ಯುವವಾಹಿನಿ ಮಾಣಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Wednesday, October 23rd, 2019
yuva-vahini

ವಿಟ್ಲ : ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ ಮಾಣಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಉದ್ಘಾಟಿಸಿದರು. ಯುವವಾಹಿನಿಯು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಯುವ ಮನಸ್ಸುಗಳನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳುವ ಒಂದು ಅದ್ಭುತ ಸಂಘಟನೆ, ಚಂಚಲತೆಯ ಯುವ ಮನಸ್ಸುಗಳನ್ನು ಧನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯುವವಾಹಿನಿಯ ಬದ್ಧತೆ […]

ಮಳೆಯ ಅಬ್ಬರಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ : ವಾಹನ ಸಂಚಾರ ನಿಷೇಧ

Wednesday, October 23rd, 2019
raste-kusuta

ಚಾಮರಾಜನಗರ : ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ವಿಪರೀತ ಮಳೆಯಿಂದಾಗಿ ಭೂ ಕುಸಿತ ಸಂಭವಿಸುತ್ತಿದ್ದು, ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ ಸಹ ರಸ್ತೆ ಕುಸಿದ ಪರಿಣಾಮ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ ಸಂಭವಿಸಿದೆ. ಮಲೆಮಹದೇಶ್ವರ ಬೆಟ್ಟದ ಪಾಲಾರ್ ಮಾರ್ಗದಲ್ಲಿ ಮೂರು ಕಡೆ ರಸ್ತೆ ಕುಸಿತವಾಗಿದೆ. ರಸ್ತೆ ಕುಸಿತದ ಪರಿಣಾಮ ಬೆಳಗ್ಗೆಯಿಂದಲೇ ಭಾರೀ ವಾಹನಗಳು ಹಾಗೂ ಅಂತರರಾಜ್ಯ ಸಂಪರ್ಕಿಸುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಲೆ […]

ಬ್ರಹ್ಮರಕೂಟ್ಲು : ಶಾರ್ಟ್ ಸರ್ಕ್ಯೂಟ್ ನಿಂದ ಪ್ಲೈವುಡ್ ಮಿಲ್ ನಲ್ಲಿ ಬೆಂಕಿ

Wednesday, October 23rd, 2019
ply-wood

ಬಂಟ್ವಾಳ : ಶಾರ್ಟ್ ಸರ್ಕ್ಯೂಟ್ ನಿಂದ ಪ್ಲೈವುಡ್ ಮಿಲ್ ನಲ್ಲಿ ಬೆಂಕಿ ತಗಲಿದ ಘಟನೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಮಿಲ್ ನ ಒಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ‌. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿದ್ದ ವಾಚ್ ಮ್ಯಾನ್ ಮಾಲಕರಿಗೆ ತಿಳಿಸಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ‌. ಅರ್ಧ ತಾಸಿನ ಬಳಿಕ ಬೆಂಕಿ ಮಿಲ್ ಒಳಭಾಗವಿಡೀ ವ್ಯಾಪಿಸಿದೆ‌. ಒಟ್ಟು ನಾಲ್ಕು ಘಟಕದ ಅಗ್ನಿಶಾಮಕ ದಳವು ಮೂರೂವರೆ ಗಂಟೆಗಳ […]

ಕರಾವಳಿಯಲ್ಲಿ ಮತ್ತೆ ರೆಡ್‌ ಅಲರ್ಟ್‌ ಘೋಷಣೆ

Wednesday, October 23rd, 2019
Red-Alert

ಮಂಗಳೂರು : ಕರಾವಳಿ ಭಾಗದಲ್ಲಿ ಮಂಗಳವಾರ ಮಳೆ ತುಸು ಕ್ಷೀಣಿಸಿತ್ತು. ಆದರೆ ಬುಧವಾರ ಮತ್ತು ಗುರುವಾರಕ್ಕೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅ.23 ಮತ್ತು 24ರಂದು ಕರಾವಳಿ ಯಲ್ಲಿ ಬಿರುಸಿನಿಂದ ಕೂಡಿದ ಮಳೆಯಾಗುವುದು ಸಂಭವನೀಯ. ಗುಡುಗು, ಸಿಡಿಲು ಸಹಿತ ಜೋರಾಗಿ ಗಾಳಿ ಬೀಸಲಿದೆ. ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಲೈಫ್‌ಗಾರ್ಡ್‌ನವರು ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರದಂದು ಉತ್ತಮ ಮಳೆಯಾಗಬಹುದು […]

