ಕಂಬಳ ವೀರ ಶ್ರೀನಿವಾಸ ಗೌಡರ ದಾಖಲೆ ಮುರಿದ ಮತ್ತೋರ್ವ ಕಂಬಳ ವೀರ ನಿಶಾಂತ್​ ಶೆಟ್ಟಿ

Tuesday, February 18th, 2020
nishanth

ಮಂಗಳೂರು : ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕುವ ಮೂಲಕ ಜಾನಪದ ಕ್ರೀಡೆ ಕಂಬಳ ಪಟು ಶ್ರೀನಿವಾಸ ಗೌಡ ಹೊಸ ಸಾಧನೆ ಮಾಡಿದ್ದರು. ಅಚ್ಚರಿ ಎಂದರೆ, ಈಗ ಶ್ರೀನಿವಾಸ್ ಗೌಡ ಅವರ ದಾಖಲೆಯನ್ನೇ ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಸಾಧನೆ ಮಾಡಿದ ಯುವಕ. ವೇಣೂರಿನ ಪೆರ್ಮುಡ ಕಂಬಳದಲ್ಲಿ ನಿಶಾಂತ್ ಈ ಸಾಧನೆ ಮಾಡಿದ್ದಾರೆ. 143 ಮೀಟರ್‌ ದೂರವನ್ನು ನಿಶಾಂತ್ ಕೇವಲ 13.61 […]

ಸಾಕುಪುತ್ರಿ ರಾಜೇಶ್ವರಿ ವಿವಾಹ ನೆರವೇರಸಿದ ಅಬ್ದುಲ್ಲಾ – ಖದೀಜಾ ಮುಸ್ಲಿಂ ದಂಪತಿ

Tuesday, February 18th, 2020
rajeshwari

ಕಾಸರಗೋಡು : ಇಂದೊದು ಅಪರೂಪದ ಮದುವೆ. ಅಬ್ದುಲ್ಲಾ – ಖದೀಜಾ ದಂಪತಿಯವರ ಸಾಕುಪುತ್ರಿ ರಾಜೇಶ್ವರಿ. ಇಂದಿನ ದಿನಗಳಲ್ಲಿ ಜಾತಿ , ಧರ್ಮ ಎಂಬ ದ್ವೇಷ ಸಮಾಜದಲ್ಲಿ ಎದ್ದು ನಿಂತಿರುವ ಮಧ್ಯೆ ಕಾಞ೦ಗಾಡ್‌ನಲ್ಲಿ ನಡೆದ ವಿವಾಹವು ಸಮಾಜಕ್ಕೆ ಸಂದೇಶ ಸಾರುತ್ತಿದೆ. ಚಿಕ್ಕಂದಿನಿಂದಲೇ ಪೋಷಕರನ್ನು ಕಳೆದು ಅನಾಥವಾಗಿದ್ದ ಹಿಂದೂ ಬಾಲಕಿಗೆ ತಮ್ಮ ಮಗಳಂತೆ ಸಾಕಿ ಸಲಹಿದವರು ಕೆ.ಅಬ್ದುಲ್ಲಾ – ಖದೀಜಾ ದಂಪತಿ . ಕೊನೆಗೂ ತಮ್ಮ ಸ್ವಂತ ಮಗಳಂತೆ ವಿವಾಹವನ್ನು ಹಿಂದೂ ಯುವಕನ ಜೊತೆಯೇ ನೆರವೇರಿಸಿಕೊಡುವ ಮೂಲಕ ಸೌಹಾರ್ಧತೆಯ ಸಂದೇಶವನ್ನು ತೋರಿಸಿಕೊಟ್ಟಿದ್ದಾರೆ. ಹನ್ನೆರಡು […]

ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಬಂಧನ

Tuesday, February 18th, 2020
KSRTC-bus-conductor

ಬೆಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ಪಕ್ಕದಲ್ಲಿ ಕುಳಿತು ಉದ್ದೇಶಪೂರ್ವಕವಾಗಿ ಆಕೆಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನಿರ್ವಾಹಕನನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಸುಬು ಆಲಿ ತಲ್ಲೂರ ಬಂಧಿತ ನಿರ್ವಾಹಕ. ಬೆಂಗಳೂರು- ಪುತ್ತೂರು ಬಸ್‌ನಲ್ಲಿ ಫೆ. 15ರಂದು ಘಟನೆ ನಡೆದಿದೆ. ನಿರ್ವಾಹಕ ತನ್ನ ಪಕ್ಕದಲ್ಲಿ ಕುಳಿತು ಕಿರುಕುಳ ನೀಡುತ್ತಿರುವುದನ್ನು ಸಂತ್ರಸ್ತ ಯುವತಿ ವಿಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ನೀಡಿದ್ದಾರೆ. ಫೆ. 15ರಂದು ಯುವತಿ ಗೋವರ್ಧನ್‌ ಚಿತ್ರಮಂದಿರ ಸ್ಟಾಪ್‌ನಲ್ಲಿ […]

