ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ

Monday, February 20th, 2017
BJP Protest

ಮಂಗಳೂರು: ದ. ಕ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ದ.ಕ. ಸಂಸದ ನಳಿನ್‌ಕುಮಾರ್ ಕಟೀಲು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಪುರಾವೆ ಎಂಬಂತೆ ರಾಜ್ಯದಲ್ಲಿ ಐದಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಮನೆಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಯಲಯದ ದಾಳಿ ನಡೆದಿದೆ. ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟತೆಯ ಕೂಪದಲ್ಲಿ ಬಿದ್ದಿದೆ ಎಂದು ದೂರಿದರು. ಚಿಕ್ಕರಾಯಪ್ಪ ಮತ್ತು […]

ದಿ| ನಾರಾಯಣಸ್ವಾಮಿ ಅವರ ಹೆಸರು ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ ನಾಮಕರಣ

Monday, February 20th, 2017
Narayana Swamy

ಮಂಗಳೂರು:  ಬಿಲ್ಲವ ಸಮುದಾಯದ ಮುಖಂಡ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ದಿ| ನಾರಾಯಣಸ್ವಾಮಿ ಅವರ ಹೆಸರನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ ಇಡಲಾಗಿದೆ ಎಂದು  ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ  ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸಿ ಅವರ ಸಾಧನೆಗಳನ್ನು ಅವರ ನಿಧನಾ ನಂತರ ಉಲ್ಲೇಖ ಮಾಡುವಂತಹುದು ಅಗತ್ಯವಾಗಿ ನಡೆಯಬೇಕು. ಸಮಾಜಕ್ಕಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿ […]

ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ನಬಾರ್ಡ್‌ನಿಂದ 10 ಕೋ. ರೂ. ಬಿಡುಗಡೆ

Sunday, February 19th, 2017
Wenlock hospital

ಮಂಗಳೂರು: ಸರಕಾರಿ ವೆನ್ಲಾಕ್‌ ಆಸ್ಪತ್ರೆಗೆ 176 ಹಾಸಿಗೆ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದಕ್ಕಾಗಿ ನಬಾರ್ಡ್‌ನಿಂದ 10.06 ಕೋ. ರೂ.ಅನುದಾನ ಬಿಡುಗಡೆಗೊಂಡಿದೆ. ಶನಿವಾರ ವೆನ್ಲಾಕ್‌ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆಯಲ್ಲಿ ಈ ವಿಚಾರ ತಿಳಿಸಲಾಯಿತು. ಒಟ್ಟು 15.16 ಕೋ. ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದ್ದು, ಆರೋಗ್ಯ ರಕ್ಷಾ ಸಮಿತಿಯ ಕ್ಲಿನಿಕಲ್‌ ಶುಲ್ಕ 5.10 ಕೋ. ರೂ.ನಿಂದ ಈಗಾಗಲೇ ನೆಲಮಾಳಿಗೆಯ ಕಾಮಗಾರಿ […]

ತುಳುವರಿಗೆ ಕಂಬಳವೂ ಬೇಕು. ಕೋಳಿ ಅಂಕವೂ ಬೇಕು. ಇದು ಸಾಂಪ್ರದಾಯಿಕ ಕ್ರೀಡೆ : ಆಸ್ಕರ್‌

Sunday, February 19th, 2017
Tulu sahitya academy

ಮಂಗಳೂರು : ಮಂಗಳೂರು: ತುಳು ಭಾಷೆ, ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಾಮಾಣಿಕ ಪ್ರಯತ್ನಗಳು ಅನಿವಾರ್ಯವಾಗಿವೆೆ. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನಕ್ಕೆ ಧರ್ಮಸ್ಥಳದ ಡಾ| ಹೆಗ್ಗಡೆ ಕೂಡ ಕೈಜೋಡಿಸಿದ್ದು, ಜತೆಗೆ ಪ್ರಶಸ್ತಿ ಪ್ರದಾನಗಳಂತಹ ಸಮಾರಂಭಗಳು ಪೂರಕವಾಗಲಿವೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಶನಿವಾರ ಅಕಾಡಮಿಯ ಸಿರಿ ಚಾವಡಿಯಲ್ಲಿ ನಡೆದ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ತುಳುವರಿಗೆ ಕಂಬಳವೂ […]

ವೆಲೆನ್ಸಿಯಾದಲ್ಲಿ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

Sunday, February 19th, 2017
karnataka one

ಮಂಗಳೂರು : ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರವನ್ನು ವೆಲೆನ್ಸಿಯಾದ ಸಿಲ್ವಾ ಅಡ್ದ ರಸ್ತೆಯಲ್ಲಿರುವ ಬ್ಲೂ ಬರ್ಡ್ ಮ್ಯಾನರ್ ಕಟ್ಟಡದಲ್ಲಿ ಶಾಸಕ ಜೆ. ಆರ್. ಲೋಬೊ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರಕಾರ ಆಧಾರ್ ಕಾರ್ಡನ್ನು ಎಲ್ಲ ಸೇವೆಗೆ ಕಡ್ಡಾಯ ಮಾಡಿರುವುದರಿಂದ ಹೆಚ್ಚಿನ ಸೇವಾ ಕೇಂದ್ರಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ. ಹೊಸ ಕೇಂದ್ರ ಆರಂಭಿಸಿರುವುದರಿಂದ ಇದು ಕಡಿಮೆಯಾಗಬಹುದು. ಮನಪಾದ ಆಸ್ತಿ ತೆರಿಗೆ, ನೀರಿನ ಬಿಲ್ಲು ಇಲ್ಲಿ ಪಾವತಿಸಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರದ […]

ಸ್ನೇಹಿತನನ್ನೇ ಕತ್ತಿಯಿಂದ ಇರಿದು ಹತ್ಯೆ ಮಾಡಿದ ಗಾಂಜಾ ವ್ಯಾಪಾರಿಗಳು

Sunday, February 19th, 2017
Pratap

ಮಂಗಳೂರು:  ಕುಡಿದ ಮತ್ತಿನಲ್ಲಿದ್ದ ಗೆಳೆಯರ ಗುಂಪೊಂದು ತಮ್ಮ ಸ್ನೇಹಿತನನ್ನೇ ಕತ್ತಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ. ಪ್ರತಾಪ್‌‌ ಕೊಲೆಯಾದವ. ಘಟನೆಯ ನಂತರ ಆರೋಪಿಗಳಾದ ಸಾಗರ್, ದಿನೇಶ್, ಮಿಥುನ್ ಪರಾರಿಯಾಗಿದ್ದಾರೆ. ಇವರು ಗಾಂಜಾ ವ್ಯಾಪಾರದಲ್ಲಿ ತೊಡಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಹರೂ ಮೈದಾನದಲ್ಲಿ ಪಿಎಫ್ಐ ಕರ್ನಾಟಕದ 10ನೇ ವರ್ಷಾಚರಣೆ

Saturday, February 18th, 2017
pfi anniversary

ಮಂಗಳೂರು: ಉಳ್ಳಾಲದಲ್ಲಿ ಅನುಮತಿ ಇಲ್ಲದೆ ರದ್ದುಗೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕರ್ನಾಟಕ 10ನೇ ವರ್ಷಾಚರಣೆ  ನಗರದ ನೆಹರೂ ಮೈದಾನದಲ್ಲಿ ನಡೆಯಿತು. ಪಿ.ಎಫ್ಐ. ದ.ಕ. ಜಿಲ್ಲಾ ಸಮಿತಿಯಿಂದ ನಡೆದ ಸಮಾವೇಶದಲ್ಲಿ ಮಾತನಾಡಿದ  ಪಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ದೇಶದಲ್ಲಿ ಸಂಘ ಪರಿವಾರವು ಕೋಮುವಾದದ ವಿಷ ಬೀಜ ಬಿತ್ತುತ್ತಿದೆ. ದೇಶದ ಆಡಳಿತ ಸಂಘ ಪರಿವಾರದ ಕಪಿಮುಷ್ಠಿಯಲ್ಲಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂದು  ಆರೋಪಿಸಿದರು. ಕೆಂಪುಕೋಟೆ ಮತ್ತು ನ್ಯಾಯಾಲಯಗಳ ಬಣ್ಣ ಕೇಸರೀಕರಣಗೊಳ್ಳುತ್ತಿವೆ. ಅದು ಸಂಪೂರ್ಣಗೊಳ್ಳುವ ಮುನ್ನ ಈ ನಾಡಿನ ಪ್ರಜ್ಞಾವಂತರು […]

ಸಿಸಿಬಿ ಪೊಲೀಸರಿಂದ ಬಿಜೈ ರಸ್ತೆಯಲ್ಲಿ ಇಬ್ಬರು ಗಾಂಜಾ ವ್ಯಾಪಾರಿಗಳ ಬಂಧನ

Thursday, February 16th, 2017
Ganja

ಮಂಗಳೂರು :  ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕಾಪಿಕಾಡ್ ರಸ್ತೆಯ ಸುರಭಿ ಹೊಟೇಲ್ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಇಬ್ಬರನ್ನು ಬಂಧಿಸಿದ್ದಾರೆ. ಅವರು ಕೇರಳದಿಂದ ಮಂಗಳೂರು ನಗರಕ್ಕೆ ಗಾಂಜಾ ಖರೀದಿಸಿ  ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಅಬ್ದುಲ್ ಅಂಸಾದ್ ಸಿ ಎಚ್, ಉದಯ ಕುಮಾರ್ ರೈ ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು 5 ಕೆಜಿ ಗಾಂಜಾ, 3 ಮೊಬೈಲ್ ಫೋನ್ ಗಳು ಸೇರಿದಂತೆ ಒಟ್ಟು 1,66,000 ರು. ಮೌಲ್ಯದ […]

ಶಶಿಕಲಾ ಬಣದ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ನೂತನ ಮುಖ್ಯಮಂತ್ರಿ

Thursday, February 16th, 2017
Palani-Swami

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ನೇಮಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಇಂದು ಸಂಜೆ 4 ಗಂಟೆಗೆ ಪಳನಿಸ್ವಾಮಿ ತಮ್ಮ ಸಂಪುಟ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಇ.ಕೆ.ಪಳನಿಸ್ವಾಮಿಯವರಿಗೆ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಪಳನಿಸ್ವಾಮಿ ತಮ್ಮ ಬೆಂಬಲಿಗರಾದ ಸಚಿವರಾದ ಜಯಕುಮಾರ್, ಕೆ.ಎ.ಸೆಂಗೊಟ್ಟೈಯನ್, ಎಸ್.ಪಿ.ವ ವೇಲುಮಣಿ, ಟಿ.ಟಿ.ದಿನಕರನ್, ಕೆ.ಪಿ. ಅನ್ಬಜಗನ್ ಮೊದಲಾದವರು ರಾಜ್ಯಪಾಲರ ಭೇಟಿಗೆ ತೆರಳಿದ್ದರು. […]

ಎನ್‌ಐಟಿಕೆ, ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಆರು ತಿಂಗಳ ಒಳಗೆ ಸಂಪೂರ್ಣ ಸ್ಥಗಿತ

Thursday, February 16th, 2017
Toll gate

ಮಂಗಳೂರು: ಕೇಂದ್ರ ಸರಕಾರಿ ಟೋಲ್‌ಗ‌ಳೆಂದು ಪರಿಗಣಿತ ಸುರತ್ಕಲ್‌ನ ಎನ್‌ಐಟಿಕೆ ಹಾಗೂ ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್‌ ಮುಂದಿನ ಆರು ತಿಂಗಳ ಒಳಗೆ ಸಂಪೂರ್ಣ ಸ್ಥಗಿತವಾಗಲಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. ಎನ್‌ಐಟಿಕೆ ಟೋಲ್‌ ಹೆಜಮಾಡಿಗೆ ಸ್ಥಳಾಂತರವಾಗಧಿಲಿದೆಯೇ ಎಂಬ ಬಗ್ಗೆ ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್‌ ಕುಮಾರ್‌ ಅವರಲ್ಲಿ ಮಾಹಿತಿ ಪಡೆದು ಮಾತನಾಡಿದ ಸಂಸದ ನಳಿನ್‌ ಕುಮಾರ್‌, ಸರಕಾರಿ ಟೋಲ್‌ಗ‌ಳಾಗಿರುವ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ಟೋಲನ್ನು ಮುಂದಿನ 6 […]