ಅಕ್ರಮವಾಗಿ 25.79 ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರ ಬಂಧನ

Tuesday, November 12th, 2019
kolkata

ಕೋಲ್ಕತ್ತಾ : ಅಕ್ರಮವಾಗಿ 25.79 ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಡಿಆರ್‌ಐ ಅಧಿಕಾರಿಗಳು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 10 ಕೋಟಿ ರೂ. ಮೌಲ್ಯದ 25.79 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಇಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಸಿಲಿಗುರಿ ಹಾಗೂ ಹೌರಾ ನಗರದಲ್ಲಿ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಆರು ಜನರನ್ನು ಡಿಆರ್‌ಐ ಅಧಿಕಾರಿಗಳು ಅಕ್ಟೋಬರ್ […]

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಮಧ್ಯಾಹ್ನ 1 ಗಂಟೆಯ ವರೆಗೆ 39.50 ಶೇ. ಮತದಾನ

Tuesday, November 12th, 2019
MCC-Election

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ 39.50 ಶೇ. ಮತದಾನವಾಗಿದೆ. ಮಿಲಾಗ್ರಿಸ್ ಶಾಲೆಯ 40ನೇ ಬೂತ್ ನಲ್ಲಿ 20ಕ್ಕೂ ಅಧಿಕ ಮಂಗಳಮುಖಿಯರು ಮತದಾನ ಮಾಡಿ ಸಂಭ್ರಮಿಸಿದರು. ಇಂದು ಬೆಳಗ್ಗೆ 7ಗಂಟೆಯಿಂದ ಮತದಾನ ನಿಧಾನಗತಿಯಲ್ಲಿ ಆರಂಭಗೊಂಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಶಾಸಕರು, ಮಾಜಿ ಶಾಸಕರು ಬೆಳಗ್ಗೆಯೇ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು. ಅನಾರೋಗ್ಯಕ್ಕೀಡಾಗಿರುವ ಉದ್ಯಮಿ ಸುಧೀರ್ ಘಾಟೆ […]

ನೇಪಾಳದ 36 ಹೆಕ್ಟೇರ್​ ಭೂಮಿ ಆಕ್ರಮಿಸಿಕೊಂಡ ಚೀನಾ : ಚೀನಾದ ವಿರುದ್ಧ ನೇಪಾಳದಲ್ಲಿ ತೀವ್ರ ಪ್ರತಿಭಟನೆ

Tuesday, November 12th, 2019
nepal

ಬರ್ದಿಯಾ : ಭಾರತವನ್ನು ದೂರ ಸರಿಸಿ ನೇಪಾಳದ ದೊಡ್ಡಣ್ಣ ಎನಿಸಿಕೊಳ್ಳಲು ಹವಣಿಸುತ್ತಿದ್ದ ಚೀನಾದ ವಿರುದ್ಧ ನೇಪಾಳದಲ್ಲಿ ತೀವ್ರ ಪ್ರತಿಭಟನೆಗಳು ಶುರುವಾಗಿವೆ. ನೇಪಾಳದ ಭೂ ಪ್ರದೇಶಗಳನ್ನು ಮೆಲ್ಲಮೆಲ್ಲಗೆ ಚೀನಾ ಆಕ್ರಮಿಸುತ್ತಿದ್ದು, ಅದರ ವಿಸ್ತರಣಾವಾದದ ವಿರುದ್ಧ ನೇಪಾಳಿಗರು ಸಿಡಿದೆದ್ದಿದ್ದಾರೆ. ಸೋಮವಾರ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿದಿದ್ದಾರೆ. ಚೀನಾ ವಿರೋಧಿ ಪ್ಲಕಾರ್ಡ್ಗಳು, ಬ್ಯಾನರ್ಗಳನ್ನು ಹೊಂದಿದ್ದ ಪ್ರತಿಭಟನಾಕಾರರು ಚೀನಾ ವಿರೋಧಿ ಘೋಷಣೆಗಳು ಕೂಗಿದ್ದಾರೆ. “ಗೋ ಬ್ಯಾಕ್ ಚೀನಾ, ನಮ್ಮ ಭೂ ಭಾಗವನ್ನು ವಾಪಸ್ ನೀಡು” ಎಂದು […]

