ರಾಜ್ಯದ ಶ್ರೀಮಂತ ಮಹಿಳೆ ಅನಿತಾ ಕುಮಾರಸ್ವಾಮಿ

Tuesday, October 4th, 2011
Anita Kumaraswamy

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿಯವರು 2010-11ನೇ ಸಾಲಿಗೆ ಆಸ್ತಿ ವಿವರಗಳ ಅಫಡವಿಟ್ ಸಲ್ಲಿಸಿರುವ ಪ್ರಕಾರ ಒಟ್ಟು ಅಧಿಕೃತ ಆಸ್ತಿ ಮೊತ್ತ 160 ಕೋಟಿ ರುಪಾಯಿ. ಶಾಸಕಿಯಾಗಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶ ದೃಢಪಟ್ಟಿದೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸುವುದಾದರೆ ಬಳ್ಳಾರಿಯ ಜನಾರ್ಧನ ರೆಡ್ಡಿ ಅಧಿಕೃತ ಆಸ್ತಿ ಲೋಕಾಯಯುಕ್ತ ದಾಖಲೆಗಳ ಪ್ರಕಾರ ಕೇವಲ 144 ಕೋಟಿ ರು. 2009-10ರಲ್ಲಿ ಶಾಸಕಿ ಅನಿತಾರ ಆಸ್ತಿ ಮೊತ್ತ 51.22 ಕೋಟಿ […]

ಎಬಿವಿಪಿ ಕಾರ್ಯ ಕರ್ತನಿಂದ ಸಚಿವ ವಿ. ಸೋಮಣ್ಣ ನವರಿಗೆ ಚಪ್ಪಲಿ ಸೇವೆ

Saturday, October 1st, 2011
V Somanna

ಬೆಂಗಳೂರು  : ನೂತನ ಮುಖ್ಯಮಂತ್ರಿ ಡಿ.ವಿ ಸದಾನಂದ  ಗೌಡರ ಸಂಪುಟದಲ್ಲಿ ಸ್ಥಾನ ಪಡೆದ ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ  ಎಬಿವಿಪಿ ಕಾರ್ಯಕರ್ತನೊರ್ವ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ವಿಧಾನಸೌಧದ ಅಂಗಳದಲ್ಲಿಯೇ (ಅ.1) ಇಂದು ನಡೆಯಿತು. ಬಿಜೆಪಿ ಆಳ್ವಿಕೆಯಿಂದ ಬೇಸತ್ತು ಸೋಮಣ್ಣನವರ ಮೇಲೆ ಹಲ್ಲೆ ಮಾಡಿದ್ದೇನೆಂದು ಆತ ಹೇಳಿಕೆ ನೀಡಿದ್ದಾನೆ. ಸೋಮಣ್ಣ ಮಾತ್ರವಲ್ಲ, ಬಿಜೆಪಿಯ ಯಾರ ಮೇಲೆಯಾದರೂ ಇದೇ ರೀತಿ ಹಲ್ಲೆ ಮಾಡುವುದಾಗಿ ಆತ ಹೇಳಿದ್ದಾನೆ. ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮ ಕಚೇರಿಯಿಂದ ಹೊರಬರುತ್ತಿದ್ದರು. ಆಗ […]

ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ಹೈಕೋರ್ಟ್ ತಡೆ

Friday, September 30th, 2011
BS Yeddyurappa

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅದರೆ ಯಡಿಯೂರಪ್ಪ ವಿರುದ್ಧ ಇರುವ 2 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತಡೆಯಾಜ್ಞೆ ಪ್ರಶ್ನಿಸಲು ಸಿರಾಜಿನ್ ಬಾಷಾ ನಿರ್ಧರಿಸಿದ್ದಾರೆ. ಸಿರಾಜಿನ್ ಪರ ವಕೀಲ ಹೇಮಂತ ರಾಜು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಎರಡು ಮೂರು ದಿನಗಳಲ್ಲಿ ಪ್ರಕರಣದ ವಿಚಾರಣೆ ಬರುವ […]

ಮಲ್ಲೇಶ್ವರಂನಲ್ಲಿ ಸರಗಳ್ಳರನ್ನು ಹಿಡಿದ ಜಗ್ಗೇಶ್

Friday, September 30th, 2011
jaggesh

ಬೆಂಗಳೂರು : ಮಲ್ಲೇಶ್ವರಂನಲ್ಲಿ ಯುವತಿಯೊಬ್ಬಳ ಸರ ದೋಚಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಸರಗಳ್ಳರನ್ನು ನವರಸನಾಯಕ ನಟ ಜಗ್ಗೇಶ್ ಮತ್ತು ಅವರ ಕಾರಿನ ಚಾಲಕ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಬಂಧಿತರು ಶೇಷಾದ್ರಿಪುರಂ ಹಾಗೂ ಆಸ್ಟಿನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು. ಮಲ್ಲೇಶ್ವರಂ ಹನ್ನೊಂದನೆ ಅಡ್ದರಸ್ತೆಯಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಸಂಜೆ 6 ರ್ ಹೊತ್ತಿಗೆ ಕಾಲೇಜು ಮುಗಿಸುಕೊಂಡು ನಡೆದುಕೊಂಡು ಹೋಗುತ್ತಿದ್ದರು. ಅದೇ ಹೊತ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಕತ್ತಿನಲ್ಲಿದ್ದ ಸರ […]

ಕೊಪ್ಪಳ ಕರಡಿ ಸಂಗಣ್ಣ ವಿಜಯ

Thursday, September 29th, 2011
ಕೊಪ್ಪಳ ಕರಡಿ ಸಂಗಣ್ಣ ವಿಜಯ

ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಸವರಾಜ ಕೆ. ಹಿಟ್ನಾಳ್ ಎರಡನೇ ಸ್ಥಾನ ಗಳಿಸಿದ್ದರೆ. ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮಾಜಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಪ್ರಸಕ್ತ ಬಿಜೆಪಿ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹ ಎಲ್ಲೆಲ್ಲೂ ಕಂಡುಬಂದಿದೆ. ಜೆಡಿಎಸ್ ಪಕ್ಷಕ್ಕೆ ಫಲಿತಾಂಶ ತುಸು ಆಶ್ಚರ್ಯ ತಂದಿದೆ. ಏಕೆಂದರೆ ಜೆಡಿಎಸ್ಸನ್ನು […]

ಮೂರು ಮಕ್ಕಳನ್ನು ಹುಟ್ಟಿಸಿದರೆ ಮೂರು ತಿಂಗಳು ಜೈಲು 10 ಸಾವಿರ ದಂಡ

Wednesday, September 28th, 2011
Kerala family plan

ತಿರುವನಂತಪುರ : ಕೇರಳದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಮತ್ತು ಜನಸಂಖ್ಯೆ ನಿಯಂತ್ರಣ ಯೋಜನೆಯನ್ನು ಕಟ್ಟುನಿಟ್ಟುಗೊಳಿಸುವ ಸಲುವಾಗಿ ಕೇರಳ ಸರ್ಕಾರ ಎರಡು ಮಕ್ಕಳು ಮಾತ್ರ ಎಂಬ ಕಾಯಿದೆ ಜಾರಿಗೊಳಿಸಲು ನಿರ್ಧರಿಸಿದೆ. ನ್ಯಾ.ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಆಯೋಗ ಹಲವು ಕಠಿಣ ಕ್ರಮಗಳನ್ನು ಜ್ಯಾರಿ ಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದರಂತೆ ಮೂರನೇ ಮಗುವನ್ನು ಹೊಂದುವ ತಂದೆ ತಾಯಿಗೆ ಜೈಲು ಶಿಕ್ಷೆ ಮತ್ತು ಸರ್ಕಾರಿ ಸೌಲಭ್ಯ ಮಾನ್ಯತೆಯನ್ನು ರದ್ದುಗೊಳಿಸುವುದು ಮುಂತಾದ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಚಿಂತಿಸಿದೆ. ಆಯೋಗದ 12 ಸದಸ್ಯರ ಸಲಹೆ […]

ಮೈಸೂರು ದಸರಾಕ್ಕೆ ಆನೆಕಾಡಿನಿಂದ ಹೋರಾಟ ಆನೆಗಳು.

Wednesday, September 14th, 2011
Elephents Starts Travels to Mysore Dasara

ಮಡಿಕೇರಿ : ಇಲ್ಲಿನ ದುಬಾರೆಯ ಸಾಕಾನೆ ಶಿಬಿರದಲ್ಲಿದ್ದ ನಾಲ್ಕು ಆನೆಗಳಾದ ವಿಕ್ರಮ್‌, ಹರ್ಷ ಗೋಪಿ, ಕಾವೇರಿ ಆನೆಗಳು ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು 2ನೇ ಹಂತದ ಪ್ರಯಾಣ ಬೆಳೆಸಿದೆ. ದುಬಾರೆಯ ಆನೆಕಾಡಿನ ಈ ಸಾಕಾನೆಗಳನ್ನು ಬುಧವಾರ ಬೆಳಗ್ಗೆ ಶಿಬಿರದಲ್ಲಿ ನಡೆದ ವಿಶೇಷ ಪೂಜೆಗೆ ತೊಳೆದು – ಸ್ನಾನ ಮಾಡಿಸಿ, ಹಣೆ ಹಾಗೂ ಕಾಲುಗಳಿಗೆ ಹರಳೆಣ್ಣೆ ಲೇಪನ ಮಾಡಿ ಆನೆಗಳ ಮುಖ ಹಾಗೂ ದೇಹಗಳ ಮೇಲೆ ಚಿತ್ತಾರದ ಚಿತ್ರಗಳನ್ನು ಬಿಡಿಸಿ ವಿಶೇಷವಾಗಿ ಅಲಂಕರಿಸಿ ಪೂಜಿಸಿ ಬೀಳ್ಕೊಡಲಾಯಿತು. ವಿಕ್ರಮ್‌ ಆನೆಯ […]

ದರ್ಶನ್ ಕುಡಿದು ಬಂದು ಹಲ್ಲೆ ಮಾಡಿದರಲ್ಲದೆ, ಮಗುವಿನ ಮೇಲೆ ಸಂಶಯ ಪಟ್ಟರು

Saturday, September 10th, 2011
Darshan-Vijayalakshmi

ಬೆಂಗಳೂರು: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪರಪ್ಪನ ಅಗ್ರಹಾರದ ಕೈದಿಯಾಗಿದ್ದಾರೆ. ಈ ಪ್ರಕರಣ ದರ್ಶನ್ ಸಿನಿಮಾ ಲೈಫಿಗೆ ಮಾರಕ ಆಗಲಿದೆಯೇ ಎಂಬ ಸಂದೇಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಕನ್ನಡ ಚಿತ್ರರಂಗದ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರಿಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಅವರಿಂದಲೇ ನಟಿ ನಿಖಿತಾ ಪರಿಯಚಯವಾಗಿದ್ದು ಎಂದು ಗಾಂಧೀ ನಗರದ ಜನ ಹೇಳುತ್ತಿದ್ದಾರೆ. ಇಷ್ಟು ದಿನ ಬೆಳ್ಳಿ ತೆರೆಯ […]

ಮಗನಿಗೆ ಬಾಯಿಮುಚ್ಚಿ ಕುಳಿತು ಕೊಳ್ಳಲು ಆದೇಶ ನೀಡಿದ : ದೇವೇಗೌಡ

Friday, September 2nd, 2011
Devegowda/ಎಚ್.ಡಿ.ದೇವೇಗೌಡ

ಬೆಂಗಳೂರು : ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರನ್ನು ಟೀಕಿಸುವ ಮೂಲಕ ಸಾರ್ವಜನಿಕವಾಗಿ ಮುಜುಗರಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಇನ್ನು ಮುಂದಾದರೂ ಬಾಯಿ ಬಿಡದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಪಕ್ಷದ ನಾಯಕರು ತಾಕೀತು ಮಾಡಿದ್ದಾರೆ. ಲೋಕಾಯುಕ್ತ ವರದಿಯ ಕುರಿತು ನ್ಯಾಯಾಲಯದಲ್ಲಿಯೇ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಆ ವರದಿಯನ್ನೇ ಸಂಶಯ ಪಡುವ ರೀತಿಯಲ್ಲಿ ಹೆಗ್ಡೆ ಅವರ ಬಗ್ಗೆ ಹೇಳಿಕೆ ನೀಡಬಾರದಿತ್ತು. ಒಮ್ಮೆ ದೇವೇಗೌಡರು ಕ್ಷಮೆಯಾಚಿಸಿದ ನಂತರ ಮತ್ತೊಮ್ಮೆ ಟೀಕೆ ಮಾಡುವಂತಹ ಅಗತ್ಯವಿರಲಿಲ್ಲ ಎಂದು ಸ್ವತಃ ದೇವೇಗೌಡ, […]

ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ : ನಾಗತಿಹಳ್ಳಿ

Sunday, August 7th, 2011
Mumbai Kannada Sammelana/ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ

ಮುಂಬಯಿ: ಮುಂಬಯಿ ಕನ್ನಡ ಸಂಘ ಹಾಗೂ ಹೃದಯವಾಹಿನಿ ಕನ್ನಡ ಪತ್ರಿಕೆ ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಆ. 6 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ವಿ. ಕೃ. ಗೋಕಾಕ್‌ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 2011 ನೇ ಸಾಲಿನ 8 ನೇ ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಶನಿವಾರ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಸಮ್ಮೇಳನಾಧ್ಯಕ್ಷರೂ ಆಗಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ ಎರಡು ಸಾವಿರಕ್ಕೂ ಅಧಿಕ ಕಾಲದ ಇತಿಹಾಸವನ್ನು […]