ನರೇಗಾ ಯೋಜನೆಯಡಿ ಕರ್ನಾಟಕಕ್ಕೆ 2.3 ಲಕ್ಷ ಕೋಟಿ ರೂ. ಬಿಡುಗಡೆ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

Tuesday, February 18th, 2020
nirmala-seetharaman

ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕರ್ನಾಟಕಕ್ಕೆ ಕೇಂದ್ರದ ಅನುದಾನ 2.3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಸಚಿವರು, ಉದ್ಯೋಗ ಖಾತರಿ ಯೋಜನೆಗೆ ನೀಡಿರುವ ಮೊತ್ತ ಈ ಹಿಂದಿಗಿಂತ ಶೇಕಡ 178ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು. ಬೆಂಗಳೂರು ಸಬ್‌ ಅರ್ಬನ್‌ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ಶೇ.20ರಷ್ಟು ಅನುದಾನ ನೀಡಲಿದೆ, ಈಗಾಗಲೇ ಒಂದು ಕೋಟಿ […]

ಕಂಬಳ ವೀರ ಶ್ರೀನಿವಾಸ್‌ ಗೌಡ ರವರಿಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಸನ್ಮಾನ

Tuesday, February 18th, 2020
Kambala-jockey

ಬೆಂಗಳೂರು : ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಶ್ರೀನಿವಾಸ್‌ ಗೌಡ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ. ಈ ಸಂದರ್ಭ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀನಿವಾಸ ಗೌಡ ಅವರಿಗೆ ರೂ. 3 ಲಕ್ಷ ಮೊತ್ತದ ಚೆಕ್ […]

ಹಳೆಯಂಗಡಿ : ಪಿಡಿಒ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ

Tuesday, February 18th, 2020
haleyangady

ಮಂಗಳೂರು : ಹಳೆಯಂಗಡಿ ಪಿಡಿಒ ಪೂರ್ಣಿಮಾ ಎಂಬುವರ ಮೇಲೆ‌ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಹಲ್ಲೆ ಖಂಡಿಸಿ ಜಿಲ್ಲೆಯಾದ್ಯಂತ ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕಸಹಾಯಕರು ಸೇರಿದಂತೆ ಪಂಚಾಯತ್ ರಾಜ್ ಇಲಾಖೆಯ ಎಲ್ಲ ಸರ್ಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಹಳೆಯಂಗಡಿ ಗ್ರಾಪಂನ ಇಂದಿರಾ ನಗರದಲ್ಲಿ ನೀರಿನ ಪಂಪ್ ಚಾಲಕ‌ ತಾತ್ಕಾಲಿಕ‌ ಗೈರು ಹಾಜರಾಗಿರೋದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನೀರು ಸರಬರಾಜು […]

ಪ್ರವಾದಿ ಬಗ್ಗೆ ಅವಹೇಳನ ಆರೋಪ : ನಾಪೋಕ್ಲುವಿನಲ್ಲಿ ದೂರು ದಾಖಲು

Tuesday, February 18th, 2020
haris

ಮಡಿಕೇರಿ : ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಅತುಲ್ ಕುಮಾರ್ (ಮಧುಗಿರಿ ಮೋದಿ) ಎಂಬುವವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ನಾಪೋಕ್ಲು ಅವರು ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತುಲ್ ಕುಮಾರ್ ಎಂಬುವವರು ಮುಸಲ್ಮಾನರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾರಿಸ್ ದೂರಿನಲ್ಲಿ ತಿಳಿಸಿದ್ದಾರೆ.  

ಆಳ್ವಾಸ್ ವಿದ್ಯಾರ್ಥಿಗಳಿಂದ ’ಪ್ಲಾಗಿಂಗ್’