ಜೆಸಿಐ ಗಣೇಶಪುರ ಪ್ರಮಾಣ ವಚನ

Tuesday, November 12th, 2019
Ganeshpura

ಮಂಗಳೂರು : ಜೆಸಿಐ ಗಣೇಶಪುರ ವಲಯ ಹದಿನೈದರ 2020 ಸಾಲಿನ ಪದಗ್ರಹಣ ಸಮಾರಂಭ ಇನ್ಫೆಂಟ್ ಮೇರಿ ಸಿಲ್ವರ್ ಹಾಲ್ ನಲ್ಲಿ ವಿಜೃಂಭಣೆಯಿಂದ ನಡೆದಿದ್ದು ಪ್ರಸ್ತುತ ವರ್ಷದ ಅಧ್ಯಕ್ಷರಾಗಿ ಶರತ್ ಕುಮಾರ್ ಇವರು ಅಧಿಕಾರ ಸ್ವೀಕರಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಉದಯ್ ಕುಮಾರ್ ಅಧಿಕಾರ ಹಸ್ತಾಂತರಿಸುದರ ಜೊತೆಗೆ ಎಲ್ಲಾ ಪಧಾದಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅರವಿಂದ ಮೋಟಾರ್ ಮುಖ್ಯಸ್ಥರಾದ, ಡಾ ರೊನಾಲ್ಡೊ ಸೀಕ್ವೆರವರು “ಜೆಸಿಐ ಸಂಸ್ಥೆಯು ಅಭೂತಪೂರ್ವ ವ್ಯಕ್ತಿತ್ವವನ್ನು ಪರಿಚಯಿಸುದರ ಮೂಲಕ ಯುವ ಪೀಳಿಗೆಗೆ […]

ವಿದೇಶದಲ್ಲಿ ಭಾರೀ ಪ್ರಮಾಣ ಹೂಡಿಕೆ : ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ತನಿಖೆ ಆರಂಭಿಸಿದ ಇಡಿ

Tuesday, November 12th, 2019
KJ

ಬೆಂಗಳೂರು : ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಅಡಿ ಇಡಿ ಪ್ರಕರಣ ದಾಖಲಿಸಿದ್ದು, ಈಗ ಜಾರ್ಜ್ ಹೊಂದಿರುವ ಆಸ್ತಿಯ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಜಾರ್ಜ್ ಅವರು 1985 ರಿಂದ 2019ರವರೆಗೆ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ವಿಧಾನಸಭೆಗೆ ಆಯ್ಕೆಯಾದ ವರ್ಷದಿಂದ ಇಲ್ಲಿಯವರೆಗೆ ಲೋಕಾಯುಕ್ತದಲ್ಲಿ ಜಾರ್ಜ್ ಘೋಷಿಸಿಕೊಂಡಿರುವ ಆಸ್ತಿಯ ವಿವರವನ್ನು […]

ಜೆಪ್ಪುನಲ್ಲಿ ಐವನ್ ಡಿಸೋಜ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Tuesday, November 12th, 2019
jeppu

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಯು ಇವತ್ತು ಮುಂಜಾನೆ 7.00 ಸರಿಯಾಗಿ ನಡೆಯಿತು .ಹೆಚ್ಚಿನ ನಾಗರಿಕರು ಈ ಮತಯಾಚನೆ ಯಲ್ಲಿ ಭಾಗವಹಿಸಿದರು .  ಆದರೆ ನಗರದ 39 ನೇ ವಾರ್ಡ್ ಬಿ ಜೆ ಪಿ ಹಾಗು ಕಾಂಗ್ರೆಸ್ ಮುಖಂಡರು 100 ಮೀ ಒಳಗಡೆ ಪ್ರವೇಶಿಸಿ ಮತಯಾಚನೆ ಮಾಡಿದನ್ನು ನಾಗರಿಕರು ಪೊಲೀಸರಿಗೆ ತಿಳಿಸಿ ಅದನ್ನು ಪೋಲಿಸಿರು ಅದನ್ನು ತಡೆದರು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ. […]

