‘ನಮ್ಮದು ಒಂದೇ ಕರ್ನಾಟಕ‌.. ಅದು ಅಖಂಡ‌ ಕರ್ನಾಟಕ’: ಸಿದ್ದರಾಮಯ್ಯ

Monday, July 30th, 2018
siddaramaih

ಬೆಂಗಳೂರು: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಎದ್ದಿರುವ ಕೂಗಿನ ಬಗ್ಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ‘ನಮ್ಮದು ಒಂದೇ ಕರ್ನಾಟಕ.‌ ಅದು ಅಖಂಡ‌ ಕರ್ನಾಟಕ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಉ-ಕ ಪ್ರತ್ಯೇಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಜೆಟ್ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಯ ಕೆಲ ನಾಯಕರು ಹಾಗೂ ಇತರ ಸಂಘಟನೆಗಳು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿವೆ. ಇದರ ಬಗ್ಗೆ ಮಾಜಿ […]

ಮೈಸೂರಿನಲ್ಲಿ ಪೊಲೀಸ್ ಜೀಪ್​ ಪಲ್ಟಿ… ಮೂವರಿಗೆ ಗಾಯ!

Saturday, July 28th, 2018
police-jeep

ಮೈಸೂರು: ಚಲಿಸುತ್ತಿದ್ದ ಪೊಲೀಸ್ ಜೀಪ್ನ ಆ್ಯಕ್ಸಲ್ ಬ್ಲೇಡ್ ಕಟ್ ಆಗಿ ಪೊಲೀಸ್ ಜೀಪ್ ಪಲ್ಟಿಯಾಗಿರುವ ಘಟನೆ ಹೆಚ್.ಡಿ ಕೋಟೆಯ ಮಾದಾಪುರ ಗ್ರಾಮದಲ್ಲಿ ನಡೆದಿದ್ದು ಜೀಪ್ನಲ್ಲಿದ್ದ ಸಿಪಿಐ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಹೆಚ್.ಡಿ. ಕೋಟೆ ಪೊಲೀಸ್ ಠಾಣೆಗೆ ಸೇರಿದ ಪೊಲೀಸ್ ಜೀಪೊಂದು ಮೈಸೂರಿನಿಂದ ಮಾನಂದವಾಡಿ ರಸ್ತೆಯ ಮೂಲಕ ಹೆಚ್.ಡಿ ಕೋಟೆಗೆ ಹೋಗುತ್ತಿರುವಾಗ ಮಾದಾಪುರ ಗ್ರಾಮದ ಬಳಿ ಜೀಪ್ ನ ಅಕ್ಸೆಲ್ ಬ್ಲೇಡ್ ಕಟ್ಟಾದ, ಪರಿಣಾಮ ಜೀಪ್ ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲಿ ಪಲ್ಟಿ ಹೊಡೆದು ರಸ್ತೆ ಬದಿಯಲ್ಲಿದ್ದ ಮನೆಗೆ […]

ಉತ್ತರ ಭಾರತದಲ್ಲಿ ಭಾರಿ ಮಳೆ ಬೋರ್ಗರೆಯುತ್ತಿದ್ದಾಳೆ ಯಮುನೆ

Saturday, July 28th, 2018
heavy-rain

ನವದೆಹಲಿ: ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಯಮುನಾನದಿ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು ಮೀರಿ ಪ್ರತಾಪ ತೋರುತ್ತಿದ್ದಾಳೆ. ಈ ಪರಿಣಾಮ ದೆಹಲಿಯ ಕಾಶ್ಮೀರಿ ಗೇಟ್ ಬಳಿಯ ಹಳೆಯ ಕಬ್ಬಿಣದ ಸೇತುವೆ ಮೇಲೆ ನೀರು ಬಂದಿದ್ದು, ಸಂಚಾರಕ್ಕೆ ಸಂಚಕಾರ ಬಂದಿದೆ. ಈ ನಡುವೆ ನಡುವೆ ಅಪಾಯದಲ್ಲಿ ಸಿಲುಕಿದವರ ರಕ್ಷಣೆಗೆ ದೆಹಲಿ ಆಡಳಿತ 43 ಬೋಟ್ಗಳನ್ನ ಕಳುಹಿಸಿಕೊಡಲಾಗಿದೆ. ಇನ್ನು ಉತ್ತರಪ್ರದೇಶದಲ್ಲಿ ಘಾಜಿಯಾಬಾದ್ನ ವಸುಂಧರಾ ಭಾಗದಲ್ಲಿ ಭಾರಿ ಮಳೆಗೆ ರಸ್ತೆಗಳೆಲ್ಲ ಮಣ್ಣಿನಿಂದ ಆವೃತ್ತವಾಗಿದ್ದು, ಮಣ್ಣು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಹಿಮಾಚಲ […]

ತಿರುಪತಿಯಲ್ಲಿ ಗೌಡರ ಕುಟುಂಬ..ತಿಮ್ಮಪ್ಪನ ದರ್ಶನ ಪಡೆದ ಸಿಎಂ!