ಮಂಗಳೂರು ಮಹಾನಗರ ಪಾಲಿಕೆಗೆ ನವೆಂಬರ್ 12ಕ್ಕೆ ಚುನಾವಣೆ

Tuesday, October 22nd, 2019
mcc

ಮಂಗಳೂರು  : ರಾಜ್ಯ ಚುನಾವಣೆ ಆಯೋಗವು ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆ ಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಮಂಗಳೂರು ಮಹಾನಗರ ಪಾಲಿಕೆ 60 ವಾರ್ಡ್ ಗಳಿಗೆ  ನವೆಂಬರ್ 12ನೇ ತಾರೀಕು ಮತದಾನ ನಡೆಯಲಿದೆ. ಅಕ್ಟೋಬರ್ 20ನೇ ತಾರೀಕು ಭಾನುವಾರದಿಂದ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿ ಆಗುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ  ಬಗ್ಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನಾಂಕ 24.10.2019 ನಾಮಪತ್ರ ಸಲ್ಲಿಸಲು ಕೊನೆ ದಿನ 31.10.2019 ನಾಮಪತ್ರ ಪರಿಶೀಲಿಸಲು ಕೊನೆ ದಿನ 2.11.2019 […]

ಚೇರಂಬಾಣೆಯ ಬೆಂಗ್‌ನಾಡ್ ಕೊಡವ ಸಮಾಜದಲ್ಲಿ ’ಕೊಡಗ್‌ರ ಸಿಪಾಯಿ’ ಯಶಸ್ವೀ ಪ್ರದರ್ಶನ

Tuesday, October 22nd, 2019
Kodagar-siphai

ಮಡಿಕೇರಿ  :  ಕೊಟ್ಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ಮತ್ತು ನಿರ್ದೇಶನದ ’ಕೊಡಗ್‌ರ ಸಿಪಾಯಿ’ ಕೊಡವ ಚಲನಚಿತ್ರದ 15ನೇ ದಿನದ ಪ್ರದರ್ಶನ ಚೇರಂಬಾಣೆಯ ಬೆಂಗ್‌ನಾಡ್ ಕೊಡವ ಸಮಾಜದಲ್ಲಿ ನಡೆಯಿತು. ಈ ಸಂದರ್ಭ ಪ್ರಾಸ್ತವಿಕವಾಗಿ ಮಾತನಾಡಿದ, ನಟ ಹಾಗೂ ನಿರ್ಮಾಣ ನಿರ್ವಹಣೆ ಮಾಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಇದೊಂದು ಕಲಾತ್ಮಕ ಚಿತ್ರವಾಗಿದ್ದು, ಒಂದೇ ಚಿತ್ರದಲ್ಲಿ ಹಲವಾರು ಸಂದೇಶಗಳನ್ನು ನೀಡಲಾಗಿದೆ ಎಂದರು. ಪ್ರೀತಿ, ಪ್ರೇಮ ಪ್ರಸಂಗ ಹಾಗೂ ಹಾಡುಗಳಿಗೆ ಹೆಚ್ಚು ಒತ್ತು ನೀಡದೆ ಜನರಿಗೆ ಹಾಗೂ ಇಂದಿನ […]

ಬಾರಿ ಮಳೆಗೆ ಕುಸಿದ ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆ

Tuesday, October 22nd, 2019
chamundi hills -road

ಮೈಸೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮೈಸೂರಿನ ಚಾಮುಂಡಿ ಬೆಟ್ಟದಿಂದ ನಂದಿ ವಿಗ್ರಹದ ಬಳಿ ಹೋಗುವ ಮಾರ್ಗದ ತಡೆಗೋಡೆ ಕುಸಿದಿದೆ. ಚಾಮುಂಡಿ ಬೆಟ್ಟದಿಂದ ನಂದಿ ವಿಗ್ರಹದ ಬಳಿ ಹೋಗುವ ಮಾರ್ಗ ಮಧ್ಯೆ ಕೆಲವೆಡೆ ತಡೆಗೋಡೆ ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಕಡೆ ತಡೆಗೋಡೆ ಕುಸಿದಿದೆ. ತಡೆಗೋಡೆ ಕುಸಿದ ಪರಿಣಾಮ ವಾಹನ ಸವಾರರಿಗೆ, ವಾಹನ ಚಾಲಕರಿಗೆ ನಿಧಾನ ಗತಿಯಲ್ಲಿ ವಾಹನ ಚಲಾಯಿಸುವಂತೆ ಪೊಲೀಸರು ತಿಳಿಸಿದ್ದಾರೆ. ತಡೆಗೋಡೆ ಕುಸಿತಗೊಂಡ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕೆ.ಆರ್.ಠಾಣೆಯ ಸಂಚಾರಿ ಪೊಲೀಸರು ಸ್ಥಳದಲ್ಲಿ ಬ್ಯಾರಿಕೇಡ್ […]

ರಿಕ್ಷಾ ಚಾಲಕನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ಪ್ರಕರಣ : 9 ಆರೋಪಿಗಳು ಬಂಧನ

Tuesday, October 22nd, 2019
talavaru-daali

ಮಂಗಳೂರು : ನೀರುಮಾರ್ಗದ ಪಡು ಬಿತ್ತ್‌ಪಾದೆ ಸಮೀಪ ರಿಕ್ಷಾ ಚಾಲಕನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಅ.17ರಂದು ಸಂಕ್ರಮಣವಾದ ಕಾರಣ ಸಂತೋಷ್ ಅವರು ಬಿತ್ತ್‌ಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಕಪ್ಪು ಬಣ್ಣದ ಆಕ್ಟೀವಾದಲ್ಲಿ ಬಂದ ಇಬ್ಬರು ಯುವಕರು ಸಂತೋಷ್‌ನನ್ನು ಅಡ್ಡಗಟ್ಟಿ ತಗಾದೆ ತೆಗೆದಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ತಾವು ತಂದಿದ್ದ ತಲವಾರಿನಿಂದ […]

ಮೈಸೂರಿನಲ್ಲಿ ಬ್ಯಾಂಕ್ ವಿಲೀನ ವಿರೋಧಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

Tuesday, October 22nd, 2019
Mysuru

ಮೈಸೂರು : ಬ್ಯಾಂಕ್ ವಿಲೀನಿಕರಣ ನಿಲ್ಲಿಸಿ, ಅನುತ್ಪಾದಕ ಸಾಲಗಳ ವಸೂಲಾತಿಯನ್ನು ಇನ್ನಷ್ಟು ತೀವ್ರಗೊಳಿಸಿ ಎಂದು ಒತ್ತಾಯಿಸಿ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಮೈಸೂರು ನಗರ ಕೇಂದ್ರಭಾಗದಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಬ್ಯಾಂಕಿಂಗ್ ಸೇವೆ ಇಂದಿಗೂ ಕೂಡ ಸಾವಿರಾರು ಹಳ್ಳಿಗಳನ್ನು ತಲುಪಿಲ್ಲ. ಸಾವಿರಾರು ಜನರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳ ವಿಸ್ತರಣೆ ಮುಖ್ಯವೇ ಹೊರತು ವಿಲೀಕರಣವಲ್ಲ. ಬ್ಯಾಂಕ್ ಗಳ ವಿಲೀನಕ್ಕೆ ನಮ್ಮ ವಿರೋಧವಿದೆ. ವಿಲೀನಿಕರಣದಿಂದ […]

ಮೈಸೂರು : ಪಾಲಿಕೆಯ ಸದಸ್ಯ ಕುಡಿಯುವ ನೀರನ್ನು ಸರಿಯಾಗಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

Tuesday, October 22nd, 2019
kudiyuva-neeru

ಮೈಸೂರು : ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರೊಬ್ಬರು ಪ್ರತಿಭಟನೆ ಮಾಡಿದ್ದಾರೆ. ತನ್ನ ಮುಂದೆ ಖಾಲಿ ಕೊಡವನ್ನಿಟ್ಟುಕೊಂಡು ಪಾಲಿಕೆಯ ಸದಸ್ಯರೋರ್ವರು ಕುಡಿಯುವ ನೀರನ್ನು ಸರಿಯಾಗಿ ನೀಡುವಂತೆ ಒತ್ತಾಯಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ಪಾಲಿಕೆಯ ಸಭೆಯಲ್ಲಿ ನಡೆದಿದೆ. ಮಂಗಳವಾರ ಮೈಸೂರು ಮಹಾನಗರಪಾಲಿಕೆಯಲ್ಲಿ ಸಾಮಾನ್ಯ ಸಭೆಯು ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು. ರಾಜ್ಯದಲ್ಲಿ ನೆರೆ ಪರಿಸ್ಥಿತಿ ‌ಇದ್ದರೂ ನಗರದಲ್ಲಿ ಕುಡಿಯುವ ‌ನೀರಿಗೆ ಜನರು ಪರದಾಡುವಂತಾಗಿದೆ. ಇದಕ್ಕೆ ಅಧಿಕಾರಿಗಳು […]