ಇಂದಿನಿಂದ ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶ

Friday, November 2nd, 2018
bengalore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆಯಿಂದಲೂ ಕೂಲ್ ಕೂಲ್ ವಾತಾವರಣ ಇದೆ. ಇದೇನಪ್ಪ ಮಳೆ ಬರೋ ಹಾಗಿದೆಯಲ್ಲ ಅಂತೆಲ್ಲ ನೀವು ಅನ್ಕೊಂಡ್ರೆ ನಿಮ್ಮ ಊಹೆ ಸರಿ. ಹೌದು, ಇಂದಿನಿಂದ ಹಿಂಗಾರು ಮಳೆ ರಾಜ್ಯಕ್ಕೆ ಪ್ರವೇಶ ಆಗಲಿದೆ. ನಿನ್ನೆಯೇ ಕೇರಳ ಹಾಗೂ ತಮಿಳುನಾಡಿಗೆ ಮಳೆಯಾಗಿದ್ದು, ಇಂದು ರಾಜ್ಯಕ್ಕೆ ಪ್ರವೇಶ ಆಗಲಿದೆ. ದಕ್ಷಿಣ ಒಳನಾಡಿನ ಕೆಲವು ಭಾಗಗಳಾದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ […]

ಬೆಂಗಳೂರಲ್ಲಿ ಖ್ಯಾತ ಗಾಯಕಿ‌ಗೆ ಕ್ಯಾಬ್ ಚಾಲಕನಿಂದ ಕಿರುಕುಳ..!

Friday, November 2nd, 2018
harresment

ಬೆಂಗಳೂರು: ಖ್ಯಾತ ಗಾಯಕಿ‌ಗೆ ಕ್ಯಾಬ್ ಚಾಲಕನೋರ್ವ ಕಿರುಕುಳ ನೀಡಿರುವ ಘಟನೆ ನಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಬಳಿ ನಡೆದಿದೆ. ವಸುಂಧರಾ ದಾಸ್ ಕಿರುಕುಳಕ್ಕೆ ಒಳಗಾಗಿರುವ ಗಾಯಕಿ. ನವೆಂಬರ್ 29ರ ಸಂಜೆ 4.30ರ ಸುಮಾರಿಗೆ ಮಲ್ಲೇಶ್ವರಂ ಬಳಿ ವಸುಂದರಾ ಇಟಿಯಸ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರ್ ನಂಬರ್ KA-05..AE-3933 ನ ಕ್ಯಾಬ್ ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್‌ನಿಂದ ಗಾಯಕಿಯನ್ನ ಹಿಂಬಾಲಿಸಿದ್ದ. ನಂತರ ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನಿಂದ ಇಳಿದು ವಸುಂಧರಾ ದಾಸ್ ಕಾರಿನ […]

ಮೈಸೂರಲ್ಲಿ ಇಬ್ಬರು ಅಂತಾರಾಜ್ಯ ಕಳ್ಳಿಯರ ಬಂಧನ: 244 ಗ್ರಾಂ. ಚಿನ್ನಾಭರಣ ವಶ

Thursday, November 1st, 2018
mysuru

ಮೈಸೂರು: ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸಿ ಅವರಿಂದ 7.30 ಲಕ್ಷ ರೂ. ಮೌಲ್ಯದ 244 ಗ್ರಾಂ. ಚಿನ್ನಾಭರಣ ಮತ್ತು 45,050 ರೂ. ನಗದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ವೆಲೂರು ಜಿಲ್ಲೆಯ ಜೋಲಾರ್‌ಪೇಟೆ ಪಟ್ಟಣದ ಬಾಬುನಗರದ ನಿವಾಸಿಗಳಾದ ಉಷಾರಾಣಿ (40), ರೂಪ(24) ಬಂಧಿತರು. ದಸರಾ ಮಹೋತ್ಸವದ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಈ ವೇಳೆ ರಾಜ್ಯ ಹಾಗೂ ಹೊರ ರಾಜ್ಯದ ಪಿಕ್‌ಪಾಕೆಟ್ ಕಳ್ಳರು ಮೈಸೂರಿಗೆ ಆಗಮಿಸಿ ಅಪರಾಧವೆಸಗುತ್ತಾರೆ. ಇದನ್ನು ತಡೆಯಲು ಮತ್ತು ಪತ್ತೆಗೆ ಪೊಲೀಸ್ […]

ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಚಂದ್ರಶೇಖರ್ ತೀರ್ಮಾನವನ್ನು ಸ್ವಾಗತಿಸುತ್ತೇನೆ: ಡಿ.ಕೆ.ಸುರೇಶ್

Thursday, November 1st, 2018
d-k-suresh

ಬೆಂಗಳೂರು: ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಚಂದ್ರಶೇಖರ್ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ರಾಮನಗರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರನ್ನು ತಮ್ಮ ಸದಾಶಿವನಗರದ ನಿವಾಸದಲ್ಲಿ ಪಕ್ಷಕ್ಕೆ ಮರಳಿ ಬರಮಾಡಿಕೊಂಡು ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ನವರು. ಬಿಜೆಪಿ ನಾಯಕರ ಧೋರಣೆಯಿಂದ ನೊಂದಿದ್ದಾರೆ. ಪಕ್ಷದ ಬಾವುಟ ಕೊಟ್ಟು ಹೋದವರು ಮತ್ತೆ ಏನಾಯ್ತು ಅಂತ ನೋಡಿಲ್ಲ ಎಂದು ಆರೋಪಿಸಿದರು. ಮಂಡ್ಯದಲ್ಲಿ ಚುನಾವಣೆ ಮಾಡುವ ಆಸಕ್ತಿ ಅವರಿಗಿದೆ. ಶಿವಮೊಗ್ಗದಲ್ಲಿ ಪುತ್ರ ಇರೋದ್ರಿಂದ ಕೆಲಸ ಮಾಡ್ತಿದ್ದಾರೆ. ಬಳ್ಳಾರಿಯಲ್ಲೂ […]

ಬಿಜೆಪಿಗೆ ಬಿಗ್ ಶಾಕ್: ಡಿ.ಕೆ.ಸುರೇಶ್ ಜೊತೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷ..!

Thursday, November 1st, 2018
chandrashekar

ರಾಮನಗರ: ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದಲೇ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ಚಂದ್ರಶೇಖರ್ ಗೆ ಟಿಕೆಟ್ ಕೊಟ್ಟಿದ್ದ ಬಿಜೆಪಿ ರಾಮನಗರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ನಿನ್ನೆಯವರೆಗೂ ಅಭ್ಯರ್ಥಿ ಪರ ಭಾರೀ ಪ್ರಚಾರ ಕೂಡ ನಡೆಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಜೊತೆ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲದೇ ತಾನು ಚುನಾವಣ ಕಣದಿಂದಲೇ ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಬಿಗ್ […]

ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದು ವಶ: ನಾಲ್ವರ ಬಂಧನ

Wednesday, October 31st, 2018
currency

ಮೈಸೂರು: ನಾಲ್ವರು ದರೋಡೆಕೋರರನ್ನು ಬಂಧಿಸಿ, ಅವರಿಂದ ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದನ್ನು ವಿಜಯನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮದ ಶ್ರೀಧರ್ (28), ಕೂರ್ಗಳ್ಳಿ ಗ್ರಾಮದ ನಟೇಶ್ (24), ಬೆಂಗಳೂರಿನ ವಿನಾಯಕ ಲೇಔಟ್‍ನ ಪ್ರಸಾದ್ (24), ಬೆಂಗಳೂರಿನ ಅಮೃತಹಳ್ಳಿಯ ಭರತ್‍ಕುಮಾರ್ (20) ಬಂಧಿತ ಆರೋಪಿಗಳು. ಶಿವರಾಂಪೇಟೆ ರಸ್ತೆಯಲ್ಲಿರುವ ಫಾರಿನ್ ಕರೆನ್ಸಿ ಎಕ್ಸ್ಚೇಂಜ್ ಆಫೀಸ್ ಮಾಲೀಕ ಅರುಣ್ ಕುಮಾರ್ ಎಂಬುವರು ಸೆ.22ರಂದು ರಾತ್ರಿ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ವಿಜಯನಗರದಲ್ಲಿರುವ ತಮ್ಮ […]

ಎಫ್​​​ಐಆರ್​​​ ರದ್ದು ಕೋರಿ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

Wednesday, October 31st, 2018
arjun-sarja

ಮಂಗಳೂರು: ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಮಿ ಟೂ ಪ್ರಕರಣದ ಕಾವು ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಈ ಸಂಬಂಧ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಇನ್ನು ತನ್ನ ವಿರುದ್ಧದ ಎಫ್ಐಆರ್ ರದ್ದು ಕೋರಿ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಇಂದೇ ವಿಚಾರಣೆ ನಡೆಸಲು ಅರ್ಜುನ್ ಪರ ವಕೀಲ ಬಿ.ವಿ. ಆಚಾರ್ಯ ಮೆಮೋ ಸಲ್ಲಿಸಿ ಮನವಿ ಮಾಡಿದ್ದರು. ಆದರೆ, ಹೈಕೋರ್ಟ್ ನ್ಯಾಯಮೂರ್ತಿ ಪಿ.ದಿನೇಶ್ ಕುಮಾರ್ ಅರ್ಜಿ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದ್ದಾರೆ.

