ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪ..ಚಂದನ್ ಶೆಟ್ಟಿಗೆ ಬಿಗ್ ರಿಲೀಫ್!

Tuesday, September 4th, 2018
chandan-shetty

ಬೆಂಗಳೂರು: ತಮ್ಮ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಕೊನೆಗೂ ಈ ಪ್ರಕರಣದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಿರಳಾಗಿದ್ದಾರೆ. ಚಂದನ್ಗೆ ಸಿಸಿಬಿ ಕಳುಹಿಸಿದ ಪತ್ರ ಈನಾಡುಗೆ ಲಭ್ಯವಾಗಿದೆ. ಇನ್ನು ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಸಿಸಿಬಿ ಘಟಕ ಸ್ಪಷ್ಟಪಡಿಸಿ ಪತ್ರ ಕಳಹಿಸಿದೆ. ಮಹಿಳೆ ಮತ್ತು ಮಾದಕ ದ್ರವ್ಯ ದಳ ತನಿಖಾಧಿಕಾರಿ ಬಿ.ಎಸ್ ಮೋಹನ್ ಕುಮಾರ್ ಅವರು ಚಂದನ್ ಗೆ ಪತ್ರ ರವಾನಿಸಿದ್ದಾರೆ. ನಿಮ್ಮ ಹೇಳಿಕೆಯನ್ನ […]

ಕೆಸಿಸಿ ಕಪ್ 2018 ಉದ್ಘಾಟನೆಗೆ ಸಿಎಂಗೆ ಸುದೀಪ್ ಆಹ್ವಾನ

Tuesday, September 4th, 2018
sudeep

ಬೆಂಗಳೂರು: ಕೆಸಿಸಿ ಕಪ್ 2018 ಉದ್ಘಾಟನೆಗೆ ಆಗಮಿಸುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಟ ಕಿಚ್ಚ ಸುದೀಪ್ ಆಹ್ವಾನ ನೀಡಿದ್ದಾರೆ. ಕೆಸಿಸಿ ಎರಡನೇ ಲೀಗ್ ಇದೇ ತಿಂಗಳು 8 ಮತ್ತು 9 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಪಂದ್ಯಗಳ ಉದ್ಘಾಟನೆ ನಡೆಯಲಿದೆ. ಈ ಸಮಾರಂಭಕ್ಕೆ ಆಗಮಿಸುವಂತೆ ಸಿಎಂಗೆ ಆಹ್ವಾನಿಸಲಾಗಿದೆ. ಇನ್ನು ಮೊನ್ನೆಯಷ್ಟೆ ವಿಧಾನಸೌಧದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಸುದೀಪ್, ಅವರಿಗೂ ಕೂಡ ಕೆಸಿಸಿ […]

ನಗರ ಸ್ಥಳೀಯ ಚುನಾವಣಾ: ಯಾವುದೇ ಪಕ್ಷಕ್ಕೆ ಜನರ ಸ್ಪಷ್ಟ ಬಹುಮತ ಇಲ್ಲ

Monday, September 3rd, 2018
local-fights

ಬೆಂಗಳೂರು: ಮಿನಿ ಸಮರ ಎಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಚುನಾವಣಾ ಫಲಿತಾಂಶ ಬಹುತೇಕ ಅಂತಿಮವಾಗಿದ್ದು ಯಾವುದೇ ಪಕ್ಷಕ್ಕೆ ಜನರು ಸ್ಪಷ್ಟ ಬಹುಮತ ಕೊಟ್ಟಿಲ್ಲ. ಹೆಚ್ಚಿನ ಕಡೆ ಅತಂತ್ರ ಫಲಿತಾಂಶ ಬಂದಿದೆ. 102 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮಹಾನಗರ ಪಾಲಿಕೆ ಒಟ್ಟು – 135 ಕಾಂಗ್ರೆಸ್ – 36 ಬಿಜೆಪಿ – 54 ಜೆಡಿಎಸ್ – 30 ಇತರರು – 15 ಪಟ್ಟಣ ಪಂಚಾಯತಿ ಒಟ್ಟು ಸ್ಥಾನ – […]

ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ!