Monday, February 17th, 2020
alvas

ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ಓಶಿಯನಸ್-2020 ಫೆಸ್ಟ್‌ನ ಪೂರ್ವಭಾವಿಯಾಗಿ ಆದಿತ್ಯವಾರ ಇಲ್ಲಿನ ಸ್ವರಾಜ್ಯ ಮೈದಾನದಿಂದ ಆಲಂಗಾರಿನವರೆಗಿನ ರಸ್ತೆಯ ಬದಿಯಲ್ಲಿ ವಿಶೇಷ ’ಪ್ಲಾಗಿಂಗ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾನವಿಕ ವಿಭಾಗದ 150 ವಿದ್ಯಾರ್ಥಿಗಳು ಬೆಳಿಗ್ಗೆ ಏಳು ಗಂಟೆಗೆ ಸ್ವರಾಜ್ಯ ಮೈದಾನದಿಂದ ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ಕಸಗಳನ್ನು ಚೀಲಗಳಲ್ಲಿ ತುಂಬಿ ಸ್ವಚ್ಛಗೊಳಿಸಿದರು. ಆರೋಗ್ಯಕ್ಕಾಗಿ ಜಾಗಿಂಗ್, ಸ್ವಚ್ಛತೆಗಾಗಿ ಪ್ಲಾಗಿಂಗ್ ಎಂಬ ಘೋಷವನ್ನಿರಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆ ಪುರಸಭೆಯವರು ವಿದ್ಯಾರ್ಥಿಗಳಿಗೆ ಕಸ ವಿಲೇವಾರಿಯಲ್ಲಿ ಸಹಕರಿಸಿದರು. ರೋಟರಿ ಕ್ಲಬ್ […]

ರಾಜಾಸೀಟು ಉದ್ಯಾನವನದ ಅವ್ಯವಸ್ಥೆಗಳನ್ನು ಸರಿ ಪಡಿಸಲು ಒತ್ತಾಯ

Monday, February 17th, 2020
raj-seat

ಮಡಿಕೇರಿ : ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟು ಉದ್ಯಾನವನದ ಅವ್ಯವಸ್ಥೆಗಳನ್ನು ಸರಿ ಪಡಿಸುವಂತೆ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಒತ್ತಾಯಿಸಿದ್ದಾರೆ. ಪ್ರಕೃತಿ ರಮಣೀಯ ಪ್ರವಾಸಿತಾಣ ರಾಜಾಸೀಟಿಗೆ ಪ್ರತಿದಿನ ಸಾವಿರಾರು ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಉದ್ಯಾನವನಕ್ಕೆ ಬರುವವರಿಂದ ಪ್ರವೇಶ ಶುಲ್ಕವನ್ನು ಕೂಡ ಪಡೆಯಲಾಗುತ್ತದೆ. ಮುಂಜಾನೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಉದ್ಯಾನವದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ರಾತ್ರಿ 7.30ಸಮೀಪಿಸುತ್ತಿರುವಂತೆಯೇ ರಾಜಾಸೀಟಿನ ಎಲ್ಲಾ ವಿದ್ಯುತ್ ದೀಪಗಳ ಬೆಳಕನ್ನು ಕಡಿತಗೊಳಿಸಲಾಗುತ್ತಿದೆ. ಇದರಿಂದ ಉದ್ಯಾನವನದೊಳಗೆ ವಿಹರಿಸುತ್ತಿರುವ […]

ರಾಣಿಪುರ : ಪವಿತ್ರ ಪರಮ ಪ್ರಸಾದದ ಮೆರವಣಿಗೆ

Monday, February 17th, 2020
meravanige

ಮಂಗಳೂರು : ಮೇರಿ ವಿಶ್ವ ಮಾತೆ ದೇವಾಲಯ ರಾಣಿಪುರದ ವಾರ್ಷಿಕ ಮಹೋತ್ಸವದ ಅಂಗವಾಗಿ ತಾರೀಕು 16ರಂದು ಸಂತ ಅಂತೊನಿಯವರ ಪ್ರಾಥಾನಾಲಯ ರಾಣಿಪುರ ಉಳಿಯದಿಂದ ಸುಮಾರು ಎರಡೂವರೆ ಕೀ.ಮೀ ದೂರದ ಮೇರಿ ವಿಶ್ವ ಮಾತೆ ದೇವಾಲಯ ರಾಣಿಪುರಕ್ಕೆ ಪವಿತ್ರ ಪರಮ ಪ್ರಸಾದದ ಮೆರವಣಿಗೆಯು ಭಕ್ತಿ ಗೀತೆಗಳು ಹಾಗೂ ಬ್ಯಾಂಡ್ ವಾದ್ಯದ ಮೂಲಕ ಭಕ್ತಾದಿಗಳು ನಡೆದು ಕೊಂಡು ಬಂದು ಭಕ್ತಿಪೂರ್ವಕವಾಗಿ ನಡೆಯಿತು. ದೇವಾಲಯದಲ್ಲಿ ಪರಮ ಪ್ರಸಾದದ ಆಶೀರ್ವಚನದ ನಂತರ ವಾರ್ಷಿಕ ಮಹೋತ್ಸವಕ್ಕೆ ಸಹಾಯ ನೀಡಿದ ಭಕ್ತಾಧಿಗಳಿಗೆ ಮೇಣದ ಬತ್ತಿಯನ್ನು ನೀಡಿ […]