ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

Saturday, February 8th, 2020
naagamandala

ಸುರತ್ಕಲ್ ‌: ಶ್ರೀ ವಿದ್ಯಾಧರ ಮುನಿ ಪ್ರತಿಷ್ಠಾಪಿತ ‘ಇಡ್ಯಾ ಶ್ರೀ ಮಹಾಲಿಂಗೇಶ್ವರ’ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪೂರ್ವಾಹ್ನ ಘಂಟೆ 9.30 ರಿಂದ 9.45 ರವರೆ ಮೀನ ಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ನಡೆದಿದೆ. ರಾತ್ರಿ 10 ಗಂಟೆಗೆ ನಾಗವನದಲ್ಲಿ ಹಾಲಿಟ್ಟು ಸೇವೆಯಾದ ನಂತರ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರು ಮುದ್ದುರು ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲೋತ್ಸವವು ನಡೆದಿದೆ. ನಾಗಮಂಡಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ದೇವರ ನಾಗದರ್ಶನ ಪಡೆದು ಕೃತಾರ್ಥರಾದರು.  

ಹೈಟೆಕ್ ರೀತಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳ ಬಂಧನ

Saturday, February 8th, 2020
hightek

ಬೆಂಗಳೂರು : ನಗರದಲ್ಲಿ ಹೈಟೆಕ್ ರೀತಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಮಾರ್, ಭರತ್ ಕುಮಾರ್, ರಘು ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಲೊಕೆಂಟೋ ವೆಬ್ ಸೈಟ್ ಮೂಲಕ ಹೈಟೆಕ್ ಮಾದರಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ದಂಧೆಗೆ ಬಳಸಿಕೊಳ್ಳುವ ಹೆಣ್ಣು ಮಕ್ಕಳನ್ನು ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಂದ ಕೆಲಸ ಕೊಡಿಸುವುದಾಗಿ ನಂಬಿಸಿ‌ ಕರೆ ತರುತ್ತಿದ್ದರು. ಬಳಿಕ‌ ಇವರ ಫೊಟೋಗಳನ್ನು ಆನ್ ಲೈನ್ ಮುಖಾಂತರ ಕಳುಹಿಸಿ ಗ್ರಾಹಕರನ್ನು‌ […]

ಇಡ್ಯಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ : ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವ; ಪೇಜಾವರ ಶ್ರೀ

Saturday, February 8th, 2020
Edya

ಸುರತ್ಕಲ್ ‌: ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು 07.02.2020 ರಂದು ಶುಕ್ರವಾರದಂದು ನಡೆದಿದೆ. ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡು ನಾವು ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವವೇ ತುಂಬಿರುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವದಿಂದ ಒಂದು ದೇವಸ್ಥಾನ ಮಾತ್ರವಲ್ಲದೆ ಗ್ರಾಮವಿಡೀ ಕಳೆಗಟ್ಟುತ್ತದೆ; ಅಭಿವೃದ್ಧಿಯಾಗುತ್ತದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಶಾಸಕ […]

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ : ಲಾಭ ಪಡೆಯಲು ಕೊಡಗಿನ ರೈತರಲ್ಲಿ ಜಿಲ್ಲಾಧಿಕಾರಿ ಮನವಿ

Saturday, February 8th, 2020
bank

ಮಡಿಕೇರಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು 2018ರಿಂದ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಕತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019ರವರೆಗೆ 91,311 ರೈತರು ಬೆಳೆಸಾಲ ಪಡೆದವರಾಗಿದ್ದು, ಇಲ್ಲಿಯವರೆಗೆ 44.174 ರೈತರು ಮಾತ್ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಕೂಡ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ […]

ಮಾರ್ಚ್ 01ರಂದು ’ಭಕ್ತಿರಥ’ ಸಂತವಾಣಿ ಕಾರ್ಯಕ್ರಮ

Saturday, February 8th, 2020
bhakti-rath

ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ (ರಿ)ದ ವತಿಯಿಂದ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಇದರ ರಥೋತ್ಸವ ಪ್ರಯುಕ್ತ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 01.03.2020ರ ಭಾನುವಾರ ಸಂಜೆ 5.30ರಿಂದ ’ಭಕ್ತಿರಥ’ ಎಂಬ ಸಂತವಾಣಿ ಸಂಗೀತ ಕಾರ‍್ಯಕ್ರಮ ನಡೆಯಲಿದೆ. ’ಐಡಿಯಲ್ ಐಸ್‌ಕ್ರೀಮ್’ ಸಂಸ್ಥೆಯು ಭಕ್ತಿರಥ ಸಂಗೀತ ಕಾರ‍್ಯಕ್ರಮದ ಮುಖ್ಯ ಪ್ರಾಯೋಜಕರಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವದ ನಂತರದ ಭಾನುವಾರ ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಕಾರಣಾಂತರಗಳಿಂದಾಗಿ ಮಾರ್ಚ್ 01ರಂದು ಆಯೋಜಿಸಲಾಗುತ್ತಿದೆ. ನಮ್ಮ ದೇಶದ ಉತ್ಕೃಷ್ಟ ಮಟ್ಟದ […]

ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

Saturday, February 8th, 2020
congress-protest

ಮಡಿಕೇರಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಆಶ್ರಮಗಳಿಗೆ ನೀಡಲಾಗುತ್ತಿದ್ದ ದಾಸೋಹದ ಧಾನ್ಯಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ, ಅನಂತಕುಮಾರ್ ಹೆಗ್ಡೆ, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ […]

ಪ್ರಾಣಿ ಪಕ್ಷಿಗಳ ಚಿಕಿತ್ಸೆಗಳಲ್ಲಿ ಹೊಮಿಯೋಪತಿ ಔಷಧಗಳು ಪರಿಣಾಮಕಾರಿ

Friday, February 7th, 2020
mijar

ಮಿಜಾರು : ಪ್ರಾಣಿ ಪಕ್ಷಿಗಳು ಶುದ್ದ ಮನಸ್ಸಿನವುಗಳಾಗಿದ್ದು ಪ್ರಾಣಿಗಳೊಂದಿಗಿನ ಒಡನಾಟ ವ್ಯಕ್ತಿಯ ಮಾನಸಿಕ ಆರೊಗ್ಯವನ್ನು ಹೆಚ್ಚಿಸುವುದಲ್ಲದೇ ಕುಟುಂಬದ ಆರೋಗ್ಯಕ್ಕೂ ಸಹಕಾರಿ ಆಗುತ್ತದೆ. ನಿಸರ್ಗಕ್ಕೆ ಹೆಚ್ಚು ಹತ್ತಿರ ಇರುವುದರಿಂದ ಪಶುಪಕ್ಷಿಗಳು ಹೊಮಿಯೋಪತಿ ಔಷಧಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ ಎಂದು ಖ್ಯಾತ ಪಶು ವೈದ್ಯ ಡಾ. ಮನೋಹರ ಉಪಾಧ್ಯಾಯ ತಿಳಿಸಿದರು. ಆಳ್ವಾಸ್ ಹೋಮಿಪತಿಮೆಡಿಕಲ್ ಕಾಲೇಜಿನಲ್ಲಿ ನಡೆದ “ಪಶು ಚಿಕಿತ್ಸೆಯಲ್ಲಿ ಹೊಮಿಯೊಪತಿ ಔಷಧಗಳ ಬಳಕೆ” ಕಾರ‍್ಯಕ್ರಮದಲ್ಲಿ ಮಾತನಾಡುತ್ತಾ ಪಶುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಲುಬಾಯಿ ರೊಗ, ದಿಸ್ಟೆಂಪರ್ ರೋಗ ,ವಿಷಜಂತುಗಳ ಕಡಿತ ,ಕೆಚ್ಚಲುಬಾವುಗಳಿಗೆ […]

ಸಮಾಜದ ಸಮಗ್ರ ಗ್ರಹಿಕೆಗೆ ಶಿಕ್ಷಣ ಅಗತ್ಯ : ಅರವಿಂದ ಚೊಕ್ಕಾಡಿ

Friday, February 7th, 2020
aravind

ವಿದ್ಯಾಗಿರಿ : ಶಿಕ್ಷಣದ ನೆಲೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಉನ್ನತಿಯನ್ನ ಹೊಂದಲು ಸಾಧ್ಯ. ಜತೆಯಲ್ಲಿ ಹೆಣ್ಣಿನ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡುವ ಸಮಾಜ ನಿರ್ಮಾಣವಾಗಬೇಕು ಎಂಬುದು ನಾರಾಯಣಗುರುಗಳ ಆಶಯವಾಗಿತ್ತು ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮತ್ತು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ”ಗುರುವಿನ ಅರಿವು- ವಿಶೇಷ ಉಪನ್ಯಾಸ ಮಾಲಿಕೆ 2019-20”ರಲ್ಲಿ ’ನಾರಾಯಣಗುರು- ಸಮಗ್ರತೆಯ ಅನ್ವೇಷಣೆ’ಯ ಕುರಿತು ಮಾತನಾಡಿದರು. ಶಿಕ್ಷಣ ಕುಸಿತದಿಂದ ಸಮಾಜವು ಹತಾಶ […]

ಸಿದ್ದರಾಮಯ್ಯ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿದ್ದಾರೆ : ಆರೋಗ್ಯ ಸಚಿವ ಶ್ರೀರಾಮುಲು ಟೀಕೆ

Friday, February 7th, 2020
health-minister-ariramulu

ಚಿಕ್ಕಮಗಳೂರು : ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟೀಕಿಸಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅದಗೆಟ್ಟು ಹೋಗಿದೆ ಎಂಬ ಸಿದ್ದಾರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ, ಮತ್ತೊಂದು ಕಡೆ ಕುಮಾರಸ್ವಾಮಿ ಹತಾಶರಾಗಿ ಏನೇನು ಮಾತಾನಾಡುತ್ತಿದ್ದಾರೆ. ಇವರು ಮೈತ್ರಿ ಸರ್ಕಾರ ನಡೆಸೋಕೆ ಆಗದೇ ಸರ್ಕಾರ ಬೀಳಿಸಿಕೊಂಡ್ರು, ಈಗ ಅಧಿಕಾರ ಕಳೆದುಕೊಂಡು ಹತಾಶರಾಗಿ ಮಾತಾನಾಡುತ್ತಿದ್ದಾರೆ ಎಂದು ರಾಮುಲು ಸಿದ್ದು ಹಾಗೂ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇನ್ನು, ಸಿದ್ದರಾಮಯ್ಯ […]

ಪಶ್ಚಿಮ ಘಟ್ಟ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ ನೆಹರೂ ಮಂಟಪ

Friday, February 7th, 2020
neharu-mantapa

ಮಡಿಕೇರಿ : ಕೊಡಗು ಎಂದರೆ ಅದು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯೂ ಸಹ ಇದೇ ಪುಣ್ಯ ಭೂಮಿಯಲ್ಲಿದೆ. ಇದರೊಂದಿಗೆ ಹಲವಾರು ಪ್ರವಾಸಿ ತಾಣಗಳೂ ಸಹ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ತನ್ನ ಹಸಿರ ಮೈಸಿರಿಯಿಂದಲೇ ಕೊಡಗು ರಾಜ್ಯದಲ್ಲೇ ವಿಶೇಷವಾದ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೆ ಐತಿಹಾಸಿಕ ಕಟ್ಟಡಗಳು ಮತ್ತು ಭಾರತೀಯ ಸೈನ್ಯಕ್ಕೆ ಕೊಡುಗೆ ಕೊಟ್ಟಂತಹ ಪ್ರಮುಖ ಸೇನ ನಾಯಕರ ನೆಲೆಬೀಡು ಎಂಬ ವಿಶ್ವಖ್ಯಾತಿಯನ್ನೂ ಸಹ ನಮ್ಮ […]