ಎದೆ ನೋವು, ಹೈ ಬಿಪಿಯಿಂದ ಬಳಲುತ್ತಿರುವ ಡಿಕೆ ಶಿವಕುಮಾರ್​ ಮತ್ತೆ ಆಸ್ಪತ್ರೆಗೆ ದಾಖಲು ನೋವು

Tuesday, November 12th, 2019
DK-Shiv-Kumar

ಬೆಂಗಳೂರು : ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಎದೆ ನೋವಿನಿಂದ ಬಳಲುತ್ತಿದ್ದು, ತಡರಾತ್ರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿರೋ ಮಾಜಿ ಸಚಿವ ಡಿಕೆಶಿ ಎದೆ ನೋವು, ಹೈ ಬಿಪಿಯಿಂದ ಬಳಲುತ್ತಿದ್ದಾರೆ. ತಡರಾತ್ರಿ ಏಕಾಏಕಿ ಆರೋಗ್ಯ ಸಮಸ್ಯೆಗೆ ತುತ್ತಾದ ಅವರನ್ನು ಕುಟುಂಬ ಸದಸ್ಯರು ಬೆಂಗಳೂರಿನ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಶಿವಕುಮಾರ್ ಕುಟುಂಬ ವೈದ್ಯರಾದ ಡಾ. ಶಂಕರ್ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ […]

ಬೆಂಗಳೂರು : ಪ್ರಿಯತಮೆಯನ್ನು ಇರಿದು ಆತ್ಮಹತ್ಯೆಗೆ ಯತ್ನ

Tuesday, November 12th, 2019
Hans-Raj

ಬೆಂಗಳೂರು : ಪ್ರೀತಿಸುತ್ತಿದ್ದ ಯುವತಿ ಜತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಚೂರಿ ಯಿಂದ ಇರಿದು ಕೊಲೆಗೆ ಯತ್ನಿಸಿರುವ ಪ್ರಿಯಕರ, ಬಳಿಕ ತಾನು ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜ್ಯೋತಿನಗರದಲ್ಲಿ ವಾಸವಿದ್ದ ದೆಹಲಿ ಮೂಲದ ಪಾಲಗಾವ್ ಥೆನ್ಸಿಂಗ್ (28) ಹಲ್ಲೆಗೊಳಗಾದ ಯುವತಿ. ಜಾರ್ಖಂಡ್ ಮೂಲದ ಹನ್ಸ್ರಾಜ್ (32) ಚಾಕುವಿನಿಂದ ಇರಿದ ಟೆಕ್ಕಿ. ಗಾಯಗೊಂಡಿರುವ ಇಬ್ಬರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಯುವಕನ ವಿರುದ್ಧ ಕೊಲೆ ಯತ್ನಪ್ರಕರಣ ದಾಖಲಿಸಲಾಗಿದೆ ಎಂದು ಚಂದ್ರಾ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಯುವತಿ […]

ಮನಪಾ ಚುನಾವಣೆ : ಮತದಾನ ಆರಂಭ

Tuesday, November 12th, 2019
nalin-kumar

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಲೇಡಿಹಿಲ್ ಸಂತ ಅಲೋಶಿಯಸ್ ಶಾಲೆಯಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ನಳಿನ್, ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳ ನಡೆದಿದ್ದು, ಇದು ಬಿಜೆಪಿಗೆ […]

ಮಡಿಕೇರಿಯಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

Tuesday, November 12th, 2019
Divakar

ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಸಂವಿಧಾನ ಶಿಲ್ಪಿಗೆ ಗೌರವವನ್ನು ಸೂಚಿಸಲಾಗಿದೆ. ಮಡಿಕೇರಿಯಲ್ಲಿ ಪ್ರತಿಮೆ ಸ್ಥಾಪಿಸಬೇಕೆನ್ನುವ ಬೇಡಿಕೆಯ ಬಗ್ಗೆ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತೋರಿದ್ದಾರೆ […]