Friday, July 27th, 2018
kumarswamy

ವಿಜಯವಾಡ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಮೇತರಾಗಿ ದೇವೇಗೌಡರು ತಮ್ಮ ಕುಟುಂಬಸ್ಥರೊಂದಿಗೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ದೇವರ ಸನ್ನಿಧಿಗೆ ಬಂದು, ವೆಂಕಟೇಶ್ವರನ ದರ್ಶನ ಪಡೆದರು. ದೇವೇಗೌಡರ ಪತ್ನಿ ಚೆನ್ನಮ್ಮ, ಹಾಗೂ ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಗೌಡರ ಇತರ ಕುಟುಂಬ ಸದಸ್ಯರು ದೇವರ ಕೃಪೆಗೆ ಪಾತ್ರರಾದರು. ತಿಮ್ಮಪ್ಪನ ದರ್ಶನದ ಬಳಿಕ ಗೌಡರ ಕುಟುಂಬಸ್ಥರಿಗೆ ಅರ್ಚರು ಪ್ರಸಾದ, ತೀರ್ಥ ವಿತರಿಸಿದರು. ಇದಕ್ಕೂ ಮುನ್ನ […]

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಶೋಭಾ ಕರದ್ಲಾಂಜೆ

Friday, July 27th, 2018
shobha-karandlaje

ಮೈಸೂರು : ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಂಸದೆ ಶೋಭಾ ಕರದ್ಲಾಂಜೆ ಹೇಳಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ನಗುತ್ತಲೇ ಹೇಳಿಕೆ ನೀಡುವ ಮೂಲಕ ಎಲ್ಲ ಅಚ್ಚರಿಗೆ ಕಾರಣವಾಗಿದ್ದಾರೆ. ಆಶಾಢ ಮಾಸದ ಎರಡನೇ ಶುಕ್ರವಾರವಾದ ಇಂದು ಸಂಸಸೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ನಡೆದುಕೊಂಡೇ ಮೆಟ್ಟಿಲು ಏರಿದ ಅವರು, ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿ ಈ ಸ್ಫೋಟಕ ವಿಷಯ ಹೊರಗಡೆವಿ ಅಚ್ಚರಿಗೆ ಕಾರಣವಾದರು. ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಸರ್ವೇ […]

ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರು ಬದಲಾವಣೆ..ಪಶ್ಚಿಮ ಬಂಗಾಳ ಬದಲಿಗೆ ಬಾಂಗ್ಲಾ..!

Thursday, July 26th, 2018
mamatha-benarji

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರು ಬದಲಾವಣೆ ಮಾಡಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಮಾಡಿದ್ದಾರೆ. ಹೀಗಾಗಿ ಇನ್ಮುಂದೆ ಪಶ್ಚಿಮ ಬಂಗಾಳ ಬದಲಿಗೆ ರಾಜ್ಯದ ಹೆಸರು ;ಬಾಂಗ್ಲಾ’ ಎಂದು ಮರು ನಾಮಕರಣಗೊಳ್ಳಲಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಈ ಮಸೂದೆಗೆ ಬಿಜೆಪಿ ಹಾಗೂ ಸಿಪಿಐಎಂ ಪಕ್ಷಗಳು ಬೆಂಬಲಿಸಿದ್ದು, ಸರ್ವಾನುಮತದಿಂದ ವಿಧೇಯಕವನ್ನ ಅಲ್ಲಿನ ವಿಧಾನಸಭೆಯಲ್ಲಿ ಪಾಸ್ ಮಾಡಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮಂಡಿಸಿ, ಅನುಮೋದನೆ ಪಡೆದಿರುವ ಈ ಮಸೂದೆಯನ್ನ , ಕೇಂದ್ರದ ಅನುಮೋದನೆಗೆ […]

ಒಲಂಪಿಕ್​ನಲ್ಲಿ ಚಿನ್ನದ ಪದಕ ಗೆದ್ದರೆ 3 ಕೋಟಿ ಬಹುಮಾನ: ಡಾ.ಜಿ ಪರಮೇಶ್ವರ್

Thursday, July 26th, 2018
Deputy-CM

ಬೆಂಗಳೂರು: ಒಲಂಪಿಕ್ನಲ್ಲಿ ಚಿನ್ನ ಗೆದ್ದರೆ 3 ಕೋಟಿ, ಬೆಳ್ಳಿಗೆ 3 ಕೋಟಿ ಹಾಗೂ ಕಂಚು ಗೆದ್ದರೆ 2 ಕೋಟಿ‌ ರೂಪಾಯಿ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಘೋಷಿಸಿದ್ದಾರೆ. ವಿಧಾನಸೌಧದ ಕಚೇರಿಯಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಕನ್ನಡತಿ ಅಶ್ವಿನಿ ಪೊನ್ನಪ್ಪಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಇದೇ ವೇಳೆ ಡಿಸಿಎಂ ಪರಮೇಶ್ವರ್ ಅವರು ಅಶ್ವಿನಿ ಪೊನ್ನಪ್ಪಗೆ ಶಾಲು, ಪೇಟ ತೊಡಿಸಿ ಸನ್ಮಾನಿಸಿದರು. ಅಲ್ಲದೆ ಸರ್ಕಾರದ ವತಿಯಿಂದ 33 […]

ಕರ್ನಾಟಕ ಒಂದೇ, ಅದರಲ್ಲಿ ಮೊದಲ ಕರ್ನಾಟಕ ಎರಡನೇ ಕರ್ನಾಟಕ ಅನ್ನೋದೇನಿಲ್ಲ: ಡಾ.ಜಿ ಪರಮೇಶ್ವರ್

Thursday, July 26th, 2018
g.parameshwar

ಬೆಂಗಳೂರು: ಕರ್ನಾಟಕ ಒಂದೇ, ಅದರಲ್ಲಿ ಮೊದಲ ಕರ್ನಾಟಕ ಎರಡನೇ ಕರ್ನಾಟಕ ಅನ್ನೋದೇನಿಲ್ಲ. ನಮ್ಮದು ಅಖಂಡ ಕರ್ನಾಟಕ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ 114 ತಾಲೂಕುಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೇವೆ. ರಾಜ್ಯ ಸರ್ಕಾರದ ಹೋರಾಟದ ಫಲವಾಗಿಯೇ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇದನ್ನೆಲ್ಲ ಗಮನಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯ ವಿಭಜನೆಯ ಮಾತುಗಳನ್ನು ಆಡಬಾರದು ಎಂದು ಮನವಿ ಮಾಡಿದರು. ನಮಗೆ ಉತ್ತರ ಕರ್ನಾಟಕ ಅಭಿವೃದ್ಧಿ ಬೇಡ […]

ಕೇತುಗ್ರಸ್ಥ ಚಂದ್ರಗ್ರಹಣ ಶುಭ ಅಶುಭ ಫಲಗಳ ಬಗ್ಗೆ ಪಂಡಿತರಿಂದ ತಿಳ್ಕೊಳ್ಳಿ

Wednesday, July 25th, 2018
lunar-eclipse

ಬೆಂಗಳೂರು : ಆಷಾಢ ಮಾಸದ ಗುರು ಪೌರ್ಣಮಿಯಂದು ಜರುಗಲಿರುವ ಕೇತುಗ್ರಸ್ಥ ಚಂದ್ರಗ್ರಹಣವು  ಉತ್ತರಾಷಾಢ ನಕ್ಷತ್ರದ 4 ನೇ ಚರಣ, ಮಕರ ರಾಶಿಯಲ್ಲಿ ಜು. 27 ಶುಕ್ರವಾರದ ರಾತ್ರಿ 11.57 ನಿಮಿಷಕ್ಕೆ ಸ್ಪರ್ಶವಾಗುವುದು, ರಾತ್ರಿ 1.54ಕ್ಕೆ ಮಧ್ಯಕಾಲವಾಗಿದ್ದು, ರಾತ್ರಿ 2-45 ಕ್ಕೆ ಮೋಕ್ಷವಾಗುವುದು. 125 ವರ್ಷಕ್ಕೊಮ್ಮೆ ಜರುಗುವ ಅತೀ ದೀರ್ಘ ಸಮಯದ (3 ಗಂಟೆ 51 ನಿಮಿಷ) ಚಂದ್ರಗ್ರಹಣವು ಇದಾಗಿದೆ ಎಂದು ಸಾತ್ವಿಕ ಸನಾತನ ಸಂಸ್ಥೆಯ ಪಂ. ಶ್ರೀನಿವಾಸ ಭಟ್ ತಿಳಿಸಿದ್ದಾರೆ. ಚಂದ್ರಗ್ರಹಣ ದಂಗವಾಗಿ ಜುಲೈ 27 ಮತ್ತು 28 […]

ತೃತೀಯ ರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ: ಕೃಷ್ಣ ಬೈರೇಗೌಡ

Tuesday, July 24th, 2018
krishna-boregowda

ಹುಬ್ಬಳ್ಳಿ : ತೃತೀಯ ರಂಗ ಒಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಹತಾಶರಾಗಿದ್ದಾರೆ. ಹೀಗಾಗಿ ರಾಹುಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ನಗರದ ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಮಿತ್ರಪಕ್ಷಗಳಿಗೆ ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿಲ್ಲ. ಹೀಗಾಗಿ ಶಿವಸೇನೆ, ಪಿಡಿಪಿ, ಟಿಡಿಪಿ ಸೇರಿದಂತೆ ಇನ್ನಿತರ ಮಿತ್ರಪಕ್ಷಗಳು ಬಿಜೆಪಿಯಿಂದ ದೂರವಾಗುತ್ತಿವೆ. ಇದೀಗ ವಿಪಕ್ಷಗಳು ಒಂದಾಗಿರುವುದರಿಂದ ಬಿಜೆಪಿಗೆ ನಡುಕ ಹುಟ್ಟಿದೆ. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ತೃತೀಯರಂಗ ಒಗ್ಗೂಡಿ ಚುನಾವಣೆ ಎದುರಿಸಲಿದೆ. ಪ್ರಧಾನಿ ಆಯ್ಕೆ […]