ನಿಮಗೆ ಅಧಿಕಾರ ನಡೆಸಲು ಹೇಳಿ ಕೊಟ್ಟವರೇ ನಾವು: ಯಡಿಯೂರಪ್ಪಗೆ ಸಿಎಂ ಟಾಂಗ್

Tuesday, October 30th, 2018
kumarswamy

ಶಿವಮೊಗ್ಗ: ನಿಮಗೆ ಅಧಿಕಾರ ನಡೆಸಲು ಹೇಳಿ ಕೊಟ್ಟವರೇ ನಾವು. ಇಲ್ಲದಿದ್ದರೆ ನಿಮಗೆ ಅಧಿಕಾರ ನಡೆಸಲು ಬರುತ್ತಿರಲಿಲ್ಲ ಎಂದು ಶಿವಮೊಗ್ಗದಲ್ಲಿ ಸಿಎಂ ಕುಮಾರಸ್ವಾಮಿ ಮಾಜಿ ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ. ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಾದಾಗಿನಿಂದ ಮಾಧ್ಯಮದವರನ್ನು ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಡೆಡ್ಲೈನ್ ನೀಡುತ್ತಾ ಬರುತ್ತಿದ್ದಾರೆ. ಇವರೇನು ಜ್ಯೋತಿಷ್ಯಗಳಾ..? ಎಂದು ಟಾಂಗ್ ನೀಡಿದರು. ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕರನ್ನು ಕೊಂಡುಕೊಂಡಿದ್ದೇವೆ. ದೀಪವಾಳಿಯ ನಂತರ ಸರ್ಕಾರ ಬಿದ್ದು ಹೋಗುತ್ತೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. […]

ದುನಿಯಾ ವಿಜಯ್ ಪತ್ನಿ ನಾಗರತ್ನರನ್ನು ಬಂಧಿಸಲು ಡಿಸಿಪಿ ಅಣ್ಣಾಮಲೈ ಮಾಸ್ಟರ್ ಪ್ಲಾನ್..!

Tuesday, October 30th, 2018
annamalai

ಬೆಂಗಳೂರು: ಕಳೆದ ಎರಡು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ‌ ನಾಗರತ್ನ ನಾಪತ್ತೆಯಾಗಿದ್ದಾರೆ. ದುನಿಯಾ ವಿಜಿ ಪತ್ನಿ ನಾಗರತ್ನರನ್ನು ಬಂಧಿಸಲು ಡಿಸಿಪಿ ಅಣ್ಣಾಮಲೈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ನಾಗರತ್ನಗಾಗಿ ಬೆಂಗಳೂರಿನ ಅನೇಕಲ್, ಅತ್ತಿಬೆಲೆ, ಹೊಸೂರು ಕಡೆ ಸಂಬಂಧಿಗಳ ಮನೆಯಲ್ಲಿ ಶೋಧ ಮಾಡಿದ್ದಾರೆ. ಆದ್ರೆ ನಿನ್ನೆ ಅನೇಕಲ್ ಬಳಿಯ ಕಮ್ಮಸಂದ್ರದ ನೆಂಟರ ಮನೆಯಲ್ಲಿ ನಾಗರತ್ನ ಇದ್ದರು ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ‌ಮಾಡಿದ್ದರು. ಆದ್ರೆ ಪೊಲೀಸರು ಅಲ್ಲಿಗೆ ಬರುವ ಮುನ್ಸೂಚನೆ ಅರಿತು ನಾಗರತ್ನ ಅಲ್ಲಿಂದ ಕಾಲ್ಕಿತ್ತಿದ್ದರು ಎನ್ನಲಾಗ್ತಿದೆ. ಇನ್ನು […]

ಕನ್ನಡದ ಖ್ಯಾತ ನಿರ್ದೇಶಕ ಎಂ.ಎಸ್​ ರಾಜಶೇಖರ್​ ಆಸ್ಪತ್ರೆಗೆ ದಾಖಲು

Monday, October 29th, 2018
hospitalized

ಬೆಂಗಳೂರು: ಉಸಿರಾಟದ ತೊಂದರೆಯಿಂದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಂ.ಎಸ್.ರಾಜಶೇಖರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜಶೇಖರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಅವರ ಪತ್ನಿ ರಾಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ರಾಜಶೇಖರ್, ಮೇರು ನಟ ಡಾ. ರಾಜ್ಕುಮಾರ್ ಅವರ ಧ್ರುವತಾರೆ ಸೇರಿದಂತೆ ರಥಸಪ್ತಮಿ, ನಂಜುಂಡಿ ಕಲ್ಯಾಣಿ, ಮನ ಮೆಚ್ಚಿದ ಹುಡುಗಿಯಂತಹ ಸಾಕಷ್ಟು ಹಿಟ್ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.