ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ನಿಂತಿದ್ದ ವ್ಯಕ್ತಿಯ ಬಳಿಯಿಂದ ನಗದು ಕಳವು

Thursday, February 2nd, 2017
Shreenivasulu

ಮಂಗಳೂರು: ಧರ್ಮಸ್ಥಳ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯ ಬಳಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀನಿವಾಸುಲು(25) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಡಿ. 25 ರಂದು ಬೆಂಗಳೂರಿನ ಲೋಕೇಶ್ ಎಂಬವರು ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಅವರ ಪ್ಯಾಂಟ್ ಕಿಸೆಯಿಂದ ಎಟಿಎಂ ಕಾರ್ಡ್ , 8700 ರೂ. ನಗದು ಕಳವು ಮಾಡಿದ್ದ. ಇನ್ನು ಕಳವು ಮಾಡಿದ್ದ ಎಟಿಎಂನಿಂದ ಮಂಗಳೂರಿನಲ್ಲಿ ಚಿನ್ನಾಭರಣವನ್ನು ಖರೀದಿಸಿದ್ದ. ಇದರ ಆಧಾರದಲ್ಲಿ ಬೆಳ್ತಂಗಡಿ […]

ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವುದಿಲ್ಲ: ಯೋಗೀಶ್ ಶೆಟ್ಟಿ

Thursday, February 2nd, 2017
Yogish-Shetty

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಎಚ್ಚರಿಸಿದ್ದಾರೆ. ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ಚತುಷ್ಪಥ ಕಾಮಗಾರಿಗೆ ನಾಗರಿಕರು ಬೆಂಬಲ ಸೂಚಿಸಿದ್ದಾರೆ. ರಸ್ತೆಯ ವಿನ್ಯಾಸದಂತೆ ಕಾಮಗಾರಿ ನಡೆಯಬೇಕಿತ್ತು. ಆದರೆ ಮೊದಲು ತಯಾರಿಸಿದ ನಕ್ಷೆಯಂತೆ ರಸ್ತೆಯನ್ನು ನಿರ್ಮಿಸಿಲ್ಲ. ಕೆಲವೆಡೆ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿಗಳು ನಡೆದಿವೆ. ರಸ್ತೆಯ ಕಾಮಗಾರಿ ಶೇ. 95 ರಷ್ಟು ಪೂರ್ಣಗೊಂಡಿಲ್ಲ. ಆದರೂ […]

ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ

Thursday, February 2nd, 2017
Ganja

ಮಂಗಳೂರು: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ನಗರದ ಕೂಳೂರು ಬಳಿ ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿಗಳಾದ ಬಿ.ಸಿ.ರೋಡ್ ಟೋಲ್‌ಗೇಟ್‌ನಲ್ಲಿ ಕೆಲಸ ಮಾಡುವ ಕಾರ್ತಿಕ್‌ರಾಜ್ (21) ಹಾಗೂ ನಗರದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಪೃಥ್ವಿ (20) ಬಂಧಿತರು. ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಾವೂರು ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ […]

ಕೇಂದ್ರ ಬಜೆಟ್ ದೂರದಶಿ೯ತ್ವ ಇಲ್ಲದ ನಿರಾಶಾದಾಯಕ ಬಜೆಟ್: ಯು.ಟಿ. ಖಾದರ್

Thursday, February 2nd, 2017
Khadar

ಮಂಗಳೂರು: ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಯಾವುದೇ ದೂರದಶಿ೯ತ್ವ ಇಲ್ಲದ ನಿರಾಶಾದಾಯಕ ಬಜೆಟ್ ಎಂದು ಆಹಾರ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ. ನೋಟು ನಿಷೇಧದ ನಂತರ ದೇಶದ ಬ್ಯಾಂಕುಗಳಲ್ಲಿ ಎಷ್ಟು ಹಣ ಠೇವಣಿಯಾಗಿದೆ ಎಂಬ ಮಾಹಿತಿಯನ್ನು ಬಜೆಟ್‌‌ನಲ್ಲಿ ಬಹಿರಂಗ ಪಡಿಸಿಲ್ಲ. ಬಜೆಟ್ ಎಂಬುದು ದೇಶದ ಆರ್ಥಿಕ ಮೂಲ ಮತ್ತು ಪರಿಸ್ಥಿತಿ ತಿಳಿಸುವ ಮಾಹಿತಿ. ಆದರೆ ಹಣದ ಮೂಲಗಳನ್ನು ಸ್ಪಷ್ಟಪಡಿಸಿಲ್ಲ. ಜನಸಾಮಾನ್ಯರ ಉಳಿತಾಯವನ್ನು ಕಪ್ಪುಹಣ ಎಂದು ಕೇಂದ್ರ ಹೆಮ್ಮೆ ಪಡುತ್ತಿದೆ ಎಂದು ಟೀಕಿಸಿದರು. ನೋಟು ನಿಷೇಧದ ಹಿಂದಿನ ಮೂರು […]