Saturday, September 1st, 2018
BBMP

ಬೆಂಗಳೂರು: ಬಿಬಿಎಂಪಿ ವಿರುದ್ಧ ಬೃಹತ್ ಹಗರಣದ ಆರೋಪ ಕೇಳಿ ಬಂದಿದ್ದು, ಆರ್ಟಿಐ ಕಾರ್ಯಕರ್ತ ಡಿ.ವಿ ಚಕ್ರವರ್ತಿ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎಸ್ ನಟರಾಜ್ ಶರ್ಮಾ ಈ ಆರೋಪ ಮಾಡಿದ್ದಾರೆ. 150 ಕೋಟಿ ರೂ. ಭ್ರಷ್ಟಾಚಾರ ಆರೋಪ ನಡೆದಿದೆ ಎಂದು ಆರೋಪಿಸಿರುವ ಇವರು, 2017 ರಲ್ಲಿ ನಗರದಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಯೋಜನೆ ರೂಪಿಸಿತ್ತು. ಈ ಯೋಜನೆಗೆ ಸಲಹಾ ಸಂಸ್ಥೆಯನ್ನು ನೇಮಿಸುವಾಗ ಇರಬೇಕಾದ ನೀತಿ ನಿಂಬಂಧನೆಗಳನ್ನು ಗಾಳಿಗೆ ತೂರಿರುವ ಪಾಲಿಕೆ, ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಎಂಬ […]

ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಿ: ಸಂಯುಕ್ತ ಹೊರ್ನಾಡ್

Saturday, September 1st, 2018
sayunkta-hornad

ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕೆಂದು ನಟಿ ಸಂಯುಕ್ತ ಹೊರ್ನಾಡ್ ಹೇಳಿದರು. ಮಹಾತ್ಮ ಗಾಂಧಿ ರಸ್ತೆಯ ಛಾಯಾ ಕಲಾ ಮಂದಿರದಲ್ಲಿ ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ಎಂಪ್ಯಾಶನ್ ಕೃತಿ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಬೀದಿಗಳಲ್ಲಿ ಸಂರಕ್ಷಿಸಲಾದ ನಾಯಿಗಳನ್ನು ಕಲಾ ಕುಂಚದಲ್ಲಿ ಚಿತ್ರಿಸಿದ ಛಾಯಾಚಿತ್ರಗಳನ್ನು ಇಲ್ಲಿ ಅನಾವರಣ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮಗಳು ಸಹ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ […]

ಬೆಂಗಳೂರು ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ

Friday, August 24th, 2018
Rajabhavana

ಬೆಂಗಳೂರು : ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಗುರುವಾರ ದಿಂದ ಪ್ರವೇಶವನ್ನು ಕಲ್ಪಿಸಲಾಗಿದೆ. ಗುರುವಾರ ಸುಮಾರು 500 ಕ್ಕೂ ಹೆಚ್ಚು ಸಾರ್ವಜನಿಕರು ಭೇಟಿ ನೀಡಿದರು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಸಪ್ಟೆಂಬರ್ 6  ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವನ್ನು ನೀಡಲಾಗಿದ್ದು ರಾಜಭವನದ ಸೌಂದರ್ಯವನ್ನು ಸವಿಯಬಹುದಾಗಿದೆ.

ಕರ್ನಾಟಕದಲ್ಲಿ ಮೊದಲ ಕೀಟೋಜೆನಿಕ್ ಥೆರಪಿ ಕ್ಲಿನಿಕ್ ಪ್ರಾರಂಭ

Friday, August 24th, 2018
Rainbow Hospital

ಬೆಂಗಳೂರು : ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಕೀಟೋಜೆನಿಕ್ ಡಯೆಟ್ ಥೆರಪಿ ಕ್ಲಿನಿಕ್ ಅನ್ನು ನಮ್ಮ ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ಕೀಟೋಜೆನಿಕ್ ಡಯೆಟ್ ವಿಶೇಷವಾದ ಹೆಚ್ಚು ಕೊಬ್ಬಿನ ಮತ್ತು ಕಡಿಮೆ ಕಾರ್ಬೊಹೈಡ್ರೇಟ್ ಆಹಾರವಾಗಿದ್ದು ಅದನ್ನು ಮಕ್ಕಳಲ್ಲಿ ಅಪಸ್ಮಾರ ನಿಯಂತ್ರಣ ಕಷ್ಟಕರವಾಗಿರುವ ಸಂದರ್ಭದಲ್ಲಿ ಬಳಸಲಾಗುತ್ತದೆ; ಅದರಲ್ಲಿಯೂ ಸಾಂಪ್ರದಾಯಿಕ ಅಪಸ್ಮಾರ-ನಿರೋಧಕ ಔಷಧಗಳಿಗೆ ಪ್ರತಿಕ್ರಿಯಿಸದೇ ಇರುವವರಿಗೆ ಬಳಸಲಾಗುತ್ತದೆ. ಈ ಕ್ಲಿನಿಕ್ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿದ್ದು ಪೀಡಿಯಾಟ್ರಿಕ್ ನ್ಯೂರಾಲಜಿ ಅಂಡ್ ನ್ಯೂಟ್ರಿಷನ್ ವಿಭಾಗಗಳ ಉಪಕ್ರಮವಾಗಿದೆ. ಇದು ಅಪಸ್ಮಾರ(ಫಿಟ್ಸ್)ವನ್ನು ಔಷಧಗಳಿಂದ ಮಾತ್ರ ನಿಯಂತ್ರಿಸಲಾಗದ ಮಕ್ಕಳಿಗೆ ಉಪಯುಕ್ತವಾಗುತ್ತದೆ. ಬೆಂಗಳೂರಿನ ಮಾರತ್‍ಹಳ್ಳಿಯ […]

ಕರ್ನಾಟಕದ ಕಾವೇರಿ ನದಿಗೆ ವಾಜಪೇಯಿ ಚಿತಾಭಸ್ಮವನ್ನು ವಿಸರ್ಜಿಸಿದ ಯಡಿಯೂರಪ್ಪ

Thursday, August 23rd, 2018
Vajapeyee

ಮಂಡ್ಯ : ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯು ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅನಂತಕುಮಾರ್, ಆರ್. ಅಶೋಕ್ ಇನ್ನೂ ಮೊದಲಾದವರು ಗುರುವಾರ ಶ್ರೀರಂಗಪಟ್ಟಣದಲ್ಲಿನ ಕಾವೇರಿ ತೀರದಲ್ಲಿ ನೆರೆದಿದ್ದು ಸಕಲ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಶ್ರೀರಂಗಪಟ್ಟಣ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಇದಕ್ಕೆ ಮುನ್ನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಿತಾಭಸ್ಮವಿದ್ದ ಕಳಶದ ಮೆರವಣಿಗೆ ನಡೆದಿದೆ. ಮಾರ್ಗದ ನಡುವೆ ನಿಡಘಟ್ಟ, ಮದ್ದೂರು, […]

ಸಂತ್ರಸ್ತರಿಗೆ ಬಿಸ್ಕೆಟ್​ ಎಸೆದ ಸಚಿವ ರೇವಣ್ಣ ವರ್ತನೆಗೆ ನೆಟಿಜನ್ಸ್​ ಆಕ್ರೋಶ

Monday, August 20th, 2018
hd-revanna

ಹಾಸನ: ನೆರೆ ಸಂತ್ರಸ್ತರ ಶಿಬಿರದಲ್ಲಿ ಅಮಾನವೀಯ ನಡೆ ತೋರಿದ್ದ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ವರ್ತನೆಗೆ ನೆಟಿಜನ್ಸ್ಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಹಾಸನದ ರಾಮನಾಥಪುರ ಸಂತ್ರಸ್ತರ ಶಿಬಿರಕ್ಕೆ ಸಚಿವ ಹೆಚ್ ಡಿ ರೇವಣ್ಣ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಶಿಬಿರದಲ್ಲಿ ಸಂತ್ರಸ್ತರ ಕೈಗೆ ಬಿಸ್ಕೇಟ್ ಪ್ಯಾಕ್ ಕೊಡುವ ಬದಲು ಮೈಮೇಲೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿರುವ ನೆಟಿಜೆನ್ಸ್ ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಅವರ […]

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆ..!

Monday, August 20th, 2018
siddaramaih

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಆಚರಿಸಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ದಿ. ರಾಜೀವ್ ಗಾಂಧಿ ಮತ್ತು ದಿ. ದೇವರಾಜ್ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವ ಹೆಚ್. ಆಂಜನೇಯ, ಶಾಸಕ ಭೈರತಿ ಸುರೇಶ್, ಮಾಜಿ ಸಚಿವೆ ಮೋಟಮ್ಮ ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ […]