯವಸ್ಥೆ ಬದಲಾವಣೆಗೆ ಯುವ ಮನಸ್ಸು ಯುವ ಹೃದಯಗಳ ಮಹತ್ವದಿಂದ ಈ ದೇಶದಲ್ಲಿ ಯುವಕರಿಂದ ಬದಲಾವಣೆಯಾಗುತ್ತಿದೆಯೆಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಅವರು ಶನಿವಾರ ಹುಬ್ಬಳ್ಳಿಯ ಬಿವಿಬಿ ಕಾಲೇಜು ಬಯೋಟೆಕ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ 26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಲಾಂಛನ ಹಾಗೂ ಮ್ಯಾಸ್ಕಾಟ್ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಏಕಕಾಲಕ್ಕೆ ವರ್ಚುವಲ್ ಮೂಲಕ ಅನಾವರಣ ಮಾಡಿ ಮಾತನಾಡಿದರು. ಮೋದಿ […]

ಹುಬ್ಬಳ್ಳಿ ಹುಡುಗಿ ಕುಂದಾಪುರದಲ್ಲಿ ನಾಪತ್ತೆ

Saturday, January 7th, 2023
ಹುಬ್ಬಳ್ಳಿ ಹುಡುಗಿ ಕುಂದಾಪುರದಲ್ಲಿ ನಾಪತ್ತೆ

ಹುಬ್ಬಳ್ಳಿ (ವರದಿ:ಶಂಭು ನಾಗನೂರಮಠ) ಫೇಸ್‌ಬುಕ್‌ನಲ್ಲಿ ಪರಿಚಿತನಾಗಿದ್ದ ಯುವಕನನ್ನು ನೋಡಲು ತೆರಳಿದ್ದ ನಗರದ ಯುವತಿ ಕುಂದಾಪುರ ತಾಲೂಕಿನಲ್ಲಿ ನಾಪತ್ತೆಯಾಗಿದ್ದಾಳೆ. ಹುಬ್ಬಳ್ಳಿಯ ನಿಂಗಮ್ಮ ಬಾರಕೇರ (32) ಎಂಬ ಯುವತಿ ನಾಪತ್ತೆಯಾದವಳು, ಫೇಸ್‌ಬುಕ್‌ನಲ್ಲಿ ಪರಿಚಿತನಾಗಿದ್ದ ಕುಂದಾಪುರ ತಾಲೂಕಿನ ಆಲೂರನ ಅಮೃತ ಪೂಜಾರಿಯನ್ನು ಭೇಟಿ ಮಾಡಲು ಮಾರಣಕಟ್ಟೆಯ ಚಿತ್ತೂರಗೆ ತೆರಳಿದ್ದಳು. ಕಳೆದ ಎಪ್ರೀಲ 29 ರಂದು ಮಾರಣಕಟ್ಟೆಯ ದೇವಳಕ್ಕೆ ಭೇಟಿ ನೀಡಿದ ನಂತರ, ಚಿತ್ತೂರನ ವಸತಿ ಗೃಹದಲ್ಲಿ ತಂಗಿದ್ದಳು. ಬಳಿಕ ಹುಬ್ಬಳ್ಳಿಗೆ ಹೋಗುವುದಾಗಿ ಅಮೃತ ಪೂಜಾರಿಗೆ ಹೇಳಿ ಹೋದ ಗೀತಾ ಇದೀಗ ನಾಪತ್ತೆಯಾಗಿದ್ದಾಳೆ.ಈ […]