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಸಮಾರೋಪ

Wednesday, February 1st, 2017
palapushpa

ಮಂಗಳೂರು :  ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವು ಜ. 26 ರಿಂದ 29 ರವರೆಗೆ ಸುಗಮವಾಗಿ ನಡೆಯಿತು. ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ವಾರ್ತಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಆಯುಷ್ ಇಲಾಖೆ, ವಿವಿಧ ಯಂತ್ರೋಪಕರಣ ಕಂಪನಿಯ ಡೀಲರ್‍ಗಳು, ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಟಣೆಯ ಮಳಿಗೆಗಳು ಮೆರಗು ನೀಡಿದವು. ಡಚ್ ಗುಲಾಬಿ ಹಾಗೂ ಇತರೆ ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ “ತುಳುನಾಡು ರಾಣಿ ಅಬ್ಬಕ್ಕ”ನ ಪ್ರತಿಮೆ ಹಾಗೂ ಡೈರಿ ಡೇ ಐಸ್‍ಕ್ರಿಮ್ […]

ಮಂಗಳೂರು ತಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ರೂ. 350 ಲಕ್ಷ ಮಂಜೂರಾತಿ

Wednesday, February 1st, 2017
monu

ಮಂಗಳೂರು  : ಮಂಗಳೂರು ತಾಲೂಕು ಪಂಚಾಯತ್‍ಗೆ ನೂತನ ವಿಸ್ತಾರವಾದ ಕಟ್ಟಡ ನಿರ್ಮಿಸಲು ರಾಜ್ಯ ಸರಕಾರ ಮಂಜೂರಾತಿ ನೀಡಿದೆ ಎಂದು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದ್ದಾರೆ. ಮಂಗಳೂರು ತಾ.ಪಂ. ಆಡಳಿತ ಕಛೇರಿ ಕಟ್ಟಡವು ಸುಮಾರು 60 ವರ್ಷಗಳಿಗಿಂತಲೂ ಹಳೆಯದಾಗಿದ್ದು 1987 ಇಸವಿಯಲ್ಲಿ ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾ ಪರಿಷತ್ತು ಕಛೇರಿಯು ಕಾರ್ಯನಿರ್ವಹಿಸುತ್ತಿತ್ತು. 2016-17ನೇ ಸಾಲಿನಲ್ಲಿ ಈ ಕಛೇರಿಯನ್ನು ಒಡೆದು ಹೊಸ ಕಟ್ಟಡವನ್ನು ರಚಿಸಲು ರೂ. 350 ಲಕ್ಷಗಳ ವೆಚ್ಚದಲ್ಲಿ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ […]

ರೈತರ ಅಭಿವೃದ್ಧಿ, ಗ್ರಾಮೀಣ ಜನತೆಗೆ ಉದ್ಯೋಗ ಮತ್ತು ಮೂಲಭೂತ ಸೌಲಭ್ಯ ಸರ್ಕಾರದ ಮೂಲ ಆದ್ಯತೆ: ಜೈಟ್ಲಿ

Wednesday, February 1st, 2017
Jaitley

ನವದೆಹಲಿ: 2017-18ರ ಕೇಂದ್ರ ಬಜೆಟ್ ಮಂಡಿಸಿದ ಸಚಿವ ಅರುಣ್ ಜೈಟ್ಲಿ, ರೈತರ ಅಭಿವೃದ್ಧಿ, ಗ್ರಾಮೀಣ ಜನತೆಗೆ ಉದ್ಯೋಗ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ತಮ್ಮ ಸರ್ಕಾರದ ಮೂಲ ಆದ್ಯತೆಗಳಾಗಿವೆ ಎಂದು ಪ್ರಕಟಿಸಿದ್ದಾರೆ. ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಈ ಸಾಲಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳನ್ನು ಜೈಟ್ಲಿ ಪ್ರಸ್ತಾಪಿಸಿದರು. ಮುಂದಿನ ಐದು ವರ್ಷಗಳಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸಲು ಬದ್ಧವಿರುವುದಾಗಿ ತಿಳಿಸಿದರು. ರೈತರು ಮತ್ತು ಕೃಷಿ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಘೋಷಿಸಿದ ಅಂಶಗಳು ಹೀಗಿವೆ. ಕೃಷಿ ಸಾಲ.. 1. ಮುಂದಿನ ಐದು […]

2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ: ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳ ಆಯ್ಕೆ

Wednesday, February 1st, 2017
Mudabidre

ಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸಮಾಪನಗೊಂಡಿದ್ದು, ಕರ್ನಾಟಕದ ಆರು ಮಂದಿ ಕ್ರೀಡಾಪಟುಗಳ ಸಹಿತ ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ. 17 ವಯೋಮಿತಿಯ ಬಾಲಕರ ವಿಭಾಗದ 400ಮೀಟರ್‍ನಲ್ಲಿ ರಿನ್ಸ್ ಜೋಸೆಫ್(ಕರ್ನಾಟಕ), ಅನ್ಸುನ್( ಕೇರಳ), ಮಹಾಂತೇಶ್(ಕರ್ನಾಟಕ), ರಘುಲ್ ಕುಮಾರ್( ತಮಿಳುನಾಡು), ಸಯುಜ್(ಕೇರಳ), ಅಭಿಷೇಕ್ ಮ್ಯಾಥ್ಯೂ (ಕೇರಳ) ರಿತಿನ್ ಆಲಿ(ಕೇರಳ), ನವನೀತ್( ತಮಿಳುನಾಡ್), 200 ಮೀ ಬಾಲಕರ ವಿಭಾಗದಲ್ಲಿ ಆರ್.ಸಿ ಗಣೇಶ್(ತಮಿಳುನಾಡು), ಫಾದೀಹ್(ಕೇರಳ), 100 ಮೀ.ನಲ್ಲಿ […]

ಮತಾಯಸ್ ಕುಟುಂಬ ಕವಿತಾ ಪುರಸ್ಕಾರ-2016ಕ್ಕೆ ಸಾಖರ್‍ದಾಂಡೆ

Wednesday, February 1st, 2017
Sakhardande

ಮಂಗಳೂರು: ಕೊಂಕಣಿ ಕವಿತಾ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗಾಗಿ ಕವಿತಾ ಟ್ರಸ್ಟ್ ಪ್ರತಿ ವರ್ಷ ನೀಡುವ ಮತಾಯಸ್ ಕುಟುಂಬ ಕವಿತಾ ಪುರಸ್ಕಾರ-2016ಕ್ಕೆ ಗೋವಾ ನಿವಾಸಿ ಕೊಂಕಣಿ ಕವಿ ನೂತನ್ ಸಾಖರ್‍ದಾಂಡೆ ಅವರಿಗೆ ಲಭಿಸಿದೆ. ಈ ಪುರಸ್ಕಾರವನ್ನು ಫೆ. 5ರಂದು ಮಂಗಳೂರಿನ ಗ್ಯಾಲರಿ ಓರ್ಕಿಡ್‍ನಲ್ಲಿ ನಡೆಯುವ ‘ಕವಿತಾ ಸಂಭ್ರಮ’ ಕಾರ್ಯಕ್ರಮದಲ್ಲಿ ಮಂಗಳೂರಿನ ಶಾಸಕರಾದ ಜೆ.ಆರ್. ಲೋಬೋ ಈ ಪ್ರಶಸ್ತಿಯನ್ನು ಹಸ್ತಾಂತರಿಸುವರು. ಈ ಪುರಸ್ಕಾರವು 25,000 ನಗದು, ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಎಂ.ಪಿ.ರೊಡ್ರಿಗಸ್ ಇವರ […]

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರ ಬಂಧನ

Wednesday, February 1st, 2017
Prostitution

ಮಂಗಳೂರು: ವೆಬ್‌ಸೈಟ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಟೆಕಾರು ಸಮೀಪದ ಶೇಖ್ ಮುಹಮ್ಮದ್ ರಫೀಕ್ (40), ಮಡಿಕೇರಿಯ ಬಾಳುಗೋಡು ನಿವಾಸಿ ದೀಪಕ್ (43) ಎಂಬುವರು ಬಂಧಿತರ ಆರೋಪಿಗಳು. ಆರೋಪಿಗಳಿಂದ ಒಂದು ರಿಕ್ಷಾ, 2 ಮೊಬೈಲ್ ಫೋನ್ ಹಾಗೂ 12,500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಲಾಡ್ಜ್‌ವೊಂದನ್ನು ಕೇಂದ್ರೀಕರಿಸಿ ಈ ಇಬ್ಬರು ಆರೋಪಿಗಳು ವೆಬ್‌ಸೈಟ್ ಮೂಲಕ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಗರದ […]